For Quick Alerts
ALLOW NOTIFICATIONS  
For Daily Alerts

ರಾತ್ರಿ ನಿದ್ದೆ ಬರುತ್ತಿಲ್ಲವೇ? ಚಿಂತೆ ಬಿಡಿ, ಈ ಟಿಪ್ಸ್ ಪ್ರಯತ್ನಿಸಿ

By Arshad
|

ನಮ್ಮ ಆರೋಗ್ಯವನ್ನು ಮತ್ತು ನಮ್ಮ ದೇಹವನ್ನು ಬೆಸೆಯುವಲ್ಲಿ ನಿದ್ದೆ ಒಂದು ಚಿನ್ನದ ಸರಪಳಿಯ ಪಾತ್ರ ವಹಿಸುತ್ತದೆ ಎಂದು ಆಂಗ್ಲ ನಾಟಕಕಾರ ಥೋಮಸ್ ಡೆಕ್ಕರ್‌ರವರು ತಿಳಿಸಿದ್ದಾರೆ. ಯಾವುದೇ ವ್ಯಕ್ತಿಯ ಆರೋಗ್ಯ ಆತನ ನಿದ್ದೆಯಲ್ಲಿ ಅಡಗಿದೆ. ನಿತ್ಯವೂ ಸೂಕ್ತ ಪ್ರಮಾಣದಲ್ಲಿ ನಿದ್ದೆ ಮಾಡುವ ವ್ಯಕ್ತಿಗಳು ಉತ್ತಮ ಆರೋಗ್ಯ ಹೊಂದಿರುತ್ತಾರೆ.

ಇದು ಕೇವಲ ದೈಹಿಕ ಆರೋಗ್ಯವಲ್ಲ, ಮಾನಸಿಕವಾಗಿ ಸುಸ್ಥಿತಿಯಲ್ಲಿರಲೂ ಅಗತ್ಯವಾಗಿದೆ. ಅಸಮರ್ಪಕ ಅಥವಾ ಅಪೂರ್ಣ ನಿದ್ದೆ ಆರೋಗ್ಯದ ಮೇಲೆ ಅಪಾರವಾದ ಪರಿಣಾಮ ಬೀರಬಲ್ಲುದು. ನಿದ್ದೆಯ ಕೊರತೆಯಿಂದ ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ. ತನ್ಮೂಲಕ ನಮ್ಮ ನಿತ್ಯದ ಹಲವಾರು ಚಟುವಟಿಕೆಗಳೆಲ್ಲಾ ಬಾಧೆಗೊಳಗಾಗುತ್ತವೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು, ಮಧುಮೇಹ ಬೇಗನೇ ಆವರಿಸುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

ಆದರೆ ನಿದ್ದೆ ಎಲ್ಲರಿಗೂ ಸುಲಭವಾಗಿ ಬರುವುದಿಲ್ಲ. ಕೆಲವರಿಗೆ ಮಲಗಿದ ತಕ್ಷಣವೇ ಆವರಿಸಿದರೆ ಕಲವರಿಗೆ ಹೆಚ್ಚಿನ ಸಮಯ ಬೇಕು. ಅದರಲ್ಲೂ ಕೆಲವು ಮಕ್ಕಳು ಹಾಸಿಗೆಯಲ್ಲಿ ಬಿದ್ದ ಮರುನಿಮಿಷದಲ್ಲಿ ಗಾಢವಾದ ನಿದ್ದೆಗೆ ಜಾರುತ್ತಾರೆ. ಇದನ್ನೇ ನಮ್ಮ ಸಾರಿಗೆ ಸಂಸ್ಥೆ 'ಆರಾಮವಾಗಿ, ಮಗುವಿನಂತೆ ನಿದ್ರಿಸಿ' ಎಂದೇ ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿದೆ.

3 Natural Ingredients That Can Help You Sleep Better

ಆದರೆ ಮಗುವಿನಂತೆ ನಿದ್ರಿಸಲು ತೊಟ್ಟಿಲು ಅಥವಾ ಬಸ್ಸಿನ ಸೌಕರ್ಯ ಇಲ್ಲದವರಿಗೆ ನಿಸರ್ಗ ನೀಡಿರುವ ಮೂರು ಸಾಮಾಗ್ರಿಗಳಿಂದ ಅದ್ಭುತವಾದ ಪರಿಣಾಮ ಪಡೆಯಬಹುದು. ಅವೆಂದರೆ ಕೊಬ್ಬರಿ ಎಣ್ಣೆ, ಉಪ್ಪು ಮತ್ತು ನೈಸರ್ಗಿಕ ಜೇನು (ಕಾಡಿನ ಜೇನು). ಇವು ಮೂರು ಸಾಮಾಗ್ರಿಗಳ ಸಂಯೋಜನೆ ನಿದ್ದೆಗೆ ಸಹಕಾರಿಯಾಗಿದ್ದು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದವರಿಗೆ ಅವಶ್ಯಕವಾದ ವಿಶ್ರಾಂತಿಯನ್ನೂ ನೀಡುತ್ತದೆ.

ಇವು ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆಗೆ ಸುಲಭ ಪದಗಳಲ್ಲಿ ಹೇಳಬೇಕೆಂದರೆ ನಮ್ಮ ಒತ್ತಡಗಳಿಗೆ ಕಾರಣವಾಗುವ ಕೆಲವು ಹಾರ್ಮೋನುಗಳನ್ನು ಮೆದುಳು ಬಿಡುಗಡೆ ಮಾಡದಂತೆ ಅಥವಾ ಪ್ರಮಾಣದಲ್ಲಿ ಕಡಿಮೆಯಾಗುವಂತೆ ಮಾಡುತ್ತದೆ. ಈ ಹಾರ್ಮೋನುಗಳು ಹೆಚ್ಚಿದ್ದಷ್ಟೂ ನಿದ್ದೆಯಿಲ್ಲದ ಸಮಯವೂ ಹೆಚ್ಚುತ್ತಾ ಹೋಗುತ್ತದೆ. ತನ್ಮೂಲಕ ಸುಖಕರ ನಿದ್ದೆಗೆ ಜಾರಲು ಸಾಧ್ಯವಾಗುತ್ತದೆ. ಬನ್ನಿ, ಈ ಮೂರು ನೈಸರ್ಗಿಕ ಸಾಮಾಗ್ರಿಗಳನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ನೋಡೋಣ: ಎಡ ಮಗ್ಗಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

ಪ್ರಮಾಣ:
*ಎರಡು ಚಿಕ್ಕಚಮಚ ಕೊಬ್ಬರಿ ಎಣ್ಣೆ
*ಒಂದು ಚಿಕ್ಕಚಮಚ ಕಲ್ಲುಪ್ಪು (ಸಾಗರದ ಸಂಸ್ಕರಿಸದ ಉಪ್ಪು)
*ಅರ್ಧ ಚಿಕ್ಕ ಚಮಚ ಕಾಡಿನ ಜೇನು (ಸಂಸ್ಕರಿಸಿದ ಜೇನು ಅಷ್ಟು ಉಪಯುಕ್ತವಲ್ಲ)

ವಿಧಾನ:
*ಈ ಮೂರೂ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ ಮಿಶ್ರಣ ತಯಾರಿಸಿ.
*ನಿದ್ದೆಗೆ ಕೊಂಚ ಹೊತ್ತಿನ ಮುನ್ನ ಒಂದು ದೊಡ್ಡ ಚಮಚದಷ್ಟು ಈ ಮಿಶ್ರಣವನ್ನು ನೇರವಾಗಿ ಸೇವಿಸಿ.
ನಂತರ ಒಂದು ದೊಡ್ಡ ಲೋಟ ನೀರು ಕುಡಿಯಿರಿ.
*ಬಳಿಕ ಸುಮಾರು ಐದಾರು ನಿಮಿಷ ನಡೆದಾಡಿ ಪವಡಿಸಿ.
*ಈ ಮಿಶ್ರಣವನ್ನು ಪ್ರತಿಬಾರಿಯೂ ಹೊಸದಾಗಿಯೇ ತಯಾರಿಸಿಕೊಳ್ಳಬೇಕು. ಏಕೆಂದರೆ ತಯಾರಿಸಿಟ್ಟ ಮಿಶ್ರಣ ಹೆಚ್ಚು ಫಲಕಾರಿಯಲ್ಲ. ಆದರೆ ಒಮ್ಮೆಯೇ ಒಂದು ದೊಡ್ಡ ಚಮಚ ಸೇವಿಸಲು ಹೋಗಬೇಡಿ.
*ಮೊದಲ ದಿನ ಚಿಕ್ಕ ಚಮಚದಷ್ಟು ಮಾತ್ರ ಸೇವಿಸಿ. ಒಂದು ವೇಳೆ ನಿಮಗೆ ಬೇರಾವುದೋ ತೊಂದರೆ ಇದ್ದು ಅದಕ್ಕೆ ತೆಗೆದುಕೊಳ್ಳುವ ಔಷಧಿಗಳಲ್ಲಿ ಯಾವುದಾದರೊಂದು ಈ ಮೂರೂ ಸಾಮಾಗ್ರಿಗಳಿಗೆ ಅಲರ್ಜಿಕಾರಕವಾಗಿದ್ದರೆ ಆರೋಗ್ಯ ಕೆಡಬಹುದು.
*ಆದ್ದರಿಂದ ನಿಮಗೆ ಔಷಧಿ ನೀಡಿದ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಸೂಕ್ತ. ಒಂದು ವೇಳೆ ಯಾವುದೇ ಅಲರ್ಜಿ ಅಥವಾ ಅಡ್ಡಪರಿಣಾಮ ಕಂಡುಬರದೇ ಇದ್ದಲ್ಲಿ ಕ್ರಮೇಣ ಇದರ ಪ್ರಮಾಣವನ್ನು ಒಂದು ದೊಡ್ಡ ಚಮಚದಷ್ಟಕ್ಕೆ ಏರಿಸಬಹುದು.

English summary

3 Natural Ingredients That Can Help You Sleep Better

There are natural ways to put an end to the tossing and turning on the bed. And today, we'll be sharing one such simple, yet powerful, trick that will help you sleep like a baby. This trick requires you to make a mixture of 3 remarkable natural ingredients namely coconut oil, sea salt and organic honey. The unique properties of these ingredients can naturally relax your mind and body.
Story first published: Saturday, June 4, 2016, 19:20 [IST]
X
Desktop Bottom Promotion