ಮೂಲವ್ಯಾಧಿಗೆ ಆಯುರ್ವೇದ ಚಿಕಿತ್ಸೆ-ತ್ವರಿತ ಸಾಂತ್ವನ

By: Arshad
Subscribe to Boldsky

ಹೇಳಿಕೊಳ್ಳಲು ಸಾಧ್ಯವಾಗದೇ ಇರುವ ಕಾಯಿಲೆಗಳಲ್ಲೊಂದು ಮೂಲವ್ಯಾಧಿ. ಮಲವಿಸರ್ಜನೆ ಕಷ್ಟವಾಗಿ ನೋವು ನೀಡುವುದು ಈ ವ್ಯಾಧಿಯ ಪ್ರಮುಖ ಲಕ್ಷಣ. ಮೂಲವ್ಯಾಧಿಗೆ ಪ್ರಮುಖ ಕಾರಣ ಆಹಾರದಲ್ಲಿ ನಾರಿನ ಕೊರತೆ. ಉಳಿದಂತೆ ಮಲಬದ್ಧತೆ, ಅಜೀರ್ಣತೆ, ಹೆಚ್ಚಿನ ಭಾರದ ವಸ್ತುಗಳನ್ನು ಹೊರುವುದು, ಕರುಳುಗಳಲ್ಲಿನ ಸೋಂಕು, ಗರ್ಭಾವಸ್ಥೆಯ ತಾತ್ಕಾಲಿಕ ಪರಿಣಾಮಗಳು, ಸ್ಥೂಲಕಾಯ, ಗುದರತಿ ಮೊದಲಾದ ಕೆಲವಾರು ಕಾರಣಗಳಿವೆ. ಈ ವಿಧಾನದಿಂದ ಮೂಲವ್ಯಾಧಿ ಗುಣಪಡಿಸಬಹುದು

ಮೂಲವ್ಯಾಧಿಯ ಪರಿಣಾಮವಾಗಿ ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ, ಊದಿಕೊಳ್ಳುವುದು, ಸತತ ತುರಿಕೆ, ಸೋಂಕು, ಕುಳಿತುಕೊಳ್ಳಲೂ ಆಗದಷ್ಟು ನೋವು ಮೊದಲಾದವು ಎದುರಾಗುತ್ತವೆ. ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

ಒಂದು ವೇಳೆ ಇದನ್ನು ಪ್ರಾರಂಭದ ಹಂತದಲ್ಲಿಯೇ ಚಿಕಿತ್ಸೆಗೆ ಒಳಪಡಿಸದಿದ್ದರೆ ಇದು ಉಲ್ಬಣಗೊಂಡು ಶಾಶ್ವತವಾಗಿ ಜೀವಮಾನವಿಡೀ ಕಾಡುವ ಭಯವೂ ಇದೆ. ಆಯುರ್ವೇದ ಈ ತೊಂದರೆಗೆ ಅತ್ಯುತ್ತಮವಾದ ಪರಿಹಾರವನ್ನು ಒದಗಿಸಿದೆ. ಬನ್ನಿ, ಈ ಪರಿಹಾರ ಯಾವುದು ಎಂಬುದನ್ನು ನೋಡೋಣ.... 

ಅಗತ್ಯವಿರುವ ಸಾಮಾಗ್ರಿಗಳು....

ಅಗತ್ಯವಿರುವ ಸಾಮಾಗ್ರಿಗಳು....

*ಎಳೆ ಬೆಂಡೆ ಕಾಯಿ : ಎರಡು (ಮಧ್ಯಮ ಗಾತ್ರ)

*ಆಲಿವ್ ಎಣ್ಣೆ: ಒಂದು ದೊಡ್ಡಚಮಚ

ಯಾವುದೇ ಹಾನಿಕಾರಕವಲ್ಲ....

ಯಾವುದೇ ಹಾನಿಕಾರಕವಲ್ಲ....

ಈ ಸರಳವಾದ ಮದ್ದು ಮೂಲವ್ಯಾಧಿಯನ್ನು ಮೂಲದಿಂದಲೇ ನಿವಾರಿಸಲು ಸಕ್ಷಮವಾಗಿದ್ದು ಇದಕ್ಕಾಗಿ ವಿರೇಚಕಗಳ ಅಗತ್ಯವಿಲ್ಲ ಅಥವಾ ಹಾನಿಕಾರಕ ರಾಸಾಯನಿಕಗಳ ಅಗತ್ಯವೂ ಇಲ್ಲ. ಆಯುರ್ವೇದದ ಯಾವುದೇ ಔಷಧಿಯಂತೆ ಈ ಮದ್ದು ಸಹಾ ಕೊಂಚ ನಿಧಾನವಾಗಿ ಕೆಲಸ ಮಾಡುವುದರಿಂದ ಸತತವಾಗಿ ಮತ್ತು ನಿಯಮಿತವಾಗಿ ಈ ಮದ್ದನ್ನು ಸೇವಿಸ್ತುತಾ ಬರಬೇಕು.

ಬೆಂಡೆಕಾಯಿ...

ಬೆಂಡೆಕಾಯಿ...

ಬೆಂಡೆಕಾಯಿಯಲ್ಲಿ ಕರಗದ ಮತ್ತು ಕರಗುವ ನಾರು ಎರಡೂ ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಬೆಂಡೆಕಾಯಿ ಕತ್ತರಿಸಿದಾದ ಒಸರುವ ಅಂಟುಅಂಟಾದ ದ್ರವವೇ ಕರುಳುಗಳಲ್ಲಿ ಜಾರುವಿಕೆಯನ್ನು ಹೆಚ್ಚಿಸಿ ತ್ಯಾಜ್ಯ ಸುಲಭವಾಗಿ ಹೊರಹೋಗಲು ನೆರವಾಗುತ್ತವೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಸಹಾ ಹಲವು ಪೋಷಕಾಂಶಗಳ ಆಗರವಾಗಿದ್ದು ಹೊಟ್ಟೆಯಲ್ಲಿಯೇ ಪೂರ್ಣವಾಗಿ ಜೀರ್ಣಗೊಳ್ಳದೇ ಕರುಳುಗಳಲ್ಲಿಯೂ ಎಣ್ಣೆಯ ಜಾರುವಿಕೆಯನ್ನು ಒದಗಿಸುವ ಮೂಲಕ ಮಲವನ್ನು ಸಡಿಲಗೊಳಿಸಿ ವಿಸರ್ಜನೆಗೆ ಬೇಕಾದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆಗೆ 'ಆಲೀವ್ ಎಣ್ಣೆ'ಯೇ ದಿವ್ಯೌಷಧ

ತಯಾರಿಸುವ ಮತ್ತು ಸೇವಿಸುವ ವಿಧಾನ

ತಯಾರಿಸುವ ಮತ್ತು ಸೇವಿಸುವ ವಿಧಾನ

*ಬೆಂಡೆಕಾಯಿಗಳನ್ನು ಚಿಕ್ಕದಾಗಿ ಹೆಚ್ಚಿ ಆಲಿವ್ ಎಣ್ಣೆಯೊಂದಿಗೆ ಒಂದು ಚಿಕ್ಕ ಬೋಗುಣಿಯಲ್ಲಿ ಬೆರೆಸಿ. ಎರಡನ್ನೂ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ. ಅಷ್ಟೇ! ಮಲಬದ್ಧತೆಯ ನಿವಾರಣೆಯ ಮದ್ದು ಸಿದ್ಧವಾಗಿದೆ.

ತಯಾರಿಸುವ ಮತ್ತು ಸೇವಿಸುವ ವಿಧಾನ

ತಯಾರಿಸುವ ಮತ್ತು ಸೇವಿಸುವ ವಿಧಾನ

ಈ ಮಿಶ್ರಣವನ್ನು ನಿಮ್ಮ ರಾತ್ರಿಯ ಊಟದ ಬಳಿಕ ದಿನದ ಅಂತಿಮ ಆಹಾರವಾಗಿ ಸೇವಿಸಿ. ಕನಿಷ್ಠ ಎರಡು ತಿಂಗಳಾದರೂ ನಿತ್ಯವೂ ಸೇವಿಸಬೇಕು. ಸಾಮಾನ್ಯವಾದ ಎಲ್ಲಾ ಮೂಲವ್ಯಾಧಿಗಳು ಈ ವಿಧಾನದಿಂದ ಗುಣವಾಗುತ್ತವೆ. ಇದಕ್ಕೂ ಹೊರತಾಗಿ ನೋವು ಉಳಿದುಕೊಂಡಿದ್ದರೆ ವೈದ್ಯರನ್ನು ಕಾಣುವುದು ಅನಿವಾರ್ಯ.

 
English summary

Ayurvedic Remedy For Piles That Has Shocked Doctors!

Do you experience a lot of difficulty while trying to pass stools? If yes, then you could be suffering from piles and there is an excellent Ayurvedic remedy to treat it! have a look
Please Wait while comments are loading...
Subscribe Newsletter