For Quick Alerts
ALLOW NOTIFICATIONS  
For Daily Alerts

ಈ ವಿಧಾನದಿಂದ ಮೂಲವ್ಯಾಧಿ ಗುಣಪಡಿಸಬಹುದು

By Super
|

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ವಿಪರೀತ ನೋವಿನಿಂದ ಒದ್ದಾಡಬೇಕಾಗುತ್ತದೆ. ಪೈಲ್ಸ್ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುವುದು, ಕೆಲವರಿಗೆ ಗುದದ್ವಾರ ಹೊರಗೆ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುವುದು. ಮೂಲವ್ಯಾಧಿ ನಿವಾರಣೆಗೆ 20 ರೀತಿಯ ಮನೆಮದ್ದು

ಈ ಕಾಯಿಲೆ ಹೆಚ್ಚಾದರೆ ರಕ್ತಸ್ರಾವ ಕಂಡು ಬರುವುದು ಹಾಗೂ ಮಲವಿಸರ್ಜನೆಗೆ ಹೋಗುವಾಗ ವಿಪರೀತ ನೋವು ಕಂಡು ಬರುವುದು, ಕೂರುವುದು, ನಡೆಯುವುದು ಕೂಡ ಕಷ್ಟವಾಗುವುದು. ಇದಕ್ಕೆ ಆರ್ಯುವೇದ ಅಥವಾ ಅಲೋಪತಿ ಔಷಧಿ ತೆಗೆದುಕೊಂಡರೆ, ಕೆಲವರು ಆಪರೇಷನ್ ಮಾಡಿಸಿದರೆ ಮೂಲವ್ಯಾಧಿಯ ನೋವಿನಿಂದ ಪಾರಾಗಬಹುದು. ಮೂಲವ್ಯಾಧಿ ಗುಣವಾಗಲು ಪಾಲಿಸಲೇಬೇಕಾದ ಪಥ್ಯ

ಆದರೆ ಇದರ ಜೊತೆಗೆ ಆಹಾರಕ್ರಮದ ಬಗ್ಗೆ ಗಮನ ಕೊಡದಿದ್ದರೆ ಆ ನೋವು ಮರುಕಳಿಸುವುದು, ಆದ್ದರಿಂದ ಮೂಲವ್ಯಾಧಿ ಇರುವವರು ಈ ಕೆಳಗಿನ ಆಹಾರಗಳನ್ನು ಕಡ್ಡಾಯವಾಗಿ ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಜೀರಿಗೆ

ಜೀರಿಗೆ

ಪ್ರತೀದಿನ ಒಂದು ಲೋಟ ಜೀರಿಗೆ ನೀರು ಕುಡಿಯಿರಿ. ಅದರಲ್ಲೂ ಜೀರಿಗೆಯನ್ನು ರೋಸ್ಟ್ ಮಾಡಿ ಪುಡಿ ಮಾಡಿ ಇರಿ, ಅದನ್ನು ಜೀರಿಗೆ ಕಲೆಸಿ ಕುಡಿದರೆ ಒಳ್ಳೆಯದು.

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆ ತುಂಬಾ ಒಳ್ಳೆಯದು, ಇದು ಹೊಟ್ಟೆಯನ್ನು ತಂಪಾಗಿ ಇಡುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.

 ಬಾಳೆ ಹಣ್ಣು

ಬಾಳೆ ಹಣ್ಣು

ಬಾಳೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ 3 ಬಾರಿ ಕುಡಿಯಿರಿ. ಈ ರೀತಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು.

ಜ್ಯೂಸ್

ಜ್ಯೂಸ್

ಕ್ಯಾರೆಟ್ ಅಥವಾ ಬೀಟ್ ರೂಟ್ ಜ್ಯೂಸ್, ಕಿತ್ತಳೆ ಜ್ಯೂಸ್ ಇವೆಲ್ಲಾ ಉರಿಯನ್ನು ಕಡಿಮೆ ಮಾಡುತ್ತದೆ.

ಹಾಗಾಲಕಾಯಿ

ಹಾಗಾಲಕಾಯಿ

ಹಾಗಾಲಕಾಯಿಯ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು. ಅದರ ಎಲೆಯನ್ನು ಹಿಂಡಿ ರಸ ತೆಗೆದು ಆ ರಸವನನ್ನು ಊದಿದ ಭಾಗಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುವುದು.

 ಕಹಿ ಬೇವಿನ ಎಲೆ ಮತ್ತು ಗೋಧಿ ಹುಲ್ಲು

ಕಹಿ ಬೇವಿನ ಎಲೆ ಮತ್ತು ಗೋಧಿ ಹುಲ್ಲು

ಕಹಿ ಬೇವಿನ ಎಲೆ ಮತ್ತು ಗೋಧಿ ಹುಲ್ಲನ್ನು ಹಾಕಿ ಕುದಿಸಿದ ನೀರು ಕುಡಿಯುವುದು ಮೂಲವ್ಯಾಧಿಗೆ ನೈಸರ್ಗಿಕವಾದ ಮನೆಮದ್ದು.

ಬೆರ್ರಿ

ಬೆರ್ರಿ

ಎಲ್ಲಾ ಬೆರ್ರಿ ಹಣ್ಣುಗಳು ಮೂಲವ್ಯಾಧಿ ಕಾಯಿಲೆ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಸ್ಟ್ರಾಬೆರಿ, ದ್ರಾಕ್ಷಿ ಈ ರೀತಿಯ ಹಣ್ಣುಗಳನ್ನು ಪ್ರತಿನಿತ್ಯ ತಿನ್ನಿ.

ಶುಂಠಿ

ಶುಂಠಿ

ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಚಮಚ ನಿಂಬೆ ರಸದ ಜೊತೆ ಕಲೆಸಿ, ಅದಕ್ಕೆ 1 ಚಮಚ ಜೇನು ಬೆರೆಸಿ ತಿಂದರೆ ಕೂಡ ಪೈಲ್ಸ್ ಕಡಿಮೆಯಾಗುವುದು.

ಮೂಲಂಗಿ

ಮೂಲಂಗಿ

ಮೂಲಂಗಿ ಮೂಲವ್ಯಾಧಿಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾದ ಆಹಾರವಾಗಿದೆ. ಕಾಲು ಗ್ಲಾಸ್ ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಪೈಲ್ಸ್ ಹೆಚ್ಚಾಗದಂತೆ ತಡೆಯಬಹುದು.

 ನೀರು

ನೀರು

ಸಾಕಷ್ಟು ನೀರು ಕುಡಿಯಿರಿ, ತುಂಬಾ ನೀರು ಕುಡಿದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ನೀರು ಕಮ್ಮಿ ಕುಡಿದು ಮಲಬದ್ಧತೆ ಸಮಸ್ಯೆ ಕಾಣಿಸಿದರೆ ಪೈಲ್ಸ್ ಕಾಯಿಲೆ ಉಂಟಾಗುವುದು, ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ.

 ಆಹಾರಕ್ರಮ

ಆಹಾರಕ್ರಮ

ಉಪ್ಪಿನಕಾಯಿ, ಅಧಿಕ ಖಾರವಿರುವ ಆಹಾರಗಳು ಇವುಗಳನ್ನು ತಿನ್ನಬೇಡಿ. ಖಾರ, ಉಪ್ಪು, ಹುಳಿ ಸ್ವಲ್ಪ ಕಮ್ಮಿಯಿದ್ದರೂ ಪರ್ವಾಗಿಲ್ಲ, ಆದರೆ ಇವು ಹೆಚ್ಚಾದರೆ ನಿಮ್ಮ ಕಾಯಿಲೆಯೂ ಹೆಚ್ಚಾಗುವುದು ನೆನಪಿರಲಿ.

ಅಡುಗೆ ಸೋಡಾ

ಅಡುಗೆ ಸೋಡಾ

ವಿಪರೀತ ಉರಿಯಿಂದ ನರುಳಿತ್ತಿದ್ದರೆ, ಊದಿದ ಭಾಗಕ್ಕೆ ಅಡುಗೆ ಸೋಡಾ ಹಚ್ಚಿದರೆ ಕಡಿಮೆಯಾಗುವುದು.

English summary

Tips To Cure Piles

Some of the most common symptoms of piles are feelings of irritation, soreness or pain while passing stool. If you apply pressure around the rectal area, you might aggravate piles and severe conditions might even result in bleeding. You can get instant relief from piles through several natural means.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more