ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮೆಂತೆ ಕಾಳು (Trigonella foenum-graecum) ನೋಡಲು ಪುಟ್ಟದಾದರೂ ಪೋಷಕಾಂಶಗಳ ದೃಷ್ಟಿಯಿಂದ ದೊಡ್ಡದೇ ಆಗಿದೆ. ಇದರ ಸೇವನೆಯ ಮೂಲಕ ಪಡೆಯಬಹುದಾದ ಪ್ರಯೋಜನಗಳ ಪಟ್ಟಿಯಲ್ಲಿ ಪ್ರಮುಖವಾದುದೆಂದರೆ ಜೀರ್ಣಕ್ರಿಯೆಗೆ ಸಹಕಾರ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದು. ಮೆಂತೆಕಾಳುಗಳಲ್ಲಿ ಗ್ಯಾಲಾಕ್ಟೋಮಾನ್ನನ್ (Galactomannan) ಎಂಬ ನೀರಿನಲ್ಲಿ ಕರಗುವ ಸಕ್ಕರೆಯಂತಹ ಪೋಷಕಾಂಶವಾಗಿದೆ (heteropolysaccharide). ಈ ಪೋಷಕಾಂಶವೇ ತೂಕ ಇಳಿಸಲು ನೆರವಾಗುವ ದೊಡ್ಡ ಗುಣ ಹೊಂದಿದೆ.
ಅಂದರೆ ಇದು ಕೊಬ್ಬನ್ನು ಕರಗಿಸುವುದಿಲ್ಲ, ಬದಲಿಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅಗತ್ಯಕ್ಕೂ ಹೆಚ್ಚು ತಿನ್ನದೇ ಇರಲು ನೆರವಾಗುವ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ. ಅಷ್ಟೇ ಅಲ್ಲ, ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನೂ ನಿಯಂತ್ರಿಸಲು ನೆರವಾಗುತ್ತದೆ.
ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!
ಒಂದು ವೇಳೆ ತೂಕ ಇಳಿಕೆಗೆ ನೀವು ಇದುವರೆಗೆ ಹಲವಾರು ದುಬಾರಿ ಹಾಗೂ ಕ್ಲಿಷ್ಟಕರವಾದ ಪ್ರಯೋಗಗಳನ್ನು ಮಾಡಿದ್ದೂ ಏನೂ ಪ್ರಯೋಜನವಿಲ್ಲ ಎಂದಾಗಿದ್ದರೆ ಮೆಂತೆ ನಿಮ್ಮ ನೆರವಿಗೆ ಬರಲಿದೆ. ಬನ್ನಿ, ಈ ಪುಟ್ಟ ಕಾಳು ನಿಮ್ಮ ಭಾರೀ ತೂಕವನ್ನು ಹೇಗೆ ಇಳಿಸಲು ನೆರವಾಗುತ್ತದೆ ಎಂಬುದನ್ನು ನೋಡೋಣ...
ಹುರಿದ ಮೆಂತೆಕಾಳು
ತೂಕ ಇಳಿಸಲು ಇದಕ್ಕಿಂತ ಸರಳವಾದ ವಿಧಾನ ಇನ್ನೊಂದಿರಲಿಕ್ಕಿಲ್ಲ. ಅಷ್ಟೇ ಅಲ್ಲ, ಇದರೊಂದಿಗೆ ಬೇರೆ ಯಾವ ಔಷಧಿಯನ್ನೂ ಸೇವಿಸಬೇಕಾಗಿಲ್ಲ. ಕೊಂಚ ಮೆಂತೆಕಾಳುಗಳನ್ನು ಬಾಣಲಿಯಲ್ಲಿ ಮಧ್ಯಮ ಉರಿಯಲ್ಲಿ ಕೊಂಚ ಹೊತ್ತು ಹುರಿಯಿರಿ. ಕೊಂಚವೇ ಕಂದು ಬಣ್ಣಕ್ಕೆ ತಿರುಗಿದರೆ ಸಾಕು, ಕಪ್ಪಾಗಬಾರದು. ಬಳಿಕ ಇದನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ನೀರಿಲ್ಲದೇ ಒಣದಾಗಿ ಪುಡಿ ಮಾಡಿ ಒಂದು ಚಿಕ್ಕ ಬಾಟಲಿಯಲ್ಲಿ ಹಾಕಿಡಿ. ಪ್ರತಿದಿನ ಬೆಳಿಗ್ಗೆ ಒಂದು ದೊಡ್ಡ ಚಮಚ ಪುಡಿಯನ್ನು
ಉಗುರುಬೆಚ್ಚನೆಯ ನೀರಿನಲ್ಲಿ ಹಾಕಿ ದಿನದ ಪ್ರಥಮ ಆಹಾರವಾಗಿ ಸೇವಿಸಿ.
ನೀರಿನಲ್ಲಿ ನೆನೆಸಿಟ್ಟ ಮೆಂತೆಕಾಳು
ಮೆಂತೆಯ ನೀರು ಕುಡಿದರೆ ಇಡಿಯ ದಿನ ಹೊಟ್ಟೆ ತುಂಬಿರುವ ಅನುಭವವಾಗುತ್ತದೆ. ಇದು ಹಸಿವಿನ ಭಾವನೆಯನ್ನು ತಗ್ಗಿಸಿ ಹೆಚ್ಚಿನ ಆಹಾರವನ್ನು ಸೇವಿಸದಂತೆ ತಡೆಯುತ್ತದೆ. ಇದರ ಪರಿಣಾಮವನ್ನು ಕೆಲವೇ ದಿನಗಳಲ್ಲಿ ಕಾಣಬಹುದು. ಒಂದು ಕಪ್ ನಷ್ಟು ಮೆಂತೆ ಕಾಳುಗಳನ್ನು ತಣ್ಣೀರಿನಲ್ಲಿ ಹಾಕಿ ಇಡಿಯ ರಾತ್ರೆ ನೆನೆಹಾಕಿ. ಮರುದಿನ ಬೆಳಿಗ್ಗೆ ಈ ನೀರನ್ನು ಸೋಸಿ ಕಾಳುಗಳನ್ನು ಸಂಗ್ರಹಿಸಿ. ಈ ಕಾಳುಗಳನ್ನು ದಿನದ ಪ್ರಥಮ ಆಹಾರವಾಗಿ (ಖಾಲಿಹೊಟ್ಟೆಯಲ್ಲಿ) ಜಗಿದು ನುಂಗಿ.
ಮೊಳಕೆ ಬರಿಸಿದ ಮೆಂತೆ ಕಾಳು
ಮೊಳಕೆ ಮೂಡಿದ ಮೆಂತೆಕಾಳುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಯಾರೋಟೀನ್, ವಿಟಮಿನ್ ಎ,ಇ,ಸಿ ಹಾಗೂ ಬಿ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಸತು, ಪೊಟ್ಯಾಶಿಯಂ, ಅಮೈನೋ ಆಮ್ಲಗಳು, ಜೀರ್ಣಕ್ರಿಯೆಗೆ ಸಹಕರಿಸುವ ಖನಿಜಗಳು ಹಾಗೂ ಇನ್ನಿತರ ಪೋಷಕಾಂಶಗಳಿರುತ್ತವೆ. ಮೊಳಕೆ ಬಂದ ಮೆಂತೆಕಾಳುಗಳನ್ನು ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವ ಮೂಲಕವೂ ತೂಕ ಇಳಿಕೆ ಸುಲಭವಾಗುತ್ತದೆ.
ಮೆಂತೆಯನ್ನು ಮೊಳಕೆ ಬರಿಸಲು ಹೀಗೆ ಮಾಡಿ
ಒಂದು ತೆಳುವಾದ ಸ್ವಚ್ಛಹತ್ತಿಯ ಬಟ್ಟೆಯನ್ನು ನೀರಿನಲ್ಲಿ ನೆನೆಸಿ. ಇದರಲ್ಲಿ ಮೆಂತೆಕಾಳುಗಳನ್ನಿರಿಸಿ ಬಟ್ಟೆಯನ್ನು ಮಡಚಿ. ಬಟ್ಟೆ ಬಿಚ್ಚಿಕೊಳ್ಳದಂತೆ ಇದರ ಮೇಲೊಂದು ಕಲ್ಲು ಅಥವಾ ನೀರು ತುಂಬಿದ ಚಿಕ್ಕ ಪಾತ್ರೆಯನ್ನಿರಿಸಿ. ಇದು ಮೂರು ದಿನಗಳವರೆಗೆ ಹಾಗೇ ಇರಲಿ. ಈಗ ಮೆಂತೆ ಕಾಳುಗಳಲ್ಲಿ ಮೊಳಕೆ ಮೂಡಿರುತ್ತದೆ. ಅಂದಿನಿಂದಲೇ ಅಥವಾ ಮರುದಿನದ ಸೇವನೆಗೂ ಇರಿಸಿಕೊಳ್ಳಲು ಕೊಂಚ ನೀರನ್ನು ಚಿಮುಕಿಸುತ್ತಿದ್ದರಾಯಿತು. ಮೊಳಕೆ ಬೆಳೆಯುತ್ತಲೇ ಹೋಗುತ್ತದೆ. ಮೊಳಕೆ ಒಂದಿಂಚಿಗೂ ಹೆಚ್ಚು ಬೆಳೆಯುವ ಮುನ್ನವೇ ಸೇವಿಸಬೇಕು.
ಮೆಂತೆಯ ಟೀ
ಒಂದು ವೇಳೆ ಸ್ಥೂಲಕಾಯದೊಂದಿಗೆ ಮಧುಮೇಹವೂ ಆವರಿಸಿದ್ದರೆ ಈ ವಿಧಾನ ತುಂಬಾ ಉಪಯುಕ್ತವಾಗಿದೆ. ಇದರ ಸೇವನೆಯಿಂದ ತೂಕ ಇಳಿಕೆಯಾಗುವುದು ಮಾತ್ರವಲ್ಲ, ಜೀರ್ಣಕ್ರಿಯೆ ಸುಲಭವಾಗುವುದು, ಅಧಿಕ ರಕ್ತದೊತ್ತಡ ಕಡಿಮೆಯಾಗುವುದು ಮೊದಲಾದ ಪ್ರಯೋಜನಗಳ ಸಹಿತ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಈ ಟೀ ತಯಾರಿಸುವ ವಿಧಾನ
೧)ಮೊದಲು ಕೊಂಚ ಮೆಂತೆಕಾಳುಗಳನ್ನು ಕೊಂಚವೇ ನೀರಿನೊಂದಿಗೆ ನುಣ್ಣಗೆ ಅರೆಯಿರಿ.
೨) ಟೀ ಮಾಡುವ ಪಾತ್ರೆಯಲ್ಲಿ ಕೊಂಚ ನೀರನ್ನು ಕುದಿಸಿ.
೩) ಅರೆದ ಮೆಂತೆಯನ್ನು ಕುದಿಯುವ ನೀರಿಗೆ ಹಾಕಿ.
೪) ಇದರೊಂದಿಗೆ ನಿಮ್ಮ ಆಯ್ಕೆಯ ಮಸಾಲೆ, ಉದಾಹರಣೆಗೆ ಶುಂಠಿ, ಕಾಳುಮೆಣಸು, ದಾಲ್ಚಿನ್ನಿ ಪುಡಿ ಮೊದಲಾದವುಗಳನ್ನು ಚಿಟಿಕೆಯಷ್ಟು ಸೇರಿಸಿ.
೫) ಸುಮಾರು ಐದು ನಿಮಿಷಗಳ ಕಾಲ ಈ ನೀರು ಚಿಕ್ಕ ಉರಿಯಲ್ಲಿ ಕುದಿಯಲಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ.
೬) ಈ ಟೀಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನವೂ ಕುಡಿಯಿರಿ.
ಮೆಂತೆ ಮತ್ತು ಜೇನು
ತೂಕ ಇಳಿಸಲು ಇವೆರಡು ಉತ್ತಮವಾದ ಪರಿಣಾಮವನ್ನು ಬೀರುತ್ತವೆ. ಪರಿಣಾಮವಾಗಿ ತೂಕ ಇಳಿಯುವ ಜೊತೆಗೇ ನೈಸರ್ಗಿಕವಾಗಿ ಆಕರ್ಷಕ ಮೈಕಟ್ಟು ಪಡೆಯಲು ನೆರವಾಗುತ್ತದೆ.
*ಮೊದಲು ಮೆಂತೆಯನ್ನು ಮಿಕ್ಸಿಯ ಗ್ರೈಂಡರ್ ನಲ್ಲಿ ಕೊಂಚ ದೊರಗಾಗಿಯೇ ಇರುವಂತೆ ಪುಡಿಮಾಡಿ.
*ಒಂದು ಪಾತ್ರೆಯಲ್ಲಿ ಕೊಂಚ ನೀರನ್ನು ಕುದಿಸಿ ಮೆಂತೆಪುಡಿಯನ್ನು ಸೇರಿಸಿ ಒಂದು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ.
*ಸುಮಾರು ಮೂರು ಘಂಟೆಗಳ ಕಾಲ ಇದನ್ನು ಹಾಗೇ ಬಿಡಿ.
*ಈ ನೀರಿನಿಂದ ಮೆಂತೆಕಾಳುಗಳನ್ನು ಸೋಸಿ ತೆಗೆಯಿರಿ
*ಈ ನೀರಿಗೆ ಕೊಂಚವೇ ಜೇನು ಹಾಗೂ ಲಿಂಬೆರಸವನ್ನು ಬೆರೆಸಿ.
*ಉತ್ತಮ ಪರಿಣಾಮಕ್ಕಾಗಿ ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಒಂದು ಲೋಟ ಸೇವಿಸಿ.
ತೂಕ ಇಳಿಯಲು ಮೆಂತೆ ಹೇಗೆ ನೆರವಾಗುತ್ತದೆ?
ಮೆಂತೆಯನ್ನು ಉಪಯೋಗಿಸಿ ತೂಕವನ್ನು ಕಳೆದುಕೊಳ್ಳುವ ಐದು ವಿಧಾನಗಳನ್ನು ಈಗ ಅರಿತುಕೊಂಡಿದ್ದೀರಿ. ಮೆಂತೆ ಹೇಗೆ ತೂಕ ಇಳಿಸುತ್ತದೆ ಎಂಬ ಕುತೂಹಲದ
ಪ್ರಶ್ನೆಗೆ ವಿವರಣೆ ಹೀಗಿದೆ: ಮೆಂತೆಯಲ್ಲಿರುವ ಗ್ಯಾಲಕ್ಟೋಮಾನ್ನನ್ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ದೇಹದಲ್ಲಿರುವ ಸಕ್ಕರೆಯನ್ನು ಒಡೆದು ಬಳಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಕ್ಯಾಲೋರಿಗಳು ದಹನಗೊಳ್ಳುತ್ತವೆ ಹಾಗೂ ಅನಗತ್ಯವಾಗಿ ಸಂಗ್ರಹವಾಗಿದ್ದ ಕೊಬ್ಬಿನ ಪದರಗಳು ನಿವಾರಣೆಯಾಗುತ್ತವೆ.
ತೂಕ ಇಳಿಯಲು ಮೆಂತೆ ಹೇಗೆ ನೆರವಾಗುತ್ತದೆ?
ಅಲ್ಲದೇ ಮೆಂತೆಯಲ್ಲಿ ಕರಗುವ ನಾರು ಸಹಾ ಹೆಚ್ಚಿನ ಪ್ರಮಾಣದಲ್ಲಿದ್ದು 75%ರಷ್ಟಿದೆ. ಇದು ಮಲಬದ್ದತೆಯನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುವ ಮೂಲಕ ಅನಿವಾರ್ಯವಾಗಿ ದೇಹದಲ್ಲಿ ಕೊಬ್ಬಿನ ಸಂಗ್ರಹವನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಇದೇ ತೂಕ ಇಳಿಕೆಯ ರಹಸ್ಯ. ವಿಶೇಷವಾಗಿ ಸೊಂಟದಲ್ಲಿರುವ ಕೊಬ್ಬು ಕರಗಲು ಮೆಂತೆ ಸಹಕಾರಿಯಾಗಿದೆ.
ತೂಕ ಇಳಿಯಲು ಮೆಂತೆ ಹೇಗೆ ನೆರವಾಗುತ್ತದೆ?
ಇದರ ಇನ್ನೊಂದು ಪ್ರಯೋಜನವೆಂದರೆ ಹಸಿವಿನ ಭಾವನೆಯನ್ನು ಇಲ್ಲವಾಗಿಸುವುದು. ಇಡಿಯ ದಿನ ಹೊಟ್ಟೆ ತುಂಬಿದಂತೆಯೇ ಇರುವ ಭಾವನೆ ಇದ್ದರೆ ಏನನ್ನೂ ತಿನ್ನಲು ಮನಸ್ಸಾಗುವುದಿಲ್ಲ. ಊಟದ ಹೊತ್ತಿನಲ್ಲಿಯೂ ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನು ತಡೆಯುವ ಮೂಲಕ ಅನಗತ್ಯ ಆಹಾರ ಸೇವನೆಗೂ ಕಡಿವಾಣ ಹಾಕಿದಂತಾಗುತ್ತದೆ. ತನ್ಮೂಲಕ ಹೆಚ್ಚಿನ ಶ್ರಮವಿಲ್ಲದೇ ತೂಕ ಇಳಿಸಲು ಮೆಂತೆ ಅದ್ಭುತವಾದ ಆಯ್ಕೆಯಾಗಿದೆ.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ಬೇಸಿಗೆಯಲ್ಲಿ ಸೇವಿಸುವ ಆಹಾರಕ್ರಮ ಹೀಗಿರಲಿ, ಆರೋಗ್ಯವಾಗಿರುವಿರಿ
ತುಟಿಗಳ ಸುತ್ತಲು ಬೀಳುವ ಗುಳ್ಳೆಗಳ ಸಮಸ್ಯೆಗೆ ಮನೆಮದ್ದುಗಳು
8 ಗಂಟೆ ನಿದ್ದೆ ಮಾಡಿದ್ರೂ ಇನ್ನೂ ಸುಸ್ತಾದಂತಾಗುತ್ತಾ ?
ಲಿಂಬೆಸಿಪ್ಪೆ-ಸಂಧಿವಾತದ ಚಿಕಿತ್ಸೆ ಹಾಗೂ ಇತರ ಪ್ರಯೋಜನಗಳು
ಯಾವ್ಯಾವ ಹಣ್ಣಿನ ಜ್ಯೂಸ್ಗಳು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಡಿಟೇಲ್ಸ್
ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವಿಸುವುದು ಆರೋಗ್ಯಕರವೇ?
ಶೀತ-ಕೆಮ್ಮಿನಿಂದ ರಕ್ಷಣೆ ನೀಡುತ್ತವೆ ಈ ಅದ್ಭುತ ಹತ್ತು ಸರಳ ಟ್ರಿಕ್ಸ್
ಕರಬೂಜ ಹಣ್ಣು ತಿಂದ್ರೆ, ಈ 15 ಆರೋಗ್ಯಕಾರಿ ಲಾಭಗಳು ಪಡೆಯಬಹುದು
ಕದ್ದುಮುಚ್ಚಿ ಬ್ಲೂ ಫಿಲಂ ನೋಡುತ್ತಿದ್ದೀರಾ? ಹಾಗಾದರೆ ಇಂದೇ ನಿಲ್ಲಿಸಿ! ಯಾಕೆ ಗೊತ್ತೇ?
ನಿಮ್ಮ ಹಲ್ಲುಗಳನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದಾದ 5 ವಿಧಾನಗಳು
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದೀರೇ? ಹಾಗಾದ್ರೆ ಸೇವಿಸುವ ಆಹಾರ ಹೀಗಿರಲಿ…
ಆರೋಗ್ಯ ಟಿಪ್ಸ್: ಕ್ಯಾನ್ಸರ್ನ್ನು ನಿಯಂತ್ರಿಸುವ ಪವರ್ ಈ ತರಕಾರಿಗಳಲ್ಲಿದೆ!
ದೇಹದ ಲಿವರ್ನ ಆರೋಗ್ಯಕ್ಕೆ ಪವರ್ ಫುಲ್ ಆಹಾರಗಳು
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಕಾಂಗ್ರೆಸ್-ಬಿಜೆಪಿಗೆ ಸ್ಟೆಪ್ನಿಯಂತಾಗಿದೆ ಬಾದಾಮಿ ಕ್ಷೇತ್ರ- ಹೊರಟ್ಟಿ
ನಿನ್ನೆ ಕಾಂಗ್ರೆಸ್ ಇಂದು ಬಿಜೆಪಿ, ಛಲವಾದಿ ನಾರಾಯಣಸ್ವಾಮಿ ಲಾಂಗ್ ಜಂಪ್
ಕೆಎಸ್ಆರ್ ಟಿಸಿ ಟಿಕೆಟ್ ನಲ್ಲಿದೆ ಮತದಾನ ಮಾಡಿ ಎನ್ನುವ ಸಂದೇಶ!