For Quick Alerts
ALLOW NOTIFICATIONS  
For Daily Alerts

ಕೊತ್ತಂಬರಿ ಪುಡಿಯಲ್ಲಿರುವ ಪ್ರಯೋಜನಗಳು

By Super
|

ಧನಿಯಾ ಪುಡಿಯಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು

ಭಾರತದಲ್ಲಿ ಹಲವಾರು ನಿಯತ ಕಾಲಿಕೆಗಳು ಮತ್ತು ವೃತ್ತ ಪತ್ರಿಕೆಗಳು ಪ್ರಸಾರಗೊಳ್ಳುತ್ತವೆ. ಇವುಗಳ ಹೆಸರನ್ನು ಪಾಶ್ಚಿಮಾತ್ಯ ದೇಶಗಳ ಜನ ಕಂಡು ಕೇಳರಿಯರು. ಈ ನಿಯತಕಾಲಿಕೆಗಳಲ್ಲಿ ಮತ್ತು ವೃತ್ತಪತ್ರಿಕೆಗಳಲ್ಲಿ " ಆರೋಗ್ಯ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಸಲಹೆಗಳು" ಒಂದು ಅವಿಭಾಜ್ಯ ಅಂಗವಾಗಿರುತ್ತವೆ. ಈ ದೇಶದಲ್ಲಿ ದೊರೆಯುವ ಸಾಂಪ್ರದಾಯಿಕ ಗಿಡಮೂಲಿಕೆಗಳು ರೋಗನಿವಾರಕ ಶಕ್ತಿಗಳನ್ನು ತಮ್ಮಲ್ಲಿ ಒಳಗೊಂಡಿವೆ. ಅಂತಹ ಗಿಡಮೂಲಿಕೆಗಳ ಬಗ್ಗೆ ಮತ್ತು ಅವುಗಳ ಬಳಕೆಯ ಬಗ್ಗೆ ಈ ಪತ್ರಿಕೆಗಳು ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿರುತ್ತವೆ. ನಾವು ಸಹ ಇಂದು ಅಂತಹ ಎಲ್ಲೆಡೆ ದೊರೆಯುವ ಒಂದು ಸಸ್ಯ ಜನ್ಯ ಮನೆ ಔಷಧಿಯ ಬಗ್ಗೆ ತಿಳಿದುಕೊಳ್ಳೋಣಾ. ಆ ಮನೆಮದ್ದು ಮತ್ತ್ಯಾವುದು ಅಲ್ಲ. ನಮ್ಮ ಮನೆಗಳಲ್ಲಿ ಸಾರು, ಸಾಂಬರ್ ಮುಂತಾದವುಗಳಿಗೆ ಬಳಸುವ ಧನಿಯಾ ಪುಡಿ. ಹೌದು ಧನಿಯಾ ಪುಡಿಯನ್ನು ಬಳಸುವ ಮೂಲಕ ಅತ್ಯುತ್ತಮವಾದ ಆರೋಗ್ಯವನ್ನು ಸಂಪಾದಿಸಬಹುದು. ಇದು ಪ್ರಕೃತಿ ನಮಗೆ ನೀಡಿದ ವರ ಎಂದು ಇದನ್ನು ಬಳಸಿದರವರಿಗೆಲ್ಲ ಗೊತ್ತು.

ಇತರ ಎಲ್ಲಾ ಮಸಾಲೆ ಪದಾರ್ಥಗಳಂತೆ ಕೊತ್ತಂಬರಿ (ಧನಿಯಾ)ಯು ಸಹ ಸುಮಾರು ಕಾಲದಿಂದಲು ನಮ್ಮ ದೇಶದಲ್ಲಿ ಬೆಳೆಯಲ್ಪಡುತ್ತಿದೆ. ಈ ಕೊತ್ತಂಬರಿ ಗಿಡದಲ್ಲಿ ಬರುವ ಬೀಜವನ್ನು ಒಣಗಿಸಿ, ಪುಡಿ ಮಾಡಿ ಧನಿಯಾಪುಡಿಯನ್ನು ತಯಾರಿಸುತ್ತಾರೆ. ಈ ಬೀಜಗಳಲ್ಲಿ ಸುಮಾರು 8% ನಾರು, 2.9% ಕ್ಯಾಲ್ಸಿಯಂ ಇದ್ದು ಇತರ ಮಸಾಲೆ ಪದಾರ್ಥಗಳಂತೆ ಆರೋಗ್ಯಕ್ಕು ಸಹ ಉಪಯೋಗವನ್ನುಂಟು ಮಾಡುತ್ತದೆ. ನಮ್ಮ ಆಹಾರದ ದರ್ಜೆಯನ್ನು ನಿರ್ಧರಿಸುವ ವ್ಯವಸ್ಥೆಯು ಧನಿಯಾ ಪುಡಿಯು ಅತ್ಯುತ್ತಮ ಪೋಷಕಾಂಶಗಳ ಆಗರವೆಂಬ ಕೀರ್ತಿಯನ್ನು ನೀಡಿದೆ. ಧನಿಯಾ ಪುಡಿಯಲ್ಲಿ ರೋಗ ನಿವಾರಕ ಶಕ್ತಿಯಿರುವುದು ಈಗಾಗಲೇ ಸಾಭೀತಾಗಿದೆ. ಜೊತೆಗೆ ಇದು ಅತ್ಯುತ್ತಮ "ಆಂಟಿ- ಬಯೋಟಿಕ್" ಎಂಬ ಕೀರ್ತಿಗು ಪಾತ್ರವಾಗಿದೆ. ಧನಿಯಾ ಪುಡಿಯಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳನ್ನು ಮತ್ತಷ್ಟು ತಿಳಿಯುವ ಹಂಬಲವಿದೆಯೇ? ಹಾಗಾದರೆ ಮುಂದೆ ಓದಿ.

1. ರಕ್ತದಲ್ಲಿರುವ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ.

1. ರಕ್ತದಲ್ಲಿರುವ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ.

ವಿಶ್ವದಾದ್ಯಂತ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಹೊಸ ಹೊಸ ಮಧುಮೇಹಿಗಳು ಕಂಡು ಬರುತ್ತಲೆ ಇದ್ದಾರೆ. ಅಂತಹ ಮಧುಮೇಹವನ್ನು ತಡೆಯಲು ಮತ್ತು ನಿವಾರಿಸಲು ಧನಿಯಾ ಪುಡಿಯು ರಾಮ ಬಾಣದಂತೆ ಕೆಲಸಮಾಡುತ್ತದೆ. ಮಧುಮೇಹವನ್ನು ನಿವಾರಿಸಲು ದೇವರು ನೀಡಿದ ವರವೇ ಈ ಧನಿಯಾ ಪುಡಿ ಎನ್ನಬಹುದು. ಸಂಶೋಧನೆಗಳ ಪ್ರಕಾರ ಧನಿಯಾ ಪುಡಿಯನ್ನು ಬಳಸುವುದರಿಂದ ರಕ್ತದಲ್ಲಿರುವ ಸಕ್ಕರೆಯಂಶವನ್ನು ನಿಯಂತ್ರಿಸಬಹುದಂತೆ. ಅಲ್ಲದೆ ಇದರಲ್ಲಿ ಉಪಶಮನಕಾರಿ ಗುಣಗಳು ಸಹ ಇರುವುದರಿಂದಾಗಿ ಮಧುಮೇಹಿಗಳಿಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಇಷ್ಟು ಸಾಲದೆ ಧನಿಯಾ ಪುಡಿಯನ್ನು ನಾವೆಲ್ಲರು ತಪ್ಪದೆ ಬಳಸಲು?

2. ಸಲ್ಮೊನೆಲ್ಲವನ್ನು ಗೆಲ್ಲಲು ಸ್ವಲ್ಪ ಮಸಾಲೆಯನ್ನು ಬಳಸಿ

2. ಸಲ್ಮೊನೆಲ್ಲವನ್ನು ಗೆಲ್ಲಲು ಸ್ವಲ್ಪ ಮಸಾಲೆಯನ್ನು ಬಳಸಿ

ಧನಿಯಾ ಪುಡಿಯು ಸಲ್ಮೊನೆಲ್ಲ ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬ ವಿಷಯ ಈಗಾಗಲೇ ಧೃಡಪಟ್ಟಿದೆ. ಸಲ್ಮೊನೆಲ್ಲವು ಆಹಾರಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನುಂಟು ಮಾಡುತ್ತದೆ. ಹಾಗಾಗಿ ಧನಿಯಾ ಪುಡಿಯಂತಹ ಆರೋಗ್ಯಕಾರಿ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ರೋಗ ಮುಕ್ತರಾಗಿರಿ.

3. ಅತ್ಯಂತ ಉಪಯುಕ್ತ ಗಿಡಮೂಲಿಕೆ

3. ಅತ್ಯಂತ ಉಪಯುಕ್ತ ಗಿಡಮೂಲಿಕೆ

ಧನಿಯಾ ಪುಡಿಯಲ್ಲಿ ಅಷ್ಟೊಂದು ಆರೋಗ್ಯಕಾರಿ ವಿಚಾರಗಳು ಅಡಕಗೊಂಡಿರಲು ಕಾರಣವೆಂದರೆ ಅದರಲ್ಲಿರುವ ಫೈಟೊನ್ಯೂಟ್ರಿಯೆಂಟ್ ಅಂಶಗಳೇ ಕಾರಣ. ಧನಿಯಾದಲ್ಲಿ ವೊಲಟೈಲ್ ಎಣ್ಣೆಯು ಲಿನಲೂಲ್, ಬೊರ್ನಿಯೊಲ್, ಕಾರ್ವೋನ್, ಎಪಿಜೆನಿನ್, ಕರ್ಪೂರ ಇತ್ಯಾದಿಗಳಂತಹ ಫೈಟೊನ್ಯೂಟ್ರಿಯೆಂಟ್‍ಗಳು ಅಧಿಕ ಪ್ರಮಾಣದಲ್ಲಿವೆ.

4. ಮೊಡವೆ ಮತ್ತು ಮೊಡವೆಕಾರಕಗಳನ್ನು ವಿಮುಕ್ತಗೊಳಿಸುತ್ತದೆ.

4. ಮೊಡವೆ ಮತ್ತು ಮೊಡವೆಕಾರಕಗಳನ್ನು ವಿಮುಕ್ತಗೊಳಿಸುತ್ತದೆ.

ಧನಿಯಾ ಪುಡಿಯ ಮತ್ತೊಂದು ಪ್ರಯೋಜನವೆಂದರೆ ಇದರಲ್ಲಿ ಮೊಡವೆ ಮತ್ತು ಮೊಡವೆಕಾರಕಗಳನ್ನು ನಿವಾರಿಸುವ ಶಕ್ತಿಯಿದೆ. ಮೊಡವೆಗಳು ಯುವ ಜನರನ್ನು ಬಹುವಾಗಿ ಕಾಡುವ ಪೀಡೆಯಾಗಿರುತ್ತದೆ. ಆದರೆ ಅದಕ್ಕೆ ಹೆದರ ಬೇಕಿಲ್ಲ, ಧನಿಯಾ ಪುಡಿಯನ್ನು ಹರಿಶಿಣ ಪುಡಿಯೊಂದಿಗೆ ಬೆರೆಸಿ ಅಥವಾ ಕೊತ್ತಂಬರಿ ರಸವನ್ನು ಸೇವಿಸುವುದರಿಂದ ಮೊಡವೆಗಳನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ತಡೆಯಬಹುದು.

5. ಕೊಲೆಸ್ಟ್ರಾಲ್ ಅನ್ನು ತಡೆಯುತ್ತದೆ.

5. ಕೊಲೆಸ್ಟ್ರಾಲ್ ಅನ್ನು ತಡೆಯುತ್ತದೆ.

ಧನಿಯಾ ಪುಡಿಯ ಅತಿದೊಡ್ಡ ಪ್ರಯೋಜನಗಳಲ್ಲಿ ಒಂದು ಕೊಲೆಸ್ಟ್ರಾಲ್ ಅನ್ನು ತಡೆಗಟ್ಟುವುದು. ಧನಿಯಾ ಪುಡಿ ಅಥವಾ ಬೀಜಗಳನ್ನು ನಾವು ಮಿತವಾಗಿ ಸೇವಿಸುತ್ತಿದ್ದರೆ ಅಥವಾ ಆಹಾರದಲ್ಲಿ ಬಳಸುತ್ತಿದ್ದರೆ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಡ ಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ. ಧನಿಯಾ ಪುಡಿಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್‍ಗಳ ಬೆಳವಣಿಗೆಗೆ ಕಾರಣವಾಗುತ್ತದೆ.

6. ಇನ್‍ಫೆಕ್ಷನ್‍ನ ಮೇಲೆ ಪರಿಣಾಮಕಾರಿಯಾಗಿ ಹೋರಾಡುತ್ತದೆ.

6. ಇನ್‍ಫೆಕ್ಷನ್‍ನ ಮೇಲೆ ಪರಿಣಾಮಕಾರಿಯಾಗಿ ಹೋರಾಡುತ್ತದೆ.

ಸಿಡುಬು ಅಥವಾ ಅಮ್ಮಾದಂತಹ ಇನ್‍ಫೆಕ್ಷನ್‍ಕಾರಕ ಅಥವಾ ಅಂಟು ರೋಗಗಳನ್ನು ತಡೆಯಲು ಧನಿಯಾ ಪುಡಿ ಉತ್ತಮ ಪರಿಹಾರ. ಅಧ್ಯಯನಗಳ ಪ್ರಕಾರ ಧನಿಯಾ ಪುಡಿಯಲ್ಲಿ ಕೀಟಾಣುಗಳ ಮೇಲೆ ಹೋರಾಡುವ ಮತ್ತು ಅವುಗಳನ್ನು ಕೊಲ್ಲುವ ಅಂಶಗಳು ಯಥೇಚ್ಛವಾಗಿ ಇವೆ. ಅಂತಹ ಕೀಟಾಣುಗಳನ್ನು ಹದ್ದು ಬಸ್ತಿನಲ್ಲಿಡಲು ಮತ್ತು ಸಿಡುಬು ಬಾರದಂತೆ ತಡೆಯಲು ಧನಿಯಾ ಪುಡಿಯನ್ನು ದಿನ ನಿತ್ಯದ ಆಹಾರದಲ್ಲಿ ಮಿತವಾಗಿ ಸೇವಿಸುವುದು ಒಳ್ಳೆಯದು.

7. ಋತು ಚಕ್ರದ ಸಮಸ್ಯೆಗಳನ್ನು ನಿವಾರಿಸಲು ಅತ್ಯುತ್ತಮ ಸಾಧನ

7. ಋತು ಚಕ್ರದ ಸಮಸ್ಯೆಗಳನ್ನು ನಿವಾರಿಸಲು ಅತ್ಯುತ್ತಮ ಸಾಧನ

ಆರೋಗ್ಯಕಾರಿ ಮಸಾಲೆಯಲ್ಲಿ ಆರೋಗ್ಯ ಅಡಗಿದೆ. ಧನಿಯಾ ಪುಡಿಯಲ್ಲಿ ಋತು ಚಕ್ರಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ನಿವಾರಿಸುವ ಅಂಶಗಳು ಯಥೇಚ್ಛವಾಗಿ ಅಡಗಿವೆ. ಋತು ಚಕ್ರದ ಸಮಸ್ಯೆ ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಚಿಂತಿಸ ಬೇಕಿಲ್ಲ ಮತ್ತು ನೋವು ಅನುಭವಿಸಬೇಕಿಲ್ಲ. ಬದಲಿಗೆ ಧನಿಯಾ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಿ ಅಥವಾ ಧನಿಯಾ ಬೀಜಗಳನ್ನು ಬಿಸಿ ನೀರಿನಲ್ಲಿ ಹಾಕಿ ಸೇವಿಸಿ, ಸರಿ ಹೋಗುತ್ತದೆ.

8. ಫ್ರೀ ರಾಡಿಕಲ್ಸ್ ಗಳನ್ನು ಹೋಗಲಾಡಿಸುತ್ತದೆ.

8. ಫ್ರೀ ರಾಡಿಕಲ್ಸ್ ಗಳನ್ನು ಹೋಗಲಾಡಿಸುತ್ತದೆ.

ಧನಿಯಾ ಅಥವಾ ಕೊತ್ತಂಬರಿಯನ್ನು ಯಾವುದೇ ರೂಪದಲ್ಲಿ ( ಎಲೆ, ಬೀಜ ಅಥವಾ ಪುಡಿ) ಬಳಸಿಕೊಂಡರು ಅದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಅದನ್ನು ಬಿಟ್ಟು ಹೋಗುವುದಿಲ್ಲ. ಈ ಆಂಟಿ ಆಕ್ಸಿಡೆಂಟ್‍ಗಳು ನಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತವೆ. ಈ ಎಲ್ಲಾ ಅಂಶಗಳು ಸೇರಿರುವುದರಿಂದಲೇ ನಾವು ಧನಿಯಾವನ್ನು ನಮ್ಮ ಮಸಾಲೆ ಪದಾರ್ಥದ ಅವಿಭಾಜ್ಯ ಮಾಡಿಕೊಂಡಿರುವುದು.

English summary

Health Benefits Of Coriander Powder

Coriander powder is placed high on reputation because of the healing properties of the spice. In fact, it is referred to as an “anti-diabetic” plant in several parts of Europe. To know more about the health benefits coriander powder offer, read on.
X
Desktop Bottom Promotion