For Quick Alerts
ALLOW NOTIFICATIONS  
For Daily Alerts

ಕಾಸು ಖರ್ಚಿಲ್ಲದೆ ಕೈತೋಟದಲ್ಲಿಯೇ ಬೆಳೆಸಿ ಕೊತ್ತಂಬರಿ ಗಿಡ!

By Deepak
|

ಕೊತ್ತಂಬರಿ ಎಂದು ಕರೆಯುವ ಮಸಾಲೆ ಸಸಿಯನ್ನು ವೈಜ್ಞಾನಿಕವಾಗಿ ಸಿಲಾಂಟ್ರೊ ಎಂದು ಕರೆಯುತ್ತಾರೆ. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ. ಇದೊಂದು ಗಿಡಮೂಲಿಕೆಯಾಗಿ, ಮಸಾಲೆ ಪದಾರ್ಥವಾಗಿ ನಮಗೆ ಚಿರಪರಿಚಿತ. ಇದರ ಎಲೆಗಳನ್ನು ಹಲವಾರು ಖಾದ್ಯ ತಯಾರಿಸಲು ಬಳಸಲಾಗುತ್ತದೆ.

ಇದರ ಎಲೆಯು ಖಾದ್ಯಗಳಿಗೆ ರುಚಿಯನ್ನು ನೀಡುವ ಜೊತೆಗೆ ಆರೋಗ್ಯಕರ ಪ್ರಯೋಜನವನ್ನು ಸಹ ಒದಗಿಸುವ ಇದರ ಎಲೆಗಳಿಲ್ಲದೆ ಹಲವಾರು ಖಾದ್ಯಗಳು ತಯಾರಾಗುವುದಿಲ್ಲ ಎಂಬ ಹೆಗ್ಗಳಿಕೆ ಇದರದು. ಇದನ್ನು ವಾಯು ನಿವಾರಕವಾಗಿ ಸಹ ಬಳಸುತ್ತಾರೆ. ಇದು ಕರುಳುಗಳಲ್ಲಿ ಸೇರಿಕೊಂಡಿರುವ ವಾಯುವನ್ನು ತೆಗೆದು ಹಾಕುತ್ತದೆ. ಜೊತೆಗೆ ಡೈಯುರೆಟಿಕ್ ಆಗಿ ಸಹ ಕೆಲಸ ಮಾಡುತ್ತದೆ. ಅಂದರೆ, ಮೂತ್ರ ಹೋಗುವುದನ್ನು ಹೆಚ್ಚಿಸುತ್ತದೆ.

Growing Coriander In Your Garden

ಇದರ ಪೇಸ್ಟನ್ನು ಮೊಣಕಾಲಿನ ಮೇಲೆ ಲೇಪಿಸಿಕೊಂಡರೆ ಅದರಿಂದ ಮಂಡಿ ನೋವು ನಿವಾರಣೆಯಾಗುತ್ತದೆ. ಈ ಗಿಡವು ಅಲ್ಸರ್ ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ ಹಾಗು ತಲೆನೋವನ್ನು ನಿವಾರಿಸುತ್ತದೆ. ಇದನ್ನು ಭಾರತ ಮತ್ತು ಇತರ ದೇಶಗಳಲ್ಲಿ ವ್ಯಾಪಕವಾಗಿ ಬಳಸುತ್ತಾರೆ.

ಧನಿಯಾ ಬೀಜಗಳು ಅಥವಾ ಕೊತ್ತಂಬರಿ ಬೀಜಗಳು, ತಮ್ಮ ರುಚಿಗೆ ಪ್ರಸಿದ್ಧ, ಇವು ಖಾರವಿಲ್ಲದ ಹದನಾದ ರುಚಿಯನ್ನು ಹೊಂದಿರುತ್ತವೆ. ಕೊತ್ತಂಬರಿಯನ್ನು ಕೆಲವು ದೇಶಗಳಲ್ಲಿ ಜಪಾನೀಸ್ ಪಾರ್ಸ್ಲೆ ಮತ್ತು ಚೈನೀಸ್ ಪಾರ್ಸ್ಲೇ ಎಂದು ಕರೆಯುತ್ತದೆ. ಏಕೆಂದರೆ ಇವುಗಳು ಪಾರ್ಸ್ಲೆಯನ್ನು ಹೋಲುತ್ತವೆಯಾದ್ದರಿಂದ.

ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಕೊತ್ತಂಬರಿಯನ್ನು ಬೆಳೆಯುವುದು ಹೇಗೆ ಎಂಬ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಬನ್ನಿ ನಿಮ್ಮ ಮನೆಯ ಕೈತೋಟದಲ್ಲಿ ಇದನ್ನು ಯಶಸ್ವಿಯಾಗಿ ಹೇಗೆ ಬೆಳೆಯುವುದು ಎಂದು ತಿಳಿದುಕೋಳ್ಳೋಣ. ಮೊದಲಿಗೆ ಕೆಲವು ಗಿಡಗಳನ್ನು ಬೆಳೆಸಿ. ಅದು ಬೀಜ ಬರುವವರೆಗೆ ಅದನ್ನು ಕೀಳಲು ಹೋಗಬೇಡಿ. ಬರುವ ಬೀಜಗಳನ್ನು ಸರಿಯಾಗಿ ಶೇಖರಿಸಿಟ್ಟು ಮುಂದಿನ ವರ್ಷ ಬಳಸಿ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಬಾರಿ ಬೀಜಗಳನ್ನು ನೆಡಬೇಕು. ಇದನ್ನು ಬೆಳೆಯಲು ಅಗತ್ಯವಾದ ಅಂಶಗಳತ್ತ ನೋಡೋಣ ಬನ್ನಿ.

Growing Coriander In Your Garden

ಉಷ್ಣಾಂಶ ಮತ್ತು ಮಣ್ಣು

ಮನೆಯಲ್ಲಿ ಕೊತ್ತಂಬರಿ ಬೆಳೆಯುವುದು ಸುಲಭ ಮತ್ತು ಸರಳ. ಇದು ವಾರ್ಷಿಕ ಗಿಡಮೂಲಿಕೆ. ಇದು ತೀರಾ ಚಳಿಯಿಲ್ಲದ ಮತ್ತು ಬಿಸಿಲು ಇಲ್ಲದ ದಿನಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದಕ್ಕಾಗಿ ಮೊದಲು ನೆಲವನ್ನು ಉತ್ತುಕೊಳ್ಳಿ. ಅದಕ್ಕೆ ಕೊಳೆತ ಎಲೆಗಳು, ಗೊಬ್ಬರ ಅಥವಾ ಇತರೆ ಕಾಂಪೋಸ್ಟ್ ಅನ್ನು 2-3 ಇಂಚುಗಳ ಮಣ್ಣಿನಲ್ಲಿ ಬೆರೆಸಿ. ಇದು ನಿಮ್ಮ ಮಣ್ಣನ್ನು ಫಲವತ್ತಾಗಿಸುತ್ತದೆ. ನಂತರ ಅದನು ಹಸನು ಮಾಡಿ, ಇದರಿಂದ ಮಣ್ಣು ಮೃದುವಾಗುತ್ತದೆ. ಈಗ ಇದರಲ್ಲಿ ಗಿಡವನ್ನು ಬೆಳೆಯಲು ಪ್ರಶಸ್ತವಾಗಿರುತ್ತದೆ. ಹೀಗೆ ನಿಮ್ಮ ಮನೆಯಲ್ಲಿ ಕೊತ್ತಂಬರಿ ಬೆಳೆಯಲು ಆರಂಭಿಸಬೇಕು.

ಕೊತ್ತಂಬರಿ ಬೆಳೆಯಲು ಬೇಕಾದ ಹವಾಮಾನ

ಕೊತ್ತಂಬರಿಯು ಸಮಶೀತೋಷ್ಣ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ನೀವು ಚಳಿಗಾಲ ಕೊನೆಯಲ್ಲಿ ಅಂದರೆ ವಸಂತ ಋತುವಿನಲ್ಲಿ ಬೆಳೆಯಲು ಆರಂಭಿಸಿ. ಇದು ಮಾರ್ಚ್‌ನಿಂದ ಮೇ ವರೆಗಿನ ಕಾಲದಲ್ಲಿ ಬರುತ್ತದೆ. ನಿಮ್ಮ ಗಿಡಗಳಿಗೆ ಸೂರ್ಯನ ಕಿರಣಗಳು ತಲುಪುವಂತಹ ಸ್ಥಳದಲ್ಲಿ ಇದನ್ನು ಬೆಳೆಯಿರಿ. ಆದಷ್ಟು ಮನೆಯ ಹೊರಾಂಗಣದಲ್ಲಿಯೇ ಬೆಳೆಯಿರಿ.

Growing Coriander In Your Garden

ಮಣ್ಣಿನ ವಿಧ ಮತ್ತು ನೀರಿನ ಅವಶ್ಯಕತೆ

ಇದು ಅಲ್ಕಾಲೈನ್ ಮಾಧ್ಯಮ 6.1 ರಿಂದ 7.8 ರವರೆಗೆ ಇರುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೊತ್ತಂಬರಿ ಗಿಡಗಳಿಗೆ ಸ್ವಲ್ಪ ನೀರು ಸಾಕು. ಅಧಿಕವಾಗಿ ನೀರನ್ನು ಇದಕ್ಕೆ ಹಾಕಬೇಡಿ. ಒಂದು ವೇಳೆ ಕುಂಡಗಳಲ್ಲಿ ಇದನ್ನು ಬೆಳೆಯುವಂತಿದ್ದಲ್ಲಿ, ಅದರಲ್ಲಿ ಕುಳಿಗಳನ್ನು ಮಾಡಿ, ಇದರಿಂದ ಹೆಚ್ಚುವರಿ ನೀರು ಹೊರಗೆ ಹರಿದು ಹೋಗುತ್ತದೆ. ಕೊತ್ತಂಬರಿಯು 1 ರಿಂದ 2 ಅಡಿಗಳಷ್ಟು ಎತ್ತರದವರೆಗೆ ಬೆಳೆಯುತ್ತವೆ. ಇವುಗಳ ಬೇರು ತುಂಬಾ ಸೂಕ್ಷ್ಮವಾಗಿರುತ್ತವೆ.

ಫಸಲು ಮತ್ತು ಸಂಗ್ರಹ

ಇವುಗಳನ್ನು ಒಣಗಿಸಿದಾಗ ಇವು ತಮ್ಮ ರುಚಿಯನ್ನು ಕಳೆದುಕೊಳ್ಳುತ್ತವೆ. ಇದನ್ನು ತಾಜಾ ಆಗಿಯೇ ಬಳಸಿ. ಇವು ಆರು ಇಂಚುಗಳಷ್ಟು ಬೆಳೆದಾಗ ಇವುಗಳ ಫಸಲನ್ನು ಪಡೆಯಬಹುದು. ಇಡೀ ಸಸಿಯನ್ನು ಸೇವಿಸಬಹುದು. ಖಾದ್ಯಗಳಲ್ಲಿ ಗಿಡದ ಎಲ್ಲಾ ಭಾಗಗಳನ್ನು ಬಳಸಬಹುದು, ಕತ್ತರಿಸಿಯಾದರು ಸರಿ, ಹಾಗೆ ಪೂರ್ಣವಾಗಿಯಾದರು ಸರಿ.

Growing Coriander In Your Garden

ಬೀಜಗಳ ಫಸಲು ಪಡೆಯುವಿಕೆ

ಕೊತ್ತಂಬರಿಯ ಬೀಜಗಳನ್ನು ಸಹ ಬೆಳೆದುಕೊಳ್ಳಬಹುದು. ಅದಕ್ಕಾಗಿ ಇವುಗಳು ಮಾಗುವವರೆಗೆ ನೀವು ಕಾಯಬೇಕು. ಮಾಗಿದ ಬೀಜಗಳು ಒಳ್ಳೆಯ ಸ್ವಾದವನ್ನು ಹೊಂದಿರುತ್ತವೆ. ಆದರೂ ನೀವು ಇವುಗಳು ಗಿಡಗಳಿಂದ ಉದುರುವವರೆಗೆ ಕಾಯಬೇಡಿ. ಅವುಗಳು ಗಿಡದಲ್ಲಿದ್ದಾಗಲೆ ಬಿಡಿಸಿಕೊಳ್ಳಿ. ಏಕೆಂದರೆ ನೆಲಕ್ಕೆ ಬಿದ್ದ ಬೀಜಗಳು ರುಚಿಯನ್ನು ಹೊಂದಿರುವುದಿಲ್ಲ.

English summary

Growing Coriander In Your Garden

Coriander is a commonly used spice in most households and is also called cilantro. Coriander is a herb and it's seeds are used to spice your dishes up. The leaves of coriander are also very useful and is added in many dishes besides having many many health benefits.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more