For Quick Alerts
ALLOW NOTIFICATIONS  
For Daily Alerts

ಮುಟ್ಟಿನ ನೋವಿಗೆ ಸಾಂತ್ವನ ನೀಡುವ -ಗೋಧಿ ಹುಲ್ಲಿನ ಜ್ಯೂಸ್

By Manu
|

ಮಹಿಳೆಯರ ಮಾಸಿಕ ದಿನಗಳ ಮುನ್ನಾ ಮತ್ತು ನಂತರದ ದಿನಗಳಲ್ಲಿ ಕಾಡುವ ನೋವು ಅನುಭವಿಸಿದವರಿಗೇ ಗೊತ್ತು. ಇದರ ಕಾರಣ ನಿತ್ಯದ ಅವಶ್ಯಕ ಕೆಲಸಗಳಿಗೆಲ್ಲಾ ಆಗುವ ತೊಂದರೆ ಮತ್ತು ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಹೆಚ್ಚಿನ ತೊಂದರೆ ಮತ್ತು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

ಈ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಹಲವಾರು ಹಾರ್ಮೋನುಗಳ ಕಾರಣ ಮಾನಸಿಕ ಉದ್ವೇಗ, ಅತಿಸೂಕ್ಷ್ಮಸಂವೇದನೆ, ಬದಲಾಗುವ ಮನೋಭಾವ, ಸುಸ್ತು, ಎಗರಾಡುವ ಪ್ರವೃತ್ತಿ, ಶೀಘ್ರವಾಗಿ ಸಿಟ್ಟಿಗೇಳುವ, ಕಿರಿಕಿರಿ ಅನುಭವಿಸುವ, ಮಾನಸಿಕ ಖಿನ್ನತೆ, ಏಕಾಗ್ರತೆಯಲ್ಲಿ ಕೊರತೆ ಮೊದಲಾದವು ಮಾನಸಿಕ ತೊಂದರೆಗಳಾದರೆ ಕೆಳಹೊಟ್ಟೆಯಲ್ಲಿ ಅತೀವ ನೋವು, ಹೊಟ್ಟೆಯುಬ್ಬರಿಕೆ, ಮುಖದಲ್ಲಿ ಮೊಡವೆಗಳು ಮೊದಲಾದವು ದೈಹಿಕ ತೊಂದರೆಗಳಾಗಿವೆ.

Wheat grass juice — the perfect remedy for period pain

ತಜ್ಞರ ಪ್ರಕಾರ ಇದಕ್ಕೆ ಸೂಕ್ತ ಉತ್ತರವೆಂದರೆ ನಿಯಮಿತವಾಗಿ ವ್ಯಾಯಮ ಮಾಡುತ್ತಿರುವುದು. ಇದರ ಜೊತೆಗೇ ಹಲವು ಮನೆಮದ್ದುಗಳೂ ಲಭ್ಯವಿದ್ದು ಹಲವು ವರ್ಷಗಳಿಂದ ಮಹಿಳೆಯರು ಇದನ್ನು ಬಳಸುತ್ತಾ ಬಂದಿದ್ದಾರೆ. ಉದಾಹರಣೆಗೆ ಚೆಕ್ಕೆ ಪುಡಿ ಬೆರೆಸಿದ ನೀರು ಕುಡಿಯುವುದು, ಲ್ಯಾವೆಂಡರ್ ಎಣ್ಣೆಯ ಮಸಾಜ್, ಅರಿಶಿನ ಪುಡಿ ಸೇರಿಸಿದ ಹಾಲು ಕುಡಿಯುವುದು ಇತ್ಯಾದಿ. ಆದರೆ ಇದಕ್ಕೂ ಉತ್ತಮವಾದ ಇನ್ನೊಂದು ವಿಧಾನವಿದೆ. ಅದೇ ಗೋಧಿಹುಲ್ಲಿನ ಜ್ಯೂಸ್ ಕುಡಿಯುವುದು.

ತೂಕ ಇಳಿಸುವುದು ಮತ್ತು ಇತರ ರೂಪಗಳ ಮೂಲಕ ಗೋಧಿಹುಲ್ಲಿನ ಜ್ಯೂಸ್ ಉಪಯೋಗವಾಗುವುದನ್ನು ನೀವು ಈ ಮೊದಲೇ ತಿಳಿದಿರಬಹುದು. ಆದರೆ ಈ ಜ್ಯೂಸ್ ಮಾಸಿಕ ದಿನಗಳ ನೋವನ್ನು ಶಮನಗೊಳಿಸಲೂ ಅತ್ಯಂತ ಸಮರ್ಥವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಇದರಲ್ಲಿರುವ ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ, ವಿಟಮಿನ್ ಎ, ಬಿ.ಸಿ ಮತ್ತು ಇ ಮೊದಲಾದವು ಮಾಸಿಕ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. The Iranian Journal of Pharmaceutical Research ಎಂಬ ವೈದ್ಯಕೀಯ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಗೋಧಿಯ ಮೊಳಕೆಯೂ ಮಾಸಿಕ ನೋವನ್ನು ಕಡಿಮೆಗೊಳಿಸಲು ಸಮರ್ಥವಾಗಿವೆ. ಈ ಮೊಳಕೆಯಲ್ಲಿ ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ವಿಟಮಿನ್ B6 ಹೇರಳವಾಗಿದ್ದು ಮಾಸಿಕ ದಿನಗಳ ನೂವು ಮತ್ತು ಇದರ ಮೂಲಕ ಎದುರಾಗುವ ತೊಂದರೆಗಳನ್ನೂ ನಿವಾರಿಸುತ್ತದೆ. ಅಲ್ಲದೇ ಇದರಲ್ಲಿ ರಕ್ತಸ್ರಾವದ ಪ್ರಮಾಣ ಹೆಚ್ಚದಿರಲು ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದೇ ಇರುವುದು ಕಂಡುಬಂದಿದೆ.

ಗೋಧಿಹುಲ್ಲಿನ ಜ್ಯೂಸ್ ಬಳಕೆಯ ವಿಧಾನ ಹೇಗೆ?
ಗೋಧಿಹುಲ್ಲು ಹಸಿರೂಪದಲ್ಲಿ ಸಿಕ್ಕರೆ ಉತ್ತಮ. ಇಲ್ಲದಿದ್ದರೆ ಒಣಗಿಸಿ ಮಾಡಿದ ಪುಡಿಯನ್ನೂ ಉಪಯೋಗಿಸಬಹುದು. ಆದರೆ ಅತ್ಯುತ್ತಮ ವಿಧಾನವೆಂದರೆ ಮನೆಯಲ್ಲಿಯೇ ಹೂಕುಂಡವೊಂದರಲ್ಲಿ ಸ್ವತಃ ಬೆಳೆಸುವುದು. ಇದು ಉತ್ತಮ ಗುಣಮಟ್ಟದ್ದು ಮತ್ತು ನೈಸರ್ಗಿಕ ವಿಧಾನಗಳಿಂದ ಬೆಳೆದದ್ದು ಮತ್ತು ನಾವೇ ಬೆಳೆದದ್ದು ಎಂಬ ಭಾವನೆಯೂ ಇರುವ ಕಾರಣ ಕೊಂಚ ತ್ರಾಸವಾದರೂ ಉತ್ತಮ ವಿಧಾನವಾಗಿದೆ.

ಮನೆಯಲ್ಲಿಯೇ ಬೆಳೆಸುವುದಾದರೆ ಕೆಲವು ಉತ್ತಮ ಗುಣಮಟ್ಟದ ಗೋಧಿಯ ಬೀಜಗಳನ್ನು ಮರಳುಮಿಶ್ರಿತ ಕಪ್ಪು ಅಥವಾ ಕೆಂಪುಮಣ್ಣಿನಲ್ಲಿ ಕಡಿಮೆ ನೀರಿನಂಶ ಇರುವಂತೆ ನೋಡಿಕೊಳ್ಳಿ. ಮೊಳಕೆಬಂದ ಬಳಿಕ ನಿತ್ಯವೂ ನೀರುಣಿಸಿ ಬೆಳೆಯುವಂತೆ ಮಾಡಿ. ನೆಲದ ಮೇಲೆ ಕುಡಿಯೊಡೆದ ಬಳಿಕ ಏಳು ದಿನಗಳ ನಂತರದ ಹುಲ್ಲು ಅತ್ಯುತ್ತಮವಾಗಿದೆ ಎಂದು ತಜ್ಞರು ತಿಳಿಸುತ್ತಾರೆ. ಈ ಹುಲ್ಲನ್ನು ನೆಲಮಟ್ಟದಲ್ಲಿ ಕತ್ತರಿಸಿ ಚೆನ್ನಾಗಿ ತೊಳೆದು ನೀರಿನೊಂದಿಗೆ ಮಿಕ್ಸಿಯಲ್ಲಿ ಚೆನ್ನಾಗಿ ಅರೆಯಿರಿ. ಇದನ್ನು ಸೋಸಿ ಕೊಂಚ ಜೇನಿನೊಂದಿಗೆ ಸೇವಿಸಿ.

English summary

Wheat grass juice — the perfect remedy for period pain

Pain before and during periods is one of the most common disorders women face and it has a huge impact on their day to day lives. The hormonal imbalances wreak havoc with their body and can cause anxiety, hypersensitivity, mood swings, fatigue, anger, irritability, depression, poor concentration, abdominal cramps, bloating, swelling, acne among other problems.
X
Desktop Bottom Promotion