For Quick Alerts
ALLOW NOTIFICATIONS  
For Daily Alerts

ನಿತ್ಯ ಎಲೆಕೋಸಿನ ಜ್ಯೂಸ್ ಕುಡಿದು ಆರೋಗ್ಯವಾಗಿರಿ!

By Hemanth
|

ಭೂಮಿ ಮೇಲೆ ಏನೇ ಬೆಳೆದರೂ ಅದು ಬಂಗಾರವಾಗುತ್ತದೆ. ಅದೇ ಪ್ರಕೃತಿ ನಮಗೆ ನೀಡಿರುವಂತಹ ವರ. ಭೂಮಿ ಬರಡಾದರೆ ಜನರಿಗೆ ಬದುಕಲು ಸಾಧ್ಯವಿಲ್ಲ. ಅದೇ ಹಸನಾಗಿರುವ ಭೂಮಿಯಲ್ಲಿ ಬೆಳೆಯುವಂತಹ ತರಕಾರಿಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ರೋಗಗಳು ಬರದಂತೆ ತಡೆಯುವುದು. ಮಧುಮೇಹಿಗಳೇ, ಎಲೆಕೋಸಿನ ಬಗ್ಗೆ ಅಸಡ್ಡೆ ಮಾಡಬೇಡಿ

ಇದರಿಂದಾಗಿಯೇ ಮಾಂಸಹಾರ ಮತ್ತು ಸಸ್ಯಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯವು ಸುಸ್ಥಿತಿಯಲ್ಲಿ ಇರುತ್ತದೆ. ಕೇವಲ ಮಾಂಸಹಾರ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಈ ಲೇಖನದಲ್ಲಿ ಎಲೆಕೋಸಿನ ಜ್ಯೂಸ್ ಬಗ್ಗೆ ತಿಳಿದುಕೊಳ್ಳುವ. ಆಹಾ...! ಕ್ಯಾಬೇಜ್ ಜ್ಯೂಸ್‌ನ ಪ್ರಯೋಜನಗಳು ಒ೦ದೇ, ಎರಡೇ..?

ಎಲೆಕೋಸು ಜ್ಯೂಸ್ ಸಲ್ಫರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಶಿಯಂ ಮತ್ತು ಐಯೋಡಿನ್ ನಂತಹ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಕೆ, ಇ, ಸಿ, ಬಿ6 ಮತ್ತು ಬಿ1 ಇದೆ. ಇದು ಕೆಲವು ವಿಧದ ಕ್ಯಾನ್ಸರ್ ಅನ್ನು ತಡೆಯುತ್ತದೆ ಮತ್ತು ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿಡುತ್ತದೆ. ಆಹಾರ ಕ್ರಮದಲ್ಲಿ ಎಲೆಕೋಸನ್ನು ಸೇರಿಸಲು ಬಯಸುವಿರಾದರೆ ಹಸಿ ಎಲೆಕೋಸಿನ ಜ್ಯೂಸ್ ಅನ್ನು ಕುಡಿದರೆ ಇದು ಆರೋಗ್ಯಕ್ಕೆ ಕೆಲವೊಂದು ಕಾರಣಗಳಿಂದ ಒಳ್ಳೆಯದು. ಜ್ಯೂಸ್ ಮಾಡಿಕೊಂಡು ಕುಡಿದರೆ ದೇಹವು ಅದರ ಪೋಷಕಾಂಶಗಳನ್ನು ಬೇಗನೆ ಹೀರಿಕೊಳ್ಳುವುದು. ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ

ಎಲೆಕೋಸನ್ನು ಸರಿಯಾಗಿ ಕತ್ತರಿಸಿಕೊಳ್ಳಿ, ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಸಣ್ಣದಾಗಿ ಜಜ್ಜಿದ ಶುಂಠಿ (1 ಟೀ ಚಮಚ), ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಂಡು, ಪ್ರತೀ ದಿನ ಉಪಹಾರದ ವೇಳೆ ಈ ಜ್ಯೂಸ್ ಕುಡಿಯಿರಿ. ಬನ್ನಿ ಇದರ ಇನ್ನಷ್ಟು ಲಾಭಗಳೇನು ಎಂಬುದನ್ನು ಮುಂದೆ ಓದಿ...

ಪ್ರಯೋಜನ #1

ಪ್ರಯೋಜನ #1

ಎಲೆಕೋಸಿನ ಜ್ಯೂಸ್ ನಲ್ಲಿರುವ ಲೆಟಿಕ್ ಆಮ್ಲವು ಕರುಳನ್ನು ಸೋಂಕು ಮುಕ್ತಗೊಳಿಸುವುದು. ಜ್ಯೂಸ್ ಕುಡಿಯುವುದರಿಂದ ನಿಮ್ಮ ಕರುಳು ಆರೋಗ್ಯವಾಗಿರುತ್ತದೆ.

ಪ್ರಯೋಜನ #2

ಪ್ರಯೋಜನ #2

ಅಸ್ತಮಾದಿಂದ ಬಳಲುತ್ತಿರುವವರು ಈ ಜ್ಯೂಸ್ ನ್ನು ಮಾಡಿ ಕುಡಿದರೆ ಅದರಲ್ಲಿರುವ ಕೆಲವೊಂದು ಅಂಶಗಳು ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸುತ್ತದೆ.

ಪ್ರಯೋಜನ #3

ಪ್ರಯೋಜನ #3

ಇದರಲ್ಲಿ ಗ್ಲುಟಮಿನ್ ಇದ್ದು, ಇದು ಆಮಿನೋ ಆಮ್ಲವನ್ನು ಒಳಗೊಂಡಿದೆ. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಕಾಪಾಡುವುದು.

ಪ್ರಯೋಜನ #4

ಪ್ರಯೋಜನ #4

ಎಲೆಕೋಸಿನ ಜ್ಯೂಸ್ ನಲ್ಲಿರುವ ಸಲ್ಫೊರ್ಪನ್ ಕೆಲವೊಂದು ವಿಧದ ಕ್ಯಾನ್ಸರ್ ನ್ನು ತಡೆಗಟ್ಟುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಪ್ರಯೋಜನ #5

ಪ್ರಯೋಜನ #5

ಈ ಜ್ಯೂಸ್ ನಲ್ಲಿರುವ ಉರಿಯೂತ ಶಮನಕಾರಿ ಗುಣಗಳು ಅರ್ಥಟೀಸ್ ನಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವ ಶಕ್ತಿ ಹೊಂದಿದೆ.

ಪ್ರಯೋಜನ #6

ಪ್ರಯೋಜನ #6

ಗ್ಯಾಸ್ಟ್ರಿಕ್ ಅಲ್ಸರ್ ನಿಂದ ಬಳಲುವಂತವರು ಎಲೆಕೋಸಿನ ಜ್ಯೂಸ್ ನ್ನು ಪ್ರಯತ್ನಿಸಿ. ಇದು ಅಲ್ಸರ್ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ.

ಪ್ರಯೋಜನ #7

ಪ್ರಯೋಜನ #7

ಈ ಜ್ಯೂಸ್ ಯಕೃತ್ ನ್ನು ನಿರ್ವಿಷಗೊಳಿಸಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು.

ಪ್ರಯೋಜನ #8

ಪ್ರಯೋಜನ #8

ಎಲೆಕೋಸಿನಲ್ಲಿ ಗ್ಲೊಕೊಸಿನೊಲೆಟ್ಸ್ ಎನ್ನುವ ಅಂಶವಿದೆ. ಇದು ಪ್ರತಿರೋಧಕ ವ್ಯವಸ್ಥೆಗೆ ತುಂಬಾ ಒಳ್ಳೆಯದು.

English summary

What Happens If You Drink Cabbage Juice?

Cabbage juice is rich in minerals like sulfur, calcium, iron, magnesium and iodine. It also contains vitamins K, E, C, B6 and B1. It can prevent certain types of cancer and also control cholesterol levels. Though you can include cabbage in your diet, it is better to consume the juice of a raw cabbage for some reasons.
X
Desktop Bottom Promotion