For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳೇ, ಎಲೆಕೋಸಿನ ಬಗ್ಗೆ ಅಸಡ್ಡೆ ಮಾಡಬೇಡಿ

|

ಎಲೆಕೋಸು ಎಂದರೆ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ. ಏಕೆಂದರೆ ಇದರ ಕೊಂಚ ಒಗರಾದ ರುಚಿ, ಅಷ್ಟೇನೂ ಹಿತಕರವಲ್ಲದ ಪರಿಮಳ, ಕತ್ತರಿಸಿದ ಬಳಿಕ ಅಡ್ಡಾದಿಡ್ಡಿಯಾಗಿರುವ ನೂಲಿನಂತಿರುವ ಪರಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಅಲ್ಲದೇ ಒಂದು ವೇಳೆ ಸರಿಯಾಗಿ ಬೆಂದಿರದಿದ್ದರೆ ಅಥವಾ ಇತರ ಮಸಾಲೆಗಳನ್ನು ಸಮಪ್ರಮಾಣದಲ್ಲಿ ಹಾಕಿರದೇ ಇದ್ದರೆ ಇದರ ರುಚಿಯನ್ನು ಹೆಚ್ಚಿನವರು ಇಷ್ಟಪಡುವುದೂ ಇಲ್ಲ. ಮೌನ ಕೊಲೆಗಾರ 'ಮಧುಮೇಹದ' ಅಪಾಯಕಾರಿ ಲಕ್ಷಣಗಳು!

ಆದರೆ ಮಧುಮೇಹಿಗಳಿಗೆ ಅಥವಾ ಡೊಳ್ಳುಹೊಟ್ಟೆಯ ಸಮಸ್ಯೆ ಇದ್ದರೆ (metabolic syndrome) ಇದು ನಿಮ್ಮ ಪ್ರಥಮ ಆದ್ಯತೆಯ ತರಕಾರಿಯಾಗಬೇಕು! ಏಕೆಂದರೆ ನಿಮಗೆ ಕೋಸು ರುಚಿಗಿಂತಲೂ ಹೆಚ್ಚಾಗಿ ಆರೋಗ್ಯವನ್ನು ನೀಡುತ್ತದೆ. ಮಧುಮೇಹವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲು ಇದು ಫಲಪ್ರದವಾಗಿದ್ದು ನಿಧಾನವಾಗಿ ಮಾತ್ರೆಗಳ ಮೇಲಿನ ನಿರ್ಭರತೆಯನ್ನು ಕಡಿಮೆಗೊಳಿಸುತ್ತಾ ಹೋಗುತ್ತದೆ. ಇದರ ಸದ್ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ. ಆಹಾ...! ಕ್ಯಾಬೇಜ್ ಜ್ಯೂಸ್‌ನ ಪ್ರಯೋಜನಗಳು ಒ೦ದೇ, ಎರಡೇ..?

ತೂಕ ಇಳಿಯಲು ನೆರವಾಗುತ್ತದೆ

ತೂಕ ಇಳಿಯಲು ನೆರವಾಗುತ್ತದೆ

ಎಲೆಕೋಸಿನಲ್ಲಿ ಕ್ಯಾಲೋರಿಗಳು ಕಡಿಮೆಯಿದ್ದು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಅವಶ್ಯಕವಿರುವುದರಿಂದ ತೂಕ ಕಡಿಮೆಯಾಗಲು ಸಾಧ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೂಕ ಇಳಿಯಲು ನೆರವಾಗುತ್ತದೆ

ತೂಕ ಇಳಿಯಲು ನೆರವಾಗುತ್ತದೆ

ಅಲ್ಲದೇ ಇದರ ಗ್ಲೈಸೆಮಿಕ್ ಮಾಪಕ (Glycemic index) (ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಎಷ್ಟು ಹೆಚ್ಚಿಸುತ್ತದೆ ಎಂದು ತಾಳೆಹಚ್ಚುವ ಮಾಪಕ. ಇದು 55ಕ್ಕಿಂತ ಕಡಿಮೆ ಇದ್ದಷ್ಟೂ ಉತ್ತಮ) ಕೇವಲ ಹತ್ತು ಇದೆ. ಆದ್ದರಿಂದ ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ.

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ಕೋಸಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರ ನಿಧಾನವಾಗಿ ಸಕ್ಕರೆಯನ್ನು ಸೇರುವ ಗುಣ (antihyperglycemic property) ಮಧುಮೇಹವನ್ನು ನಿಯಂತ್ರಿಸಲು ಸೂಕ್ತವಾಗಿದ್ದು ಅಗತ್ಯಪ್ರಮಾಣದಲ್ಲಿ ಸಕ್ಕರೆ ನಿಧಾನವಾಗಿ ರಕ್ತವನ್ನು ಸೇರುತ್ತಾ ಇರುವಂತೆ ಮಾಡುವುದರಿಂದ ಮಧುಮೇಹಿಗಳು ಇಡಿಯ ದಿನ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. 2008ರಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಅರವತ್ತು ದಿನಗಳವರೆಗೆ ಕೋಸು ಆಧಾರಿತ ಆಹಾರವನ್ನು ನೀಡಿದ ಬಳಿಕ ಅವುಗಳ ರಕ್ತದೊತ್ತಡ ಕಡಿಮೆಯಾಗಿದ್ದು ಬಳಿಕ ಆರೋಗ್ಯಕರ ಮಟ್ಟದಲ್ಲಿದ್ದುದನ್ನು ಕಂಡುಕೊಳ್ಳಲಾಯಿತು.

ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ

ಕೋಸು ರಕ್ತದಲ್ಲಿ ಸೇರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಜೊತೆಗೇ ಮೂತ್ರಪಿಂಡದ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಒಂದು ವೇಳೆ ಮಧುಮೇಹಿಯ ರಕ್ತದಲ್ಲಿ ಸಕ್ಕರೆ ವಿಪರೀತವಾಗಿದ್ದರೆ (ಅಂದರೆ 600 mg/dlಕ್ಕೂ ಹೆಚ್ಚು) ಇದು ಅಪಾಯಕಾರಿಯಾಗಿದ್ದು ಈ ಸ್ಥಿತಿಯಲ್ಲಿ ಮೂತ್ರಪಿಂಡಗಳು ಹೆಚ್ಚಿನ ಸಕ್ಕರೆಯನ್ನು ಮೂತ್ರದ ಮೂಲಕ ಹೊರಹಾಕಲು ಯತ್ನಿಸುತ್ತವೆ. ಇದು ದೇಹದಿಂದ ಅತಿ ಹೆಚ್ಚು ದ್ರವ ಹೊರಹೋಗಲು ಕಾರಣವಾಗಿ ದೇಹದಲ್ಲಿ ದ್ರವದ ಕೊರತೆಯಾಗುತ್ತದೆ.

 ಇದು ರಕ್ತವನ್ನು ಗಾಢವಾಗಿಸುತ್ತಾ ಹೋಗುತ್ತದೆ

ಇದು ರಕ್ತವನ್ನು ಗಾಢವಾಗಿಸುತ್ತಾ ಹೋಗುತ್ತದೆ

ಈ ಗಾಢವಾದ ರಕ್ತದಲ್ಲಿ ಸಕ್ಕರೆ ಅಂಶವೂ ಗಾಢವಾಗುತ್ತಾ ಮೂತ್ರಪಿಂಡಗಳಿಗೆ ಹೆಚ್ಚು ಶ್ರಮದಾಯಕವಾಗುತ್ತದೆ. ನಿಯಂತ್ರಣವಿಲ್ಲದಿದ್ದರೆ ಮೂತ್ರಪಿಂಡಗಳು ತಮ್ಮ ಸಾಮರ್ಥ್ಯಕ್ಕೂ ಮೀರಿದ ಒತ್ತಡದಿಂದ ವಿಫಲಗೊಳ್ಳಬಹುದು. ಮಧುಮೇಹಿಗಳು ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಲು ಇದೇ ಕಾರಣ. ನಿಯಮಿತ ಕೋಸಿನ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಮೂತ್ರಪಿಂಡಗಳಿಗೆ ಈ ಸ್ಥಿತಿ ಬರುವುದು ತಪ್ಪುತ್ತದೆ. ತನ್ಮೂಲಕ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.

ಕೋಸಿನ ಸೇವನೆ ಹೇಗೆ?

ಕೋಸಿನ ಸೇವನೆ ಹೇಗೆ?

ಇದಕ್ಕೆ ವಿಶೇಷವಾದ ತಯಾರಿಯೇನೂ ಬೇಕಾಗಿಲ್ಲ. ದಿನದ ಮೂರೂ ಹೊತ್ತಿನ ಊಟದಲ್ಲಿ ಚಿಕ್ಕದಾಗಿ ಮತ್ತು ಅಡ್ಡಲಾಗಿ ಕತ್ತರಿಸಿದ ಕೋಸಿನ ನೂಲುಗಳನ್ನು ಊಟದೊಂದಿಗೆ ಸೇವಿಸಿದರಾಯಿತು ಅಷ್ಟೇ. ಆದರೆ ಕನಿಷ್ಠ ವಾರಕ್ಕೆ ಮೂರು ದಿನವಾದರೂ ತಿನ್ನುವುದು ಅತಿ ಅಗತ್ಯ.

ಒಂದು ವೇಳೆ ಇದರ ರುಚಿ ಅಥವಾ ವಾಸನೆ ಹಿಡಿಸದೇ ಇದ್ದಲ್ಲಿ ನಿಮ್ಮ ಅಡುಗೆಯಲ್ಲಿ ಒಂದು ತರಕಾರಿಯಂತೆ ಬಳಸಿ ಸೇವಿಸಿ.

ಕೋಸಿನ ಸೇವನೆ ಹೇಗೆ?

ಕೋಸಿನ ಸೇವನೆ ಹೇಗೆ?

ಇದೂ ಇಷ್ಟವಾಗದಿದ್ದರೆ ಕೋಸನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯ ಜಾರ್ ನಲ್ಲಿ ನುಣ್ಣಗೆ ಅರೆದು ಹಾಗೇ ಅಥವಾ ಇತರ ಹಣ್ಣುಗಳ ರಸದೊಂದಿಗೆ ಸೇವಿಸಿ

ಪರ್ಯಾಯವಾಗಿ ಕೋಸನ್ನು ಬೇಯಿಸಿ ಲಿಂಬೆರಸ ಮತ್ತು ಉಪ್ಪು ಸೇರಿಸಿ ಸಹಾ ತಿನ್ನಬಹುದು.

 ಆರೋಗ್ಯಕರ ಕೋಸಿನ ಆಯ್ಕೆ ಹೇಗೆ?

ಆರೋಗ್ಯಕರ ಕೋಸಿನ ಆಯ್ಕೆ ಹೇಗೆ?

ಮಾರುಕಟ್ಟೆಯಲ್ಲಿ ಕೋಸಿನ ಹೊರಎಲೆಗಳನ್ನು ನಿವಾರಿಸಿ ಒಳಭಾಗದ ಎಳೆಯ ಭಾಗವನ್ನೇ ಇಡುತ್ತಾರೆ. ಕೋಸಿನ ಮೇಲ್ಭಾಗದ (ಅಂದರೆ ಕೆಳಗಿನ ಕಾಂಡದ ವಿರುದ್ಧ ಭಾಗ) ಮೇಲೆ ಬೆರಳಿನಿಂದ ಒತ್ತಿ. ಇದು ಕಲ್ಲಿನಂತೆ ಗಟ್ಟಿಯಾಗಿರಬೇಕು. ಇದು ಉತ್ತಮವಾದುದು. ಒಳಗಡೆ ಖಾಲಿ ಇದ್ದಂತೆ ಬೆರಳು ಒಳಗೆ ಒತ್ತಲು ಸಾಧ್ಯವಾದರೆ ಈ ಕೋಸು ಅಷ್ಟೊಂದು ಉತ್ತಮವಲ್ಲ.

English summary

Can cabbage help control diabetes?

For a regular person cabbage might not be a top favourite. And there are valid reasons – it’s smelly, it’s unappealing and if not cooked right, can be very tasteless too. But if you are a diabetic or suffering from metabolic syndrome, then cabbage is that one vegetable that should be on your grocery list without fail. Yes, cabbage can do wonders to treat diabetes naturally, and probably get you off medications too
Story first published: Wednesday, September 16, 2015, 10:27 [IST]
X
Desktop Bottom Promotion