For Quick Alerts
ALLOW NOTIFICATIONS  
For Daily Alerts

  ಮನೆ ಔಷಧಿ: ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು

  By Hemanth
  |

  ಭಾರತೀಯರು ಹಿಂದಿನ ಕಾಲದಿಂದಲೂ ಅರಿಶಿನವನ್ನು ತುಂಬಾ ಪವಿತ್ರವೆಂದು ನಂಬಿಕೊಂಡು ಬಂದಿದ್ದಾರೆ. ಯಾವುದೇ ಶುಭಕಾರ್ಯವಿದ್ದರೂ ಅರಿಶಿನವನ್ನು ಬಳಸಲಾಗುತ್ತದೆ. ಅದರಲ್ಲೂ ಅರಿಶಿನವಿಲ್ಲದೆ ಶುಭಕಾರ್ಯಗಳು ನಡೆಯುವುದೇ ಇಲ್ಲವೆನ್ನಬಹುದು...! ಅಷ್ಟರ ಮಟ್ಟಿಗೆ ಅರಿಶಿನ ಎಲ್ಲರ ಮನೆಮಾತಾಗಿದೆ.

  ಸಾಂಬಾರ ಪದಾರ್ಥವಾಗಿರುವ ಅರಿಶಿನದಲ್ಲಿ ಹಲವಾರು ಗುಣಗಳು ಇವೆ. ಇದು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಫಂಗಲ್ ವಿರೋಧಿ, ವೈರಲ್ ವಿರೋಧಿಯಾಗಿದೆ. ಇದರಲ್ಲಿರುವ ಪ್ರಮುಖ ಪೋಷಕಾಂಶವೆಂದರೆ ಆಹಾರದ ನಾರಿನಾಂಶ, ಪ್ರೋಟೀನ್, ಕ್ಯಾಲ್ಸಿಯಂ, ಸತು, ಕಬ್ಬಿನಾಂಶ, ಮೆಗ್ನಿಶಿಯಂ, ತಾಮ್ರ ವಿಟಮಿನ್ ಸಿ, ಇ ಮತ್ತು ಕೆ ಇದೆ.  ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

  ಅರಿಶಿನವನ್ನು ಹಾಗೆ ಸೇವನೆ ಮಾಡುವುದು ತುಂಬಾ ಕಷ್ಟವಾಗಬಹುದು. ಇದರಿಂದ ಅದನ್ನು ಬೇರೆ ಪದಾರ್ಥಗಳಲ್ಲಿ ಸೇರಿಸಿ ಸೇವನೆ ಮಾಡಬೇಕು. ಅರಿಶಿನವನ್ನು ಯಾವ್ಯಾವ ವಿಧದಿಂದ ಬಳಸಿದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಎಂದು ಈ ಲೇಖನದಲ್ಲಿ ತಿಳಿಯಬಹುದು.....  

  ಅರಿಶಿನ ಹಾಲು

  ಅರಿಶಿನ ಹಾಲು

  ಶೀತ ಹಾಗೂ ಕೆಮ್ಮು ಮತ್ತು ನೋವಿನಿಂದ ಬಳಲಿದಾಗ ಹಿಂದಿನಿಂದಲೂ ಮನೆಯಲ್ಲಿ ನೀಡುತ್ತಿದ್ದ ಮದ್ದೆಂದರೆ ಅದು ಅರಿಶಿನ ಹಾಲು. ಅರ್ಧ ಚಮಚದಷ್ಟು ಅರಿಶಿನವನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಹಾಲು ಕುದಿಯುತ್ತಾ ಇರುವಾಗ ಅದಕ್ಕೆ ಅರಿಶಿನ ಹಾಕಿ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

  ಮೊಡವೆಗಳಿಗೆ

  ಮೊಡವೆಗಳಿಗೆ

  ಅರಿಶಿನವು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಸ್ವಲ್ಪ ಅರಿಶಿನವನ್ನು ಸ್ವಲ್ಪ ಜೇನುತುಪ್ಪಕ್ಕೆ ಸೇರಿಸಿಕೊಂಡು ಮಿಶ್ರಣ ಮಾಡಿ. ಇದು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಒಣಗಿದ ಬಳಿಕ ನೀರಿನಿಂದ ತೊಳೆದು ಒರೆಸಿಕೊಳ್ಳಿ.....ಚಿನ್ನದ ದೇವತೆ 'ಅರಿಶಿನದ' ಸೌಂದರ್ಯ ಗುಣಗಳು

  ನಿರ್ವಿಷಕಾರಿ ಪಾನೀಯ

  ನಿರ್ವಿಷಕಾರಿ ಪಾನೀಯ

  ಅರಿಶಿನದ ನೀರನ್ನು ಪ್ರತೀ ದಿನ ಸೇವನೆ ಮಾಡಿದರೆ ಅದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಒಂದು ಚಮಚ ನಿಂಬೆರಸ, ಜೇನುತುಪ್ಪ, 1/3 ಚಮಚ ಅರಿಶಿನ ಹಾಕಿ ಪಾನೀಯವನ್ನು ತಯಾರಿಸಿಕೊಳ್ಳಿ. ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿ.ಮನಸ್ಸನ್ನು ಹಿಂಡುವ ಖಿನ್ನತೆಯ ನಿಯಂತ್ರಣಕ್ಕೆ- ಅರಿಶಿನ ಜ್ಯೂಸ್

  ಫೇಸ್ ಮಾಸ್ಕ್

  ಫೇಸ್ ಮಾಸ್ಕ್

  ಚರ್ಮದ ಕಾಂತಿಯನ್ನು ಹೆಚ್ಚಿಸಲು ಅರಿಶಿನವನ್ನು ಫೇಸ್ ಮಾಸ್ಕ್ ಆಗಿ ಬಳಸಿಕೊಳ್ಳಬಹುದು. ಒಂದು ಚಮಚ ಮೊಸರು, 1/3 ಚಮಚ ಅರಿಶಿನ, ½ ಚಮಚ ಜೇನುತುಪ್ಪ ಮಿಶ್ರಣ ಮಾಡಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆದು ಒರೆಸಿಕೊಳ್ಳಿ.

  ಬಾಯಿಯ ಅಲ್ಸರ್‌ಗೆ

  ಬಾಯಿಯ ಅಲ್ಸರ್‌ಗೆ

  ಅರಿಶಿನದಿಂದ ಮಾಡಿಕೊಳ್ಳುವಂತಹ ಪೇಸ್ಟ್ ಅನ್ನು ಬಾಯಿಯ ಅಲ್ಸರ್ ನಿಂದ ಪರಿಹಾರ ಪಡೆಯಲು ಬಳಸಬಹುದು. ಒಂದು ಚಮಚ ನೀರಿಗೆ ಸ್ವಲ್ಪ ಅರಿಶಿನ ಹಾಕಿ. ಅದಕ್ಕೆ ಅರ್ಧ ಚಮಚ ತೆಂಗಿನ ಎಣ್ಣೆ ಸೇರಿಸಿಕೊಳ್ಳಿ. ಬಾಯಿಯಲ್ಲಿರುವ ಗಾಯಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ನೀರಿನಿಂದ ಬಾಯಿ ತೊಳೆಯಿರಿ.

  ತೂಕ ಕಳೆದುಕೊಳ್ಳಲು

  ತೂಕ ಕಳೆದುಕೊಳ್ಳಲು

  ತೂಕ ಕಳೆದುಕೊಳ್ಳಲು ಅರಿಶಿನ ತುಂಬಾ ಸಹಕಾರಿ. ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ ಅರ್ಧ ಚಮಚ ಅರಿಶಿನ ಅರಶಿನ ಮತ್ತು ಅರ್ಧ ಚಮಚ ಶುಂಠಿ ರಸವನ್ನು ಹಾಕಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಅರಿಶಿನ ಬೆರೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

   

  English summary

  ways turmeric can work wonders for your body

  Turmeric has a sharp flavour, which can get a little to pungent to taste. There are various ways in which you can consume this herb. Following is a list of easy and efficient recipes which combine turmeric with various other things, to add to its effect.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more