For Quick Alerts
ALLOW NOTIFICATIONS  
For Daily Alerts

ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

By Arshad
|

ಭಾರತದಲ್ಲಿ ಅತ್ಯಧಿಕವಾಗಿ ಕುಡಿಯಲಾಗುವ ಪೇಯವೆಂದರೆ ಟೀ ಅಥವಾ ಚಹಾ. ಈ ಪೇಯವಿಲ್ಲದೇ ದಿನ ಪ್ರಾರಂಭವಾಗುವುದೇ ಇಲ್ಲ. ದಿನಕ್ಕೊಂದು ಕಪ್ ಆದರೂ ಕಪ್ಪು ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ದೇಹದ ಅಂಗಗಳ ಕ್ಷಮತೆಯನ್ನು ಸೂಕ್ತವಾಗಿರಿಸುವುದು ಇತ್ಯಾದಿ ಈ ಪ್ರಯೋಜನಗಳಲ್ಲಿ ಕೆಲವು. ಟೀಗೆ ಕೊಂಚ ಹಾಲು ಸೇರಿಸಿದರೆ ರುಚಿಯ ಜೊತೆಗೇ ಹಾಲಿನ ಉತ್ತಮ ಗುಣಗಳೂ ಈ ಪೇಯಕ್ಕೆ ಸೇರುತ್ತವೆ.

ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ದೃಢತೆ ಹೆಚ್ಚಿಸುವುದು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಮೊದಲಾದ ಪ್ರಯೋಜನಗಳಿವೆ. ಇತ್ತೀಚಿನ ಸಂಶೋಧನೆಗಳಲ್ಲಿ ಈ ಟೀಯಲ್ಲಿ ಕೊಂಚ ಅರಿಶಿನ ಮತ್ತು ಶುಂಠಿ ಸೇರಿಸಿದರೆ ಇದರಿಂದ ಆರೋಗ್ಯ ಮತ್ತು ಆಯಸ್ಸು ವೃದ್ಧಿಯಾಗುತ್ತದೆ ಎಂದು ತಿಳಿದುಬಂದಿದೆ. ಬಣ್ಣ ಹಳದಿಯಾಗುವ ಒಂದೇ ಅವಗುಣ ಬಿಟ್ಟರೆ ಇನ್ನೆಲ್ಲವೂ ಈ ಟೀ ಕುಡಿಯುವುದರಿಂದ ಪ್ರಯೋಜನಗಳೇ ಆಗಿವೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ದಿನಕ್ಕೆ ಎರಡು ಅಥವಾ ಮೂರು ಬಾರಿ ಈ ಟೀಯನ್ನು ಗುಟುಕು ಗುಟುಕಾಗಿ ನಿಧಾನವಾಗಿ ಸೇವಿಸುವ ಮೂಲಕ ದಿನವಿಡೀ ಲವಲವಿಕೆಯಿಂದಿರಲು ಸಾಧ್ಯ. ಇದಕ್ಕೆ ಕೊಂಚ ಲವಂಗ ಮತ್ತು ಕಾಳುಮೆಣಸುಗಳನ್ನು ಸೇರಿಸಿದರಂತೂ ಕೊಂಚ ಖಾರವಾಗುವ ಮೂಲಕ ಇನ್ನಷ್ಟು ರುಚಿ ಹೆಚ್ಚಿಸುತ್ತದೆ ಹಾಗೂ ಆರೋಗ್ಯಕ್ಕೂ ಉತ್ತಮವಾಗಿದೆ. ಬನ್ನಿ, ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಮಸಾಲೆ ಇಲ್ಲದೇ ಇಲ್ಲ. ಇದರೊಂದಿಗೆ ಬೇಳೆ ಮತ್ತಿತರ ವಸ್ತುಗಳು ಹೊಟ್ಟೆಯಲ್ಲಿ ಜೀರ್ಣವಾದ ಬಳಿಕ ಹಲವು ರೀತಿಯಲ್ಲಿ ಜೀರ್ಣಕ್ರಿಯೆಯನ್ನು ಬಾಧಿಸುತ್ತವೆ. ಹೊಟ್ಟೆಯಲ್ಲಿ ಉರಿ, ಬೇಧಿ, ವಾಕರಿಕೆ ಮತ್ತು ಅಪಾನವಾಯುವಿನ ಪ್ರಕೋಪ ಮೊದಲಾದವು ಎದುರಾಗುತ್ತವೆ. ಶುಂಟಿ ಅರಿಶಿನದ ಟೀ ಕುಡಿದರೆ ಈ ತೊಂದರೆಗಳನ್ನು ಬಹಳಷ್ಟು ಮಟ್ಟಿಗೆ ತಗ್ಗಿಸುತ್ತದೆ.

ಕೊಬ್ಬು ಕರಗಿಸಲು ನೆರವಾಗುತ್ತದೆ

ಕೊಬ್ಬು ಕರಗಿಸಲು ನೆರವಾಗುತ್ತದೆ

ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಲು ಈ ಪೇಯ ಸಮರ್ಥವಾಗಿದೆ. ಶುಂಠಿ ಮತ್ತು ಅರಿಶಿನವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅಗತ್ಯವಿರುವ ಕಾರಣ ಅನಿವಾರ್ಯವಾಗಿ ದೇಹಕ್ಕೆ ಕೊಬ್ಬಿನ ಸಂಗ್ರಹವನ್ನು ಬಳಸಿಕೊಳ್ಳಲೇಬೇಕಾಗುತ್ತದೆ. ಅಲ್ಲದೇ ದೇಹದಲ್ಲಿ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹೆಚ್ಚಿನ ಶಕ್ತಿಯ ಪರಿಣಾಮವಾಗಿ ಹೆಚ್ಚಿನ ದೈಹಿಕ ಚಟುವಟಿಕೆ ನಡೆಸಲು ಸಾಧ್ಯವಾಗಿ ಕೊಬ್ಬು ಇನ್ನಷ್ಟು ಶೀಘ್ರವಾಗಿ ಕರಗುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳುವವರಿಗೆ ಈ ಟೀ ಉತ್ತಮ ಆಯ್ಕೆಯಾಗಿದೆ.

ಶೀತದಿಂದ ಮುಕ್ತಿ ನೀಡುತ್ತದೆ

ಶೀತದಿಂದ ಮುಕ್ತಿ ನೀಡುತ್ತದೆ

ಈ ಟೀಯಲ್ಲಿ ಶುಂಠಿ ಪ್ರಮುಖವಾಗಿರುವ ಕಾರಣ ವಿವಿಧ ವೈರಸ್ಸುಗಳ ಸೋಂಕನ್ನು ನಿವಾರಿಸಲು ಸಾಧ್ಯವಾಗುತ್ತದೆ. ಈ ಟೀ ಗೆ ಸಕ್ಕರೆಯ ಬದಲು ಒಂದು ಚಮಚ ಜೇನು ಸೇರಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೇ ಶೀತದಿಂದ ಬೇಗನೇ ಚೇತರಿಸಿಕೊಳ್ಳಲು ನೆರವಾಗುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಕ್ಯಾನ್ಸರ್ ರೋಗದ ಇತಿಹಾಸವಿದ್ದರೆ ನಿಮಗೂ ಅತಿ ಎಚ್ಚರಿಕೆ ವಹಿಸುವುದು ಅಗತ್ಯ. ಅರಿಶಿನದಲ್ಲಿರುವ Curcumin ಎಂಬ ಕಣಕ್ಕೆ ಕ್ಯಾನ್ಸರ್ ಕಣದ ವಿರುದ್ದ ಹೋರಾಡುವ ಗುಣವಿದೆ. ಅಲ್ಲದೇ ಈಗಾಗಲೇ ಕ್ಯಾನ್ಸರ್ ಆವರಿಸಿದ್ದರೆ ಇದನ್ನು ಇನ್ನಷ್ಟು ಬೆಳೆಯಗೊಡದಿರಲು ನೆರವಾಗುತ್ತದೆ. ರೋಗ ನಿರೋಧಕ ಶಕ್ತಿ ಮತ್ತು ಆಂಟಿ ಆಕ್ಸಿಡೆಂಟುಗಳ ಪ್ರಮಾಣ ಹೆಚ್ಚಿಸುವ ಮೂಲಕವೂ ಕ್ಯಾನ್ಸರ್ ಕಾರಕ ಕಣಗಳನ್ನು ನಿವಾರಿಸಲು ಈ ಪೇಯ ಕುಡಿಯುವುದರ ಮೂಲಕ ಸಾಧ್ಯವಾಗುತ್ತದೆ.

ಗರ್ಭಿಣಿಯರಿಗೂ ಉತ್ತಮವಾದ ಪೇಯ

ಗರ್ಭಿಣಿಯರಿಗೂ ಉತ್ತಮವಾದ ಪೇಯ

ಗರ್ಭಾವಸ್ಥೆಯಲ್ಲಿ ಕಾಡುವ ವಾಕರಿಕೆಯನ್ನು ನಿವಾರಿಸಲು ಅರಿಶಿನ ಶುಂಠಿಯ ಟೀ ಅತ್ಯುತ್ತಮವಾಗಿದೆ. ಒಂದು ವೇಳೆ ನಿಮ್ಮ ಗರ್ಭಾವಸ್ಥೆಯಲ್ಲಿ ತೊಡಕುಗಳು ಕಂಡುಬಂದರೆ ಈ ಟೀನಲ್ಲಿ ಕೊಂಚ ಹೆಚ್ಚಿನ ಪ್ರಮಾಣದ ಶುಂಠಿಯನ್ನು ತುರಿದು ಹಾಕಿ ದಿನಕ್ಕೆ ಒಂದು ಅಥವಾ ಎರಡು ಕಪ್ ನಿಧಾನವಾಗಿ ಕುಡಿಯಿರಿ. ಇದರಿಂದ ಗರ್ಭಾವಸ್ಥೆಯ ಎಲ್ಲಾ ತಿಂಗಳುಗಳಲ್ಲಿ ವಾಕರಿಕೆ ಮತ್ತು ಸುಸ್ತು ಕಾಡುವುದಿಲ್ಲ.

ಮೆದುಳಿನ ಬೆಳವಣಿಗೆಗೂ ಉತ್ತಮ

ಮೆದುಳಿನ ಬೆಳವಣಿಗೆಗೂ ಉತ್ತಮ

ಅರಿಶಿನ ಶುಂಠಿಯ ಟೀ ನಿಯಮಿತವಾಗಿ ಕುಡಿಯುವ ಮೂಲಕ ಮೆದುಳಿಗೆ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ ಹಾಗೂ ಯೋಚನಾ ಶಕ್ತಿಯೂ ಹೆಚ್ಚುತ್ತದೆ. ಪರಿಣಾಮವಾಗಿ ಸ್ಮರಣಶಕ್ತಿ ಮತ್ತು ಬುದ್ಧಿಯಾಧಾರಿತ ಕೆಲಸಗಳನ್ನು ಇನ್ನಷ್ಟು ಹೆಚ್ಚಿನ ಕ್ಷಮತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು- 1/2 ಕಪ್ ನೀರು, ಅರ್ಥ ಟೀ ಚಮಚ ಅರಿಶಿನದ ಪುಡಿ, 1/4 ಟೀ ಚಮಚ ಶುಂಠಿ ಪುಡಿ, 1/4 ಟೀ ಚಮಚ ದಾಲ್ಚಿನ್ನಿ, ಹಾಗೂ ಕೊಂಚ ರುಚಿ ಹೆಚ್ಚಿಸಲು 1/2 ಟೀ ಚಮಚ ಜೇನು ತುಪ್ಪ

ಮಾಡುವ ವಿಧಾನ- ಇಲ್ಲಿ ನೀಡಲಾಗಿರುವ ಎಲ್ಲಾ ಪದಾರ್ಥಗಳನ್ನು ಟೀ ಬೋಗುಣಿಯಲ್ಲಿ ಹಾಕಿ, 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ, ತದನಂತರ ಹಾಲನ್ನು ಸೇರಿಸಿ ಎರಡು ನಿಮಿಷ ಕುದಿಯಲು ಬಿಡಿ, ಗ್ಯಾಸ್ ಆಫ್ ಮಾಡಿ, ಬಿಸಿಬಿಸಿಯಾದ ಶುಂಠಿ ಅರಿಶಿನದ ಟೀ ರೆಡಿ

English summary

Turmeric and ginger tea for a healthier body

Tea is every Indian's cup of joy. Drinking that one cup of black tea a day will help benefit you in en number of ways, by improving your immunity and keeping those organs healthy. If you add milk to a cup of tea it adds further benefit to your health as dairy foods promote bone health due to calcium. Take a look at how you can benefit from a cup of ginger turmeric tea:
X
Desktop Bottom Promotion