ಬೆನ್ನು ನೋವಿಗೆ ಮನೆ ಔಷಧ- ಒಮ್ಮೆ ಪ್ರಯತ್ನಿಸಿ ನೋಡಿ

By Hemanth
Subscribe to Boldsky

ದೇಹದ ಯಾವುದೇ ಭಾಗದಲ್ಲಾಗಲಿ ನೋವು ಕಾಣಿಸಿಕೊಂಡರೆ ಅದನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ದೇಹದಲ್ಲಿ ನೋವಿದ್ದರೆ ಅದರಿಂದ ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ದೇಹದ ಹೆಚ್ಚಿನ ಎಲ್ಲಾ ಚಟುವಟಿಕೆಗಳಿಗೆ ಪ್ರಮುಖವಾಗಿರುವಂತಹ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ಅದು ಕೆಟ್ಟ ಪರಿಣಾಮ ಬೀರುತ್ತದೆ. 

Reduce Back Pain
 

ಬೆನ್ನು ನೋವು ದೇಹದಲ್ಲಿ ಕಾಣಿಸಿಕೊಳ್ಳುವ ಸಹಿಸಲು ಅಸಾಧ್ಯವಾಗಿರುವ ನೋವು. ಅಷ್ಟೇ ಏಕೆ ಕುಳಿತುಕೊಳ್ಳಲು ನಿಂತುಕೊಳ್ಳಲು ಮತ್ತು ದೇಹವನ್ನು ಬಗ್ಗಿಸಲು ನಮಗೆ ಕಷ್ಟವಾಗುವುದು. ಬೆನ್ನು ನೋವು ನಿರಂತರವಾಗಿ ನಿಮ್ಮನ್ನು ಕಾಡುತ್ತಾ ಇದ್ದರೆ ಆಗ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಸಾಧ್ಯವಾಗಲ್ಲ. ಬೆನ್ನುನೋವಿನ ನಿವಾರಣೆಗೆ ಐದು ಟಿಪ್ಸ್  

Reduce Back Pain
 

ಗಾಯಾಳು ಸಮಸ್ಯೆ, ಜೀವನ ಶೈಲಿ, ಸರಿಯಾಗಿ ಕುಳಿತುಕೊಳ್ಳದೆ ಇರುವುದು, ದುರ್ಬಲ ಮೂಳೆ, ಅಸ್ಥಿರಜ್ಜುಗಳಲ್ಲಿ ಕಾಣಿಸಿಕೊಳ್ಳುವ ಸೋಂಕು ಇತ್ಯಾದಿಗಳು ಬೆನ್ನು ನೋವಿಗೆ ಕಾರಣವಾಗಿರಬಹುದು. ವೈದ್ಯರಲ್ಲಿಗೆ ಹೋದರೆ ಔಷಧಿ ಬರೆದು ಕೊಡುತ್ತಾರೆ.

Reduce Back Pain
 

ಅದರಲ್ಲೂ ಹೆಚ್ಚಿನವರು ನೋವುನಿವಾರಕಗಳನ್ನು ಬರೆದುಕೊಡುತ್ತಾರೆ. ಇದರಿಂದ ನಿಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು. ಮನೆಮದ್ದನ್ನು ಬಳಸಿದರೆ ಬೆನ್ನುನೋವನ್ನು ನಿವಾರಿಸಬಹುದು. ಈ ಮನೆಮದ್ದನ್ನು ಈಗಾಗಲೇ ಪ್ರಯೋಗಿಸಿ ಫಲಿತಾಂಶ ಕೂಡ ಪಡೆಯಲಾಗಿದೆ. ಇದರ ಬಗ್ಗೆ ತಿಳಿಯಿರಿ. ಬೆನ್ನು ನೋವಿಗೆ ಕಾರಣ ಮತ್ತು ಪರಿಹಾರ

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು

*ಶುಂಠಿ ರಸ 3-4 ಚಮಚ

*ತುಳಸಿ 10 ಎಲೆಗಳು

Tulsi leaves
 

*ಈ ಮನೆಮದ್ದು ತುಂಬಾ ಪರಿಣಾಮಕಾರಿ ಮತ್ತು ಕೆಲವೊಂದು ಸಂಶೋಧನೆಗಳು ಕೂಡ ಈ ಮನೆಮದ್ದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಮಾಡಿದೆ.

*ಈ ಮನೆಮದ್ದಿನೊಂದಿಗೆ ಕೆಲವೊಂದು ಆರೋಗ್ಯಕರ ವ್ಯಾಯಾಮವನ್ನು ಪಾಲಿಸಿಕೊಂಡು ಹೋದರೆ ನಿಮಗೆ ಬೆನ್ನು ನೋವಿನ ಸಮಸ್ಯೆಯೇ ಇರದು. 

Ginger
 

*ಶುಂಠಿ ಹಾಗೂ ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮಾಂಸಖಂಡ ಮತ್ತು ಸಮಸ್ಯೆ ಉಂಟಾಗುವ ಜಾಗದಲ್ಲಿರುವ ಉರಿಯೂತವನ್ನು ಇದು ಕಡಿಮೆ ಮಾಡುವುದು. 

*ಈ ಮನೆಮದ್ದು ಬೆನ್ನಿಗೆ ರಕ್ತದ ಸರಬರಾಜನ್ನು ಹೆಚ್ಚಿಸಿ ನೋವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಷೇಧ ಔಷಧಿಗಳ ಸೇವನೆಯೇ ಬೆನ್ನು ನೋವಿಗೆ ಮೂಲ ಕಾರಣ! 

back pain
 

ತಯಾರಿಸುವ ಹಾಗೂ ಸೇವಿಸುವ ವಿಧಾನ

*ಹೇಳಿದಷ್ಟು ಪ್ರಮಾಣದ ತುಳಸಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಶುಂಠಿ ರಸಕ್ಕೆ ಹಾಕಿ.

ಬೆನ್ನಿನ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸುಮಾರು 25 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸ್ನಾನ ಮಾಡಿಕೊಳ್ಳಿ.

*ಇನ್ನು ಈ ಮಿಶ್ರಣವನ್ನು ದಿನಾಲೂ ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಬಹುದು. ಈ ಮನೆಮದ್ದನ್ನು ಪ್ರಯತ್ನಿಸಿ ಮತ್ತು ಫಲಿತಾಂಶದ ಬಗ್ಗೆ ತಪ್ಪದೆ ತಿಳಿಸಿ....

For Quick Alerts
ALLOW NOTIFICATIONS
For Daily Alerts

    English summary

    Tried And Tested Home Remedy To Reduce Back Pain

    Do you often experience back pain? If yes, there is an amazing home remedy that can help you find a great relief!Body pain in any part of the body can lead to a lot of discomfort and can also hamper your daily activities.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more