Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆನ್ನುನೋವಿನ ನಿವಾರಣೆಗೆ ಐದು ಟಿಪ್ಸ್
ವೈದ್ಯರನ್ನು ಭೇಟಿಯಾಗಲು ಹಲವಾರು ಕಾರಣಗಳಿರಬಹುದು. ಆದರೆ ಅಧ್ಯಯನಗಳ ಪ್ರಕಾರ ಶೇ. 80ರಷ್ಟು ಜನರು ಬೆನ್ನಿನ ಕೆಳಭಾಗದ ನೋವಿಗೆ ಚಿಕಿತ್ಸೆ ಪಡೆಯಲು ವೈದ್ಯರ ಭೇಟಿಯಾಗುತ್ತಾರೆ. ಇದನ್ನು ಎದುರಿಸಿ!. ನಾವೆಲ್ಲರೂ ಮನುಷ್ಯರು ಮತ್ತು ದೇಹದ ಪ್ರತಿಯೊಂದು ಭಾಗದಲ್ಲಿ ನೋವು ಇದ್ದೇ ಇರುತ್ತದೆ. ಕಾರಣ ಹಲವು ಇರಬಹುದು ಮತ್ತು ನೋವಿಗೆ ಕಾರಣಗಳು ಕೂಡ ವಿಭಿನ್ನವಾಗಿರಬಹುದು. ತಜ್ಞ ವೈದ್ಯರ ಪ್ರಕಾರ ಒತ್ತಡ ಇದಕ್ಕೆ ಪ್ರಮುಖ ಕಾರಣ. ಅಸಮರ್ಪಕ ಭಂಗಿ, ಕೆಟ್ಟ ದಕ್ಷತೆ ಮತ್ತು ಕಡಿಮೆ ನಿದ್ದೆ ಅಭ್ಯಾಸ ಇತರ ಕಾರಣಗಳು.
ಬೆನ್ನು ನೋವನ್ನು ಗುಣಪಡಿಸಲು ತುಂಬಾ ಕಾಳಜಿ ಬೇಕಾಗುತ್ತದೆ. ಬೆನ್ನು ನೋವನ್ನು ಸಾಂಪ್ರದಾಯಿಕವಾಗಿ ಗುಣಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಒಳ್ಳೆಯ ಸುದ್ದಿಯಲ್ಲವೇ? ವಯಸ್ಸಾಗುತ್ತಿರುವಂತೆ ಅಂಗಾಂಶಗಳು ಹರಿಯುವುದರಿಂದ ಬೆನ್ನು ನೋವು ಪ್ರಾರಂಭವಾಗಹುದು. ಬೆನ್ನು ನೋವನ್ನು ತುಂಬಾ ಸರಳ ಮತ್ತು ಹೆಚ್ಚು ಪರಿಶ್ರಮವಿಲ್ಲದೆ ನಿವಾರಿಸಬಹುದು. ಈ ಸರಳ ತಂತ್ರಗಳನ್ನು ಅಳವಡಿಸಲು ಸಮಯ ತೆಗೆದುಕೊಳ್ಳಿ ಮತ್ತು ಬೆನ್ನು ನೋವಿನಿಂದ ಉಪಶಮನ ಪಡೆಯಿರಿ. ಜೀವನ ಬಿಡುವಿಲ್ಲದಂತಾಗಿ ನಮ್ಮ ದೈನಂದಿನ ಕೆಲಸಗಳಿಗೆ ಸಮಯ ಸಿಗದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರನ್ನು ಭೇಟಿಯಾಗುವುದು ಮತ್ತು ವೈದ್ಯರ ಕ್ಲಿನಿಕ್ ನಲ್ಲಿ ಗಂಟೆಗಟ್ಟಲೆ ಕಳೆಯುವುದು ಅಷ್ಟು ಸುಲಭವಲ್ಲ. ಬೆನ್ನು ನೋವಿನ ವಿಶೇಷವೆಂದರೆ ವೈದ್ಯರನ್ನು ಭೇಟಿಯಾಗದಿದ್ದರೂ ಅದು ಸರಿಯಾಗುತ್ತದೆ. ಬೆನ್ನು ನೋವಿನ ಉಪಶಮನಕ್ಕಾಗಿ ಪ್ರಯತ್ನಿಸಬಹುದಾದ ಕೆಲವೊಂದು ಅಂಶಗಳನ್ನು ಪ್ರಯತ್ನಿಸಬಹುದು ಮತ್ತು ಭವಿಷ್ಯದಲ್ಲಿ ಈ ಸಮಸ್ಯೆನ್ನು ಕಡೆಗಣಿಸಬಹುದು.

1. ಗುಡ್ ನೈಟ್ ಹೇಳಿ ಸರಿಯಾಗಿ ನಿದ್ದೆ ಮಾಡಿ.
ರಾತ್ರಿಯ ಸರಿಯಾದ ನಿದ್ರೆ ಬೆನ್ನು ನೋವಿಗೆ ಉಪಶಮನವಾಗಬಲ್ಲದು. ಸರಿಯಾದ ನಿದ್ರೆಯಿಲ್ಲದೆ ಬೆನ್ನು ನೋವು ಬರಬಹುದು. ಸರಿಯಾದ ನಿದ್ರೆ ಬಿದ್ದರೆ ಎಲ್ಲಾ ಹಾನಿಗೊಳಗಾದ ಸ್ನಾಯುಗಳ ದುರಸ್ತಿ ಮತ್ತು ಊತ ಕೀಲುಗಳು ಗುಣಪಡಿಸುತ್ತದೆ. ಒಳ್ಳೆಯ ಹಾಸಿಗೆಯಲ್ಲಿ ಮಲಗಿ. ಹಾಸಿಗೆ ತುಂಬಾ ಗಡುಸಾಗಿದ್ದರೆ ಅದು ನಿಮ್ಮ ದೇಹದಲ್ಲಿ ನೋವು ಉಂಟುಮಾಡಬಹುದು. ಒಳ್ಳೆಯ ಹಾಸಿಗೆ ಆಯ್ಕೆ ಮಾಡಿ ಮತ್ತು ವಿವಿಧ ಭಂಗಿಯಲ್ಲಿ ಮಲಗಲು ಪ್ರಯತ್ನಿಸಿ. ನಿಮಗೆ ಆರಾಮದಾಯಕವಾಗುವ ಭಂಗಿ ಆಯ್ಕೆ ಮಾಡಿ. ಬೆನ್ನುಮೂಳೆಯನ್ನು ಬಗ್ಗಿಸಿ ಮಲಗಲು ಪ್ರಯತ್ನಿಸಬೇಡಿ.

2. ಸರಿಯಾದ ವಿಟಮಿನ್
ಬೆನ್ನುನೋವನ್ನು ಗುಣಪಡಿಸಲು ನೀವು ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಯೆಂದರೆ ಸರಿಯಾಗಿ ವಿಟಮಿನ್ ತೆಗೆದುಕೊಳ್ಳಿ. ಬೆನ್ನು ನೋವು ನಿವಾರಿಸಲು ವಿಟಮಿನ್ `ಬಿ' ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ವಿಟಮಿನ್ `ಬಿ' ಕೇಂದ್ರ ನರಮಂಡಲವನ್ನು ಬೆಂಬಲಿಸುತ್ತದೆ ಮತ್ತು ದೇಹದ ಪ್ರತಿರಕ್ಷಣೆಯನ್ನು ಸುಧಾರಿಸುತ್ತದೆ. ಬೆನ್ನು ನೋವಿರುವವರು ತಮ್ಮ ಆಹಾರ ಕ್ರಮದಲ್ಲಿ ಒಮೆಗಾ-3 ನ್ನು ಬಳಸಲು ಪ್ರಯತ್ನಿಸಿ.

3. ಫಿಟ್ ನೆಸ್ ತುಂಬಾ ಮುಖ್ಯ
ಬೆನ್ನು ನೋವು ನಿವಾರಿಸಲು ಫಿಟ್ ಆಗಿರುವುದು ತುಂಬಾ ಮುಖ್ಯ. ದುರ್ಬಲ ಹೊಟ್ಟೆ ಮತ್ತು ಹಿಂಬದಿಯ ಸ್ನಾಯುಗಳು ನೋವನ್ನು ಉಂಟುಮಾಡುತ್ತದೆ. ಫಿಟ್ ಆಗಿರಲು ಪ್ರತೀ ದಿನ ವ್ಯಾಯಾಮ ಮಾಡಿ ಮತ್ತು ಯೋಗ ಅಭ್ಯಾಸ ಮಾಡಿ. ವ್ಯಾಯಾಮದಿಂದ ಸ್ನಾಯುಗಳು ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗಿಸಲು ಮತ್ತು ಸಡಿಲಗೊಳಿಸಲು ಸಹಾಯಮಾಡುತ್ತದೆ. ಗಾರ್ಡ್ ನಲ್ಲಿ ಕೆಲವು ನಿಮಿಷಗಳ ಕಾಲ ನಡೆದಾಡಿ ಅಥವಾ ಏರೋಬಿಕ್ಸ್ ಮಾಡಿದರೆ ಬೆನ್ನು ನೋವು ನಿವಾರಿಸಬಹುದು. ಇದು ನಿಮ್ಮ ಮನಸ್ಸಿಗೂ ಆರಾಮ ನೀಡುತ್ತದೆ.

4. ಧೂಮಪಾನ ಬಿಟ್ಟುಬಿಡಿ
ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಬೆನ್ನು ನೋವಿನ ಉಪಶಮನಕ್ಕೆ ಧೂಮಪಾನ ಬಿಟ್ಟುಬಿಡಿ. ಧೂಮಪಾನದಿಂದ ಇತರ ರೋಗಗಳಾದ ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ ಇತ್ಯಾದಿಗಳು ಬರಬಹುದು. ಧೂಮಪಾನ ಮಾಡದವರಿಗಿಂತ ಧೂಮಪಾನ ಮಾಡುವವರು ಹೆಚ್ಚಾಗಿ ಬೆನ್ನುನೋವಿನ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಸಿಗರೇಟ್ ನಲ್ಲಿರುವ ನಿಕೋಟಿನ್ ಬೆನ್ನುನೋವಿಗೆ ಪ್ರಮಖು ಕಾರಣವೆಂದು ಪತ್ತೆಯಾಗಿದೆ. ಬೆನ್ನುನೋವಿನ ಉಪಶಮನಕ್ಕೆ ಧೂಮಪಾನದ ಅಭ್ಯಾಸವನ್ನು ಬಿಟ್ಟುಬಿಡಿ.

5. ಬೆನ್ನಿಗೆ ಮಸಾಜ್
ಬೆನ್ನಿಗೆ ಸರಿಯಾದ ಮಸಾಜ್ ಮಾಡುವುದರಿಂದ ನಿಮ್ಮ ಬೆನ್ನುನೋವು ಶಮನವಾಗಿ ಆರಾಮವನ್ನುಂಟುಮಾಡಬಹುದು. ಇದಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ. ಮೊದಲು ನಿಮ್ಮ ಪಾಕೆಟ್ ನಲ್ಲಿ ಹಣ ತುಂಬಿಸಿ. ಮಸಾಜ್ ಮಾಡಿಸಿಕೊಳ್ಳುವಷ್ಟು ಹಣವಿಲ್ಲದಿದ್ದರೆ ಟೆನಿಸ್ ಬಾಲ್ ನಿಂದ ಬೆನ್ನಿನ ನೋವಿಗೆ ವಿರುದ್ಧವಾಗಿ ಮಸಾಜ್ ಮಾಡಿ. ಆಗ ನಿಮಗೆ ಬೆನ್ನು ನೋವು ಉಪಶಮನವಾಗುವುದು ತಿಳಿಯುತ್ತದೆ. ಮೇಲಿನ ಟಿಪ್ಸ್ ಗಳನ್ನು ಪಾಲಿಸಿ ಮತ್ತು ಬೆನ್ನು ನೋವಿನಿಂದ ಮುಕ್ತರಾಗಿ.



Click it and Unblock the Notifications