For Quick Alerts
ALLOW NOTIFICATIONS  
For Daily Alerts

ನಿಷೇಧ ಔಷಧಿಗಳ ಸೇವನೆಯೇ ಬೆನ್ನು ನೋವಿಗೆ ಮೂಲ ಕಾರಣ!

By Vani nayak
|

ದೀರ್ಘಕಾಲದಿಂದ ಬೆನ್ನು ನೋವಿನಿಂದ ಬಳಲುವವರು ನಿಷೇಧ ಔಷಧಿ, ಗಾಂಜಾ, ಅಫೀಮು, ಕೋಕೇನ್, ಮೀಥಾಂಫಿಟಾಮೈನ್ ಮುಂತಾದವುಗಳನ್ನು ಬಳಸುವ ಸಂಭವ, ಬೆನ್ನು ನೋವು ಇಲ್ಲದೇ ಇರುವವರನ್ನು ಹೋಲಿಸಿದಾಗ ಹೆಚ್ಚಿರುತ್ತದೆ.

ದೀರ್ಘಕಾಲದಿಂದ ಸೊಂಟ ನೋವಿದ್ದು ನಿಷಿದ್ಧ ಔಷಧಿಯ ಸೇವನೆಯನ್ನು ರೂಡಿಸಿಕೊಂಡಿರುವ ರೊಗಿಗಳಿಗೆ ಪ್ರಸ್ತುತ ಔಷಧವನ್ನೇ ನೋವುನಿವಾರಕ ಚಿಕಿತ್ಸೆಯಾಗಿ ನೀಡಲಾಗುತ್ತದೆ ಎಂದು ಆನ್ನಾ ಶ್ಮಾಜೆಲ್ ಮಿನ್ನಿಸೋಟ ವಿಶ್ವವಿದ್ಯಾಲಯದ (ಯುಯೆಸ್ಎ) ಸಂಶೋಧಕರು ಹೇಳಿದ್ದಾರೆ. ಸಂಶೋಧಕರು ಸಮೀಕ್ಷೆಯಲ್ಲಿ ಸುಮಾರು 5000ಕ್ಕೂ ಹೆಚ್ಚು ಯುಎಸ್ ವಯಸ್ಕರ (20 ರಿಂದ 69 ವಯಸ್ಸಿನ) ಪ್ರತಿಕ್ರಿಯೆಗಳನ್ನು ರಾಷ್ಟ್ರೀಯ ಮಾದರಿ ಆರೋಗ್ಯ ಅಧ್ಯಯನದ ಅಡಿಯಲ್ಲಿ ವಿಶ್ಲೇಷಿಸಿದ್ದಾರೆ.

Illicit Drug Use Can Cause Chronic Back Pain: Revealed A Study

ಇದಕ್ಕೆ ಪ್ರತಿಕ್ರಿಯಿಸಿದ ಸುಮಾರು 13 ಪ್ರತಿಶತ ಜನರಲ್ಲಿ 3 ತಿಂಗಳಿಗಿಂತ ಹೆಚ್ಚು ಅವಧಿಯಿಂದ ಸೊಂಟನೋವಿನ ಸಮಸ್ಯೆ ಇತ್ತು. ಗೌಪ್ಯವಾಗಿ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ಜನರು ಗಾಂಜಾ, ಅಫೀಮು, ಕೋಕೇನ್, ಮೀಥಾಂಫಿಟಾಮೈನ್ ಬಳಸುತ್ತಿದ್ದರು. ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!

ಸ್ಪೈನ್ ಪತ್ರಿಕೆಯಲ್ಲಿ ಪ್ರಕಟಿಸಿದ ಫಲಿತಾಂಶದ ಪ್ರಕಾರ ಬೆನ್ನು ನೋವಿಗೂ ನಿಷೇಧ ಔಷಧ ಸೇವನೆಗೂ ಸಂಬಂಧವಿದೆ ಎಂದು ತಿಳಿದು ಬಂದಿದೆ. ಸುಮಾರು 49 ಪ್ರತಿಶತ ಬೆನ್ನು ನೋವಿದ್ದ ವಯಸ್ಕರಲ್ಲಿ ನಿಷಿದ್ಧ ಔಷಧಿಯ ಸೇವನೆ ಕಂಡುಬಂದಿತ್ತು ಹಾಗು 43 ಪ್ರತಿಶತ ವಯಸ್ಕರಲ್ಲಿ ಬೆನ್ನು ನೋವು ಇಲ್ಲದೆಯೇ ನಿಷೇಧ ಔಷಧಿಯನ್ನು ಸೇವಿಸುತ್ತಿದ್ದರು.

ಪ್ರಸ್ತುತ (ಕಳೆದ 30 ದಿನಗಳ) ನಿಷೇಧ ಔಷಧಿಗಳ ಬಳಕೆಯ ಪ್ರಮಾಣ ತೆಗೆದುಕೊಂಡರೂ ಸಹ ಬೆನ್ನು ನೋವು ಇದ್ದವರಲ್ಲಿ 14 ಪ್ರತಿಶತ ಹಾಗು ಇಲ್ಲದವರಲ್ಲಿ 9 ಪ್ರತಿಶತ ಎಂದು ದಾಖಲಾಗಿದೆ. ಭಾಗವಹಿಸಿದವರಲ್ಲಿ ಕೂಡ, ಮೀಥಾಂಫಿಟಾಮೈನ್ ಹಾಗು ಅಫೀಮು ಬಳಕೆ ಎರಡು ಪಟ್ಟು ಹೆಚ್ಚು, ಬೆನ್ನು ನೋವು ಇರುವ ಜನರಲ್ಲಿ ಕಂಡು ಬಂದಿತು.

ಫಲಿತಾಂಶದ ಪ್ರಕಾರ ನಿಷೇಧ ಔಷಧಿಗೆ ಹಾಗು ಬೆನ್ನು ನೋವಿನ ರೋಗಿಗಳಿಗೆ ಚಿಕಿತ್ಸೆ ಮೂಲಕ ಕೊಡುವ (ಓಪಿಯೋಯ್ಡ) ಔಷಧಿಗೂ ಸಂಬಂಧವಿದೆ ಎಂದು ತಿಳಿದು ಬಂದಿತು. ಯಾರು ನಿಷಿದ್ಧ ಔಷಧಿಯನ್ನು ಬಳಸಿದ್ದರೋ, ಅವರಿಗೆ ಓಪಿಯೋಯ್ಡ ನೋವುಶಾಮಕ ಔಷಧಿಯನ್ನು ಚಿಕಿತ್ಸೆಯ ಮೂಲಕವೇ ನೀಡಲಾಗುತ್ತಿತ್ತು. ಉಳಿದವರಿಗೆ ಹೋಲಿಸಿದರೆ, ಇದರ ಪ್ರತಿಶತ ಹೆಚ್ಚಿರುತ್ತದೆ. ದೀರ್ಘವಾದ ಬೆನ್ನು, ಸೊಂಟ ನೋವಿರುವ ರೋಗಿಗಳಿಗೆ, ಇದರ ದುರ್ಬಳಕೆ ಮಾಡಿದವರಿಗೆ, ಆಕಸ್ಮಿಕವಾಗಿ ಹೆಚ್ಚು ಪ್ರಮಾಣ ಸೇವಿಸಿದವರಿಗೆ, ಓಪಿಯೋಯ್ಡನ್ನು ನೀಡಲಾಗುತ್ತದೆ. ಯೋಗ ಟಿಪ್ಸ್: ಬೆನ್ನು ನೋವಿನ ಸಮಸ್ಯೆಗೆ 'ಸುಖಾಸನ'

ಐಎಎನ್ಎಸ್ ವರದಿ

English summary

Illicit Drug Use Can Cause Chronic Back Pain: Revealed A Study

People living with chronic lower back pain are more likely to use illicit drugs, including marijuana, cocaine, heroin, and methamphetamine compared to those without back pain, says a study. In addition, chronic low back pain patients with a history of illicit drug use are more likely to have a current prescription for pain-relieving drugs, said one of the researchers Anna Shmagel from the University of Minnesota, Minneapolis, USA.
X
Desktop Bottom Promotion