For Quick Alerts
ALLOW NOTIFICATIONS  
For Daily Alerts

ಅಜೀರ್ಣ, ಗಂಟಲು ಬೇನೆ, ಕೆಮ್ಮು-ಶೀತವೇ? ಅರಿಶಿನವೇ ಸಾಕು!

By Manu
|

ನಮ್ಮ ಅಡುಗೆಗಳಲ್ಲಿ ಅರಿಶಿನ ಬಳಸದೇ ಇರುವ ಖಾದ್ಯಗಳ ಸಂಖ್ಯೆ ಕಡಿಮೆ. ಇದು ಅಡುಗೆಗೆ ಬಣ್ಣ ಮತ್ತು ಸ್ವಾದವನ್ನು ಹೆಚ್ಚಿಸುತ್ತದೆ. ದಾಲ್ ಸಬ್ಜಿ, ಸಾಂಬಾರು, ತಿಳಿಸಾರು, ಪಲ್ಯ, ಪಲಾವ್, ಬಿರಿಯಾನಿ ಮೊದಲಾದವುಗಳಲ್ಲಿ ಅರಿಶಿನವನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳುಅರಿಶಿನ ಪುಡಿ ಮಾತ್ರವಲ್ಲ, ಹಸಿ ಅರಿಶಿನದ ಕೊಂಬನ್ನೂ ಅಡುಗೆಗಳಲ್ಲಿ ಬಳಸಲಾಗುತ್ತದೆ. ಅರಿಸಿನದ ಹಸಿ ಕೊಂಬಿನಲ್ಲಿಯೂ ಹಲವು ಔಷಧೀಯ ಗುಣಗಳಿವೆ. ಇವು ಸಾಮಾನ್ಯ ತೊಂದರೆಗಳಿಗೆ ನೈಸರ್ಗಿಕ ಉಪಶಮನ ನೀಡುತ್ತದೆ. ಆರೋಗ್ಯ ತಜ್ಞರು ಕಂಡುಕೊಂಡಂತೆ ಶೀತ ಕೆಮ್ಮು, ಅಜೀರ್ಣ, ಗಂಟಲಬೇನೆ ಮೊದಲಾದವುಗಳಿಗೆ ಅರಿಶಿನವನ್ನು ಹೇಗೆ ಬಳಸಬಹುದು ಎಂಬುದನ್ನು ಮುಂದೆ ಓದಿ....

ಕೆಮ್ಮು ಮತ್ತು ಶೀತಕ್ಕೆ

ಕೆಮ್ಮು ಮತ್ತು ಶೀತಕ್ಕೆ

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನಪುಡಿ ಸೇರಿಸಿ ಕುಡಿಯುವ ಮೂಲಕ ಕೆಮ್ಮು ಮತ್ತು ಶೀತಕ್ಕೆ ಉತ್ತಮ ಪರಿಹಾರ ದೊರಕುತ್ತದೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಕೆಮ್ಮು ಮತ್ತು ಶೀತಕ್ಕೆ

ಕೆಮ್ಮು ಮತ್ತು ಶೀತಕ್ಕೆ

ಇನ್ನೂ ಉತ್ತಮ ಪರಿಣಾಮ ಪಡೆಯಲು ಅರಿಶಿನದ ಹಸಿಕೊಂಬಿನ ಚಿಕ್ಕ ತುಂಡನ್ನು ಅರೆದು ಲೇಪನ ತಯಾರಿಸಿ ಈ ಲೇಪನವನ್ನು ಕುದಿಸಿದ ಹಾಲಿನಲ್ಲಿ ಬೆರೆಸಿ, ಇದರೊಂದಿಗೆ ಒಂದು ಚಿಕ್ಕ ತುಂಡು ಬೆಲ್ಲ ಅಥವಾ ಸಕ್ಕರೆ ಸೇರಿಸಿ ಒಂದು ಲೋಟ ಕುಡಿಯಿರಿ. ಬೆಳಿಗ್ಗೆದ್ದಾಗ ಶೀತ ಕೆಮ್ಮೆ ಮಾಯವಾಗಿರುತ್ತದೆ.

ಎಚ್ಚರಿಕೆ ಕ್ರಮ

ಎಚ್ಚರಿಕೆ ಕ್ರಮ

ಈ ವಿಧಾನದಲ್ಲಿ ವಹಿಸಬೇಕಾದ ಎಚ್ಚರಿಕೆ ಎಂದರೆ ಬಿಸಿಹಾಲು ನಿಮ್ಮ ದಿನದ ಅಂತಿಮ ಆಹಾರವಾಗಿರಬೇಕು, ಇದರ ನಂತರ ನೀರು ಸರ್ವಥಾ ಕುಡಿಯಬಾರದು. ಏಕೆಂದರೆ ನೀರು ಕುಡಿದರೆ ಹೊಟ್ಟೆಗೆ ಹೋಗಿದ್ದ ಅರಿಶಿನದ ಮೂಲಕ ದೇಹದ ಒಳಗೆ ದೇಹದ ತಾಪಮಾನ ಏರುವ ಶಕ್ತಿಯನ್ನು ನೀರು ಕುಂದಿಸಿಬಿಡುತ್ತದೆ.

ಅಜೀರ್ಣ

ಅಜೀರ್ಣ

ಅಜೀರ್ಣ ಮತ್ತು ಇದರ ಕಾರಣದಿಂದ ಎದುರಾಗುವ ತೊಂದರೆಗಳಿಂದ ಮುಕ್ತಿ ಪಡೆಯಲು ಹಸಿ ಅರಿಶಿನ ಕೊಂಬು ಮತ್ತು ಕೆಲವು ಬೆಳ್ಳುಳ್ಳಿಯ ಹಸಿ ಎಸಳುಗಳನ್ನು ತುಪ್ಪದ ಜೊತೆ ಬೆರೆಸಿ ಲೇಪನದ ರೂಪದಲ್ಲಿ ನೇರವಾಗಿ ಸೇವಿಸಬೇಕು.

ಅಜೀರ್ಣ

ಅಜೀರ್ಣ

ಒಂದು ವೇಳೆ ಹೊಟ್ಟೆ ನೋವಿದ್ದರೆ ಸಮಪ್ರಮಾಣದಲ್ಲಿ ಅರಿಶಿನದ ಹಸಿ ಕೊಂಬು, ಬೆಳ್ಳುಳ್ಳಿಯ ಎಸಳುಗಳನ್ನು ಬೇಯಿಸಿ ಜಜ್ಜಿದ ಬಳಿಕ ತುಪ್ಪದಲ್ಲಿ ಮಿಶ್ರಣ ಮಾಡಿ ಸೇವಿಸಬೇಕು. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಅಜೀರ್ಣ ಮತ್ತು ಹೊಟ್ಟೆಯುರಿ ಮೊದಲಾದವು ಕಡಿಮೆಯಾಗಲು ನೆರವಾಗುತ್ತದೆ.

ಗಂಟಲಬೇನೆ

ಗಂಟಲಬೇನೆ

ಅರಿಶಿನದ ಉರಿಯೂತ ನಿವಾರಕ ಗುಣ ಗಂಟಲ ಸೋಂಕನ್ನು ನಿವಾರಿಸಿ ಹಲವು ರೀತಿಯ ಬೇನೆಗಳಿಂದ ಮುಕ್ತಿ ನೀಡುತ್ತದೆ. ಇದಕ್ಕಾಗಿ ಒಂದು ಚಿಕ್ಕ ಚಮಚ ಹಸಿ ಅರಿಶಿನ ಕೊಂಬನ್ನು ತೇದಿ ತೆಗೆದ ಲೇಪನ,ಅರ್ಧ ಚಿಕ್ಕ ಚಮಚ ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಜಜ್ಜಿ ಮಾಡಿದ ಲೇಪನ ಮತ್ತು ಒಂದು ಚಿಕ್ಕಚಮಚ ಬೆಲ್ಲ ಸೇರಿಸಿ ಮಿಶ್ರಣ ಮಾಡಿ.

ಗಂಟಲಬೇನೆ

ಗಂಟಲಬೇನೆ

ಇದನ್ನು ಕೊಂಚವೇ ಬಿಸಿ ಮಾಡಿ ನೇರವಾಗಿ ಸೇವಿಸಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಎರಡು ಬಾರಿ ಸೇವಿಸಿ. ಸಾಧ್ಯವಾದಷ್ಟು ನಿಧಾನವಾಗಿ ನುಂಗಿ. ಇದರಿಂದ ಗಂಟಲಬೇನೆ ಶೀಘ್ರವಾಗಿ ಗುಣವಾಗುತ್ತದೆ. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!

English summary

Tips to use raw turmeric for indigestion, sore throat, cough and cold

There are numerous health benefits of turmeric too. Besides turmeric powder, including raw turmeric (turmeric root) in the diet also helps in dealing with common health problems naturally. Health expert shares common ways to use raw turmeric as a natural remedy for indigestion, sore throat and cough and cold.
X
Desktop Bottom Promotion