For Quick Alerts
ALLOW NOTIFICATIONS  
For Daily Alerts

ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು

By Deepu
|

ಅರಿಶಿನವನ್ನು ಮಸಾಲೆಗಳಲ್ಲೇ ರಾಜನೆಂದೂ ಹಾಗೂ ಅರಿಶಿನಕ್ಕೆ ಮನೆಯ ಆಹಾರ ಪದಾರ್ಥಗಳಲ್ಲೇ ಹೆಚ್ಚು ಪ್ರಾತಿನಿಧ್ಯವನ್ನು ನೀಡಲಾಗಿದೆ. ಚರ್ಮ ಸಂಬಂಧಿತ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಮನೆಯಲ್ಲಿಯೇ ಸುಲಭವಾಗಿ ಸಿಗುವ ಔಷಧೀಯ ಪದಾರ್ಥವೆಂದರೆ ಅದು ಖಂಡಿತ ಅರಿಶಿನವೇ ಆಗಿರುತ್ತದೆ. ಇದನ್ನು ಅಡುಗೆಯ ಹೊರತಾಗಿ ಕೂಡ ಸೌಂದರ್ಯವರ್ಧಕವಾಗಿ ಭಾರತದಲ್ಲಿ ಹಾಗೂ ಚೀನಾದಲ್ಲಿ ಹೆಚ್ಚು ಬಳಸಲಾಗುತ್ತಿದೆ. ಇದರಲ್ಲಿರುವ ನೈಸರ್ಗಿಕ ಸತ್ವಗಳು ಹೇರಳವಾಗಿದ್ದು, ಚರ್ಮ ಸಂಬಂಧಿತ ಸಮಸ್ಯೆಗಳನ್ನು ಶೀಘ್ರವಾಗಿ ತೊಲಗಿಸುತ್ತದೆ.

ಆಯುರ್ವೇದದಲ್ಲಿ ಚಿನ್ನದ ದೇವತೆ ಎಂದೇ ಕರೆಯಲ್ಪಡುವ ಅರಿಶಿನದಲ್ಲಿ ರೋಗನಿರೋಧಕ ಶಕ್ತಿಯು ಅಧಿಕವಿದ್ದು ಚರ್ಮದ ಎಂತಹ ಸೋಂಕನ್ನಾದರೂ ನಿವಾರಣೆ ಮಾಡುವ ಗುಣವನ್ನು ಹೊಂದಿರುವುದರಿಂದ ಇದು ನಿಜಕ್ಕೂ ಆರೋಗ್ಯದ ದೇವತೆಯೇ ಸರಿ. ಸಮಾನ್ಯವಾಗಿ ಇದನ್ನು ಬೇರಿನ ರೂಪದಲ್ಲಿ ಅಥವಾ ಪುಡಿಯ ರೂಪದಲ್ಲಿ ಬಳಸಲಾಗುತ್ತದೆ. ಅದರಲ್ಲಿರುವ ಉರಿಯೂತ ನಿವಾರಿಸುವ ಮತ್ತು ರೋಗನಿರೋಧಕ ಸತ್ವಗಳಿಂದ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಹೇಳಿ ಮಾಡಿಸಿದಂತಿದೆ. ಸಾಮಾನ್ಯವಾಗಿ ಈ ಹಳದಿ ಅರಿಶಿನವನ್ನು ಹಾಲು ಅಥವಾ ಪನ್ನೀರಿನೊಂದಿಗೆ ಬೆರೆಸಿ ಮುಖಕ್ಕೆ ನೇರವಾಗಿ ಹಚ್ಚಿಕೊಳ್ಳಲಾಗುತ್ತದೆ.

Some Awesome Turmeric Masks for Great Skin!

ಸೂಕ್ಷ್ಮ ಚರ್ಮವುಳ್ಳವರು ಅರಿಶಿನವನ್ನು ಸ್ವಲ್ಪ ಮೊಸರಿನೊಂದಿಗೆ ಸೇರಿಸಿ ಹಚ್ಚಿದರೆ ಹಿತವಾದ ಅನುಭವವಾಗಿ ಚರ್ಮದ ಸೋಂಕು ಶೀಘ್ರವಾಗಿ ನಿವಾರಣೆಯಾಗುತ್ತದೆ. ಅರಿಶಿನವನ್ನು ಅಡುಗೆಯ ಹೊರತಾಗಿ ವಿಶೇಷವಾಗಿ ಮೊಡವೆಗಳ ಚಿಕಿತ್ಸೆಗೆ, ಉರಿಯೂತ, ಇಸುಬು, ಕಪ್ಪು ಕಲೆಗಳು, ಕಣ್ಣಿನ ಸುತ್ತಲಿನ ಕಲೆಗಳು, ಮುಖದ ಮೇಲಿರುವ ಅನಾವಶ್ಯಕ ಕೂದಲುಗಳು, ತ್ವಚೆಯ ಸೋಂಕುಗಳನ್ನು ನಿವಾರಿಸಲು ಹೆಚ್ಚು ಬಳಸುತ್ತಾರೆ. ತ್ವಚೆಯ ಜಿಡ್ಡಿನ ಅಂಶವನ್ನು ನಿವಾರಿಸುವುದಲ್ಲದೇ ತಲೆಹೊಟ್ಟಿನ ಸಮಸ್ಯೆಯನ್ನು ಸಹ ಹೋಗಲಾಡಿಸುತ್ತದೆ. ಸರ್ವಗುಣ ಸಂಪನ್ನ ಅರಿಶಿನ

ಇನ್ನು ಮುಂದೆ ಈ ರೀತಿಯ ಚರ್ಮ ಸಮಸ್ಯೆಗಳಿಗೆ ಹೆಚ್ಚು ಚಿಂತಿಸಬೇಡಿ. ಮುಲಾಜಿಲ್ಲದೇ ಅರಿಶಿನದ ಫೇಸ್ ಪ್ಯಾಕ್ ಅನ್ನು ಉಪಯೋಗಿಸಿ. ತಾಜಾ ಅರಿಶಿನ ಪುಡಿ, ಮೊಸರು, ಬಾದಾಮಿ ತೈಲ ಮತ್ತು ಒಂದು ಚಮಚ ಕಡಲೆಹಿಟ್ಟು ಇದ್ದರೆ ಸಾಕು. ಮಹಿಳೆಯರೇ, ನಾವು ಈ ತಿಳಿಸುವ ವಿಧಾನ ನಿಮ್ಮನ್ನು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇದರ ಫಲಿತಾಂಶವನ್ನು ತಿಳಿಯಲು ಮೂರು ತಿಂಗಳಿಗೊಮ್ಮೆ ನಾವು ತಿಳಿಸಿದ ಅರಿಶಿನದ ಫೇಸ್‌ ಪ್ಯಾಕ್ ಅನ್ನು ಬಳಸಿ ನೋಡಿ.

ಬೇಕಾದ ಪದಾರ್ಥಗಳು :
*ಕಡಲೆ ಹಿಟ್ಟು - 2 ಚಮಚ
*ಅರಿಶಿನ ಪುಡಿ - 1 ಚಮಚ
*ಬಾದಾಮಿ ತೈಲ - 1 ಚಮಚ
*ಹಾಲು - 1 ಚಮಚ

ತಯಾರಿಸುವ ವಿಧಾನ:
*ಒಂದು ಚಿಕ್ಕ ಬಟ್ಟಲಿಗೆ ಅರಿಶಿನ ಪುಡಿಯನ್ನು ಹಾಕಿ. ಅದಕ್ಕೆ ಕಡಲೆಹಿಟ್ಟು ಮತ್ತು ಬಾದಾಮಿ ತೈಲವನ್ನು ಬೆರೆಸಿ ಪೇಸ್ಟ್ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಾಲನ್ನು ಈ ಬಟ್ಟಲಿಗೆ ಬೆರೆಸಿ ನಯವಾಗಿ ಮಿಶ್ರಣ ಮಾಡಿ ಗಟ್ಟಿ ಪೇಸ್ಟ್ ಆಗುವಂತೆ ಮಾಡಿಕೊಳ್ಳಿ. ಸದರಿ ಪೇಸ್ಟ್ ಹೆಚ್ಚು ತೆಳುವಾಗಿರದೆ ಹಾಗೂ ಗಟ್ಟಿಯಾಗಿರದೆ ಮೃದುವಾಗಿರುವಂತೆ ನೋಡಿಕೊಳ್ಳಿ.

ಅರಿಶಿನವನ್ನು ಚರ್ಮಕ್ಕೆ ಹೇಗೆ ಉಪಯೋಗಿಸುವುದು?
ಮೇಲೆ ತಿಳಿಸಿದ ನಾಲ್ಕು ಪದಾರ್ಥಗಳನ್ನು ಒಟ್ಟಾಗಿ ಬೆರೆಸಿ ಉಂಟಾಗಿರುವ ಮಿಶ್ರಣವನ್ನು ಎರಡು ಬೆರಳುಗಳ ತುದಿಯಿಂದ ಮುಖಕ್ಕೆ ಸಮನಾಗಿ ಹಚ್ಚಿ. 15 ರಿಂದ 2೦ ನಿಮಿಷಗಳ ಕಾಲ ಒಣಗಲು ಬಿಡಿ. ತ್ವಚೆಯು ಒಣಗಿದ ನಂತರ ಹಸ್ತವನ್ನು ನೀರಿನಿಂದ ನೆನೆಸಿಕೊಂಡು ಮುಖಕ್ಕೆ ನಿಧಾನವಾಗಿ ಸಿಂಪಡಿಸಿ. ನಂತರ ಹಚ್ಚಿರುವ ಅರಿಶಿನ ಅಂಶ ಹೊರಬರುವವರೆಗೂ ನಯವಾಗಿ ಮಸ್ಸಾಜ್ ಮಾಡಿ. ಸದರಿ ಅಂಶವು ಸಂಪೂರ್ಣವಾಗಿ ಸ್ವಚ್ಛಗೊಂಡ ನಂತರ ಮುಖವನ್ನು ಮೇಲ್ಭಾಗ ಮಾರ್ಗವಾಗಿ ಮುಖದ ವಸ್ತ್ರದಿಂದ ನಯವಾಗಿ ಒರೆಸಿ. ಈಗ ನಿಮ್ಮ ತ್ವಚೆಯನ್ನು ನೀರಿನಿಂದ ನಿಧಾನವಾಗಿ ಸ್ವಚ್ಛಗೊಳಿಸಿ.

ಈ ಫೇಸ್ ಪ್ಯಾಕ್ ಅನ್ನು ಯಾವಾಗ ಬಳಸುವುದು?
ಈ ಫೇಸ್ ಪ್ಯಾಕ್ ಅನ್ನು ಕನಿಷ್ಠ ವಾರಕ್ಕೆ ಎರಡು ಬಾರಿ ಹಚ್ಚಲು ಸಲಹೆ ನೀಡಲಾಗಿದೆ. ಇದರಲ್ಲಿರುವ ಪ್ರಾಕೃತಿಕ ಸತ್ವಗಳಿಂದ ಚರ್ಮದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ. ಆದ್ದರಿಂದ ಅರಿಶಿನವನ್ನು ಆಲಕ್ಷಿಸದೇ ಕ್ರಮವಾಗಿ ಬಳಕೆ ಮಾಡಿದಲ್ಲಿ ನಿಮಗೇ ವ್ಯತ್ಯಾಸ ಕಂಡುಬರುತ್ತದೆ.

English summary

Some Awesome Turmeric Masks for Great Skin!

Turmeric is one of nature's best ingredients you can use on the skin to treat and get rid of multiple skin problems. Turmeric is a mild antiseptic ingredient that helps in healing your skin from any infection too. take a look at this miracle face pack and pay attention to what turmeric does to your skin after you have applied the pack thrice in a month:
X
Desktop Bottom Promotion