For Quick Alerts
ALLOW NOTIFICATIONS  
For Daily Alerts

ಸಮೃದ್ಧ ಪೋಷಕಾಂಶಗಳ ಆಗರ- ಹಳ್ಳಿಗಾಡಿನ ಅವರೆಕಾಳು

By Super
|

ಬಿಡಿಸಲು ತುಂಬಾ ಸಮಯ ಹಿಡಿಯುತ್ತದೆ ಎಂಬ ಒಂದೇ ಕಾರಣಕ್ಕೆ ಅವರೆಕಾಳನ್ನು ಹೆಚ್ಚಿನವರು ಮನೆಗೆ ತರುವುದಿಲ್ಲ. ಭಾರತದ ಇತಿಹಾಸದಲ್ಲಿಯೇ ಅತಿ ಪ್ರಾಚೀನ ಎಂಬ ಹೆಗ್ಗಳಿಕೆ ಪಡೆದ ಅವರೆಕಾಳು ವಾಸ್ತವವಾಗಿ ಅಪಾರವಾದ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಕೋಳಿಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನು ಇರುವ ಕಾರಣ ಸಸ್ಯಾಹಾರಿಗಳೂ ಮಾಂಸಾಹಾರಿಗಳಿಗಿಂತ ಹೆಚ್ಚಿನ ಪೌಷ್ಟಿಕಾಂಶಗಳನ್ನು ಪಡೆಯಲು ಸಾಧ್ಯ. ಅಲ್ಲದೇ ಇದರಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಕೊಬ್ಬು, ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಗಳು, ವಿಟಮಿನ್ನುಗಳು, ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ನಾರು ಇದನ್ನೊಂದು ಅಗತ್ಯ ಆಹಾರವನ್ನಾಗಿಸಿದೆ. ಅವರೆಕಾಳಿನ ಭೂಗೋಳ, ಚರಿತ್ರೆ ಮತ್ತು ವರ್ತಮಾನ!

ಇದೊಂದು ದ್ವಿದಳಧಾನ್ಯವಾಗಿದ್ದು ಇದರ ಸೇವನೆಯಿಂದ ನಿಧಾನವಾಗಿ ರಕ್ತಕ್ಕೆ ಸಕ್ಕರೆ ಮತ್ತು ಪೋಷಕಾಂಶಗಳು ಬಿಡುಗಡೆಯಾಗುವ ಕಾರಣ ಪದೇ ಪದೇ ಆಹಾರ ಸೇವಿಸುವ ಬಯಕೆ ಕಡಿಮೆಯಾಗಿ ತೂಕ ಸಮಸ್ಥಿತಿಯಲ್ಲಿರಲು ನೆರವಾಗುತ್ತದೆ. ಯಾವುದೇ ದ್ವಿದಳಧಾನ್ಯಗಳಂತೆ ಅವರೆ ಸಹಾ ಸುಲಭವಾಗಿ ಜೀರ್ಣಗೊಳ್ಳುವ ಆಹಾರವಾಗಿದ್ದು ಇಡಿಯ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ.

ಅಲ್ಲದೇ ನಿತ್ಯದ ಅಗತ್ಯದ ಪ್ರಮಾಣದ ಕಬ್ಬಿಣ ಮತ್ತು ಪ್ರೋಟೀನ್ ನೀಡುವ ಮೂಲಕ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ, ಸೋಂಕುಗಳಿಂದ ರಕ್ಷಿಸುತ್ತದೆ ಹಾಗೂ ಕ್ಯಾನ್ಸರ್ ಕಾರಕ ಕಣಗಳಿಂದ ಕಾಪಾಡುತ್ತದೆ. ಇಷ್ಟೇ ಅಲ್ಲ, ನಿತ್ಯವೂ ಕೊಂಚವಾದರೂ ಅವರೆಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. ಇವುಗಳಲ್ಲಿ ಪ್ರಮುಖವಾದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ..

ಅತಿಹೆಚ್ಚಿನ ಪ್ರಮಾಣದ ಪ್ರೋಟೀನ್

ಅತಿಹೆಚ್ಚಿನ ಪ್ರಮಾಣದ ಪ್ರೋಟೀನ್

ಇದರ ಪೋಷಕಾಂಶಗಳ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿ ಕಪ್‌ನಲ್ಲಿ ಹದಿನೆಂಟು ಗ್ರಾಂ ನಷ್ಟು ಪ್ರೋಟೀನ್ ಇರುವುದು ಕಂಡುಬರುತ್ತದೆ. ಈ ಪ್ರಮಾಣ ಜಗತ್ತಿನಲ್ಲಿರುವ ಯಾವುದೇ ಆಹಾರದಲ್ಲಿ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದು ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಹೃದ್ರೋಗಿಗಳೂ, ಮಧುಮೇಹಿಗಳೂ, ಹಿರಿಯರೂ, ಮಕ್ಕಳೂ ಸೇವಿಸಬಹುದಾದ ಆಹಾರವಾಗಿದೆ. ಆದ್ದರಿಂದ ಮಾಂಸಾಹಾರವನ್ನು ತ್ಯಜಿಸಿ ಅವರೆಕಾಳುಗಳನ್ನು ಊಟದಲ್ಲಿ ಸೇರಿಸಿಕೊಳ್ಳುವ ಮೂಲಕ ಮಾಂಸಾಹಾರದ ಮೂಲಕ ಪಡೆಯಬಹುದಾದುದಕ್ಕಿಂತಲೂ ಹೆಚ್ಚಿನ ಪ್ರೋಟೀನು ಪಡೆದೂ ಮಾಂಸಾಹಾರದ ಮೂಲಕ ಎದುರಾಗಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುತ್ತದೆ

ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುತ್ತದೆ

ಇದರಲ್ಲಿ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರುಗಳಿವೆ. ಇದು ಜೀರ್ಣಗೊಂಡ ಆಹಾರವನ್ನು ಕರುಳುಗಳ ಒಳಗೆ ಸುಲಲಿತವಾಗಿ ಸಾಗಲು ನೆರವಾಗುವ ಮೂಲಕ ಕರುಳುಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ಕರುಳುಗಳ ವ್ರಣ, ಹುಣ್ಣು ಮತ್ತು ಕ್ಯಾನ್ಸರ್ ಮೊದಲಾದ ತೊಂದರೆಗಳು ಎದುರಾಗದಂತೆ ಕಾಪಾಡುತ್ತದೆ.

ಹೃದಯವನ್ನು ರಕ್ಷಿಸುತ್ತದೆ

ಹೃದಯವನ್ನು ರಕ್ಷಿಸುತ್ತದೆ

ಹೃದಯಕ್ಕೆ ಉತ್ತಮವಾದ ಆಹಾರಗಳನ್ನು ಸೇವಿಸಿ ಎಂದು ವೈದ್ಯರು ಹೇಳಿದರೆ ನೀವು ಪರಿಗಣಿಸಬೇಕಾದ ಮೊದಲ ಆಹಾರವೆಂದರೆ ಅವರೆಕಾಳು. ಏಕೆಂದರೆ ಇದರಲ್ಲಿ ಉತ್ತಮ ಪ್ರಮಾಣದ ಫೋಲೇಟ್ ಮತ್ತು ಮೆಗ್ನೀಶಿಯಂ ಇದ್ದು ಇವು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಇದರಲ್ಲಿರುವ ಫೋಲಿಕ್ ಆಮ್ಲ ಹೃದಯದ ಕವಾಟ ಮತ್ತು ಗೋಡೆಗಳನ್ನು ದೃಢಗೊಳಿಸುವ ಮೂಲಕ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಇನ್ನೊಂದೆಡೆ ಮೆಗ್ನೀಶಿಯಂ ರಕ್ತಸಂಚಾರವನ್ನು ನಿಯಂತ್ರಿಸಿ ಸುಲಲಿತವಾಗಿ ಹರಿಯಲು ನೆರವಾಗುತ್ತದೆ.

 ಉತ್ತಮ ಪ್ರಮಾಣದ ಕಬ್ಬಿಣ ದೊರಕುತ್ತದೆ

ಉತ್ತಮ ಪ್ರಮಾಣದ ಕಬ್ಬಿಣ ದೊರಕುತ್ತದೆ

ಒಂದು ದಿನಕ್ಕೆ ಅಗತ್ಯವಿರುವ ಕಬ್ಬಿಣದ ಪ್ರಮಾಣವನ್ನು ಕೇವಲ ಒಂದು ಕಪ್ ಅವರೆಕಾಳು ನೀಡಬಲ್ಲದು.ಈ ಕಬ್ಬಿಣವನ್ನು ಬಳಸಿ ರಕ್ತದ ಕೆಂಪುಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ರಕ್ತಹೀನನೆಯ ತೊಂದರೆ ಕಡಿಮೆಯಾಗುತ್ತದೆ. ಬಾಣಂತಿಯರು ಮತ್ತು ಮಹಿಳೆಯರ ಮಾಸಿಕ ದಿನಗಳಲ್ಲಿ ಅವರೆ ಕಾಳನ್ನು ದಿನಕ್ಕೆ ಮೂರು ಹೊತ್ತೂ ತಿನ್ನುವ ಮೂಲಕ ಕಳೆದುಕೊಂಡಿದ್ದ ರಕ್ತದ ಪ್ರಮಾಣವನ್ನು ಪುನಃ ಪಡೆಯಲು ಸಾಧ್ಯವಾಗುತ್ತದೆ.

ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ

ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ

ಅವರೆಕಾಳಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಮೆಗ್ನೀಶಿಯಂ ಮತ್ತು ಸತುಗಳಿವೆ. ಇವು ವಿವಿಧ ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತವೆ. ಅಲ್ಲದೇ ವಿವಿಧ ಆಂಟಿ ಆಕ್ಸಿಡೆಂಟುಗಳಾದ ವಿಟಮಿನ್ ಎ ಮತ್ತು ಸಿ ಸಹಾ ಉತ್ತಮ ಪ್ರಮಾಣದಲ್ಲಿದ್ದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ. ಪರಿಣಾಮವಾಗಿ ಹಲವು ವಿಧದ ಕ್ಯಾನ್ಸರ್ ಗಳಿಂದ ರಕ್ಷಣೆ ದೊರಕುತ್ತದೆ.

ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ

ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ

ಅವರೆಕಾಳಿನಲ್ಲಿರುವ ಇನ್ನೊಂದು ಪೋಷಕಾಂಶವೆಂದರೆ ಸಿಲಿನಿಯಂ. ಇದು ಉರಿಯೂತವಾಗುವುದನ್ನು ತಡೆಯುತ್ತದೆ ಹಾಗೂ ಕ್ಯಾನ್ಸರ್ ಉಂಟಾಗುವುದರಿಂದ ಮತ್ತು ಈಗಾಗಲೇ ಪ್ರಾರಂಭವಾಗಿದ್ದರೆ ಇದನ್ನು ಇನ್ನಷ್ಟು ಬೆಳೆಯುವುದನ್ನು ತಡೆಯುತ್ತದೆ. ಜೊತೆಗೇ ದೇಹದ ರಕ್ತನಿರೋಧಕ ಶಕ್ತಿಯನ್ನೂ ಹೆಚ್ಚಿಸಿ ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್ ಉಂಟು ಮಾಡುವ ಟಿ-ಸೆಲ್ಸ್ ಎಂಬ ಕೊಲೆಗಾರ ಜೀವಕೋಶಗಳಿಗೆ ತಡೆಯೊಡ್ಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.

English summary

Reasons To Have Lentils Every Day

Lentils are one of the superfoods and a pack of nutrition. They are one of the oldest commonly consumed legumes. They are one of the best sources of protein. Lentils are relatively low in fats and high in protein. They also are rich in mineral, vitamin, antioxidant and dietary fibre content. Consuming lentil on a daily basis will nourish your body and support good health. in this article, we at Boldsky will be listing out some of the reasons to consume lentils every day. Read on to know more about it.
Story first published: Monday, March 28, 2016, 18:23 [IST]
X
Desktop Bottom Promotion