ಹಿಂಡಿ ಹಿಪ್ಪೆ ಮಾಡುವ ತಲೆ ನೋವಿಗೆ ಅದ್ಭುತ ತೈಲ....

By: manu
Subscribe to Boldsky

ತಲೆನೋವು ಎಂಬುದು ಸಣ್ಣ ಪದವಾಗಿದ್ದರೂ ಇದರ ಹೆಸರು ಕೇಳಿದರೆ ಭಯವಾಗುವುದಂತೂ ಖಂಡಿತ. ಹೆಚ್ಚಿನ ಒತ್ತಡ ಮತ್ತು ಮಾನಸಿಕ ಖಿನ್ನತೆ ನಮ್ಮನ್ನು ಆವರಿಸಿದಾಗ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಇದರ ನೋವು ಎಷ್ಟು ಗಾಢವಾಗಿರುತ್ತದೆ ಎಂದರೆ ಜೀವಹೋದರೆ ಸಾಕು ಎಂಬುದಾಗಿ ಕೂಡ ನಮಗೆ ಅನ್ನಿಸಿಬಿಡುತ್ತದೆ. ತಲೆನೋವು ಓಡಿಸುವ ಮನೆ ಮದ್ದು: ಪ್ರಯತ್ನಿಸಿ ನೋಡಿ

ತಲೆಯ ನರಗಳನ್ನು ಯಾರೋ ಹಿಡಿದು ಎಳೆದಂತೆ ಇಲ್ಲವೇ ಗಟ್ಟಿಯಾದ ಬಂಡೆಗೆ ತಲೆಯನ್ನು ಯಾರೋ ಬಡಿದಂತೆ ಈ ಮೊದಲಾದ ಅನುಭವ ನಮ್ಮಲ್ಲಿ ಉಂಟಾಗುತ್ತದೆ. ಒಮ್ಮೊಮ್ಮೆ ಈ ನೋವು ಮೈಗ್ರೇನ್‌ದ್ದಾಗಿಬಿಟ್ಟರಂತೂ ನಾವು ಆಕಾಶ ಭೂಮಿ ಒಂದು ಮಾಡಿಬಿಡುತ್ತೇವೆ. ಶೀತ ನೆಗಡಿ ಉಂಟಾದಾಗ ಕೂಡ ತಲೆನೋವು ಕಾಣಿಸಿಕೊಳ್ಳುತ್ತದೆ ಅಂತೆಯೇ ಹೆಚ್ಚುವರಿ ಕೆಲಸದ ಒತ್ತಡದಿಂದ ಕೂಡ ತಲೆಯಲ್ಲಿ ನೋವು ಉಂಟಾಗುತ್ತದೆ. ಖತರ್ನಾಕ್ ಮೈಗ್ರೇನ್ ತಲೆ ನೋವಿಗೆ -ಪವರ್ ಫುಲ್ ಮನೆಮದ್ದು

ಹೀಗೆ ತಲೆನೋವು ಎಂಬ ಸಮಸ್ಯೆಗೆ ಮಾತ್ರೆಗಳ ಮೂಲಕ ನಾವು ಶಮನವನ್ನು ಕಂಡುಕೊಳ್ಳಬಹುದಾಗಿದ್ದರೂ ಅದು ಸ್ವಲ್ಪ ಸಮಯಕ್ಕೆ ಮಾತ್ರವೇ ಪರಿಹಾರವನ್ನು ನೀಡುತ್ತದೆ. ಅದಾಗ್ಯೂ ಮಾತ್ರೆಗಳ ಹೆಚ್ಚುವರಿ ಬಳಕೆ ಇತರ ಕಾಯಿಲೆಗಳನ್ನು ನಮಗೆ ಉಂಟುಮಾಡಬಹುದು. ಹಾಗಿದ್ದರೆ ತಲೆನೋವಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರಗಳು ಏನಾದರೂ ಇದ್ದರೆ ಅದು ತೈಲಗಳಿಂದ ಮಾತ್ರವೇ ಆಗಿದೆ. ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ 'ತಲೆನೋವು' ಮಂಗಮಾಯ!

ಹೌದು ಪುದೀನಾ, ಲವಂಗ, ಶುಂಠಿ, ವಿಂಟಗ್ರೀನ್, ತೆಂಗಿನೆಣ್ಣೆ ಮತ್ತು ಜೊಜೊಬಾ ಎಣ್ಣೆಯನ್ನು ಮಿಶ್ರ ಮಾಡಿ ಈ ತೈಲವನ್ನು ನಾವು ತಯಾರಿಸಲಿದ್ದು ಇದು ತಲೆನೋವನ್ನು ಬುಡದಿಂದಲೇ ಕಿತ್ತೊಗೆಯಲಿದೆ. ಈ ಎಣ್ಣೆಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು ನಮ್ಮನ್ನು ಹಣ್ಣುಮಾಡುವ ತಲೆನೋವಿಗೆ ಪರಿಹಾರವನ್ನು ಒದಗಿಸಿ ನಮಗೆ ಆರಾಮವನ್ನು ನೀಡಲಿದೆ. ಈ ಎಣ್ಣೆಗಳನ್ನು ನಿಮಗೆ ಶೀಘ್ರದಲ್ಲೇ ತಯಾರಿಸಬಹುದಾಗಿದ್ದು ಇವುಗಳನ್ನು ಹಚ್ಚಿಕೊಂಡ ನಂತರವಷ್ಟೇ ನಿಮಗೆ ಪ್ರಯೋಜನ ತಿಳಿದುಕೊಳ್ಳಬಹುದಾಗಿದೆ..... 

ಪುದೀನಾ ಎಣ್ಣೆ

ಪುದೀನಾ ಎಣ್ಣೆ

7-8 ಹನಿಗಳಷ್ಟು ಪುದೀನಾ ಎಣ್ಣೆ ಪುದೀನಾ ಎಲೆಗಳಿಂದ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ವಿಂಟರ್ಗ್ರೀನ್ಎಣ್ಣೆ

ವಿಂಟರ್ಗ್ರೀನ್ಎಣ್ಣೆ

7-8 ಹನಿಗಳಷ್ಟು ಈ ವಿಂಟರ್ಗ್ರೀನ್ಎಣ್ಣೆಯನ್ನು ತೆಗೆದುಕೊಳ್ಳಿ

ಲವಂಗದೆಣ್ಣೆ

ಲವಂಗದೆಣ್ಣೆ

4-5 ಹನಿಗಳಷ್ಟು ಲವಂಗದೆಣ್ಣೆ

ಶುಂಠಿ ಎಣ್ಣೆ

ಶುಂಠಿ ಎಣ್ಣೆ

5 ಹನಿಗಳಷ್ಟು ಶುಂಠಿ ಎಣ್ಣೆಯನ್ನು ತೆಗೆದುಕೊಳ್ಳಿ

ತೆಂಗಿನೆಣ್ಣೆ

ತೆಂಗಿನೆಣ್ಣೆ

ಎರಡು ಹನಿಗಳಷ್ಟು ತೆಂಗಿನೆಣ್ಣೆ ಅಥವಾ ಜೊಜೊಬಾ ಎಣ್ಣೆಯನ್ನು ತೆಗೆದುಕೊಳ್ಳಿ

ಇನ್ನೂ ಇವೆಲ್ಲಾವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ....

ಇನ್ನೂ ಇವೆಲ್ಲಾವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ....

ಈ ಎಣ್ಣೆಗಳನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು, ಚೆನ್ನಾಗಿ ಮಿಶ್ರ ಮಾಡಿ ಹಾಗೂ ನಿಮ್ಮ ನೆತ್ತಿ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ

ಉಜ್ಜಿಕೊಳ್ಳಿ

ಉಜ್ಜಿಕೊಳ್ಳಿ

ಎಣ್ಣೆಯನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಇದು ತಲೆನೋವನ್ನು ಶೀಘ್ರದಲ್ಲೇ ಪರಿಹರಿಸಿ ನೋವನ್ನು ಕೂಡಲೇ ಶಮನ ಮಾಡುತ್ತದೆ.

 
English summary

Prepare Your Own Oil and get rid of Headaches Instantly

Headache is one of the most common health problems which every other person experiences. Blending a few essential oils makes a good rub that helps ease headaches.
Please Wait while comments are loading...
Subscribe Newsletter