For Quick Alerts
ALLOW NOTIFICATIONS  
For Daily Alerts

ತಲೆನೋವು ಓಡಿಸುವ ಮನೆ ಮದ್ದು: ಪ್ರಯತ್ನಿಸಿ ನೋಡಿ

By Deepak
|

ತಲೆನೋವು ಎಂಬುದು ಒಂದು ಸಾಮಾನ್ಯ ಸಮಸ್ಯೆ. ತಲೆನೋವು ಕಾಣಿಸಿಕೊಂಡ ತಕ್ಷಣ ಭಯಬಿದ್ದು ವೈದ್ಯರ ಬಳಿ ಓಡಬೇಕಾಗಿಲ್ಲ, ಹಾಗಂತ ತಲೆನೋವು ನಿವಾರಕ ಮಾತ್ರೆಗಳನ್ನು ನುಂಗುವುದು ಒಳ್ಳೆಯದಲ್ಲ. ತಲೆನೋವು ಕಾಣಿಸಿಕೊಂಡ ತಕ್ಷಣ ಮನೆಮದ್ದು ಮಾಡಿ. ಸಾಮಾನ್ಯವಾದ ತಲೆನೋವಾದರೆ ಈ ಮನೆಮದ್ದುಗಳಿಗೆ ಕಡಿಮೆಯಾಗುತ್ತವೆ. ಪ್ರತೀದಿನ ತಲೆನೋವು ಬರುತ್ತಿದ್ದು, ಯಾವುದೇ ಮನೆಮದ್ದಿಗೆ ಆ ತಲೆನೋವು ಬಗ್ಗದಿದ್ದರೆ ಮಾತ್ರ ವೈದ್ಯರಿಗೆ ತೋರಿಸಲು ಮರೆಯಬೇಡಿ. ಏಕೆಂದರೆ ತಲೆಯೊಳಗೆ ಏನಾದರೂ ಸಮಸ್ಯೆಯಿದ್ದರೆ ಪ್ರತೀದಿನ ತಲೆನೋವು ಕಾಣಿಸಿಕೊಳ್ಳುವುದು. ಬೆಳ್ಳಂಬೆಳಗ್ಗೆ ಕಾಡುವ ಮೈಗ್ರೇನ್ ತಲೆನೋವಿಗೆ ಪರಿಹಾರವೇನು?

ತಲೆನೋವಿನಲ್ಲಿ ಸಾಕಷ್ಟು ರೀತಿಯಿದೆ. ಸೈನಸ್ ನಿಂದಾಗಿ, ಮೈಗ್ರೇನ್ ನಿಂದಾಗಿ ಹಾಗೆಯೇ ಕೆಲವರಿಗೆ ಬಿಸಿಲಿಗೆ ಹೋದರೆ ಅಥವಾ ಶೀತ ಆದರೆ, ಒತ್ತಡ ಹೆಚ್ಚಿದಾಗ, ಗ್ಯಾಸ್ಟ್ರಿಕ್ ತೊಂದರೆಯಿಂದ ಹೀಗೆ ತಲೆನೋವು ಬರಲು ಸಾಕಷ್ಟು ಕಾರಣಗಳಿವೆ. ಹೀಗಾಗಿ ಮೊದಲು ಕಾರಣವನ್ನು ತಿಳಿದುಕೊಂಡರೆ ಅದಕ್ಕೆ ಪರಿಹಾರವನ್ನು ಕೂಡ ಕಂಡುಕೊಳ್ಳಬಹುದು. ಹೀಗೆ ಸಣ್ಣ ಪುಟ್ಟ ಸಮಸ್ಯೆಗಳಿಂದ ತಲೆನೋವು ಕಾಣಿಸಿಕೊಂಡರೆ ಅದನ್ನು ಹೋಗಲಾಡಿಸಲು ಕೆಲವೊಂದು ಮನೆಮದ್ದನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಂಡಿದೆ, ಅವು ಯಾವುದು ಎಂಬುದನ್ನು ಮುಂದೆ ಓದಿ..

Must Try: Indian Home Remedies For Headaches

ತಾಜಾ ಲಿಂಬೆ ಮತ್ತು ಬಿಸಿ ನೀರಿನ ಮಿಶ್ರಣ
ಒಂದು ಲೋಟದಲ್ಲಿ ಹದವಾದ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಲಿಂಬೆರಸವನ್ನು ಬೆರೆಸಿ ಕುಡಿದರೆ ನಿಮ್ಮ ತಲೆನೋವು ತಕ್ಷಣ ಕಡಿಮೆ ಆಗುತ್ತದೆ. ಕೆಲವರಿಗೆ ಗ್ಯಾಸ್ ಸಮಸ್ಯೆಯಿಂದ ಕೂಡ ತಲೆನೋವು ಬಂದಿರುತ್ತದೆ ಅಂತವರಿಗೆ ಇದು ಸಹಕಾರಿ. ಇದು ಗ್ಯಾಸ್ ಮತ್ತು ತಲೆನೋವು ಎರಡರಿಂದಲೂ ಮುಕ್ತಿ ನೀಡುತ್ತದೆ.

ನೀಲಗಿರಿ ಎಣ್ಣೆ
ತಲೆನೋವನ್ನು ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವುದು.ಇದು ನೋವು ನಿವಾರಕವಾದ್ದರಿಂದ ಬೇಗ ತಲೆನೋವು ನಿವಾರಿಸುತ್ತದೆ.

ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ
15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.

ಕೊತ್ತಂಬರಿ,ಜೀರಿಗೆ ಮತ್ತು ಶುಂಟಿ ಬೆರೆಸಿ ಮಾಡಿದ ಕಷಾಯ


ಕೊತ್ತಂಬರಿ ಸೊಪ್ಪು ,ಜೀರಿಗೆ ಮತ್ತು ಶುಂಟಿ ಬೆರೆಸಿ ಮಾಡಿದ ಕಷಾಯ ಅಥವಾ ಟೀ ಕುಡಿಯುವುದರಿಂದ ತಲೆನೋವು ಸುಲಭವಾಗಿ ಮತ್ತು ಬೇಗ ಕಡಿಮೆ ಆಗುತ್ತದೆ. ಬಿಸಿ ನೀರಿಗೆ ಮೇಲೆ ಹೇಳಿದ ಪದಾರ್ಥ ಮಿಶ್ರಮಾಡಿ 5 ನಿಮಿಷಗಳವರೆಗೆ ಕುದಿಸಿ. ನಂತರ ಆ ನೀರನ್ನು ದಿನದಲ್ಲಿ ಎರಡು ಬಾರಿಯಾದರೂ ಕುಡಿಯಿರಿ. ನಿಮಗೆ ಉತ್ತಮ ಎನಿಸುವವರೆಗೂ ಕುಡಿಯುತ್ತಿರಿ.

ಬಿಸಿ ಹಾಲು ಕುಡಿಯಿರಿ

ಹಸುವಿನ ಹಾಲನ್ನು ಕಾಯಿಸಿ ಕುಡಿದರೆ ಅದು ನಿಮ್ಮ ತಲೆನೋವನ್ನು ದೂರ ಮಾಡುತ್ತದೆ.ನಿಮ್ಮ ತಲೆನೋವು ಹೆಚ್ಚಿದ್ದರೆ ನೀವು ಹಾಲಿಗೆ ಸ್ವಲ್ಪ ತುಪ್ಪವನ್ನು ಕೂಡ ಬೆರೆಸಬಹುದು.

ಗ್ರೀನ್ ಟೀ
ಗ್ರೀನ್ ಟೀ ನೋವಿನಲ್ಲಿರುವಾಗ ಸೇವಿಸಲು ಹೇಳಿ ಮಾಡಿಸಿದ ಪಾನೀಯವಾಗಿರುತ್ತದೆ. ಗ್ರೀನ್ ಟೀಯಲ್ಲಿ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಇವು ನೋವನ್ನು ತಕ್ಷಣ ನಿವಾರಿಸುವ ಗುಣಗಳನ್ನು ಒಳಗೊಂಡಿರುತ್ತವೆ. ಒಂದು ವೇಳೆ ನಿಮಗೆ ಅಗತ್ಯವಾದಲ್ಲಿ, ನೀವು ಗ್ರೀನ್ ಟೀಗೆ ಒಂದು ಟೇಬಲ್ ಚಮಚ ಜೇನು ತುಪ್ಪ ಮತ್ತು ಚಕ್ಕೆಯನ್ನು ಸೇರಿಸಿಕೊಂಡು ಸೇವಿಸಬಹುದು.

ಮಸಾಲ ಚಹಾ
ಒಂದು ಹಳೆಯ ನಾಣ್ಣುಡಿ- ನಿಮಗೆ ನೋವುಗಳಿದ್ದಲ್ಲಿ, ಒಂದು ಗುಟುಕು ಚಹಾ ಕುಡಿಯಿರಿ, ಎಂದು ಹೇಳುತ್ತದೆ. ಹಾಗೆಯೇ ಒಂದು ಕಪ್ ಬ್ಲ್ಯಾಕ್ ಟೀಗೆ ಒಂದು ಚಿಟಿಕೆ ಚಕ್ಕೆ ಪುಡಿಯನ್ನು ಹಾಕಿಕೊಳ್ಳಿ ಮತ್ತು ಇದಕ್ಕೆ ಸಕ್ಕರೆಯ ಬದಲಿಗೆ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಜಜ್ಜಿದ ಶುಂಠಿಯನ್ನು ಚಕ್ಕೆಯ ಬದಲಿಗೆ ಬೆರೆಸಿಕೊಳ್ಳಬಹುದು. ಇದು ನೋವನ್ನು ನಿವಾರಿಸಲು ಮತ್ತಷ್ಟು ನೆರವು ನೀಡುತ್ತದೆ.

English summary

Must Try: Indian Home Remedies For Headaches

Headaches can make day-to-day life miserable, and this ache forces us to head straight for the aspirin. This is a sticky situation, because ultimately that will only perpetuate the problem. Today, there are many more options you can turn to if you want to get rid of a headache in a natural process. Boldsky shares with you some of the best Indian home remedies for treating a headache
Story first published: Tuesday, October 20, 2015, 19:30 [IST]
X
Desktop Bottom Promotion