For Quick Alerts
ALLOW NOTIFICATIONS  
For Daily Alerts

ಸತಾಯಿಸುವ ನಾಯಿ ಕೆಮ್ಮಿನಿಂದ ದೂರವಾಗಲು ಸರಳ ಮನೆಮದ್ದು

ಕೆಮ್ಮಿನ ಮೂಲಕ ಹೊರಸೂಸುವ ಉಸಿರಿನಲ್ಲಿ ಹೆಚ್ಚಿನ ಪ್ರಮಾಣದ ಜೊಲ್ಲು ಇದ್ದರೆ ಇದಕ್ಕೆ ನಾಯಿಕೆಮ್ಮು ಎನ್ನುತ್ತಾರೆ (whooping cough). ನಾಯಿ ಜೊಲ್ಲು ಸುರಿಸುವ ಕಾರಣದಿಂದಲೇ ಈ ಕೆಮ್ಮಿಗೆ ನಾಯಿಯ ವಿಶೇಷಣವನ್ನು ನಮ್ಮ ಹಿರಿಯರು ಉಪಯೋಗಿಸಿರಬೇಕು...

By Arshad
|

ಒಂದು ವೇಳೆ ಕೆಮ್ಮಿನ ಮೂಲಕ ಹೊರಸೂಸುವ ಉಸಿರಿನಲ್ಲಿ ಹೆಚ್ಚಿನ ಪ್ರಮಾಣದ ಜೊಲ್ಲು ಇದ್ದರೆ ಇದಕ್ಕೆ ನಾಯಿಕೆಮ್ಮು ಎನ್ನುತ್ತಾರೆ (whooping cough). ನಾಯಿ ಜೊಲ್ಲು ಸುರಿಸುವ ಕಾರಣದಿಂದಲೇ ಈ ಕೆಮ್ಮಿಗೆ ನಾಯಿಯ ವಿಶೇಷಣವನ್ನು ನಮ್ಮ ಹಿರಿಯರು ಉಪಯೋಗಿಸಿದ್ದಿರಬಹುದು.

Whooping Cough

ಈ ಕೆಮ್ಮಿನ ತೊಂದರೆ ಎಂದರೆ ಕೆಮ್ಮಿದವರು ಮುಖ ಮುಚ್ಚಿಕೊಳ್ಳದೇ ಇದ್ದರೆ ಗಾಳಿಗೆ ಸಿಡಿಯುವ ಜೊಲ್ಲಿನ ಕಣಗಳು ಇತರರ ಉಸಿರಿಗೆ ಸೇರಿದ ಬಳಿಕ ಕೆಮ್ಮಿನ ಸೋಂಕು ಇತರರಿಗೆ ಹರಡುವ ಅಪಾಯವಿದೆ. ಈ ಕೆಮ್ಮಿಗೆ ಅಡ್ಡಪರಿಣಾಮಗಳಿರುವ ಅಪಾಯಕಾರಿ ರಾಸಾಯನಿಕಗಳ ಔಷಧಿಯೇನೂ ಅಗತ್ಯವಿಲ್ಲ, ಸುಲಭ ಮನೆಮದ್ದಿನಿಂದಲೇ ಇದರ ನಿವಾರಣೆ ಸಾಧ್ಯ. ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!

ಈ ಕೆಮ್ಮಿಗೆ ಲಸಿಕೆ ಈಗ ಲಭ್ಯವಿದ್ದು ಒಂದು ವೇಳೆ ಲಸಿಕೆ ಹಾಕಿಸಿಕೊಂಡಿದ್ದರೆ ಈ ರೋಗ ಬರುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಈ ರೋಗ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು.

ಸೋಂಕು ತಗುಲಿದ ಬಳಿಕ ಈ ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾ ವ್ಯಕ್ತಿಯ ಶ್ವಾಸನಾಳದ ಒಳಭಾಗದ ತೇವಭಾಗದಲ್ಲಿ ಆಶ್ರಯ ಪಡೆದು ವೃದ್ದಿಗೊಳ್ಳುತ್ತಾ ಸಾಗುತ್ತದೆ. ಒಂದು ಹಂತ ದಾಟಿದ ಬಳಿಕ ಸೋಂಕು ಅತಿ ಹೆಚ್ಚಾಗುವ ಮೂಲಕ ಸತತ ಕೆಮ್ಮು, ಸೀನು, ಸುರಿಯುವ ಮೂಗು, ಗಂಟಲಬೇನೆ, ಜ್ವರ ಇತ್ಯಾದಿಗಳು ಆವರಿಸುತ್ತವೆ. ಬನ್ನಿ, ಈ ಕೆಮ್ಮನ್ನು ನಿವಾರಿಸಲು ಸಮರ್ಥವಾದ ಮನೆಮದ್ದುನ್ನು ತಯಾರಿಸುವ ಬಗೆಯನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು:
ಶುಂಠಿಯ ರಸ - 1 ದೊಡ್ಡ ಚಮಚ
ನೀರುಳ್ಳಿ ರಸ - 2 ದೊಡ್ಡ ಚಮಚ
ಜೇನು - 2 ದೊಡ್ಡ ಚಮಚ

ಈ ಮೂರೂ ರಸಗಳ ಮಿಶ್ರಣ ನಾಯಿಕೆಮ್ಮಿಗೆ ಅತ್ಯುತ್ತಮ ಪರಿಹಾರ ನೀಡುತ್ತದೆ. ಆದರೆ ಇದರ ಸಾಮರ್ಥ್ಯ ನಾಯಿಕೆಮ್ಮು ಉಲ್ಬಣಗೊಳ್ಳದ ಹಂತದಲ್ಲಿದ್ದಾಗ ಮಾತ್ರ. ಉಲ್ಬಣಗೊಂಡಿದ್ದ ಹಂತದಲ್ಲಿದ್ದಾಗ ಮಾತ್ರ ತಪ್ಪದೇ ತಜ್ಞರ ಬಳಿ ಪರಿಶೀಲಿಸಿಕೊಂಡು ಚಿಕಿತ್ಸೆ ಪಡೆಯಬೇಕು.

ಈ ಮಿಶ್ರಣದಲ್ಲಿ ಉತ್ತಮ ಉರಿಯೂತ ನಿವಾರಕ ಗುಣಗಳಿದ್ದು ಗಂಟಲ ಒಳಗಣ ಸೋಂಕು ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಂದು ಕೆಮ್ಮು ಕಡಿಮೆಗೊಳಿಸುತ್ತದೆ. ಅಲ್ಲದೇ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹ ಈ ಬಾಧೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳ ವಿರುದ್ದ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ರಾತ್ರಿಯ ಹೊತ್ತು ಕೆಮ್ಮು ಬರಲು ಕಾರಣಗಳೇನು?

ಮಿಶ್ರಣದ ಬಳಕೆಯ ವಿಧಾನ:
ಮೇಲೆ ತಿಳಿಸಿದ ಮೂರೂ ರಸಗಳನ್ನು ಒಂದು ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಕಲಕಿ. ಈ ರಸವನ್ನು ಬೆಳಗ್ಗಿನ ಉಪಾಹಾರದ ಬಳಿಕ ಕಾಫಿ ಟೀ ಬದಲಾಗಿ ಕುಡಿಯಿರಿ. ಬಳಿಕ ಯಾವ ದ್ರವವನ್ನೂ ಸೇವಿಸದಿರಿ.

ಒಂದು ಅಥವಾ ಎರಡೇ ದಿನದಲ್ಲಿ ಈ ಕೆಮ್ಮು ಬಹುತೇಕ ಮಾಯವಾಗಿರುತ್ತದೆ. ಉತ್ತಮ ಪರಿಣಾಮಕ್ಕಾಗಿ ನಾಲ್ಕರಿಂದ ಆರು ದಿನವಾದರೂ ಸತತವಾಗಿ ಕುಡಿಯಬೇಕು.ಈ ವಿಧಾನ ನಿಮಗೆ ಸೂಕ್ತ ಪರಿಹಾರ ಒದಗಿಸಿತೇ ಎಂಬುದನ್ನು ನಮಗೆ ಖಂಡಿತಾ ಬರೆದು ತಿಳಿಸಿ.

English summary

Natural Home Remedies for Whooping Cough

If you or someone you know has suffered from whooping cough, you would surely know how serious this condition can be. Did you know that there is an excellent home remedy to treat whooping cough? Yes, in fact a lot of people have reported that they prefer natural remedies to treat whooping cough instead of chemical-induced medicines, as these medicines come with side effects.
X
Desktop Bottom Promotion