Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!
ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಬಹುದಾದ ಕೆಮ್ಮಿನ ಸಿರಪ್‌ಗಳು (ಕೆಮ್ಮಿನ ಕಷಾಯ) ಅನೇಕವಿದ್ದು ಅವುಗಳ ಬಳಕೆಯು ಸುರಕ್ಷಿತವಾಗಿರುತ್ತವೆ.....
ನಿಮಗೆ ಕೆಮ್ಮು ಸತತವಾಗಿ ಕಾಡುತ್ತಿದೆಯೇ? ಹಲವಾರು ಔಷಧಿ, ಕೆಮ್ಮಿನ ಸಿರಪ್‌ಗಳನ್ನು ಕುಡಿದ ಬಳಿಕವೂ ಕೆಮ್ಮು ಪೂರ್ಣವಾಗಿ ನಿವಾರಣೆಯಾಗುತ್ತಿಲ್ಲವೇ? ಹಾಗಾದರೆ ನೀವು ಕಡೆಯದಾಗಿ ಪ್ರಯತ್ನಿಸಬಹುದಾದ ಒಂದು ಮನೆಮದ್ದಿದೆ. ಕಡೆಯದಾದ ಎಂಬ ಪದವನ್ನು ಬಳಸಲು ಕಾರಣವೇನೆಂದರೆ ಎಂತಹ ಹಳೆಯ ಕೆಮ್ಮಿದ್ದರೂ ಈ ವಿಧಾನದಿಂದ ಕಡಿಮೆಯಾಗುವುದು ಖಂಡಿತ.
ಸಾಮಾನ್ಯವಾದ ಕೆಮ್ಮಿಗೆ ಇದು ತಕ್ಷಣವೇ ಪರಿಹಾರ ನೀಡುತ್ತದೆ. ಇದರ ಧನಾತ್ಮಕ ಅಂಶವೆಂದರೆ ಇದನ್ನು ತಯಾರಿಸಲು ಕೇವಲ ನೈಸರ್ಗಿಕ ಸಾಮಾಗ್ರಿಗಳನ್ನೇ ಬಳಸಲಾಗಿದೆ. ಅಷ್ಟೇ ಅಲ್ಲ, ಇದರ ಸೇವನೆಯಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ.
ಕಿರಿಯರಿಂದ ವೃದ್ಧರವರೆಗೆ ಎಲ್ಲರೂ ಸುರಕ್ಷಿತವಾಗಿ ಸೇವಿಸಬಹುದಾದ ಈ ಔಷಧಿ ತಯಾರಿಸಲು ಸುಲಭವೂ ಆಗಿದೆ. ಬನ್ನಿ, ಈ ಅದ್ಭುತ ಸಿರಪ್ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ...

ಹಸಿಶುಂಠಿ
ಒಂದು ಇಂಚಿನಷ್ಟು ದೊಡ್ಡ ಹಸಿಶುಂಠಿಯ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ.

ಲಿಂಬೆಹಣ್ಣುಗಳ ರಸ
ಎರಡು ಲಿಂಬೆಹಣ್ಣುಗಳ ರಸವನ್ನು ಹಿಂಡಿ ಒಂದು ಲೋಟದಲ್ಲಿ ಪ್ರತ್ಯೇಕವಾಗಿಡಿ. ಇನ್ನು ಎರಡೂ ಲಿಂಬೆಗಳ ಸಿಪ್ಪೆಗಳನ್ನು ಚಿಕ್ಕದಾಗಿ ತುರಿಯಿರಿ.

ಎರಡು ಲೋಟ ನೀರು
ಒಂದು ಚಿಕ್ಕ ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿ ಇದರಲ್ಲಿ ಶುಂಠಿ ಮತ್ತು ಲಿಂಬೆಸಿಪ್ಪೆಯ ತುರಿಯನ್ನು ಸೇರಿಸಿ ಕುದಿಸಿ.

ಐದಾರು ನಿಮಿಷ ಕುದಿಸಿದ ನಂತರ
ಸುಮಾರು ಐದಾರು ನಿಮಿಷ ಮಧ್ಯಮ ಉರಿಯಲ್ಲಿ ಕುದಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ.

ಲೋಟದಲ್ಲಿ ಸಂಗ್ರಹಿಸಿ
ಬಳಿಕ ಈ ನೀರನ್ನು ಸೋಸಿ ಒಂದು ಲೋಟದಲ್ಲಿ ಸಂಗ್ರಹಿಸಿ

ಅರ್ಧ ಕಪ್ ಜೇನು
ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಎರಡು ಮೂರು ಟೇಬಲ್ ಚಮಚ ಜೇನನ್ನು ಸುರಿದು ಕೊಂಚವೇ ಬಿಸಿಮಾಡಿ.

ಇನ್ನು ಲಿಂಬೆರಸವನ್ನು ಸೇರಿಸಿ
ಜೇನು ಬಿಸಿಯಾಗುತ್ತಿದ್ದಂತೆಯೇ ಕುದಿಸಿ ತಣಿಸಿದ್ದ ನೀರನ್ನು ಇದಕ್ಕೆ ಬೆರೆಸಿ. ಈ ನೀರು ಕೊಂಚ ಬಿಸಿಯಾಗುತ್ತಿದ್ದಂತೆಯೇ ಪ್ರತ್ಯೇಕವಾಗಿರಿಸಿದ್ದ ಲಿಂಬೆರಸವನ್ನು ಸೇರಿಸಿ ಚಮಚದಲ್ಲಿ ಕಲಕುತ್ತಾ ಇನ್ನಷ್ಟು ಬಿಸಿಮಾಡಿ.

ಉರಿ ಆರಿಸಿ ತಣಿಯಲು ಬಿಡಿ
ಇನ್ನೇನು ಕುದಿಯಲಿದೆ ಎನ್ನುವಾಗ ಉರಿ ಆರಿಸಿ ತಣಿಯಲು ಬಿಡಿ.

ಸಿರಪ್ ರೆಡಿ!
ಈ ಸಿರಪ್ ಅನ್ನು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ ಮುಚ್ಚಳ ಮುಚ್ಚಿ. ಈ ಸಿರಪ್ ಅನ್ನು ಮಕ್ಕಳು ದಿನಕ್ಕೆ ಒಂದರಿಂದ ಎರಡು ಚಮಚ, ಹಿರಿಯರು ದಿನಕ್ಕೆ ಎರಡರಿಂದ ನಾಲ್ಕು ಚಮಚ ಸೇವಿಸಿದರೆ ಕೆಮ್ಮು ತಕ್ಷಣ ಕಡಿಮೆಯಾಗುತ್ತದೆ. ಈ ಸಿರಪ್ ಅನ್ನು ಫ್ರಿಜ್ಜಿನಲ್ಲಿಯೂ ಇಡಬಹುದು ಅಥವಾ ತಣ್ಣನೆಯ ಸ್ಥಳದಲ್ಲಿಯೂ ಸಂಗ್ರಹಿಸಿಡಬಹುದು.



Click it and Unblock the Notifications
