ಸರಳ ಟಿಪ್ಸ್: ಮನೆಯಲ್ಲಿಯೇ ಮಾಡಿ ನೋಡಿ-'ಶುಂಠಿ ಪೌಡರ್'

By: Hemanth
Subscribe to Boldsky

ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಂತಹ ಸಾಮರ್ಥ್ಯವನ್ನು ಹೊಂದಿರುವ ಶುಂಠಿಯಿಂದ ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆ ನಿವಾರಿಸಬಹುದು. ಅದರಲ್ಲೂ ಸಣ್ಣ ತುಂಡು ಶುಂಠಿಯನ್ನು ಜಚ್ಚಿ ಊಟಕ್ಕೆ ಮೊದಲು ಸ್ವಲ್ಪ ತಿಂದರೆ ಅದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇನ್ನು ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಬಳಕೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಕಡಿಮೆಯಾಗುತ್ತದೆ. ಎಡೆಬಿಡದೆ ಕಾಡುವ ಕೆಮ್ಮಿಗೆ ಶುಂಠಿ-ಉಪ್ಪಿನ ಕಷಾಯ

ದೇಹದ ಆರೋಗ್ಯಕ್ಕೆ ಶುಂಠಿ ತುಂಬಾ ಪರಿಣಾಮಕಾರಿ. ಶೀತ ಅಥವಾ ಕೆಮ್ಮು ಕಾಣಿಸಿಕೊಂಡಾಗ ಶುಂಠಿ ಚಹಾವನ್ನು ಕುಡಿಯುತ್ತೇವೆ. ಟೀ ಬ್ಯಾಗ್ ಅಥವಾ ಚಹಾಗೆ ಶುಂಠಿಯನ್ನು ಹಾಕಿ ಕುಡಿಯಬೇಕಾಗುತ್ತದೆ. ಆದರೆ ಶುಂಠಿಯ ಹುಡಿಯನ್ನು ಮಾಡಿ ಅದನ್ನು ಒಂದು ಡಬ್ಬದಲ್ಲಿ ಹಾಕಿಕೊಂಡು ಇಟ್ಟರೆ ಬೇಕಾದಾಗ ಶುಂಠಿ ಚಹಾ ಮಾಡಿಕೊಂಡು ಕುಡಿಯಬಹುದು. ಶುಂಠಿ ಚಹಾ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ.

ಒಂದು ಒಳ್ಳೆಯ ಮಿಕ್ಸಿ ಇದ್ದರೆ ಶುಂಠಿಯ ಹುಡಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಪದೇ ಪದೇ ಶುಂಠಿಯನ್ನು ತುಂಡು ಮಾಡಿಕೊಂಡು ಚಹಾಗೆ ಹಾಕಬೇಕೆಂದಿಲ್ಲ. ಶುಂಠಿಯನ್ನು ಹುಡಿ (ಶುಂಠಿಯ ಪೌಡರ್) ಮಾಡಿಟ್ಟುಕೊಳ್ಳುವ ಮೊದಲು ಇದನ್ನು ಸರಿಯಾಗಿ ಒಣಗಿಸಬೇಕು. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಶುಂಠಿಯ ತುಂಡುಗಳನ್ನು ಮಾಡಿಕೊಂಡು ಅದನ್ನು ಬಿಸಿಲಿಗೆ ಒಣಗಿಸಲು ಹಾಕಿ. ಈ ಹುಡಿಯು ಸುಮಾರು 12 ವಾರಗಳ ತನಕ ಬಾಳಿಕೆ ಬರುವುದು. ಶುಂಠಿ ಹುಡಿಯನ್ನು ಹಾಕಿಡುವ ಡಬ್ಬದ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಡಿ. ಈ ಹುಡಿಯನ್ನು ಅಡುಗೆ ಮನೆಯಲ್ಲಿ ಇಟ್ಟುಕೊಂಡು ನಿಮಗೆ ಬೇಕೆಂದಾಗ ಚಹಾ ಮಾಡಿಕೊಳ್ಳಬಹುದು. ಶುಂಠಿ ಹುಡಿಯನ್ನು ಮಾಡುವಂತಹ ವಿಧಾನಗಳು....   

ಶುಂಠಿಯ ಸಿಪ್ಪೆ ತೆಗೆಯಿರಿ

ಶುಂಠಿಯ ಸಿಪ್ಪೆ ತೆಗೆಯಿರಿ

ಶುಂಠಿಯನ್ನು ತೆಗೆದು ಅದನ್ನು ಸರಿಯಾಗಿ ತೊಳೆದುಕೊಳ್ಳಿ. ತೆಳುವಾದ ಚಾಕು ಬಳಸಿಕೊಂಡು ಶುಂಠಿಯ ಸಿಪ್ಪೆ ತೆಗೆಯಿರಿ.

ತೆಳುವಾಗಿ ಕತ್ತರಿಸಿಕೊಳ್ಳಿ....

ತೆಳುವಾಗಿ ಕತ್ತರಿಸಿಕೊಳ್ಳಿ....

ಸಿಪ್ಪೆ ತೆಗೆದ ಬಳಿಕ ಅದನ್ನು ತುಂಬಾ ತೆಳುವಾಗಿ ಕತ್ತರಿಸಿಕೊಳ್ಳಿ. ಇದರಿಂದ ಶುಂಠಿ ಬೇಗನೆ ಒಣಗುವುದು. ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡರೆ ಅದನ್ನು ಹುಡಿ ಮಾಡಿಕೊಳ್ಳುವುದು ತುಂಬಾ ಸುಲಭ.

ಒಣಗಿಸಿ

ಒಣಗಿಸಿ

ಒಣಗಿಸುವಂತಹ ಯಂತ್ರವಿದ್ದರೆ ಅದರಲ್ಲಿ ಒಣಗಿಸಿಕೊಳ್ಳಿ. ಈ ಸೌಲಭ್ಯ ನಿಮ್ಮಲ್ಲಿ ಇಲ್ಲವಾದರೆ ನೈಸರ್ಗಿಕವಾಗಿ ಸಿಗುವಂತಹ ಸೂರ್ಯನ ಬಿಸಿಲಿನಲ್ಲಿ ಹಾಕಿ ಒಣಗಿಸಿ. ಎರಡೂ ಬದಿಯೂ ಸರಿಯಾಗಿ ಒಣಗುವಂತೆ ನೋಡಿಕೊಳ್ಳಿ.

ರುಬ್ಬುವ ಸಮಯ

ರುಬ್ಬುವ ಸಮಯ

ಶುಂಠಿಯ ತುಂಡುಗಳು ಸರಿಯಾಗಿ ಒಣಗಿದ ಬಳಿಕ ಅದನ್ನು ಮಿಕ್ಸಿಗೆ ಹಾಕಿಕೊಂಡು ಸರಿಯಾಗಿ ರುಬ್ಬಿಕೊಳ್ಳಿ. ಸರಿಯಾಗಿ ಹುಡಿಯಾಗುವ ತನಕ ರುಬ್ಬಿ. ಸಣ್ಣ ಸಣ್ಣ ತುಂಡುಗಳಿದ್ದರೆ ತೆಗೆದು ಈಗ ಇದನ್ನು ಫ್ರೀಜರ್ ನಲ್ಲಿ ಕೆಲವು ಗಂಟೆ ಇಡಿ.

ಡಬ್ಬದಲ್ಲಿ ಹಾಕಿಡಿ

ಡಬ್ಬದಲ್ಲಿ ಹಾಕಿಡಿ

ಎಲ್ಲವೂ ಆದ ಬಳಿಕ ಇದನ್ನು ಒಂದು ಡಬ್ಬದಲ್ಲಿ ಹಾಕಿಕೊಂಡು ಸರಿಯಾಗಿ ಮುಚ್ಚಳ ಮುಚ್ಚಿಡಿ. ಇದನ್ನು ಫ್ರಿಡ್ಜ್ ನಲ್ಲಿ ಇಡಬೇಕೆಂದಿಲ್ಲ. ಅಡುಗೆ ಮನೆಯಲ್ಲಿ ತಂಪಾದ ಸ್ಥಳದಲ್ಲಿಡಿ.

 
English summary

Make Ginger Powder In Your Own Home

Regardless of nausea, pain in joints or indigestion, you can always have ginger tea for relief. It is effective and great for many health issues. Tea bags or powder it is good either way. Did you know it is easy to make such powder at home? Just get a container and make some ginger tea anytime you feel like it – for stuffy nose, harsh PMS, ginger tea resolves everything and has NO side effects!
Please Wait while comments are loading...
Subscribe Newsletter