For Quick Alerts
ALLOW NOTIFICATIONS  
For Daily Alerts

ಇಂತಹ ಸರಳ ಟಿಪ್ಸ್ ಅನುಸರಿಸಿ, ಅಸ್ತಮಾದಿಂದ ದೂರವಿರಿ!

By Hemanth
|

ಅಸ್ತಮಾ ಎಂದರೇನು? ಸಾಮಾನ್ಯವಾಗಿ ಇದೊಂದು ಉಸಿರಾಟದ ಸ್ಥಿತಿ ಎನ್ನಬಹುದಾಗಿದೆ. ನಿಮ್ಮ ವಾಯುನಾಳಗಳು ಕಿರಿದುಗೊಂಡು ಉಬ್ಬಸ ಹಾಗೂ ಉಸಿರಾಡಲು ಕಷ್ಟಪಡಬೇಕಾದ ಸ್ಥಿತಿಗೆ ಅಸ್ತಮಾ ಎನ್ನಲಾಗುತ್ತದೆ. ಇದನ್ನು ಸಾಮಾನ್ಯವೆಂದು ಪರಿಗಣಿಸಿದರೂ ಇತ್ತೀಚಿನ ದಿನಗಳಲ್ಲಿ ಇದು ಪ್ರಾಣಕ್ಕೆ ಸಂಚಕಾರವನ್ನು ಉಂಟುಮಾಡುತ್ತಿದೆ. ಈ ಸಮಸ್ಯೆಗಳು ಅಸ್ತಮಾಕ್ಕೆ ತಿರುಗಬಹುದು ಜಾಗ್ರತೆ!

ಅಸ್ತಮಾ ಇರುವ ವ್ಯಕ್ತಿಗಳಿಗೆ ಹೆಚ್ಚಾಗಿ ವಾತಾವರಣದಲ್ಲಿನ ಮಾಲಿನ್ಯ ಪ್ರಮುಖ ಸಮಸ್ಯೆಯಾಗುತ್ತಿದೆ. ಕಫ ಹಾಗೂ ಇತರ ಕೆಲವೊಂದು ವಸ್ತುಗಳು ವಾಯುನಾಳವನ್ನು ಕಿರಿದು ಮಾಡಿ ಉಸಿರಾಟದ ತೊಂದರೆ ಉಂಟುಮಾಡುವುದು. ತನಗೆ ಯಾವ ವಸ್ತುಗಳಿಂದ ತೊಂದರೆಯಾಗುತ್ತದೆ ಎನ್ನುವುದನ್ನು ಅರಿತುಕೊಂಡು ಅದನ್ನು ಕಡೆಗಣಿಸಲು ಪ್ರಯತ್ನಿಸಿದರೆ ಅಸ್ತಮಾವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇಲ್ಲವಾದಲ್ಲಿ ಅಸ್ತಮಾ ಪ್ರಾಣಹಾನಿ ಉಂಟುಮಾಡಬಹುದು. ಅಸ್ತಮಾ ನಿವಾರಿಸುವ ಮನೆಮದ್ದನ್ನು ನೀವೂ ಟ್ರೈ ಮಾಡಿ

ಇಂತಹ ಸಂದರ್ಭದಲ್ಲಿ ನಾವು ಅಸ್ತಮಾಗೆ ಪ್ರಮುಖ ಕಾರಣಗಳೇನು ಎನ್ನುವುದನ್ನು ಮೊದಲು ತಿಳಿದುಕೊಂಡರೆ ಅದನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ನಿಮಗೆ ಉಸಿರಾಟದ ತೊಂದರೆ, ಎದೆಯಲ್ಲಿ ಶ್ವಾಸಕಟ್ಟಿದಂತಾಗುವುದು, ಉಬ್ಬಸ ಮತ್ತು ಕಫ ಇದ್ದರೆ ನೀವು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಯಾವ ಕಾರಣಗಳಿಂದಾಗಿ ಇದು ನಿಮ್ಮನ್ನು ಕಾಡುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಿ. ಅಸ್ತಮಾ ಬರುವ ಪ್ರಮುಖ ಕಾರಣಗಳನ್ನು ನೀಡಲಾಗಿದೆ. ಇದರಿಂದ ಆದಷ್ಟು ದೂರವಿರಿ.

ಧೂಳು

ಧೂಳು

ಧೂಳಿನಲ್ಲಿ ಅಲರ್ಜಿಯನ್ನು ಉಂಟುಮಾಡುವ ಗುಣಗಳು ಇರುವ ಕಾರಣದಿಂದಾಗಿ ಇದು ಅಸ್ತಮಾ ರೋಗಿಗಳಿಗೆ ಅಪಾಯಕಾರಿ. ಇದರಿಂದ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ ಮತ್ತು ಮಲಗುವ ಕೋಣೆಯಲ್ಲಿ ಧೂಳು ಬರದಂತೆ ನೋಡಿಕೊಳ್ಳಿ. ಕೋಣೆಯ ಪ್ರತಿಯೊಂದು ಮೂಲೆಗಳನ್ನು ವ್ಯಾಕ್ಯೂಮ್ ಮಾಡುವುದರಿಂದ ಧೂಳು ಬರದಂತೆ ನೋಡಿಕೊಳ್ಳಬಹುದು. ಮಕ್ಕಳಲ್ಲಿ ಇರುವ ಕಫ ಅಸ್ತಮಾದ ಲಕ್ಷಣವೇ ಎಂದು ತಿಳಿದುಕೊಳ್ಳಿ.

ಅಡುಗೆ ಮನೆಯ ಹೊಗೆ ಹಾಗೂ ಘಾಟು

ಅಡುಗೆ ಮನೆಯ ಹೊಗೆ ಹಾಗೂ ಘಾಟು

ಅಸ್ತಮಾ ಇರುವ ವ್ಯಕ್ತಿಗಳು ಮನೆಯಲ್ಲಿ ಇದ್ದರೆ ಅವರನ್ನು ಅಡುಗೆ ಕೋಣೆಯ ಹೊಗೆ ಮತ್ತು ಘಾಟಿನಿಂದ ದೂರವಿಡಬೇಕು. ಅಡುಗೆಕೋಣೆಗೆ ಸರಿಯಾದ ಗಾಳಿ ಬರುವಂತೆ ನೋಡಿಕೊಳ್ಳಿ. ಸರಿಯಾದ ಎಕ್ಸಾಟ್ ಫ್ಯಾನ್ ಅಥವಾ ಚಿಮಿನಿ ಲಭ್ಯವಿಲ್ಲದಿದ್ದರೆ ಅಡುಗೆ ಮನೆಯಲ್ಲಿ ಕಿಟಕಿ ಇರುವಂತೆ ನೋಡಿಕೊಳ್ಳಿ.

ಧೂಮಪಾನ

ಧೂಮಪಾನ

ಸಿಗರೇಟಿನಲ್ಲಿರುವ ವಿವಿಧ ರೀತಿಯ ರಾಸಾಯನಿಕ ಮತ್ತು ಗ್ಯಾಸ್ ಶ್ವಾಸಕೋಶಕ್ಕೆ ಕಿರಿಕಿರಿ ಉಂಟುಮಾಡುತ್ತದೆ. ಧೂಮಪಾನದಿಂದ ನಿಮಗೆ ಅಸ್ತಮಾ ಬರುವ ಸಾಧ್ಯತೆ ಹೆಚ್ಚು ಮಾತ್ರವಲ್ಲದೆ ಉಸಿರಾಟದ ತೊಂದರೆ ಹಾಗೂ ಕಫ ನಿಮ್ಮನ್ನು ಕಾಡುವುದು. ಗರ್ಭಿಣಿ ಮಹಿಳೆಯರು ಧೂಮಪಾನ ಮಾಡಿದರೆ ಶ್ವಾಸಕೋಶದ ಚಟುವಟಿಕೆ ಕಡಿಮೆಯಾಗಿ ಶಿಶುವಿನ ಉಸಿರಾಟಕ್ಕೆ ತೊಂದರೆಯಾಗುವುದು.

ತೀವ್ರ ಹವಾಮಾನ

ತೀವ್ರ ಹವಾಮಾನ

ಅತಿಯಾದ ಬಿಸಿಲು ಮತ್ತು ಸೆಕೆ, ಅತಿಯಾದ ಚಳಿ ಅಸ್ತಮಾವನ್ನು ಹೆಚ್ಚಿಸುವಂತೆ ಮಾಡುತ್ತದೆ. ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲದೆ ಇರುವ ಕಾರಣ ಅಸ್ತಮಾ ರೋಗಿಗಳು ಹವಾಮಾನ ಬದಲಾವಣೆಗೆ ಹೆಚ್ಚು ಮೈಯೊಡ್ಡಬಾರದು. ಚಳಿಗಾಲದಲ್ಲಿ ಅಸ್ತಮಾ ಉಲ್ಬಣಗೊಳ್ಳುವುದು ಹೆಚ್ಚು.

ಆಹಾರದ ಅಲರ್ಜಿ

ಆಹಾರದ ಅಲರ್ಜಿ

ಅಲರ್ಜಿಯನ್ನು ಉಂಟುಮಾಡುವಂತಹ ಕೆಲವೊಂದು ಆಹಾರಗಳೆಂದರೆ ಮೊಟ್ಟೆ, ಹಸುವಿನ ಹಾಲು, ನೆಲಗಡಲೆ, ಸೋಯಾ, ಗೋಧಿ, ಮೀನು, ಸಿಗಡಿ ಇತ್ಯಾದಿ. ಆಹಾರಗಳನ್ನು ಸಂಸ್ಕರಿಸಿ ಇಡುವಂತಹ ಸೋಡಿಯಂ ಬಯೋಸಲ್ಫೆಟ್, ಪೊಟಾಶಿಯಂ ಬಯೋಸಲ್ಪೆಟ್, ಸೋಡಿಯಂ ಮೆಟಬಯೋಸಲ್ಫೆಟ್,ಪೊಟಾಶಿಯಂ ಮೆಟಾಬಯೋಸಲ್ಫೆಟ್ ಮತ್ತು ಸೋಡಿಯಂ ಸಲ್ಪೆಟ್ ನಿಂದ ಅಸ್ತಮಾ ಉಲ್ಬಣಗೊಳ್ಳಬಹುದು.

English summary

How to prevent asthma attacks naturally?

What's asthma? Well, it is a breathing condition. When your airways narrow down and cause breathing issues like wheezing and difficulty in breathing, it could be asthma. Yes, it could also be a life threatening condition. Sometimes, mucus or other secretions could clog those airways and may lead to suffocation.
Story first published: Tuesday, May 3, 2016, 15:08 [IST]
X
Desktop Bottom Promotion