For Quick Alerts
ALLOW NOTIFICATIONS  
For Daily Alerts

ಬೆನ್ನೇರಿ ಕಾಡುವ ಅಸಿಡಿಟಿಗೆ ಪವರ್ ಫುಲ್ ಮನೆಮದ್ದು

By Manu
|

ಇಲ್ಲ, ನಾನು ಅದನ್ನು ತಿನ್ನಲ್ಲ, ಅದರಿಂದ ನನಗೆ ಅಸಿಡಿಟಿ ಆಗುತ್ತದೆ. ಇದು ಮನೆಗೆ ಬರುವ ನೆಂಟರಿಂದ ಅಥವಾ ಯಾವುದೇ ಕಾರ್ಯಕ್ರಮದಲ್ಲಿ ಕೇಳಿಬರುವಂತಹ ಮಾತು. ಯಾಕೆಂದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅಸಿಡಿಟಿ ಸಮಸ್ಯೆ ಎನ್ನುವುದು ಸಾಮಾನ್ಯವಾಗಿದೆ. ಅಸಿಡಿಟಿ ನಿವಾರಿಸಲು 10 ಅತ್ಯುತ್ತಮ ಮನೆಮದ್ದುಗಳು

ನಮ್ಮ ಜೀವನಶೈಲಿಯಿಂದಾಗಿಯೇ ಅಸಿಡಿಟಿ ಎನ್ನುವ ಶಬ್ದವನ್ನು ನಾವು ದಿನನಿತ್ಯವೂ ಕೇಳುವಂತಾಗಿದೆ. ಸೇವಿಸುವ ಅನಾರೋಗ್ಯಕರ ಆಹಾರ, ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು, ನಿದ್ರೆಯ ಕೊರತೆ ಮುಂತಾದವುಗಳು ಅಸಿಡಿಟಿಗೆ ಕಾರಣವೆನ್ನಬಹುದು. ಖಾರವಾದ ಪದಾರ್ಥಗಳನ್ನು ತಿನ್ನುವುದರಿಂದ ಅಸಿಡಿಟಿ ಕಾಡುತ್ತದೆ. ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು

ಪ್ರತಿಯೊಬ್ಬರಿಗೂ ಇದರ ಅನುಭವ ಆಗಿಯೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನಾವು ತಕ್ಷಣ ಆಸಿಡಿಟಿಗೆ ಇರುವಂತಹ ಮದ್ದನ್ನು ತೆಗೆದುಕೊಳ್ಳುತ್ತೇವೆ. ಆದರೆ ಮನೆಮದ್ದನ್ನು ಬಳಸಿದರೆ ಅದು ಅಸಿಡಿಟಿ ನಿವಾರಣೆ ಮಾಡಿ ನಿಮ್ಮ ಆರೋಗ್ಯವನ್ನು ಚೆನ್ನಾಗಿಡುತ್ತದೆ. ಅಸಿಡಿಟಿ ಹೋಗಲಾಡಿಸಲು ಇರುವಂತಹ ಕೆಲವೊಂದು ಮನೆಮದ್ದನ್ನು ಬಳಸಿಕೊಳ್ಳುವುದು ಹೇಗೆಂದು ಈ ಲೇಖನದಲ್ಲಿ ತಿಳಿಯಿರಿ.

ಏಲಕ್ಕಿ

ಏಲಕ್ಕಿ

ಆಯುರ್ವೇದದಲ್ಲಿ ಹಿಂದಿನಿಂದಲೂ ಏಲಕ್ಕಿಯನ್ನು ಅಸಿಡಿಟಿಗೆ ಮದ್ದಾಗಿ ಬಳಸಿಕೊಂಡು ಬಂದಿದ್ದಾರೆ. ಏಲಕ್ಕಿಯಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ. ಏಲಕ್ಕಿ ನೋಡಲು ಚಿಕ್ಕದಾದರೂ ಅದರ ಕೆಲಸ ಮಾತ್ರ ದೊಡ್ಡದಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಸೆಳೆತ ತಗ್ಗಿಸುವುದು. ಇದು ಹೊಟ್ಟೆಯಲ್ಲಿ ಲೋಳೆಯ ಒಳಪದರವನ್ನು ಸರಿಪಡಿಸಿ ಹೆಚ್ಚುವರಿ ಆಮ್ಲವು ಉತ್ಪಾದನೆಯಾಗದಂತೆ ನೋಡಿಕೊಳ್ಳುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಏಲಕ್ಕಿ

ಏಲಕ್ಕಿ

ಅಸಿಡಿಟಿಯಿಂದ ಉಂಟಾಗುವ ಉರಿಯನ್ನು ಇದು ಕಡಿಮೆ ಮಾಡುವುದು. ಅಸಿಡಿಟಿಯಿಂದ ತಕ್ಷಣ ಪರಿಹಾರ ಬೇಕೆಂದರೆ ಎರಡು ಏಲಕ್ಕಿಯನ್ನು(ಸಿಪ್ಪೆ ಸಹಿತ ಅಥವಾ ರಹಿತ) ಹುಡಿ ಮಾಡಿ ನೀರಿಗೆ ಹಾಕಿ ಕುದಿಸಿ. ತಣ್ಣಗಾದ ಬಳಿಕ ನೀರನ್ನು ಕುಡಿದರೆ ಅಸಿಡಿಟಿ ನಿವಾರಣೆಯಾಗುವುದು.

ಶುಂಠಿ

ಶುಂಠಿ

ಭಾರತೀಯ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವಂತಹ ಶುಂಠಿಯು ತನ್ನಲ್ಲಿರುವ ಕೆಲವೊಂದು ಪೋಷಕಾಂಶಗಳಿಂದ ಹೀರಿಕೊಳ್ಳುವಿಕೆಯನ್ನು ವೃದ್ಧಿಸಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆಹಾರದಲ್ಲಿರುವ ಪ್ರೋಟೀನ್ ಅನ್ನು ಇದು ಛೇದಿಸುತ್ತದೆ. ಶುಂಠಿಯು ಹೊಟ್ಟೆಯಲ್ಲಿ ಲೋಳೆಯ ಸ್ರವಿಸುವಿಕೆಗೆ ಉತ್ತೇಜನ ನೀಡಿ ಆಮ್ಲದ ಉತ್ಪತ್ತಿಯನ್ನು ಕಡಿಮೆ ಮಾಡಿಕೊಂಡು ಅಲ್ಸರ್ ಬರದಂತೆ ತಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶುಂಠಿ

ಶುಂಠಿ

ಅಸಿಡಿಟಿಯಾದಾಗ ಒಂದು ತುಂಡು ಶುಂಠಿಯನ್ನು ಜಗಿಯಿರಿ ಅಥವಾ ಸ್ವಲ್ಪ ನೀರಿಗೆ ಜಜ್ಜಿದ ಶುಂಠಿಯನ್ನು ಹಾಕಿ ಕುದಿಸಿ ಅದರ ನೀರನ್ನು ಕುಡಿಯಿರಿ. ಅಸಿಡಿಟಿ ಹೋಗಲಾಡಿಸಲು ಮತ್ತೊಂದು ವಿಧಾನವೆಂದರೆ ಶುಂಠಿಯನ್ನು ಜಜ್ಜಿಕೊಂಡು ಬೆಲ್ಲದ ತುಂಡಿನೊಂದಿಗೆ ಅದನ್ನು ಬಾಯಿಯೊಳಗೆ ಇಟ್ಟರೆ ಅದರ ರಸವು ನಿಧಾನವಾಗಿ ಹೊಟ್ಟೆಯೊಳಗೆ ಹೋಗುತ್ತಾ ಇರುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ಪೂಜ್ಯನೀಯ ಗಿಡವಾಗಿರುವ ತುಳಸಿಯಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ. ತುಳಸಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹೊಟ್ಟೆಯಲ್ಲಿ ಹೆಚ್ಚು ಲೋಳೆ ಉತ್ಪತ್ತಿಗೆ ಪ್ರೇರೇಪಿಸುವುದು. ಇದರಲ್ಲಿ ಅಲ್ಸರ್ ಅನ್ನು ತಡೆಯುವ ಗುಣವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತುಳಸಿ ಎಲೆಗಳು

ತುಳಸಿ ಎಲೆಗಳು

ಅತಿಯಾದ ಆಮ್ಲವು ಉತ್ಪತ್ತಿಯಾಗುವುದನ್ನು ತಡೆಯಲು ಇದು ಪೆಪ್ಟಿಕ್ ಆಮ್ಲದ ಪರಿಣಾಮವನ್ನು ತಗ್ಗಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದನ್ನು ಇದು ತಡೆಯುತ್ತದೆ. ಊಟದ ಬಳಿಕ ಐದಾರು ತುಳಸಿ ಎಲೆಗಳನ್ನು ಜಗಿದರೆ ಅದು ಜೀರ್ಣಕ್ರಿಯೆಗೆ ಒಳ್ಳೆಯದು.

ಜೀರಿಗೆ

ಜೀರಿಗೆ

ಜೀರಿಗೆಯಲ್ಲಿ ಪ್ರಮುಖ ಗುಣವೆಂದರೆ ಇದು ಲಾಲಾರಸದ ಉತ್ಪತ್ತಿಯನ್ನು ವೃದ್ಧಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಜೀರಿಗೆಯು ಚಯಾಪಚಾಯ ಕ್ರಿಯೆಯನ್ನು ಹೆಚ್ಚಿಸಿ ಗ್ಯಾಸ್ ಮತ್ತು ಗ್ಯಾಸ್ ಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀರಿಗೆ

ಜೀರಿಗೆ

ಕಿರಿಕಿರಿ ಉಂಟುಮಾಡುವ ಹೊಟ್ಟೆಯ ನರಗಳನ್ನು ಇದು ಶಾಂತಗೊಳಿಸುತ್ತದೆ ಮತ್ತು ಆಮ್ಲ ಸ್ರವಿಸುವಿಕೆಯಿಂದ ಉಂಟಾಗಿರುವ ಅಲ್ಸರ್‌ನ್ನು ಇದು ಶಮನ ಮಾಡುವುದು. ಜೀರಿಗೆಯನ್ನು ಹಾಗೆ ಜಗಿಯಬಹುದು ಅಥವಾ ನೀರಿಗೆ ಹಾಕಿ ಕುದಿಸಿ ತಂಪಾದ ಬಳಿಕ ಆ ನೀರನ್ನು ಕುಡಿಯಬೇಕು.

English summary

Home remedies for acidity that really work!

Whatever the reason may be, acidity can be quite an uncomfortable experience, and sometimes we are left with no option but to reach out for that bottle of antacid. But, did you know that there are alternative, natural remedies that work just as well and don’t leave you with the ill-effects of too much medication?
X
Desktop Bottom Promotion