For Quick Alerts
ALLOW NOTIFICATIONS  
For Daily Alerts

ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು

By Deepak
|

ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಸಿಡಿಟಿ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಈ ಸಮಸ್ಯೆಯು ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತಿರುತ್ತದೆ. ಆದರೆ ಇಷ್ಟಕ್ಕು ಅಸಿಡಿಟಿ ಏಕೆ ಕಂಡು ಬರುತ್ತದೆ?

ಸಾಮಾನ್ಯವಾಗಿ ಯಾವುದಾದರು ಅಜೀರ್ಣ ಸಮಸ್ಯೆಯು ಜೀರ್ಣ ಮಾಡುವ ಆಸಿಡ್‌ಗಳಲ್ಲಿ ಅಸಮತೋಲನವನ್ನುಂಟು ಮಾಡಿದಾಗ ನಿಮಗೆ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಆಗ ಇದರಿಂದ ಮುಕ್ತಿ ಪಡೆಯಲು ನೀವು ಕೆಲವೊಂದು ಆಂಟಾಸಿಡ್‌ಗಳ ನೆರವನ್ನು ಪಡೆಯಬೇಕಾಗುತ್ತದೆ. ಆದರೆ ಇದೇ ಸಮಯದಲ್ಲಿ ನೀವು ಮನೆಯಲ್ಲಿಯೇ ದೊರೆಯುವ ಮನೆ ಮದ್ದುಗಳ ನೆರವಿನಿಂದ ಸಹ ಅಸಿಡಿಟಿಯಿಂದ ಮುಕ್ತಿ ಪಡೆಯಬಹುದು.

ಬನ್ನಿ ಈ ಅಸಿಡಿಟಿ ಸಮಸ್ಯೆಯು ನಿಮಗೆ ಯಾವೆಲ್ಲ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ನೋಡೋಣ. ಇದು ಎದೆ ಉರಿ, ತಲೆ ನೋವು, ಹೊಟ್ಟೆ ನೋವು, ಉಸಿರಿನ ದುರ್ಗಂಧ, ಹುಳಿ ತೇಗು, ನಾಸಿಯಾ ಇತ್ಯಾದಿ ಸಮಸ್ಯೆಗಳನ್ನುಂಟು ಮಾಡುತ್ತದೆ. ಸ್ವಲ್ಪ ಪ್ರಮಾಣದ ಅಸಿಡಿಟಿ ಕಂಡು ಬಂದರೆ ಸಮಸ್ಯೆಯಿಲ್ಲ. ಆದರೆ ನಿರಂತರವಾಗಿ ನಿಮಗೆ ಈ ಸಮಸ್ಯೆ ಮರುಕಳಿಸುತ್ತಿದ್ದಲಿ, ಇದರ ಕುರಿತು ನೀವು ಜಾಗರೂಕರಾಗಬೇಕು. ಅಸಿಡಿಟಿ ಸಮಸ್ಯೆಗೆ 8 ಉತ್ತಮ ಪರಿಹಾರ

ನಮಗೆ ಅಸಿಡಿಟಿ ಬರಲು ಹಲವಾರು ಕಾರಣಗಳು ಇವೆ. ಸಾಮಾನ್ಯವಾಗಿ ಮಸಾಲೆ ಪದಾರ್ಥಗಳನ್ನು ಸೇವಿಸಿದರೆ, ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ, ವ್ಯಾಯಾಮದ ಕೊರತೆ, ಆಲ್ಕೋಹಾಲ್ ಸೇವನೆ ಮುಂತಾದವುಗಳಿಂದ ಅಸಿಡಿಟಿ ಸಮಸ್ಯೆ ಬರುತ್ತದೆ. ಕೆಲವೊಮ್ಮೆ ನಿರ್ದಿಷ್ಟ ಆಹಾರಗಳಿಂದಾಗಿ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಉದಾಹರಣೆಗೆ ಸೌತೆಕಾಯಿ, ಇದು ಜೀರ್ಣಮಾಡಿಕೊಳ್ಳಲು ಉಪಕಾರಿ, ಆದರೆ ಅಸಿಡಿಟಿ ಇದ್ದಲ್ಲಿ, ಇದನ್ನು ಸೇವಿಸಬೇಡಿ.

ಈ ಸಮಸ್ಯೆಗಳನ್ನು ಕೆಲವೊಂದು ಔಷಧಗಳ ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಆದರೆ ಅದರ ಮೇಲೆಯೇ ಅವಲಂಬನೆಗೊಳ್ಳುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಇದನ್ನು ನಿವಾರಿಸಿಕೊಳ್ಳಲು ಮನೆಯಲ್ಲಿಯೇ ದೊರೆಯುವ ಶೀಘ್ರ ಉಪಶಮನಗಳನ್ನು ಪ್ರಯತ್ನಿಸಿ ನೋಡಿ, ಆಗ ಅದರಿಂದ ನಿಮ್ಮ ಸಮಸ್ಯೆ ದೂರಾಗುತ್ತದೆ. ಜೊತೆಗೆ ನಿಮಗೆ ಇದರಿಂದ ಯಾವುದೇ ಅಡ್ಡಪರಿಣಾಮಗಳು ಸಹ ಉಂಟಾಗುವುದಿಲ್ಲ. ಬನ್ನಿ ಆ ಪರಿಹಾರೋಪಾಯಗಳು ಯಾವುವು ಎಂದು ನೋಡೋಣ:

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ಅಸಿಡಿಟಿಗೆ ಶೀಘ್ರ ಉಪಶಮನವನ್ನು ನೀಡುತ್ತವೆ. ತುಳಸಿ ಎಲೆಗಳಲ್ಲಿ ಕಾರ್ಮನಿಟೇವ್ ಎಂಬ ಅಂಶಗಳು ಇರುತ್ತವೆ. ಇವು ಅಸಿಡಿಟಿಯನ್ನು ಹೋಗಲಾಡಿಸುವಲ್ಲಿ ಪವಾಡ ಸದೃಶ್ಯವಾಗಿ ಕೆಲಸ ಮಾಡುತ್ತದೆ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದಲ್ಲಿ ಒಂದಷ್ಟು ತುಳಸಿ ಎಲೆಗಳನ್ನು ಅಗಿಯಿರಿ ಸಾಕು.

ಚಕ್ಕೆ

ಚಕ್ಕೆ

ಸಾಂಬಾರು ಪದಾರ್ಥವಾದ ಚಕ್ಕೆಯ ಪ್ರಯೋಜನಗಳು ಹಲವಾರು. ಇದು ಅಸಿಡಿಟಿಯನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮನೆ ಮದ್ದಾಗಿದೆ. ಇತರೆ ಔಷಧಿಗಳನ್ನು ಸೇವಿಸುವ ಬದಲಿಗೆ ಚಕ್ಕೆಯಿಂದ ತಯಾರಿಸಿದ ಟೀಯನ್ನು ಸೇವಿಸಿ. ಅಸಿಡಿಟಿಯಿಂದ ಮುಕ್ತರಾಗಿ. ನಿಮಗೆ ಬೇಕಾದಲ್ಲಿ ಚಕ್ಕೆಯ ಪುಡಿಯನ್ನು ನೀವು ತಯಾರಿಸುವ ಖಾದ್ಯಗಳಿಗೆ ಬೆರೆಸಿಕೊಳ್ಳಬಹುದು.

ಜೀರಿಗೆ

ಜೀರಿಗೆ

ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಅಸಿಡಿಟಿಯನ್ನು ನಿವಾರಿಸಿಕೊಳ್ಳಬಹುದು.

ಲವಂಗ

ಲವಂಗ

ಜಠರದಲ್ಲಿ ಕಂಡು ಬರುವ ಅಧಿಕ ಹೈಡ್ರೋಕ್ಲೋರಿಕ್ ಆಮ್ಲದಿಂದಾಗಿ ಅಸಿಡಿಟಿ ಕಂಡು ಬರುತ್ತದೆ. ಹಾಗೆಯೇ ಜಠರದಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಆಸಿಡ್ ಕಡಿಮೆಯಾದರು ಸಹ ಅಸಿಡಿಟಿ ಬರುತ್ತದೆ. ಈ ಆಸಿಡ್‌ಗಳ ಮಟ್ಟವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಲು, ಲವಂಗಗಳು ಸಹಾಯ ಮಾಡುತ್ತವೆ. ಅಸಿಡಿಟಿ ಸಮಸ್ಯೆ ಬಂದಾಗ ಒಂದಷ್ಟು ಲವಂಗಗಳನ್ನು ಜಗಿಯಿರಿ, ಸಾಕು.

ಶುಂಠಿ

ಶುಂಠಿ

ಅಸಿಡಿಟಿ ಬಂದಾಗ ಔಷಧದ ಬಾಕ್ಸ್ ನೋಡುವ ಮೊದಲು ತರಕಾರಿ ಬುಟ್ಟಿಯನ್ನು ನೋಡಿ. ಅಲ್ಲಿ ನಿಮಗೆ ಶುಂಠಿ ಕಾಣಿಸುತ್ತದೆ. ಶುಂಠಿಯನ್ನು ಸಣ್ಣ ಪ್ರಮಾಣದಲ್ಲಿ ಕತ್ತರಿಸಿಕೊಂಡು ಅದನ್ನು ಅಗಿಯಿರಿ. ಇದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.

English summary

Quick Home Remedies For Acidity

These days you won't find a person who has not suffered from the problems of acidity in his life. It is one such problem that creates a lot of other health troubles. But why acidity actually happens? Basically, any digestive problem hampers the balance of the digestive acid and if it becomes excess, you get acidity.
Story first published: Wednesday, May 13, 2015, 18:32 [IST]
X
Desktop Bottom Promotion