For Quick Alerts
ALLOW NOTIFICATIONS  
For Daily Alerts

ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ ಸಾಕು

By Deepu
|

ಸಾಸಿವೆ, ಮೆಣಸು, ಜೀರಿಗೆ, ಧನಿಯಾ, ಚಕ್ಕೆ, ಲವಂಗ, ಏಲಕ್ಕಿ ಈ ಮಸಾಲೆ ಪದಾರ್ಥಗಳಿಲ್ಲದ ಯಾವುದಾದರು ಭಾರತೀಯ ಅಡುಗೆ ಮನೆಯುಂಟೆ? ಇವುಗಳೆಲ್ಲವು ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತಹ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಒಂದೆರಡು ಚಿಟಿಕೆಯಷ್ಟು ಇವುಗಳನ್ನು ಆಹಾರದಲ್ಲಿ ಬೆರೆಸಿದರು ಸಾಕು ಆ ಆಹಾರದ ರುಚಿಯು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿಯೂ ಜೀರಿಗೆ

ಈ ಮಸಾಲೆ ಪದಾರ್ಥಗಳಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನವಿದೆ. ಜೀರಿಗೆ ರಸ, ಜೀರಿಗೆ ಕಷಾಯ, ಜೀರಿಗೆ ಚಿತ್ರಾನ್ನ, ಜೀರಿಗೆ ನೀರು, ಜೀರಾ ರೈಸ್ ಇತ್ಯಾದಿ ವಿಶೇಷ ಅಡುಗೆಗಳು ಇದರಿಂದ ತಯಾರಾಗುತ್ತವೆ. ಇದಕ್ಕೆ ಕಾರಣ ಜೀರಿಗೆಯಲ್ಲಿ ಸಿಕ್ಕುವ ವಿಶಿಷ್ಟವಾದ ರುಚಿಯೇ ಆಗಿರುತ್ತದೆ. ಇದರಲ್ಲಿ ರುಚಿಯ ಜೊತೆಗೆ ಆರೋಗ್ಯಕರ ಅಂಶಗಳು ಸಹ ಇವೆ.

ಹೌದು, ಇಂತಹ ಜೀರಿಗೆಯನ್ನು ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದಲು ಸಹ ಬಳಸಲಾಗುತ್ತದೆ. ಅದರಲ್ಲಿ ಶೀತ ಮತ್ತು ಗಂಟಲ ಕೆರೆತ ಹಾಗು ಗಂಟಲು ನೋವಿನಿಂದ ಉಪಶಮನವನ್ನು ಪಡೆಯಲು ಇದನ್ನು ಬಳಸಲಾಗುತ್ತದೆ ಹಾಗಾದರೆ ಯಾವ ಒಂದು ಅಂಶಗಳ ಮೂಲಕ ಜೀರಿಗೆಯು ಈ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ಕುತೂಹಲ ನಿಮಗಿದೆಯಲ್ಲವೇ?

ಹೌದು ಜೀರಿಗೆಯಲ್ಲಿ ಉರಿಯೂತ, ಶಿಲೀಂಧ್ರ ನಿವಾರಕ ಮತ್ತು ಆಂಟಿ-ಬ್ಯಾಕ್ಟೀರಿಯಾ ಅಂಶಗಳು ಇವೆ. ಇದರ ಜೊತೆಗೆ ವಿಟಮಿನ್ ಸಿ, ವಿಟಮಿನ್ ಎ ಮತ್ತು ಕಬ್ಬಿಣಾಂಶ ಸಹ ಜೀರಿಗೆಯಲ್ಲಿದ್ದು, ಇದು ನಿಮಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹೀಗೆ ಇದು ನಿಮ್ಮ ಮೇಲೆ ದಾಳಿ ಮಾಡುವ ಇನ್‌ಫೆಕ್ಷನ್‌ಗಳ ಮೇಲೆ ಹೊರಾಡುತ್ತದೆ. ಒಂದು ವೇಳೆ ನಿಮಗೆ ಶೀತವಿದ್ದಲ್ಲಿ, ಈ ಕೆಳಗೆ ಸೂಚಿಸಿರುವ ಪರಿಹಾರಗಳನ್ನು ಬಳಸಬಹುದು

How jeera can help you get relief from cold

ಸಿದ್ಧಗೊಳಿಸುವ ವಿಧಾನ
*ಎರಡು ಕಪ್ ನೀರಿನಲ್ಲಿ ಒಂದು ಟೇಬಲ್ ಚಮಚ ಜೀರಿಗೆಯನ್ನು ಹಾಕಿಕೊಂಡು ಕುದಿಸಿ.
*ಇದಕ್ಕೆ ಒಂದು ಸಣ್ಣ ತುಂಡು ಶುಂಠಿಯನ್ನು ಹಾಕಿ ಬೇಯಿಸಿ, ಇನ್ನೂ ಒಳ್ಳೆಯದು.
*ಇದು ಬೆಂದ ಮೇಲೆ ಜೀರಿಗೆ ಮತ್ತು ಶುಂಠಿಯ ಎಲ್ಲಾ ಅಂಶಗಳು ಈ ನೀರಿನಲ್ಲಿ ಸೇರಿಸಿಕೊಳ್ಳುತ್ತವೆ. ಇದನ್ನು ಶೋಧಿಸಿಕೊಳ್ಳಿ.
*ಹೀಗೆ ಶೋಧಿಸಿದ ನೀರನ್ನು ನಿಮಗೆ ಶೀತ ಮತ್ತು ಗಂಟಲು ನೋವಿನ ಸಮಸ್ಯೆ ಬಂದಾಗೆಲ್ಲ ಸೇವಿಸಿ.
ಇದನ್ನು ತಯಾರಿಸುವುದು ಸುಲಭ. ಇದು ಕೇವಲ ಶೀತಕ್ಕಷ್ಟೇ ಅಲ್ಲದೆ, ನಿಮ್ಮ ಜೀರ್ಣಕ್ರಿಯೆ, ವಿಸರ್ಜನಾ ಪ್ರಕ್ರಿಯೆ ಸರಾಗವಾಗಿ ಸಾಗುತ್ತದೆ ಮತ್ತು ಇದು ನಿಮ್ಮ ದೇಹದಿಂದ ಟಾಕ್ಸಿನ್‌ಗಳನ್ನು ಹೊರ ಹಾಕಲು ಸಹ ಸಹಾಯ ಮಾಡುತ್ತದೆ.

English summary

How jeera can help you get relief from cold

Jeera or cumin seeds adds a distinct flavour to your dishes and is commonly used in almost every Indian household. However, these little seeds are also packed with a host of other health benefits. They are an excellent home remedy to treat common cold and relive from sore throat.
Story first published: Friday, January 8, 2016, 19:39 [IST]
X
Desktop Bottom Promotion