ಮೈಗ್ರೇನ್ ನೋವಿಗೆ ಅಂತ್ಯ ಹಾಡುವ ಹತ್ತು ಗಿಡಮೂಲಿಕೆಗಳು

By: manu
Subscribe to Boldsky

ನೋವುಗಳಲ್ಲೇ ಅತ್ಯಂತ ತೀಕ್ಷ್ಣವಾಗಿರುವಂತಹದ್ದು ಹೆರಿಗೆ ನೋವಾಗಿದ್ದು ತದನಂತರದ ಸ್ಥಾನ ಮೈಗ್ರೇನ್ ಎಂಬ ತಲೆನೋವಿನದ್ದಾಗಿದೆ. ಇದು ಮನಸ್ಸಿಗೆ ಅಂತೆಯೇ ದೇಹಕ್ಕೂ ನೋವನ್ನು ನೀಡಿ, ಇದನ್ನು ಅನುಭವಿಸುವುದಕ್ಕಿಂತ ಆತ್ಮಹತ್ಯೆಯನ್ನು ಮಾಡಿಕೊಳ್ಳುವುದೇ ಲೇಸು ಎಂಬ ಭಾವನೆಯನ್ನು ಉಂಟುಮಾಡುತ್ತದೆ.   ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು

ಈ ತಲೆನೋವು ಬಂದಾಗ ಇಂದ್ರಿಯಗಳು ತಮ್ಮ ಕ್ಷಮತೆಯನ್ನು ಕಳೆದುಕೊಂಡು, ಇಡಿಯ ದೇಹ ತನ್ನ ಇರುವಿಕೆಯನ್ನು ಮರೆತು ಬಿಡುತ್ತದೆ. ನೋವು ವಿಪರೀತವಾದ ಸಂದರ್ಭದಲ್ಲಂತೂ, ಕಣ್ಣು ನೋಡುವ ದೃಶ್ಯವೇ ಮರೆಯಾಗಿಬಿಡುತ್ತದೆ. ಮೈಗ್ರೇನ್ ಉಪಶಮನಕ್ಕೆ ಮಾರ್ಗಗಳು

ಈ ತಲೆನೋವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಮದ್ದುಗಳು ಇಲ್ಲವಾದರೂ, ಇದರ ಪ್ರಖರತೆಯನ್ನು ಕಡಿಮೆಗೊಳಿಸುವ ಉಪಾಯವಂತೂ ಇದ್ದೇ ಇದೆ. ಈ ತಲೆನೋವು ಆರಂಭವಾಗುತ್ತಿದೆ ಎಂದಾಗ ವೈದ್ಯರು ಸೂಚಿಸಿದ ಔಷಧವನ್ನು ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಳ್ಳುವುದು ವಾಸಿಯಾಗಿದೆ. ಆಯುರ್ವೇದ ಔಷಧಗಳು ಮತ್ತು ಗಿಡಮೂಲಿಕೆಗಳೂ ಕೂಡ ನೋವನ್ನು ಶಮನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಹತ್ತು ಅತ್ಯಮೂಲ್ಯ ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳೋಣ. ಇವುಗಳು ಮೈಗ್ರೇನ್ ನೋವನ್ನು ಕಡಿಮೆ ಮಾಡಿ ನೆಮ್ಮದಿಯನ್ನು ನೀಡಲಿವೆ....  

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಇದು ಸುಮಧುರ ಪರಿಮಳವನ್ನು ಹೊಂದಿರುವುದು ಮಾತ್ರವಲ್ಲದೆ, ಮೈಗ್ರೇನ್ ನೋವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದನ್ನು ಆಘ್ರಾಣಿಸುವುದು ಅಥವಾ ಹಣೆಗೆ ಹಚ್ಚಿಕೊಳ್ಳಬಹುದಾಗಿದೆ.

ರೋಸ್‌ಮೇರಿ

ರೋಸ್‌ಮೇರಿ

ಇದನ್ನು ಒಣಗಿಸಿ, ಹುಡಿ ಮಾಡಿ ಚಹಾದ ರೂಪದಲ್ಲಿ ಸೇವಿಸಬಹುದಾಗಿದೆ. ರೋಸ್‌ಮೇರಿ ಎಣ್ಣೆಯನ್ನು ಆಘ್ರಾಣಿಸುವುದು ಇಲ್ಲವೇ ನೆತ್ತಿಗೆ ಹಚ್ಚಿಕೊಳ್ಳುವುದರಿಂದ ಕೂಡ ಮೈಗ್ರೇನ್ ನೋವು ಶಮನವಾಗಲಿದೆ.

ಪುದೀನಾ

ಪುದೀನಾ

ಚಹಾದ ರೂಪದಲ್ಲಿ ಇಲ್ಲವೇ ಎಣ್ಣೆಯಂತೆ ಹಚ್ಚಿಕೊಳ್ಳಲು ಪುದೀನಾ ಎಲೆಗಳನ್ನು ಬಳಸಿಕೊಳ್ಳಬಹುದಾಗಿದೆ. ಮೈಗ್ರೇನ್ ನೋವನ್ನು ಥಟ್ಟನೆ ಪರಿಹರಿಸಲು ಪುದೀನಾ ಸಹಕಾರಿಯಾಗಿದೆ ಎಂಬುದಾಗಿ ಅಧ್ಯಯನಗಳಿಂದ ತಿಳಿದು ಬಂದಿದೆ. ಪುದೀನಾ ಎಲೆಗಳಿಂದ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ಶುಂಠಿ

ಶುಂಠಿ

ಶುಂಠಿ ಹುಡಿ ಮೈಗ್ರೇನ್ ನೋವನ್ನು ಬುಡದಿಂದ ಕಿತ್ತೊಗೆಯಲು ಸಹಕಾರಿಯಾಗಿದೆ. ಚಹಾದ ರೂಪದಲ್ಲಿ ಕೂಡ ಶುಂಠಿಯನ್ನು ಸೇವಿಸಬಹುದಾಗಿದೆ. ಆಂಟಿ ವೈರಲ್, ಆಂಟಿಫಂಗಲ್, ಸೂಕ್ಷ್ಮವಿರೋಧಿ ಅಂಶಗಳಿಂದ ಹೆಸರುವಾಸಿಯಾಗಿದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಮಲ್ಲಿಗೆ

ಮಲ್ಲಿಗೆ

ಮಲ್ಲಿಗೆ ಎಲೆಗಳು, ದಾಳಿಂಬೆ ಎಲೆಗಳು ಮತ್ತು ಉಪ್ಪನ್ನು ಬೆರೆಸಿಕೊಂಡು ಜ್ಯೂಸ್‌ನಂತೆ ಮಾಡಿ ಸೇವಿಸುವುದರಿಂದ ಮೈಗ್ರೇನ್ ನೋವು ಉಪಶಮನವಾಗಲಿದೆ. ಇದರ ಎಣ್ಣೆಯನ್ನು ಮೂಗಿಗೆ 2-3 ಹನಿಗಳಂತೆ ಮುಂಜಾನೆ ಮತ್ತು ಸಂಜೆ ಬಿಟ್ಟುಕೊಳ್ಳಿ. ಇದು ಮೈಗ್ರೇನ್ ತಲೆನೋವನ್ನು ಶಮನ ಮಾಡಲಿದೆ.

ಕೇಸರಿ

ಕೇಸರಿ

ಚಿಟಿಕೆ ಕೇಸರಿಗೆ ತುಪ್ಪವನ್ನು ಬೆರೆಸಿಕೊಂಡು ಒಂದು ಡ್ರಾಪ್‌ನಂತೆ ಎರಡು ವಾರಗಳಿಗೊಮ್ಮೆ ಮುಂಜಾನೆ ಮೂಗಿಗೆ ಬಿಟ್ಟುಕೊಳ್ಳಿ. ಇದು ನಸ್ಯ ಚಿಕಿತ್ಸೆಯಾಗಿ ಹೆಸರುವಾಸಿಯಾಗಿದೆ. ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ಟಿ ಟ್ರಿ ಆಯಿಲ್

ಟಿ ಟ್ರಿ ಆಯಿಲ್

ಟಿ ಟ್ರಿ ಆಯಿಲ್‌ನಿಂದ ತಲೆಗೆ ಮಸಾಜ್ ಮಾಡಿಕೊಳ್ಳಿ, ಇದು ತಲೆನೋವನ್ನು ಕಡಿಮೆ ಮಾಡಿ ಆರಾಮವನ್ನು ನೀಡುತ್ತದೆ. ನಿಯಮಿತವಾಗಿ ಟಿ ಟ್ರಿ ಆಯಿಲ್‌ನಿಂದ ಮಸಾಜ್ ಮಾಡಿಕೊಳ್ಳುವುದು ಒತ್ತಡದ ನರಗಳನ್ನು ಶಮನ ಮಾಡಿ ಸ್ನಾಯುಗಳನ್ನು ಶಾಂತಗೊಳಿಸಲಿದೆ.

 ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾ

ಮೈಗ್ರೇನ್ ನೋವನ್ನು ಶಮನ ಮಾಡುವಲ್ಲಿ ಕ್ಯಾಮೊಮೈಲ್ ಚಹಾ ಅದ್ಭುತವಾದುದಾಗಿದೆ. ಚಹಾವನ್ನು ಸಿದ್ಧಪಡಿಸಲು ಒಣಗಿದ ಕ್ಯಾಮೊಮೈಲ್ ಎಲೆಗಳನ್ನು ಬಳಸಿ ಚಹಾ ಸಿದ್ಧಪಡಿಸಿ ಮತ್ತು ನೋವಿನಿಂದ ಮುಕ್ತಿ ಸಿಗುವವರೆಗೂ ಚಹಾ ಸೇವಿಸಿ. ಕ್ಯಾಮೊಮೈಲ್ ಚಹಾದ ಸೇವನೆಯಿಂದ ಹತ್ತಾರು ಲಾಭ

ತುಳಸಿ

ತುಳಸಿ

ಪಾಕಶಾಲೆಯಲ್ಲಿ ಮಾತ್ರವಲ್ಲದೆ, ಮೈಗ್ರೇನ್‌ನ ನೋವಿನಿಂದ ಸಂಪೂರ್ಣ ಬಿಡುಗಡೆಯನ್ನು ಪಡೆದುಕೊಳ್ಳಲು ತುಳಸಿ ಎಣ್ಣೆ ಸಹಾಯ ಮಾಡಲಿದೆ. ತಾಜಾ ತುಳಸಿ ಎಲೆಗಳನ್ನು ಜಗಿಯುವುದು ಅಥವಾ ನಿಮ್ಮ ನೆತ್ತಿಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದು ಮಾಡಬಹುದಾಗಿದೆ.

ಪ್ಯಾಸಿನ್ ಫ್ಲವರ್

ಪ್ಯಾಸಿನ್ ಫ್ಲವರ್

ಶಾಂತೊಳಿಸುವ ಗಿಡಮೂಲಿಕೆ ಎಂಬುದಾಗಿ ಇದನ್ನು ಕರೆಯಲಾಗಿದೆ. ರಾತ್ರಿ ಮಲಗುವ ಮುನ್ನ ಈ ಗಿಡಮೂಲಿಕೆಯ ಚಹಾವನ್ನು ಸೇವಿಸುವುದರಿಂದ ಇದು ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಮೈಗ್ರೇನ್ ನೋವನ್ನು ಶೀಘ್ರವಾಗಿ ಪರಿಹರಿಸುತ್ತದೆ.

 
English summary

Herbal Remedies For Migraine

There are several medications available over the counter; however, natural herbal remedies that have been in practice since ancient times are considered to be highly effective in the treatment of migraine. Have a look at these 10 herbal remedies for migraine....
Please Wait while comments are loading...
Subscribe Newsletter