For Quick Alerts
ALLOW NOTIFICATIONS  
For Daily Alerts

ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು

By Manu
|

ಎಲ್ಲಾ ನೋವುಗಳಿಗಿತಲೂ ತಲೆನೋವು ಹೆಚ್ಚು ನಮ್ಮನ್ನು ಕಾಡುತ್ತದೆ. ಅದರಲ್ಲೂ ಮೈಗ್ರೇನ್‌ನಂತಹ ತಲೆನೋವು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡು ಜೀವನವನ್ನೇ ನರಕ ಸದೃಶವನ್ನಾಗಿಸುತ್ತದೆ. ಮೈಗ್ರೇನ್‌ ನೋವು ಎಷ್ಟು ತೀವ್ರವಾಗಿರುತ್ತದೆಂದರೆ ಇದು ಶೀಘ್ರ ಉಪಶಮನವನ್ನು ಕಂಡುಕೊಳ್ಳಲಿ ಎಂಬುದೇ ಇದನ್ನು ಅನುಭವಿಸುತ್ತಿರುವವರು ಹೇಳುವ ಮಾತು.

ಮೈಗ್ರೇನ್‌ ನಿವಾರಣೆಗೆ ನೀವು ಎಷ್ಟು ಮಾತ್ರೆಗಳನ್ನು ತೆಗೆದುಕೊಂಡರೂ ಅದಕ್ಕೆ ಉಪಶಮನ ಕ್ಷಣ ಮಾತ್ರದಲ್ಲಿ ಮಾತ್ರ ದೊರೆಯುತ್ತದೆ. ಮಾತ್ರೆಯ ಸಾಮರ್ಥ್ಯ ಕಡಿಮೆಯಾದಂತೆ ನೋವು ಇಮ್ಮಡಿಯಾಗುತ್ತದೆ. ಇದರ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ ಕೆನ್ನೆ, ಮೂಗು, ಕಣ್ಣುಗಳಲ್ಲಿ ಬಾವು ಕಾಣಿಸಿಕೊಳ್ಳುವುದು, ಮೈ ಬೆಚ್ಚಗಾಗುವುದು, ಕಣ್ಣಿನಲ್ಲಿ ನೀರು ಸೋರುವುದು, ವಾಂತಿ ಮೊದಲಾದ ರೋಗ ಲಕ್ಷಣಗಳು ಮೈಗ್ರೇನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಿದ್ದರೆ ಇದಕ್ಕೆ ಚಿಕಿತ್ಸೆಯೇ ಇಲ್ಲವೇ ಎಂಬ ಸಂದೇಹ ನಿಮ್ಮ ಮನದಲ್ಲಿ ಮೂಡಿದ್ದರೆ ತಲೆ ಮಸಾಜ್ ಮಾಡುವುದೊಂದೇ ಇದಕ್ಕಿರುವ ತ್ವರಿತ ಉಪಶಮನವಾಗಿದೆ.

Unknown Homemade Remedies For Treating Migraine Headache

ನಿಮ್ಮ ತಲೆಯ ಮಸಾಜ್ ಜವಬ್ದಾರಿಯನ್ನು ಇನ್ನೊಬ್ಬ ವ್ಯಕ್ತಿ ತೆಗೆದುಕೊಂಡು ಮೈಗ್ರೇನ್‌ಗೆ ಚಿಕಿತ್ಸೆಯನ್ನು ಮಾಡಬೇಕು. ಮೌನವಾದ ಕೋಣೆಯಲ್ಲಿ ಮಲಗಿಕೊಂಡು ನಿಮ್ಮ ಕೈಬೆರಳುಗಳಿಂದ ಮಸಾಜ್ ಮಾಡಿ. ಸಣ್ಣಗಿನ ಒತ್ತಡದ ಮೂಲಕ ವೃತ್ತಾಕಾರದಲ್ಲಿ ಈ ಮಸಾಜ್ ಕ್ರಿಯೆ ನಡೆಯಲಿ. ನೆತ್ತಿಯ ಭಾಗವನ್ನು ಈ ಮಸಾಜ್ ಕವರ್ ಆಗಲಿ.

ಮೈಗ್ರೇನ್ ನೋವು ನಿವಾರಣೆಗಾಗಿ ನಿಮಗೆ ತ್ವರಿತ ಉಪಶಮವನ್ನು ಈ ತಲೆಯ ಮಸಾಜ್ ನೀಡುತ್ತದೆ. ಬರಿಯ ತಣ್ಣಗಿನ ಸ್ನಾನ ಮಾಡುವುದರ ಜೊತೆಗೆ ತಲೆಯ ಮಸಾಜ್ ಅನ್ನು ನೀವು ಮಾಡಿಕೊಳ್ಳುವುದೂ ಮೈಗ್ರೇನ್‌ಗೆ ಅತ್ಯುತ್ತಮ ಪರಿಹಾರವನ್ನು ಒದಗಿಸುತ್ತದೆ. ಇನ್ನು ಹುಡುಗಿಯರು ತಮ್ಮ ಸ್ನಾನದ ನೀರಿನಲ್ಲಿ ಲ್ಯಾವೆಂಡರ್ ಪರಿಮಳವಿರುವ ಎಣ್ಣೆಯನ್ನು ಸೇರಿಸಿಕೊಂಡು ನಿಮಗೆ ಆರಾಮ ಎನಿಸುವಷ್ಟು ಸಮಯ ತಲೆ ತೊಳೆದುಕೊಳ್ಳಿ. ಇನ್ನು ಈ ಸುಗಂಧದ ಎಣ್ಣೆ ನಿಮಗೆ ಇಷ್ಟವಾಗುವುದಿಲ್ಲ ಎಂದಾದಲ್ಲಿ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ.

ನೋವಿರುವ ಜಾಗದಲ್ಲಿ ಐಸ್ ಕ್ಯೂಬ್ ಇಟ್ಟು ನೋವಿನಿಂದ ಪರಿಹಾರ ಕಂಡುಕೊಳ್ಳುವ ಬಗೆ ನಿಮಗೆ ತಿಳಿದಿರಬಹುದು ಅಲ್ಲವೇ? ಅಂತೆಯೇ ಐಸ್ ಕ್ಯೂಬ್ ಅನ್ನು ಬಳಸಿಕೊಂಡು ಮೈಗ್ರೇನ್ ನೋವಿರುವ ಜಾಗದಲ್ಲಿ ಇರಿಸಿಕೊಳ್ಳಿ ಇದರಿಂದ ತ್ವರಿತ ಉಪಶಮನ ನಿಮಗೆ ದೊರೆಯುತ್ತದೆ. ಐಸ್ ಪ್ಯಾಕ್ ಅನ್ನು ನಿಮ್ಮ ತಲೆಬುರುಡೆಯ ಮೇಲಿರಿಸಿಕೊಳ್ಳಿ. ಇದರಿಂದ ನೋವಿನಿಂದ ಕೊಂಚ ಉಪಶಮನ ನಿಮಗೆ ದೊರೆಯುತ್ತದೆ. ಟವೆಲ್‌ನಿಂದ ಐಸ್‌ಗಳನ್ನು ಸುತ್ತಿ ಕೂಡ ಅದನ್ನು ತಲೆಬುರುಡೆಯ ಮೇಲೆ ಇರಿಸಿಕೊಳ್ಳಬಹುದು.

ಐಸ್ ಕ್ಯೂಬ್ ಅನ್ನು 10 ರಿಂದ 15 ನಿಮಿಷಗಳ ಕಾಲ ತಲೆಬುರುಡೆಯ ಮೇಲೆ ಇರಿಸಿಕೊಳ್ಳಿ. ನೋವು ಕಡಿಮೆಯಾದೊಡನೆ ತೆಗೆಯಿರಿ. ಆಗಾಗ್ಗೆ ಈ ಪ್ರಕ್ರಿಯೆಯನ್ನು ಮಾಡುತ್ತಿರಿ. ಇತರೆ ವೆಚ್ಚದ ಔಷಧಗಳಿಗಿಂತ ಇದು ನೈಸರ್ಗಿಕವಾಗಿದೆ ಮತ್ತು ಕಡಿಮೆ ಖರ್ಚಿನದ್ದಾಗಿದೆ. ಈ ರೀತಿಯ ಮನೆಮದ್ದುಗಳನ್ನು ಅನುಸರಿಸುವುದರ ಮೂಲಕ ಮೈಗ್ರೇನ್‌ನಿಂದ ತ್ವರಿತ ಉಪಶಮನವನ್ನು ಪಡೆದುಕೊಳ್ಳಬಹುದಾಗಿದೆ.

English summary

Unknown Homemade Remedies For Treating Migraine Headache

Homemade treatments for migraine headaches seem to be everywhere. Anybody who endures with these debilitating headaches can understand for sure that if you can find even the smallest bit of relief, you will tend to grab it. So, how you manage it from this stage can mean the differentiation between a day spent in bed in a dark room or living your life pain-free.
X
Desktop Bottom Promotion