For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ಉಪಶಮನಕ್ಕೆ ಮಾರ್ಗಗಳು

By Super
|

ಅಸ್ವಸ್ಥತೆ, ವಾಕರಿಕೆ, ಕಣ್ಣು ಕತ್ತಲೆ ಬಂದಂತಾಗುವುದು, ಕುತ್ತಿಗೆಯ ಕೆಳಭಾಗದಲ್ಲಿ ವಿಪರೀತ ನೋವು ಇಂತಹ ತೊಂದರೆಗಳ ಬಗ್ಗೆ ಕೇಳಿದ್ದೀರಾ ?/ ನೀವೂ ಅನುಭವಿಸಿದ್ದೀರಾ ? ಹೌದು ಇದು ಮೈಗ್ರೇನ್ ನ ಲಕ್ಷಣ. ಮಗ್ರೇನ್ ಸಾಮಾನ್ಯವಾದ ಹಾಗೂ ಆರೋಗ್ಯಕರವಾದ ಜೀವನವನ್ನು ನಡೆಸುವಲ್ಲಿ ಸಾಕಷ್ಟು ಅಡಚಣೆಗಳನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಜೀವನದಲ್ಲಿ ಜಿಗುಪ್ಸೆ ಮುಡಿಸುವಂತಹ ನೋವು ಮಗ್ರೇನ್ ನಿಂದ ಉಂಟಾಗುತ್ತದೆ !

ಮೈಗ್ರೇನ್ ಒಂದು ಗಂಭೀರವಾದ ಸಮಸ್ಯೆ. ಆದರೆ ಈ ಸಮಸ್ಯೆಯೊಂದಿಗೆ ಹೋರಾಡಲು ಕೆಲವು ಸುಲಭವಾದ ವಿಧಾನಗಳೂ ಇವೆ. ಇಲ್ಲಿ ಕೆಲವು ಪರಿಣಾಮಕಾರಿಯಾಗಿ ಮೈಗ್ರೇನ್ ವಿರುದ್ಧ ಹೋರಾಡುವಂತಹ ಕೆಲವು ಮಾರ್ಗೋಪಾಯಗಳು ಇಲ್ಲಿವೆ.

1. ಐಸ್ ಪ್ಯಾಕ್

1. ಐಸ್ ಪ್ಯಾಕ್

1. ಮೈಗ್ರೇನ್ / ತಲೆನೋವು ನಿಮ್ಮನ್ನು ಅತೀ ಹೆಚ್ಚು ಕಾಡುತ್ತಿದ್ದರೆ ನಿಮ್ಮ ತಲೆಯ ಮೇಲ್ಭಾದದಲ್ಲಿ ಒಂದು ಐಸ್ ಪ್ಯಾಕ್ (ಮಂಜುಗಡ್ಡೆ ) ನ್ನು ಇಡಿ. ಹೀಗೆ ಮಾಡುವುದರಿಂದ ತಲೆಯಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಲ್ಲದೆ ನೋವು ಕೂಡ ಕಡಿಮೆಯಾಗುತ್ತದೆ. ಕುತ್ತಿಗೆಯ ಕೆಳಭಾಗ ನೋವಾಗುತ್ತಿದ್ದರೆ ಅಲ್ಲಿಯೂ ಐಸ್ ಪ್ಯಾಕ್ ಇಡಬಹುದು.

2. ಒಟಿಸಿ ಔಷಧಗಳು

2. ಒಟಿಸಿ ಔಷಧಗಳು

ನೀವು ಮೈಗ್ರೇನ್ ಚಿಕಿತ್ಸೆಗಾಗಿ ಔಷಧಿಗಳನ್ನು ವ್ಯಾಪಕವಾಗಿ ಬಳಸಬಹುದು. ಆಸ್ಪಿರಿನ್ ಮತ್ತು ಇಬುಪ್ರೋಫೆನ್ ತಲೆನೋವಿಗೆ ಬಳಸಬಹುದಾದ ಸಾಮಾನ್ಯ ಔಷಧಗಳು. ಆದಾಗ್ಯೂ ಈ ಯಾವುದೇ ಔಷಧಗಳನ್ನು ಅತಿಯಾಗಿ ಬಳಸಬೇಡಿ.

3. ಅಧಿಕ ಕೆಫೀನ್

3. ಅಧಿಕ ಕೆಫೀನ್

ಅಧಿಕವಾಗಿ ಕೆಫೀನ್ ಪ್ರಮಾಣವಿರುವ ಬ್ಲ್ಯಾಕ್ ಕಾಫಿ, ಮೈಗ್ರೇನ್ ನೋವನ್ನು ಭಾಗಶಃ ಕಡಿಮೆಗೊಳಿಸುತ್ತದೆ.

4. ಅರೋಮಾಥೆರಪಿ

4. ಅರೋಮಾಥೆರಪಿ

ಅರೋಮಾಥೆರಪಿ ನ ಮೈಗ್ರೇನ್ ದಾಳಿಗೆ ಸೂಕ್ತವಾದ ಚಿಕಿತ್ಸೆ ನೀಡಬಲ್ಲದು. ವಿವಿಧ ಪರಿಮಳದ ದ್ರವ್ಯಗಳು ನಿಮ್ಮ ದೇಹದ ಮೇಲೆ ಹಿತವಾದ ಪರಿಣಾಮ ಬೀರಿ ನೀವು ಮೈಗ್ರೇನ್ ನಿಂದ ಬಳಲುತ್ತಿದ್ದಾಗ ಸಹಾಯಮಾಡಬಲ್ಲದು. ಪುದೀನಾ, ನೀಲಗಿರಿ ಮೊದಲಾದವುಗಳಿಂದ ತಯಾರಿಸಲ್ಪಟ್ಟ ಪರಿಮಳ ದ್ರವ್ಯಗಳನ್ನು ಬಳಸುವುದು ಸೂಕ್ತ. ಅಲ್ಲದೇ ಮೈಗ್ರೇನ್ ಹೋಗಲಾಡಿಸಲು ನಿಮಗೆ ಸರಿಹೊಂದುವಂತಹ ಗಿಡಮೂಲಿಕೆಗಳನ್ನೂ ಬಳಸಬಹುದು.

5. ಬಾಡಿ ಮಸಾಜ್

5. ಬಾಡಿ ಮಸಾಜ್

ಅನೇಕ ಬಾರಿ ಅಲ್ಲದಿದ್ದರೂ, ಅಪರೂಪಕ್ಕೊಮ್ಮೆಯಾದರೂ ನಿಮ್ಮ ಕುತ್ತಿಗೆ ಮತ್ತು ಭುಜದ ಭಾಗಗಳ ಸ್ನಾಯುಗಳ ಮಸಾಜ್ ಮಾಡಿಸಿಕೊಳ್ಳುವುದು ಮೈಗ್ರೇನ್ ದಾಳಿಯನ್ನು ಕಡಿಮೆಮಾಡಬಲ್ಲದು. ಇದು ದೇಹಕ್ಕೆ ಆರಾಮದಾಯಕವಾಗುವುದರಿಂದ ಮೈಗ್ರೇನ್ ನೋವು ಕಡಿಮೆಯಾಗುತ್ತದೆ.

5. ಬಾಡಿ ಮಸಾಜ್

5. ಬಾಡಿ ಮಸಾಜ್

ಅನೇಕ ಬಾರಿ ಅಲ್ಲದಿದ್ದರೂ, ಅಪರೂಪಕ್ಕೊಮ್ಮೆಯಾದರೂ ನಿಮ್ಮ ಕುತ್ತಿಗೆ ಮತ್ತು ಭುಜದ ಭಾಗಗಳ ಸ್ನಾಯುಗಳ ಮಸಾಜ್ ಮಾಡಿಸಿಕೊಳ್ಳುವುದು ಮೈಗ್ರೇನ್ ದಾಳಿಯನ್ನು ಕಡಿಮೆಮಾಡಬಲ್ಲದು. ಇದು ದೇಹಕ್ಕೆ ಆರಾಮದಾಯಕವಾಗುವುದರಿಂದ ಮೈಗ್ರೇನ್ ನೋವು ಕಡಿಮೆಯಾಗುತ್ತದೆ.

6. ಮ್ಯಾಗ್ನೀಷಿಯಂ

6. ಮ್ಯಾಗ್ನೀಷಿಯಂ

ಮ್ಯಾಗ್ನೀಷಿಯಂ, ಸಾಮಾನ್ಯವಾಗಿ ಮೈಗ್ರೇನ್ ರೋಗಿಗಳಿಗೆ ಸಂಜೀವಿನಿಯಂತೆ. ಇದು ಪರಿಣಾಮಕಾರಿಯಾಗಿ ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡ ಮಟ್ಟವನ್ನು ನಿಯಂತ್ರಿಸುತ್ತದೆ. 500 ಮಿ.ಗ್ರಾಂ. ಮ್ಯಾಗ್ನೀಷಿಯಂ ಅನ್ನು ದಿನವೂ ಆಹಾರದಲ್ಲಿ ಸೇವಿಸುವುದರಿಂದ ಮೈಗ್ರೇನ್ ನನ್ನು ತಡೆಗಟ್ಟಬಹುದು.

7. ಯೋಗ ಮಾಡಿ

7. ಯೋಗ ಮಾಡಿ

ಯೋಗ ಮೈಗ್ರೇನ್ ಗೆ ಅತ್ಯುತ್ತಮ ಪರ್ಯಾಯ ಚಿಕಿತ್ಸೆಯಾಗಿದೆ. ಯೋಗ, ದೇಹದ ಜೀವ ರಾಸಾಯನಿಕ ಮತ್ತು ಹಾರ್ಮೋನುಗಳಲ್ಲಿ ಸಮತೋಲನ ತರಬಲ್ಲದು. ಉಸಿರಾಟದ ವ್ಯಾಯಾಮಗಳು ಮತ್ತು ಇತರ ಯೋಗಾಭ್ಯಾಸಗಳು ಮೈಗ್ರೇನ್ ನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲವು.

8. ಹೈಡ್ರೋಥೆರಪಿ

8. ಹೈಡ್ರೋಥೆರಪಿ

ಹೈಡ್ರೋಥೆರಪಿ, ಸಾಕಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿ ದೇಹದಲ್ಲಿ ರಕ್ತದ ಹರಿವನ್ನು ನಿಯಂತ್ರಿಸಬಲ್ಲದು. ಇದರಿಂದ ಮೈಗ್ರೇನ್ ನೀವು ಶಮನಗೊಳಿಸಲು ಸಾಧ್ಯ. ನೀವು ತಣ್ಣನೆಯ ನೀರಿನಲ್ಲಿ ನಿಮ್ಮ ಪಾದವನ್ನು ಇಳಿಬಿಟ್ಟು ಮತ್ತು ಬಿಸಿ ನೀರಿನ ಬಾಟಲಿಯನ್ನು ತಲೆಯ ಹಿಂದೆ ಇಟ್ಟುಕೊಂಡರೆ ತಲೆನೀವು ಹೇಳಹೆಸರಿಲ್ಲದಂತೆ ಕಡಿಮೆಯಾಗುತ್ತದೆ!

ಮೈಗ್ರೇನ್ ಸಾಕಷ್ಟು ತೀವ್ರವಾಗಿದ್ದರೂ ಕೂಡ ಇದನ್ನು ಮನೆಯ ಮದ್ದುಗಳು ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳಿಂದಾಗಿ ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಆದರೆ, ಈ ಯಾವುದೇ ಚಿಕಿತ್ಸೆಗಳೂ ನಿಮ್ಮ ಮೇಲೆ ಪರಿಣಾಮ ಬೀರದಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.

English summary

Migraine headaches remedies | Tips For Health | ಮೈಗ್ರೇನ್ ಉಪಶಮನಕ್ಕೆ ಮನೆಮದ್ದುಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Though migraine is a serious disorder, it can be effectively treated with the help of some simple remedies. Below are listed some of the most effective ways to counter migrain
X
Desktop Bottom Promotion