ಬಾದಾಮಿ ಹಾಲು+ ಜೇನುತುಪ್ಪದ ಜೋಡಿಗೆ ನಮ್ಮದೊಂದು ಸಲಾಂ!

By: Hemanth
Subscribe to Boldsky

ಪ್ರಕೃತಿಯು ಮನುಷ್ಯನಿಗೆ ನೀಡಿರುವ ವರವೆಂದರೆ ಅದು ಹಾಲು. ಹಾಲಿನಲ್ಲಿರುವಂತಹ ಪೋಷಕಾಂಶಗಳು ಬೇರೆ ಯಾವುದೇ ವಸ್ತುಗಳಲ್ಲಿ ಇಲ್ಲವೆನ್ನಬಹುದು. ಹೆಚ್ಚಾಗಿ ಸಸ್ತನಿಗಳು ತಮ್ಮ ಆಹಾರ ಕ್ರಮವನ್ನು ಆರಂಭಿಸುವುದೇ ಹಾಲಿನಿಂದ. ಹೀಗಾಗಿ ಹಾಲು ನಮಗೆ ತುಂಬಾ ಮುಖ್ಯವೆನಿಸುತ್ತದೆ.    ಸ್ವಾದಿಷ್ಟಕರ ಬಾದಾಮಿ ಜೇನಿನ ಹಾಲು

ಆದರೆ ಬರೀ ದನದ ಹಾಲಿಗಿಂತಲೂ, ಕಡಿಮೆ ಕೊಬ್ಬು ಹೊಂದಿರುವಂತಹ ಬಾದಾಮಿ ಹಾಲು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಪ್ರೋಟೀನ್, ನಾರಿನಾಂಶ ಮೊದಲಾದವುಗಳಿವೆ. ಕಬ್ಬಿಣ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಸತು ಇದರಲ್ಲಿ ಆಗಾಧ ಪ್ರಮಾಣದಲ್ಲಿದೆ...

ಅದರಲ್ಲೂ ಬಾದಾಮಿ ಹಾಲಿನೊಂದಿಗೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಂಡು ಕುಡಿದರೆ ಅದರಿಂದ ಹಲವಾರು ಲಾಭಗಳು ದೇಹಕ್ಕೆ ಆಗಲಿದೆ. ಜೇನು ತುಪ್ಪದೊಂದಿಗೆ ಬಾದಾಮಿ ಹಾಲನ್ನು ಕುಡಿದರೆ ವಿಟಮಿನ್ ಸಿ, ಬಿ-6, ಥೈಮಿನೆ, ರಿಬೊಫ್ಲಾವಿನ್, ನಿಯಾಸಿನ್, ಫೊಲಾಟೆ ಮತ್ತು ವಿಟಮಿನ್-ಈ ನಿಮ್ಮ ದೇಹಕ್ಕೆ ಸಿಗಲಿದೆ. ಇದು ದೇಹಕ್ಕೆ ತುಂಬಾ ಲಾಭಕಾರಿ ಮತ್ತು ದೇಹಕ್ಕೆ ಪ್ರಮುಖವಾಗಿರುವಂತದ್ದಾಗಿದೆ. ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಜೇನುತುಪ್ಪವನ್ನು ಹಿಂದಿನಿಂದಲೂ ಆಹಾರಗಳಲ್ಲಿ ಸಿಹಿವರ್ಧಕಗಳಾಗಿ ಬಳಸುತ್ತಾ ಇದ್ದರು. ಜೇನಿನ ನೊಣಗಳು ಸುಮಾರು 600ರಷ್ಟು ಆರೋಗ್ಯಕಾರಿ ಅಂಶಗಳನ್ನು ಜೇನುತುಪ್ಪದಲ್ಲಿ ಸೇರಿಸಿಕೊಳ್ಳುತ್ತವೆ ಎನ್ನಲಾಗಿದೆ. ಬಾದಾಮಿ ಹಾಲು ಮತ್ತು ಜೇನುತುಪ್ಪದಲ್ಲಿ ಇರುವಂತಹ ಫ್ಲಾವನಾಯ್ಡ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಹಲವಾರು ರೀತಿಯ ಹೃದಯ ಕಾಯಿಲೆ ಹಾಗೂ ಕ್ಯಾನ್ಸರ್ ಅನ್ನು ಒದ್ದೋಡಿಸುತ್ತದೆ. ಬಾದಾಮಿ ಹಾಲು ಮತ್ತು ಜೇನುತುಪ್ಪದ ಆರೋಗ್ಯಕಾರಿ ಲಾಭಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ....  

ಒಳ್ಳೆಯ ನಿದ್ರೆ

ಒಳ್ಳೆಯ ನಿದ್ರೆ

ಈ ಹಾಲು ಮೆದುಳಿನಲ್ಲಿ ನಿದ್ರೆ ಬರದಂತೆ ತಡೆಯುವ ಒರೆಕ್ಸಿನ್ ಎನ್ನುವ ನ್ಯೂರೋಟ್ರಾನ್ಸ್ ಮಿಟ್ಟರ್ ಅನ್ನು ದೂರವಿಡುತ್ತದೆ. ಇದರಿಂದ ಒಳ್ಳೆಯ ನಿದ್ರೆ ಬರುವುದು.

ಏಕಾಗ್ರತೆಗೆ ಶಕ್ತಿ

ಏಕಾಗ್ರತೆಗೆ ಶಕ್ತಿ

ಒಂದು ಲೋಟ ಬಾದಾಮಿ ಹಾಲಿಗೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿಕೊಂಡು ಕುಡಿದರೆ ಅದರಿಂದ ದಿನವಿಡೀ ನಿಮ್ಮ ದೇಹಕ್ಕೆ ಶಕ್ತಿ ಒದಗುವುದು. ಇದರಲ್ಲಿ ಹಸುವಿನ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳು ಇದೆ.

ವಯಸ್ಸಾಗುವ ಲಕ್ಷಣವನ್ನು ನಿಧಾನಗೊಳಿಸುವುದು

ವಯಸ್ಸಾಗುವ ಲಕ್ಷಣವನ್ನು ನಿಧಾನಗೊಳಿಸುವುದು

ವಯಸ್ಸಾಗುತ್ತಿರುವವರಿಗೆ ಇದು ಒಂದು ಧನಾತ್ಮಕವಾಗಿರುವ ಪಾನೀಯವಾಗಿದೆ. ಹಿಂದಿನ ಕಾಲದಲ್ಲಿ ಬಾದಾಮಿ ಹಾಲು ಮತ್ತು ಜೇನುತುಪ್ಪವನ್ನು ವಯಸ್ಸಾಗುವುದನ್ನು ತಡೆಯಲು ಬಳಸುತ್ತಾ ಇದ್ದರು.

ಬ್ಯಾಕ್ಟೀರಿಯಾ ವಿರುದ್ಧ ರಕ್ಷಣೆ

ಬ್ಯಾಕ್ಟೀರಿಯಾ ವಿರುದ್ಧ ರಕ್ಷಣೆ

ಬಾದಾಮಿ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರ ಬಹುದೊಡ್ಡ ಲಾಭವೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ.

ಜೀರ್ಣಕ್ರಿಯೆಗೆ

ಜೀರ್ಣಕ್ರಿಯೆಗೆ

ಬಾದಾಮಿ ಹಾಲಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುವುದು ಕರುಳಿನ ಸಮಸ್ಯೆಗಳನ್ನು ಪರಿಹರಿಸಿ ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುವುದು.

ಶೀತ ಹಾಗೂ ಕೆಮ್ಮಿಗೆ

ಶೀತ ಹಾಗೂ ಕೆಮ್ಮಿಗೆ

ಬಾದಾಮಿ ಹಾಲು ಹಾಗೂ ಜೇನುತುಪ್ಪವು ಶೀತ ಹಾಗೂ ಕೆಮ್ಮಿಗೆ ಹೇಳಿ ಮಾಡಿಸಿದಂತಹ ಔಷಧಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಿಂತ ಹೆಚ್ಚು ಪರಿಣಾಮಕಾರಿ. ಬಾದಾಮಿ ಹಾಲು ಮತ್ತು ಜೇನುತುಪ್ಪದ ಪ್ರಮುಖ ಲಾಭಗಳಲ್ಲಿ ಇದು ಒಂದಾಗಿದೆ.

 
English summary

Health Benefits If You Drink Almond Milk With Honey

Almond milk is low in fat and is said to be high in energy, proteins, lipids and fibre. It is also enriched with vitamins like iron, magnesium, calcium, potassium, sodium and zinc. Consuming almond milk with honey is being considered as the best option by several nutritionists around the world. The health benefits of almond milk with honey are abundant. Read further to get a clearer picture.
Please Wait while comments are loading...
Subscribe Newsletter