ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

Posted By: Staff
Subscribe to Boldsky

ಹಾಲು ಜೇನು ಕೇವಲ ರುಚಿಯಲ್ಲಿ ಮಾತ್ರವಲ್ಲ, ಆರೋಗ್ಯಕರ ಗುಣದಲ್ಲೂ ಈ ಜೋಡಿ ಬಹುಪಯೋಗಿಯಾಗಿದೆ. ಇದರ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾಗಿ ಚರ್ಮದ ಆರೈಕೆ, ದೇಹದಾರ್ಢ್ಯತೆಯಲ್ಲಿ ಹೆಚ್ಚಳ, ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುವುದು ಸೇರಿವೆ. ಹಾಲು ಮತ್ತು ಜೇನನ್ನು ಪ್ರತ್ಯೇಕವಾಗಿ ಸೇವಿಸಿದರೂ ಅವುಗಳ ಗುಣಗಳು ಯಥೇಚ್ಛವಾಗಿದ್ದರೂ ಹಾಲುಜೇನು ಒಂದಾದ ಬಳಿಕ ಎರಡೂ ಶಕ್ತಿಗಳು ಸೇರಿ ನೂರ್ಮಡಿಯಾಗುವುದೇ ಇದರ ವಿಶೇಷವಾಗಿದೆ.

ಜೇನಿನಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಜೇನು ಉತ್ತಮ ಬ್ಯಾಕ್ಟೀರಿಯಾ ಪ್ರತಿಜೀವಕ (antibiotic), ಉರಿಯೂತ ನಿವಾರಕ (anti inflammatory) ಮತ್ತು ಶಿಲೀಂಧ್ರ ನೀರೋಧಕ (antifungal) ವಾಗಿರುವುದರಿಂದ ಶ್ವಾಸನಾಳ ಮತ್ತು ಗಾಳಿಯಾಡುವ ಇಡಿಯ ವ್ಯವಸ್ಥೆಯನ್ನು ವೈರಸ್ಸುಗಳಿಂದ ಕಾಪಾಡುತ್ತದೆ.

ಹಾಲಿನಲ್ಲಿರುವ ವಿಟಮಿನ್ ಎ,ಬಿ,ಡಿ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಲ್ಯಾಕ್ಟಿಕ್ ಆಮ್ಲಗಳು ಮೂಳೆಗಳನ್ನು ಧೃಢಗೊಳಿಸುವ ಜೊತೆಗೇ ದೇಹಕ್ಕೆ ಹಲವು ಪೋಷಕಾಂಶಗಳನ್ನು ನೀಡುತ್ತದೆ. ಈ ಎರಡೂ ಶಕ್ತಿಗಳು ಬೆರೆತ ಬಳಿಕ ಈ ಎಲ್ಲಾ ಗುಣಗಳ ಕ್ಷಮತೆ ಬಹಳಷ್ಟು ಹೆಚ್ಚುವುದೇ ಈ ಜೋಡಿಯ ವೈಶಿಷ್ಟ್ಯತೆಯಾಗಿದೆ. ಹಾಲು ಜೇನಿನ ಉತ್ತಮ ಗುಣಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ.

ಚರ್ಮಕ್ಕೆ ಒಳಗಿನಿಂದ ಆರೈಕೆ ನೀಡುತ್ತದೆ

ಚರ್ಮಕ್ಕೆ ಒಳಗಿನಿಂದ ಆರೈಕೆ ನೀಡುತ್ತದೆ

ಹಾಲು ಮತ್ತು ಜೇನು ಒಂದಾದ ಬಳಿಕ ದೇಹವನ್ನು ಒಳಗಿನಿಂದ ಶುದ್ಧೀಕರಿಸುವ ಗುಣ (cleansing) ನೂರ್ಮಡಿ ಹೆಚ್ಚುವುದರಿಂದ ಚರ್ಮದ ಒಳಗಿನಿಂದ ಉತ್ತಮ ಆರೈಕೆ ದೊರಕುತ್ತದೆ. ಇದರಿಂದಾಗಿ ಚರ್ಮ ಉತ್ತಮ ಪೋಷಣೆ ಪಡೆಯುತ್ತದೆ ಮತ್ತು ಉತ್ತಮವಾದ ಸೆಳೆತವನ್ನು ಪಡೆಯುತ್ತದೆ. ಪರಿಣಾಮವಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಕೂದಲು ದಟ್ಟವಾಗುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಜೇನಿನಲ್ಲಿ prebiotics ಎಂಬ ರಾಸಾಯನಿಕವಿದೆ. ಇದು ಜಠರದಲ್ಲಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಕೆಲವು ಬ್ಯಾಕ್ಟೀರಿಯಾಗಳ ಹುಟ್ಟಿಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಕರುಳಿಗೆ ರವಾನೆಯಾದ ಬಳಿಕ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಆಹಾರ ಸುಲಭವಾಗಿ ಪಚನವಾಗುವಂತೆ ನೋಡಿಕೊಳ್ಳುತ್ತವೆ. ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಂಡು ಆಹಾರದ ಪೋಷಕಾಂಶಗಳು ದೇಹಕ್ಕೆ ಸುಲಭವಾಗಿ ಲಭಿಸುತ್ತವೆ ಮತ್ತು ಆರೋಗ್ಯ ವೃದ್ಧಿಸುತ್ತದೆ.

ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ

ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ

ಪ್ರತಿದಿನ ಬೆಳಿಗ್ಗೆ ಹಾಲುಜೇನು ಬೆರೆಸಿದ ಪೇಯವನ್ನು ಒಂದು ಲೋಟ ಕುಡಿದವರಲ್ಲಿ ದೇಹದಾರ್ಢ್ಯತೆ ಹೆಚ್ಚಿರುವುದು ಸಂಶೋಧನೆಗಳಿಂದ ಕಂಡುಬಂದಿದೆ. ಹಾಲಿನಲ್ಲಿರುವ ಪ್ರೋಟೀನು, ಜೇನಿನಲಿರುವ ಕಾರ್ಬೋಹೈಡ್ರೇಟುಗಳು ಜೀವರಾಸಾಯನಿಕ ಕ್ರಿಯೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸಿ ದಿನವಿಡೀ ಚಟುವಟಿಕೆಯಿಂದಿರಲು ಸಹಕರಿಸುತ್ತವೆ. ಮಕ್ಕಳಿಂದ ವೃದ್ಧರವರೆಗೂ ಹಾಲು ಜೇನು ಉತ್ತಮ ಆಹಾರವಾಗಿದ್ದು ಯಾವುದೇ ಭಯವಿಲ್ಲದೇ ಸೇವಿಸಬಹುದಾಗಿದೆ. ಮಧುಮೇಹಿಗಳಿಗೆ ಸಕ್ಕರೆ ವರ್ಜ್ಯವಾದುದರಿಂದ ಅವರು ವೈದ್ಯರ ಸಲಹೆಯ ಮೇರೆಗೆ ಹಾಲು ಜೇನನ್ನು ಸೇವಿಸುವುದು ಉತ್ತಮ.

ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ

ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ

ಹಾಲಿನಲ್ಲಿ ಕ್ಯಾಲ್ಸಿಯಂ ಇದೆ ನಿಜ. ಆದರೆ ಅದನ್ನು ಆಹಾರದಿಂದ ಮೂಳೆಗಳವರೆಗೆ ತಲುಪಿಸಲು ಹಾಲಿನಲ್ಲಿ ಯಾವುದೇ ಪೋಷಕಾಂಶವಿಲ್ಲ. ಆದರೆ ಇದು ಜೇನಿನಲ್ಲಿದೆ! ಜೇನಿನಲ್ಲಿರುವ ವಿವಿಧ ಪೋಷಕಾಂಶಗಳು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ದೇಹದೆಲ್ಲೆಡೆ ರಕ್ತದ ಮೂಲಕ ಕೊಂಡೊಯ್ದು ಮೂಳೆಗಳಿಗೆ ತಲುಪಿಸುತ್ತದೆ. ಆದ್ದರಿಂದ ಮೂಳೆಗಳ ದೃಢತೆಗೆ ಹಾಲು ಕುಡಿಯುವ ಬದಲು ಹಾಲುಜೇನನ್ನು ಕುಡಿಯುವುದೇ ಉತ್ತಮ.

ವೃದ್ಧಾಪ್ಯವನ್ನು ಮುಂದೂಡುತದೆ

ವೃದ್ಧಾಪ್ಯವನ್ನು ಮುಂದೂಡುತದೆ

ಹಾಲು ಜೇನಿನಲ್ಲಿರುವ ವಿವಿಧ ಪೋಷಕಾಂಶಗಳು ಚರ್ಮಕ್ಕೆ ಉತ್ತಮ ಆರೈಕೆ ನೀಡುವ ಜೊತೆಗೇ ಇತರ ಅಂಗಾಶಗಳ ಮತ್ತು ಸ್ನಾಯುಗಳ ಹುರಿಗಟ್ಟುವಿಕೆಯಲ್ಲಿಯೂ ಸಹಕರಿಸುವುದರಿಂದ ಉತ್ತಮ ಆರೋಗ್ಯ, ಸೆಳೆತಗೊಂಡ ಚರ್ಮ, ಹೆಚ್ಚಿದ ಕಾಂತಿ, ಕಡಿಮೆಯಾದ ಉದುರುವ ಕೂದಲು ಶರೀರಕ್ಕೆ ಯೌವನವನ್ನು ನೀಡುತ್ತದೆ. ಇನ್ನೊಂದರ್ಥದಲ್ಲಿ ಮುಪ್ಪನ್ನು ಮುಂದೂಡುತ್ತದೆ.

ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ

ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ

ನಿದ್ದೆ ಬರದಿದ್ದರೆ ಬಿಸಿ ಹಾಲನ್ನು ಕುಡಿದು ಮಲಗಿ ಎಂದು ಹಿರಿಯರು ಹೇಳುತ್ತಾರೆ. ಕೇವಲ ಹಾಲನ್ನು ಸೇವಿಸುವ ಬದಲು ಜೇನು ಸೇರಿಸಿದ ಹಾಲನ್ನು ಸೇವಿಸುವ ಮೂಲಕ ಇನ್ನಷ್ಟು ಸುಖನಿದ್ದೆ ಆವರಿಸುತ್ತದೆ. ನಿದ್ರಾಹೀನತೆ, ತಡವಾಗಿ ನಿದ್ದೆ ಬರುವುದು, ಚಿಕ್ಕ ಶಬ್ದಕ್ಕೂ ಬೆಚ್ಚಿ ನಿದ್ದೆಯಿಂದೇಳುವುದು ಮೊದಲಾದ ತೊಂದರೆಗಳಿಗೆ ಹಾಲು ಜೇನು ಉತ್ತಮ ಪರಿಹಾರವಾಗಿದೆ.

ಜೀವಿರೋಧಿ (Antibacterial) ಗುಣಗಳು

ಜೀವಿರೋಧಿ (Antibacterial) ಗುಣಗಳು

ಹಾಲು ಮತ್ತು ಜೇನುಗಳು ಪ್ರತ್ಯೇಕವಾಗಿ ಸೇವಿಸಿದಾಗ staphylococcus ಎಂಬ ಬ್ಯಾಕ್ಟೀರಿಯಾದ ಮೇಲೆ ಮಾಡುವ ಪರಿಣಾಮ ಹಾಲು ಜೇನು ಒಂದಾದ ಬಳಿಕ ನೂರು ಪಟ್ಟು ಹೆಚ್ಚಿರುವುದು ಸಂಶೋಧನೆಗಳಿಂದ ಕಂಡುಬಂದಿದೆ. ಅಂದರೆ ಈ ಬ್ಯಾಕ್ಟೀರಿಯಾವನ್ನು ಹಾಲು ಮತ್ತು ಜೇನು ಪ್ರತ್ಯೇಕವಾಗಿದ್ದಾಗ ನಿರ್ಮೂಲನೆ ಮಾಡಲು ತೆಗೆದುಕೊಳ್ಳುವ ಸಮಯ ಹಾಲು ಜೇನು ಒಂದಾದ ಬಳಿಕ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹ ವಿವಿಧ ಬ್ಯಾಕ್ಟೀರಿಯಾಗಳ ವಿರುದ್ದ ಸೆಣೆಸಲು ಹೆಚ್ಚು ಸಬಲವಾಗುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಹಾಲನ್ನು ಮಾತ್ರ ಸೇವಿಸಿದಾಗ ಮಲಬದ್ಧತೆಯಾಗುವ ಸಂಭವ ಹೆಚ್ಚುತ್ತದೆ. ಆದರೆ ಹಾಲು ಮತ್ತು ಜೇನನ್ನು ಸೇವಿಸಿದಾಗ ವಿಸರ್ಜನೆ ಸುಲಭವಾಗುತ್ತದೆ.ತನ್ಮೂಲಕ ಕರುಳುಗಳ ಹುಣ್ಣು, ಅಪಾನವಾಯು, ಮೂಲವ್ಯಾಧಿ ಮೊದಲಾದ ತೊಂದರೆಗಳಿಂದ ಕಾಪಾಡುತ್ತದೆ.

ಶೀತ ನೆಗಡಿಗಳಿಂದ ರಕ್ಷಣೆ ನೀಡುತ್ತದೆ

ಶೀತ ನೆಗಡಿಗಳಿಂದ ರಕ್ಷಣೆ ನೀಡುತ್ತದೆ

ಬಿಸಿನೀರಿಗೆ ಜೇನನ್ನು ಸೇರಿಸಿ ಕುಡಿಯುವುದರಿಂದ ಕಫ ಕಟ್ಟಿರುವುದು ಕರಗುತ್ತದೆ. ಹಾಲು ಜೇನಿನ ಬಿಸಿಪೇಯವನ್ನು ಕುಡಿಯುವುದರಿಂದಲೂ ಕೇವಲ ಕಫ ಮಾತ್ರವಲ್ಲದೇ ಶೀತ, ನೆಗಡಿ, ಒಣಕೆಮ್ಮು, ಕೆಮ್ಮು, ಮೂಗು ಕಟ್ಟುವುದು ಮೊದಲಾದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

English summary

Health Benefits of Honey and Milk

The health benefits of honey and milk include advantages in skin care and the development of stamina. This article elaborates on the health benefits of milk and honey when they are taken together. When taken individually, there are still many health benefits of honey and health benefits of organic milk.
Please Wait while comments are loading...
Subscribe Newsletter