For Quick Alerts
ALLOW NOTIFICATIONS  
For Daily Alerts

ಮುದ ನೀಡುವ ಆಹಾರಗಳಿವು! ತಿಂದರೆ ಖುಷಿ-ಖುಷಿ ಆಗಿರುವಿರಿ!

By Manu
|

ಸಿಟ್ಟು ಬಂದ ಸಮಯದಲ್ಲಿ ಏನು ಮಾಡಬೇಕು? ಒಂದು ಲೋಟ ತಣ್ಣಗಿನ ಮಜ್ಜಿಗೆ ಕುಡಿಯಬೇಕು ಎಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಮಜ್ಜಿಗೆ ಕುಡಿದ ಬಳಿಕ ರಕ್ತದ ಒತ್ತಡ ಕಡಿಮೆಯಾಗುವ ಮೂಲಕ ಸಿಟ್ಟು ಇಳಿಯುತ್ತದೆ. ಅಂತೆಯೇ ಮನೋಭಾವವನ್ನು ಬದಲಿಸುವ ಇನ್ನೂ ಕೆಲವು ಆಹಾರಗಳಿವೆ.

ಕೇವಲ ಮನೋಭಾವ ಬದಲಿಸುವುದು ಮಾತ್ರವಲ್ಲ, ನೋವನ್ನು ಕಡಿಮೆ ಮಾಡುವುದು, ಸ್ಮರಣ ಶಕ್ತಿ ಹೆಚ್ಚಿಸುವುದನ್ನು ಸಹಾ ಕೆಲವು ಆಹಾರಗಳ ಮೂಲಕ ಪಡೆಯಬಹುದು. ಕೆಲವು ಆಹಾರಗಳನ್ನು ಸೇವಿಸಿದಾಗ ರಕ್ತದಲ್ಲಿ ಬೆರೆಯುವ ಇದರ ಪೋಷಕಾಂಶಗಳು ಮೆದುಳಿನಲ್ಲಿ ಮನೋಭಾವವನ್ನು ಉತ್ತಮಗೊಳಿಸುವ ಕೆಲವು ಹಾರ್ಮೋನುಗಳನ್ನು ಉತ್ಪಾದಿಸುವುದೇ ಇದಕ್ಕೆ ಕಾರಣ. ನಿತ್ಯ ಹಣ್ಣು-ತರಕಾರಿ ತಿಂದು ಸಂತೋಷವಾಗಿರಿ

ಉತ್ತಮ ಆರೋಗ್ಯ ಮತ್ತು ಮನೋಭಾವವನ್ನು ಪಡೆಯಲು ಉತ್ತಮವಾದ ಆಹಾರಕ್ರಮ ಅಗತ್ಯ. ಆದರೆ ಕೆಲವು ಆಹಾರಗಳು ಮನೋಭಾವವನ್ನು ಅತ್ಯುತ್ತಮವಾಗಿ ಹೆಚ್ಚಿಸುತ್ತವೆ. ಬನ್ನಿ ಇವು ಯಾವುವೆಂದು ನೋಡೋಣ....

ಬ್ರೆಡ್

ಬ್ರೆಡ್

ಸಾಮಾನ್ಯವಾದ ಗೋಧಿಯ ಬ್ರೆಡ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟುಗಳಿವೆ. ಬ್ರೆಡ್ ಸೇವಿಸಿದ ಬಳಿಕ ರಕ್ತದ ಮೂಲಕ ಕೆಲವು ಪೋಷಕಾಂಶಗಳು ಶೀಘ್ರವಾಗಿ ಮೆದುಳಿಗೆ ತಲುಪಿ ಸೆರೋಟೋನಿನ್ ಎಂಬ ಹಾರ್ಮೋನನ್ನು ಉತ್ಪಾದಿಸಲು ನೆರವಾಗುತ್ತದೆ.

ಚಾಕಲೇಟು

ಚಾಕಲೇಟು

ವಿಶೇಷವಾಗಿ ಕಪ್ಪು ಚಾಕಲೇಟಿನಲ್ಲಿರುವ ಪೋಷಕಾಂಶಗಳು ಮೆದುಳಿನಲ್ಲಿ ಮುದವನ್ನುಂಟು ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ತಿಂದ ಕೆಲವೇ ಕ್ಷಣಗಳಲ್ಲಿ ಮೆದುಳಿನಲ್ಲಿ ಮುದನೀಡುವ ಹಾರ್ಮೋನುಗಳನ್ನು ಉತ್ಪಾದಿಸಿ ಉಲ್ಲಾಸದಿಂದಿರಲು ನೆರವಾಗುತ್ತದೆ. ವಿಶೇಷವಾಗಿ ಖಿನ್ನತೆಯ ಸಮಯದಲ್ಲಿ ಚಾಕಲೇಟು ಆಪತ್ಬಾಂಧವನಾಗಿದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಸೊಪ್ಪಿನಲ್ಲಿಯೂ ಮೆದುಳಿಗೆ ಮುದ ನೀಡುವ ಕೆಲವು ಪೋಷಕಾಂಶಗಳಿವೆ. ವಿಶೇಷವಾಗಿ ಇದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣ ರಕ್ತದ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೇ ಮೆದುಳಿಗೆ ರಕ್ತಸಂಚಾರವೂ ಹೆಚ್ಚುತ್ತದೆ. ತನ್ಮೂಲಕ ಮನೋಭಾವವೂ ಉಲ್ಲಾಸಗೊಳ್ಳಲು ನೆರವಾಗುತ್ತದೆ.

ಕಿತ್ತಳೆ

ಕಿತ್ತಳೆ

ಖಿನ್ನತೆ, ಬೇಸರ, ಉದ್ವೇಗ ಮೊದಲಾದ ಸಂದರ್ಭಗಳಲ್ಲಿ ತಿನ್ನಲು ಕಿತ್ತಳೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿರುವ ಸಿಟ್ರಸ್ ಆಮ್ಲ ಮತ್ತು ವಿಟಮಿನ್ ಸಿ ಹಾಗೂ ಫೋಲೇಟ್ ಗಳು ಮೆದುಳಿಗೆ ತಲುಪಿದ ಬಳಿಕ ಮೆದುಳಿನಲ್ಲಿ ಡೋಪಮೈನ್ ಎಂಬ ರಸದೂತವನ್ನು ಉತ್ಪಾದಿಸಲು ನೆರವಾಗುತ್ತದೆ. ಇದರಿಂದ ಮನೋಭಾವವೂ ಉಲ್ಲಸಿತವಾಗುತ್ತದೆ.

ಮೀನು

ಮೀನು

ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲ ರಕ್ತದಲ್ಲಿ ಬೆರೆತು ಮೆದುಳಿಗೆ ತಲುಪಿದ ಬಳಿಕ ಮೆದುಳಿನಲ್ಲಿ ಸೆರೋಟೋನಿನ್ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ. ಇದು ಮನೋಭಾವವನ್ನು ಉಲ್ಲಸಿತಗೊಳಿಸಲು ನೆರವಾಗುತ್ತದೆ.

ಕೇಸರಿ

ಕೇಸರಿ

ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ತೆಂಗಿನ ಕಾಯಿ

ತೆಂಗಿನ ಕಾಯಿ

ತೆಂಗಿನಲ್ಲಿಯೂ ಒಮೆಗಾ-3 ಕೊಬ್ಬಿನ ಆಮ್ಲದ ಪ್ರಮಾಣ ಉತ್ತಮವಾಗಿದ್ದು ಮೆದುಳಿನಲ್ಲಿ ಸೆರೋಟೋನಿನ್ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ತೆಂಗಿನಲ್ಲಿರುವ ಪೋಷಕಾಂಶಗಳು ನರಗಳನ್ನು ಸಡಿಲಿಸಿ ರಕ್ತಸಂಚಾರ ಹೆಚ್ಚಿಸುವ ಮೂಲಕವೂ ಮನೋಭಾವವನ್ನು ಉತ್ತಮಗೊಳಿಸಲು ನೆರವಾಗುತ್ತದೆ.

English summary

Foods That Can Make You Happy Instantly!

Feeling sad or angry? What if we told you that there are certain easily available foods that can improve your mood in a jiffy? Well, yes, there are foods to improve your memory, foods to reduce pain, similarly, there are a variety of common foods that can boost your mood by releasing certain feel-good hormones in your brain.
X
Desktop Bottom Promotion