For Quick Alerts
ALLOW NOTIFICATIONS  
For Daily Alerts

ಅಜೀರ್ಣ ಸಮಸ್ಯೆಯೇ? ಇಲ್ಲಿದೆ ಸರಳ ಆಯುರ್ವೇದ ಔಷಧಿ

By Manu
|

ಏನಪ್ಪಾ ಅಜೀರ್ಣಕ್ಕೆ ಏನಾದರೂ ಮದ್ದು ಇದೆಯಾ ಎಂದು ಕೇಳುವವರು ಈಗ ಹೆಚ್ಚಾಗುತ್ತಾ ಇದ್ದಾರೆ. ದಿನನಿತ್ಯದ ಕೆಲಸ ಹಾಗೂ ಆಹಾರವನ್ನು ಸರಿಯಾದ ಸಮಯದಲ್ಲಿ ಸೇವನೆ ಮಾಡದೆ ಇರುವುದು ಅಜೀರ್ಣದಂತಹ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಜೀರ್ಣ ಸಮಸ್ಯೆ ಉಂಟಾಗದಿರಲು ಟಿಪ್ಸ್

ಅಜೀರ್ಣ ಅಥವಾ ಹೊಟ್ಟೆ ಉಬ್ಬರ ಕಾಣಿಸಿಕೊಂಡಾಗ ಒಂದು ಚಮಚ ಜೀರಿಗೆ ಅಥವಾ ಪುದೀನಾ ಎಲೆಯನ್ನು ಜಗಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳುವವರು ಇಲ್ಲಿ ಕೊಟ್ಟಿರುವ ಕೆಲವೊಂದು ಆಹಾರಗಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮೂಲಕ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ ಸಲಾಡ್(ಸಾಸಿವೆ, ಅರಶಿನ ಮತ್ತು ಉಪ್ಪು ಬೆರೆಸಿ ಕರಿದ ಪಪ್ಪಾಯಿ) ಸೇವನೆ ಮಾಡಬೇಕು. ಪಪ್ಪಾಯಿಯನ್ನು ತುರಿದುಕೊಂಡು ಪರಾಟ ಅಥವಾ ದೋಸೆಗೆ ಹಾಕಬಹುದು. ಇದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ.ಸುಗಮ ಜೀರ್ಣಕ್ರಿಯೆಗೆ ಹಸಿ ಪಪ್ಪಾಯಿ ಹಣ್ಣು ಉಪಯುಕ್ತ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಇದರಲ್ಲಿ ಪಪೈನ್ ಮತ್ತು ಚ್ಯಮೊಪಪೈನ್ ಎನ್ನುವ ಕಿಣ್ವಗಳು ಕರುಳಿನ ಕ್ರಿಯೆಯನ್ನು ಸರಾಗವಾಗಿಸುತ್ತದೆ ಮತ್ತು ಕರುಳಿನಲ್ಲಿರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ.

ಶುಂಠಿ

ಶುಂಠಿ

ಶುಂಠಿ, ಅಜೀರ್ಣ ಪರಿಹಾರಕ್ಕೆ ಒಂದು ಒಳ್ಳೆಯ ಮನೆ ಮದ್ದು

ಶುಂಠಿ

ಶುಂಠಿ

ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳನ್ನು ತಿಂದರೆ ಆಸಿಡಿಟಿ ಉಂಟಾಗುತ್ತದೆ ಎನ್ನುವಂತಹ ನಂಬಿಕೆ ಹಿಂದಿನಿಂದಲೂ ಇದೆ. ಆದರೆ ಊಟಕ್ಕೆ ಮೊದಲು ಸಿಟ್ರಸ್ ಹೊಂದಿರುವ ಹಣ್ಣುಗಳನ್ನು ತಿನ್ನುವುದರಿಂದ ಮತ್ತು ಅದರ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆಯು ಸುಗಮವಾಗುತ್ತದೆ. ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಸಿಟ್ರಸ್ ಹಣ್ಣುಗಳು ಹಾನಿಕಾರಕ ವಿಷಕಾರಿ ಅಂಶಗಳನ್ನು ಜೀರ್ಣಕ್ರಿಯೆ ವ್ಯವಸ್ಥೆಯಿಂದ ತೆಗೆದುಹಾಕಲು ನೆರವಾಗುತ್ತದೆ. ಇಷ್ಟು ಮಾತ್ರವಲ್ಲದೆ ಪೋಷಕಾಂಶವನ್ನು ಹೀರಿಕೊಳ್ಳಲು ಸಹಕರಿಸುತ್ತದೆ.

ಮೊಸರು

ಮೊಸರು

ಮೊಸರನ್ನು ತಿನ್ನುವುದರಿಂದ ಅದು ಜೀರ್ಣ ಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಮತ್ತು ಅಜೀರ್ಣದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಮೊಸರು

ಮೊಸರು

ಇದರಲ್ಲಿರುವ ಕಿಣ್ವಗಳು ಮತ್ತು ಒಳ್ಳೆಯ ಬ್ಯಾಕ್ಟೀರಿಯಾ ಹೊಟ್ಟೆಯನ್ನು ಸರಾಗವಾಗಿರಿಸಿ ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ. ಪ್ರತೀ ದಿನ ಮೊಸರಾನ್ನ ಅಥವಾ ಒಂದು ಕಪ್ ಮೊಸರನ್ನು ಸೇವಿಸಿ.

English summary

Foods to improve digestion

What do you do when you have indigestion or bloating? Chew a spoonful of fennel seeds or peppermint leaves? Here are digestion-enhancing foods you must include in your diet to prevent bloating or indigestion. =Do not miss the last slide!
X
Desktop Bottom Promotion