For Quick Alerts
ALLOW NOTIFICATIONS  
For Daily Alerts

ಸುಗಮ ಜೀರ್ಣಕ್ರಿಯೆಗೆ ಹಸಿ ಪಪ್ಪಾಯಿ ಹಣ್ಣು ಉಪಯುಕ್ತ

By CM prasad
|

ನಾವು ಊಟ ಮಾಡಿದ ಮೇಲೆ ಆಹಾರವು ಜೀರ್ಣವಾಗಿ ಅದರ ಪೌಷ್ಟಿಕಾಂಶಗಳು ದೇಹಕ್ಕೆ ಸಕಾಲದಲ್ಲಿ ಸೇರುವುದು ಪ್ರಾಕೃತಿಕವಾದ ಸಹಜ ಕ್ರಿಯೆ. ಆದರೆ ಜೀರ್ಣಕ್ರಿಯೆಯು ಸುಗಮವಾಗಲು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರಗಳ ಸೇವನೆಯು ವ್ಯತಿರಿಕ್ತವಾಗಿದ್ದು, ಬಗೆಬಗೆಯ ರುಚಿರುಚಿಯಾದ ತರಹೇವಾರಿ ಆಹಾರಗಳನ್ನು ಸೇವಿಸುವ ಪರಂಪರೆ ಗಣನೀಯವಾಗಿ ಏರಿಕೆ ಕಂಡಿದೆ. ಈಗಿನ ಆಹಾರ ಶೈಲಿಗಳಲ್ಲಿ ರುಚಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಪೌಷ್ಠಿಕಾಂಶಗಳ ಬಗ್ಗೆ ಮತ್ತು ಆರೋಗ್ಯಕ್ಕೆ ಉಪಯುಕ್ತತೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಹಾಗಾಗಿಯೇ ಇತ್ತೀಚೆಗೆ ಜೀರ್ಣಕ್ರಿಯೆ ಸಂಬಂಧಿತ ಅನೇಕ ರೋಗಗಳು ಕಾಣಿಸಿಕೊಳ್ಳಲು ಕಾರಣವಾಗುತ್ತಿದೆ. ಇದರಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯೂ ಸಹ ಪ್ರಮುಖವಾದ ಕಾರಣವಾಗಿದೆ. ಸಂಸ್ಕರಿಸಿದ ಆಹಾರಗಳು ನಿಮ್ಮ ಜೀರ್ಣಕ್ರಿಯೆಯ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಹೇರಿ ದಣಿವಾಗುವಂತೆ ಮಾಡುತ್ತದೆ. ಆಂಟಾಸಿಡ್ಸ್ ಅಥವಾ ಹಣ್ಣುಗಳ ಉಪ್ಪಿನ ದೀರ್ಘಕಾಲದ ಸೇವನೆಯು ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಅಭ್ಯಾಸವಲ್ಲ.

A raw papaya salad is what you need for healthy digestive tract

ಜೀರ್ಣಕ್ರಿಯೆಗೆ ಸಹಕಾರಿಯಾಗಲು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮೊದಲಿಗೆ ನಮ್ಮ ಹೊಟ್ಟೆಯನ್ನು ಹಿತಗೊಳಿಸಬೇಕು. ಹೀಗೆ ಮಾಡುವ ಒಂದು ಆಹಾರವೆಂದರೆ ಅದು ಪರಂಗಿ ಹಣ್ಣು. ಇದು ಆರೋಗ್ಯಕ್ಕೆ ಉತ್ತಮವಾಗಿದ್ದು, ಉತ್ತಮ ಆರೋಗ್ಯಕ್ಕೆ ಬೇಕಾಗುವ ಅವಶ್ಯಕ ಪೌಷ್ಠಿಕಾಂಶಗಳ ಖಜಾನೆಯೇ ಹೌದು ಎಂದರೆ ತಪ್ಪಾಗಲಾರದು. ಸಂತಾನ ನಿಯಂತ್ರಣ ಸಾಮರ್ಥ್ಯ ಪಪ್ಪಾಯಿಯಲ್ಲಿದೆ!

ಹಸಿ ಪಪ್ಪಾಯಿ ಹಣ್ಣು ನಿಮಗೆ ಹೇಗೆ ಉಪಯುಕ್ತ?
ಹಸಿ ಪಪ್ಪಾಯಿ ಹಣ್ಣಿನಲ್ಲಿ ನಾರಿನ ಅಂಶಗಳು ಮತ್ತು ಪ್ರೋಟೀನ್ ಅಂಶಗಳು ಹೇರಳವಾಗಿದ್ದು, ಇತರೆ ಹಣ್ಣಿನ ಅಂಶಗಳಿಗಿಂತ ಹೆಚ್ಚಾಗಿಯೇ ಇದೆ. ಇದರಲ್ಲಿರುವ ಪಪ್ಪಾಯಿನ್ ಮತ್ತು ಕೈಮೊಪಪಾಯಿನ್ ಅಂಶಗಳು ಇದರಲ್ಲಿರುವ ಬಹುಮುಖ್ಯವಾದ ಪೌಷ್ಠಿಕಾಂಶಗಳು. ಈ ಅಂಶದಿಂದ ಜೀರ್ಣಕ್ರಿಯೆಗೆ ನೆರವಾಗಲಿದ್ದು, ಇದರ ಜೊತೆಗೆ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಎನ್ಸೈಮ್ ಗಳೂ ಸಹ ಇದರಲ್ಲಿ ಅಡಗಿದೆ. ಇದರಿಂದ ದೇಹದಲ್ಲಿನ ಹಾನಿಕಾರಕ ವಿಷಯುಕ್ತ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಗಮಗೊಳಿಸಲು ನೆರವಾಗುತ್ತದೆ. ಸರ್ವಗುಣ ಸಂಪನ್ನ- ಪಪ್ಪಾಯಿ ಹಣ್ಣಿನ ಬೀಜ

ಅಲ್ಲದೆ ಇದರಲ್ಲಿರುವ ಲಾಟೆಕ್ಸ್ ಎಂಬ ಎನ್ಸೈಮ್ ಸಹ ಜೀರ್ಣಕ್ರಿಯೆಯ ವ್ಯವಸ್ಥೆಯಲ್ಲಿ ಸ್ನಾಯುಗಳನ್ನು ಸಡಿಲಗೊಳಿಸಿ ಕರುಳನ್ನು ಶುದ್ಧಮಾಡಿ ಅನುಪಯುಕ್ತ ಮತ್ತು ಹಾನಿಕಾರಕ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ. ಹಸಿ ಪಪ್ಪಾಯಿಯಲ್ಲಿರುವ ಹೆಚ್ಚು ನಾರಿನ ಅಂಶವು ನಿಜಕ್ಕೂ ಹೆಚ್ಚು ಪರಿಣಾಮಕಾರಿಯಾಗಿದ್ದು, ಕರುಳನ್ನು ಹೆಚ್ಚು ಚಲನವಲನಗೊಳಿಸಿ ಮಲವನ್ನು ಮೃದುಗೊಳಿಸಿ ಮಲಬದ್ಧತೆಯನ್ನು ತಡೆಯುತ್ತದೆ. ಹೆಚ್ಚು ನಾರುಯುಕ್ತ ಆಹಾರಗಳ ವಿವರಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ಮುಂದೆ ಓದಿ.. ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ

ಹಸಿ ಪಪ್ಪಾಯಿ ಹಣ್ಣನ್ನು ಸೇವಿಸುವ ಬಗೆ
ಹಸಿ ಪಪ್ಪಾಯಿ ಹಣ್ಣನ್ನು ಹೆಚ್ಚು ಸಲಾಡ್ ರೂಪದಲ್ಲಿ ಸೇವಿಸಲಾಗುತ್ತದೆ. ನಾಜೂಕಾದ ಸೀಳುಳ್ಳ ಹೋಳುಗಳನ್ನು ಮತ್ತು ಸಿಹಿಯಾದ ಮತ್ತು ಸಿಪ್ಪೆ ತೆಗೆದ ಹೋಳುಗಳನ್ನು ಬೆರೆಸಿ ರುಚಿಗೆ ಕೊತ್ತಂಬರಿ ಪೌಡರ್ ಅನ್ನು ಮಿಶ್ರಣ ಮಾಡಿದರೆ ಆರೋಗ್ಯಯುಕ್ತ ಹಸಿ ಪರಂಗಿ ಹಣ್ಣಿನ ಸಲಾಡ್ ಸೇವಿಸಲು ಸಿದ್ಧ. ಇದನ್ನು ಸ್ವಲ್ಪ ಎಣ್ಣೆ, ಸಾಸಿವೆ ಮತ್ತು ಅರಿಶಿನದೊಂದಿಗೆ 2 ರಿಂದ 3 ನಿಮಿಷಗಳ ಕಾಲ ಬೇಯಿಸಿದರೆ ಉತ್ತಮ ಆಹಾರವಾಗಲಿದ್ದು, ಇದನ್ನು ನಿಮ್ಮ ಎಂದಿನ ಶೈಲಿಯ ಆಹಾರದೊಂದಿಗೆ ಒಂದು ಭಾಗವಾಗಿ ಸೇವಿಸಬಹುದು. ಹಸಿ ಪಪ್ಪಾಯಿ ಹಣ್ಣು ಹೋಳುಗಳನ್ನು ರೊಟ್ಟಿ ಮತ್ತು ಪರೋಟದಲ್ಲಿ ಸೇರಿಸಿ ಸೇವಿಸಬಹುದಾಗಿದೆ.

English summary

A raw papaya salad is what you need for healthy digestive tract

Processed foods can cause a lot of strain on our digestive systems. Popping antacids or sipping on fruits salts is not very good for your health in the long run. Choosing foods that help aid digestion and keep the digestive tract functioning smoothly is the best way to pamper our tummy. One such food is raw papaya – a treasure cove of health benefits
Story first published: Sunday, January 31, 2016, 14:05 [IST]
X
Desktop Bottom Promotion