ತೂಕ ಇಳಿಸಿಕೊಳ್ಳಲು ಟಿಪ್ಸ್: ರಾತ್ರಿಯ ಊಟ ಹೀಗಿರಲಿ...

By vani nayak
Subscribe to Boldsky

ಆಹಾರದಲ್ಲಿ ಪಥ್ಯೆಯನ್ನು ಪಾಲಿಸುವುದರಿಂದ ಕಾಳಜಿ ವಹಿಸಿದಂತಾಗುತ್ತದೆ. ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಯಾವ ಆಹಾರವನ್ನು ಸೇವಿಸಬೇಕು, ಯಾವುದನ್ನು ಬಿಡಬೇಕು ಎಂಬುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಪ್ರಶ್ನೆ. ಬೆಳಗಿನ ತಿಂಡಿಯ ಸೇವನೆ ನಮ್ಮ ಆರೋಗ್ಯದ ಮೇಲೆ ಒಳ್ಳೆ ಪರಿಣಾಮ ಬೀರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ರಾತ್ರಿಯ ಆಹಾರ ಸೇವನೆ ಬಗ್ಗೆ ನಮಗೆ ತಿಳಿದಿದೆಯೇ?

Weight Loss
 

ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು, ರಾತ್ರಿಯ ಆಹಾರ ಸೇವನೆಯ ಬಗ್ಗೆಯೂ ಕೂಡ ನಾವು ಅಷ್ಟೇ ಕಾಳಜಿ ವಹಿಸಬೇಕಾ ಎಂಬುದು ಪ್ರಶ್ನೆ. ರಾತ್ರಿಯ ಊಟದ ನಂತರ ನಮ್ಮ ಚಟುವಟಿಕೆಗಳು ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಸುಮಾರು ಜನ ನಮ್ಮಲ್ಲಿ ಆಹಾರವನ್ನು ಆಯ್ಕೆ ಮಾಡುವ ವಿಶ್ವಾಸವಿಲ್ಲದೆಯೇ ಹಲವು ಬಾರಿ ಸಲಾಡ್ ಅಥವಾ ಸೂಪ್ ಸೇವನೆಯನ್ನು ಮಾಡುತ್ತಾರೆ.  ನಿಮಗೆ ತೂಕ ಇಳಿಸಲು ಸಹಕಾರಿ ಈ 11 ವಿಧಾನಗಳು!

ಆದರೆ ಚಿಂತಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಕೆಲವು ಆಹಾರವನ್ನು ರಾತ್ರಿಯ ಹೊತ್ತು ಸೇವಿಸಿದರೆ, ತೂಕ ಇಳಿಸಲೂ ಸಹಾಯ ಮಾಡಿ ನಡುರಾತ್ರಿಯಲ್ಲಿ ಹಸಿವು ಕೂಡ ಆಗದಂತೆ ನೋಡಿಕೊಳ್ಳುತ್ತದೆ. ಈ ಕೆಳಗೆ, ತೂಕವನ್ನು ಇಳಿಸಲು ಐದು ವಿಧವಾದ ಆಹಾರವನ್ನು ರಾತ್ರಿ ಹೊತ್ತು ಸೇವಿಸಲು ನೀಡಲಾಗಿದೆ. 

salad
 

ಸಲಾಡ್

ನಿಮ್ಮ ಡಿನ್ನರ್ ಅನ್ನು ಸಾಧಾರಣವಾದ ಒಂದು ಸಲಾಡ್ ಇಂದ ಶುರು ಮಾಡಿರಿ. ಮೊದಲಿಗೆ ಇದನ್ನು ಸೇವಿಸುವುದರಿಂದ ಹೆಚ್ಚಿನ ಕ್ಯಾಲೋರಿ ಸೇವನೆಯನ್ನು ತಡೆಯಬಹುದು. ಸಲಾಡ್ ಅವಶ್ಯಕತೆ ಇರುವ ಫೈಬರ್ ಅನ್ನು ಒದಗಿಸುತ್ತದೆ. ಇದರಿಂದ ಹೊಟ್ಟೆಯು ಬಹಳ ಸಮಯದವರೆಗೆ ತುಂಬಿದಂತಿರುತ್ತದೆ ಹಾಗು ಹೆಚ್ಚಿನ ಕ್ಯಾಲೋರಿ ಸೇವನೆಯನ್ನು ತಡೆಯುತ್ತದೆ.

ಪ್ರೋಟೀನ್

ರಾತ್ರಿ ಹೊತ್ತು ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬಿನ ಅಂಶ ಇರುವ ಆಹಾರದ ಬದಲು ಹೆಚ್ಚಿನ ಪ್ರೋಟೀನ್ ಅಂಶ ಇರುವ ಆಹಾರವನ್ನು ಸೇವಿಸಿ. ಕಡಿಮೆ ಕೊಬ್ಬಿನ ಅಂಶವಿರುವ ಡೈರಿ ಉತ್ಪನ್ನಗಳನ್ನು ಸೇವಿಸಿ. ಇತ್ತೀಚಿನ ಅಧ್ಯಯನದ ಪ್ರಕಾರ ಡೇರಿ ಉತ್ಪನ್ನಗಳಲ್ಲಿರುವ ಪ್ರೋಟೀನ್ ಅಂಶ ತೂಕ ಇಳಿಸುವಿಕೆಯಲ್ಲಿ ಸಹಾಯ ಮಾಡಿ ತೆಳುವಾದ ಮೈಕಟ್ಟನ್ನು ಹೊಂದಲು ನೆರವಾಗುತ್ತದೆ. ಚಿಕನ್, ಮೀನು, ಬೀನ್ಸ್., ಮುಂತಾದವುಗಳು ರಾತ್ರಿಯ ಊಟಕ್ಕೆ ಉತ್ತಮ. ಏಕೆಂದರೆ, ಇವುಗಳನ್ನು ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬಿನ ಅಂಶ ಇರುವ ಆಹಾರಕ್ಕೆ ಹೋಲಿಸಿದಾಗ ಬಹಳ ಸಮಯದವರೆಗೆ ಹಸಿವಾಗದಂತೆ ತಡೆಯುತ್ತದೆ.

asparagus
 

ಮನೆಯಲ್ಲೇ ತಯಾರಿಸಿದ ಶತಾವರಿ ಚಿಕನ್ ಸೂಪ್

ಇದನ್ನು ಚಿಕನ್ (ಪ್ರೋಟೀನ್) ಹಾಗು ಶುಂಠಿ ಇಂದ ತಯಾರಿಸಲಾಗುತ್ತದೆ. ಇದರಿಂದ ರೋಗ ನಿಯಂತ್ರಣ ಶಕ್ತಿ ಹೆಚ್ಚುತ್ತದೆ. ಇದನ್ನು ರಾತ್ರಿಯ ಡಿನ್ನರ್‌ಗೆ ಸೇವಿಸಬಹುದು.

protien
 

ಧಾನ್ಯಗಳು

ಬ್ರೌನ್ ರೈಸ್, ನವಣಕ್ಕಿ, (ಹೋಲ್ ವೀಟ್ ಬ್ರೆಡ್) ಗೋಧಿಯ ಸೇವನೆಯನ್ನು ಮಾಡಬೇಕು. ಧಾನ್ಯಗಳು ಹೊಟ್ಟೆಯಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುತ್ತದೆ ಏಕೆಂದರೆ ಅವುಗಳಲ್ಲಿ ಹೆಚ್ಚಿನ ನಾರಿವಂಶ ಮತ್ತು ಮ್ಯಾಗ್ನೀಶಿಯಮ್ ಇರುತ್ತದೆ. ಆದ್ದರಿಂದ ರಾತ್ರಿಯ ಹೊತ್ತು ಸಂಸ್ಕರಿಸಿದ ಧಾನ್ಯಗಳನ್ನು ಸೇವಿಸಬೇಡಿ.

sweets
 

ಸಿಹಿ ಪದಾರ್ಥದ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಡಿ

ನಿಜ ಹೇಳಬೇಕೆಂದರೆ, ಸಿಹಿ ತಿನಿಸುಗಳು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲದಿದ್ದರೂ, ಅದರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬಾರದು. ಏಕೆಂದರೆ, ಸಿಹಿಸೇವನೆಯನ್ನು ನಿಲ್ಲಿಸಿದ್ದಲ್ಲಿ, ಅತಿಯಾಗಿ ತಿನ್ನುವುದು ಮತ್ತು ಜಂಕ್ ಫುಡ್ ಬಳಕೆ ಹೆಚ್ಚಾಗಿಬಿಡುತ್ತದೆ. ಸಂಶೋಧಕರು, ಸಂಪೂರ್ಣವಾಗಿ ಸಿಹಿ ಸೇವನೆಯನ್ನು ಬಿಡುವುದರಿಂದ ಸಿ ಆರ್ ಎಚ್ (ಕೋರ್ಟಿಕೊಟ್ರೋಪಿನ್) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ ಎಂದು ಅಭ್ರಿಪ್ರಾಯ ಪಡುತ್ತಾರೆ. ಇದು ಸಾಧಾರಣವಾಗಿ ಒತ್ತಡದ ಸಂದರ್ಭದಲ್ಲಿ ಆಗುತ್ತದೆ. ಹೆಚ್ಚಿನ ಒತ್ತಡ ನಿಮಗೆ ಆರೋಗ್ಯಕರವಾದ ಆಹಾರವನ್ನು ಸೇವಿಸದಂತೆ ಮಾಡುತ್ತದೆ. ಜಂಕ್ ಫುಡ್ ಮೇಲೆ ಹೆಚ್ಚು ಅವಲಂಭಿತರಾಗುವಂತೆ ಮಾಡುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Foods For Dinner To Aid Weight Loss

    Do we also need to take care of our dinner in a similar way, so that our mission to not get fat doesn’t gets derailed? Since dinner is the meal after we do the least activity, a lot of us lack confidence in choosing the food and, a lot of times, we also end up in just having a skimpy salad or soup. Here are 5 foods that you can have during dinner and get your slimming plan executed faster:
    Story first published: Saturday, November 5, 2016, 23:14 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more