For Quick Alerts
ALLOW NOTIFICATIONS  
For Daily Alerts

ನಿಮಗೆ ತೂಕ ಇಳಿಸಲು ಸಹಕಾರಿ ಈ 11 ವಿಧಾನಗಳು!

|

ನಿಮ್ಮನ್ನು ನೀವು ಉಪಚರಿಸಿಕೊಳ್ಳುವುದು ಎಂದರೆ ಫ್ಯಾಮಿಲಿ ಪ್ಯಾಕ್ ಐಸ್‌ಕ್ರೀಮ್ ಅನ್ನು ತಿಂದು ನಿಮ್ಮನ್ನು ಸಂತೋಷವಾಗಿಟ್ಟುಕೊಳ್ಳುವುದಲ್ಲ, ಟೀವಿ ನೋಡುತ್ತಿರುವಾಗ ಕುರುಕಲು ಮೆಲ್ಲುವುದಲ್ಲ. ಇದಕ್ಕೆ ಇರುವ

ಅರ್ಥವೆಂದರೆ ನಿಮ್ಮನ್ನು ನೀವು ಹೆಚ್ಚು ಬಲಶಾಲಿಯಾಗಿಸಿಕೊಳ್ಳುವುದು, ನಿಮ್ಮನ್ನು ನೀವು ದಂಡಿಸಿಕೊಳ್ಳುವುದು ಎಂದು ಹೇಳುತ್ತಾರೆ ಚಿಕಾಗೋ ಕಬ್‌ನ ಡಯೆಟಿಯನ್ ಮತ್ತು ನ್ಯೂಟ್ರಿಶಿಯನಿಸ್ಟ್ ಡಾನ್ ಜಾಕ್‌ಸನ್ ಬ್ಲಾಟ್ನರ್

ನೀವು ತಿನ್ನುವ ಆಹಾರ ಕ್ರಮ ಮತ್ತು ಮಾಡುವ ವ್ಯಾಯಾಮ ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವ ಅವರು ತಿನ್ನುವುದನ್ನು ನಿಮ್ಮ ಮನಸ್ಸಿಗೆ ತಂದುಕೊಂಡು ತಿನ್ನಬೇಕು ಎಂದು ಹೇಳುತ್ತಾರೆ. 10 ನಿಮಿಷವನ್ನು ನಿಮ್ಮ ಊಟಕ್ಕೆ ವಿನಿಯೋಗಿಸಿ 30 ನಿಮಿಷವನ್ನು ಜಿಮ್‌ನಲ್ಲಿ ಕಳೆಯುವುದೇ ಸರಿಯಾದ ಅರ್ಥದಲ್ಲಿ ನಿಮ್ಮನ್ನು ನೀವು ಉಪಚರಿಸಿಕೊಳ್ಳುವುದಾಗಿದೆ ಎನ್ನುತ್ತಾರೆ ಅವರು. ಹಾಗಿದ್ದರೆ ನಿಮ್ಮನ್ನು ಉಪಚರಿಸಿಕೊಳ್ಳಿ ಎಂದರೇನು ಎಂಬುದಕ್ಕೆ ಕೆಳge ನೀಡಿರುವ ಮಾಹಿತಿಯನ್ನು ಓದಿ

Top 11 tips to weight loss

*ಮೇಜು, ತಟ್ಟೆ, ಕುರ್ಚಿ
ಪ್ರತೀ ಬಾರಿ ಆಹಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಮನದಲ್ಲಿ ಇರಬೇಕಾದ ಅಂಶ ಮೇಜು, ತಟ್ಟೆ, ಕುರ್ಚಿ. ನಿಮ್ಮ ಹೆಚ್ಚುವರಿ ಆಹಾರ ತಿನ್ನುವಿಕೆಗೆ ಈ ಮೂರು ಅಂಶಗಳು ಕಡಿವಾಣ ಹಾಕುತ್ತವೆಯಂತೆ. ಆಹಾರವನ್ನು ಮನಸ್ಸಿಟ್ಟು ತಿನ್ನುವುದು ಅಂದರೆ ನೀವು ಊಟ ಮಾಡಲು ಕುಳಿತುಕೊಳ್ಳುವ ಜಾಗ ನಿಮ್ಮ ಊಟಕ್ಕೆ ತಕ್ಕುದಾಗಿದ್ದರೆ ನಿಮ್ಮ ಹೊಟ್ಟೆಗೆ ಹೋಗುವ ಆಹಾರ ಹೆಚ್ಚು ಎಣ್ಣೆಯುಕ್ತವಾಗಿರುವುದಿಲ್ಲ ಮತ್ತು ತಿನ್ನುವುದನ್ನು ಆನಂದಿಸುತ್ತಾ ತಿಂದರೆ ನಿಮ್ಮ ತಟ್ಟೆಯಲ್ಲಿ ಎಷ್ಟಿದ್ದರೂ ಅದು ನಿಮ್ಮ ಗಮನಕ್ಕೆ ಬರುವುದಿಲ್ಲ.

*ಮನೋಶಕ್ತಿ ಮಾನಸಿಕ ಸ್ನಾಯು ಅದನ್ನು ಅಭ್ಯಾಸ ಮಾಡಿಕೊಳ್ಳಿ

ಪ್ರತಿಯೊಂದು ಕಾರ್ಯಕ್ಕೂ ನಮ್ಮೊಳಗಿನ ಮನೋಶಕ್ತಿ ಅತ್ಯಂತ ಮಹತ್ವವಾದುದು. ನಾನು ಇದನ್ನು ಮಾಡಿಯೇ ತೀರುತ್ತೇನೆ ಎಂಬ ಇಚ್ಛಾಶಕ್ತಿ ನಮ್ಮ ಮನದಲ್ಲಿರಬೇಕು. ಆಗ ಮಾತ್ರ ಹಿಡಿದ ಕೆಲಸ ಪೂರ್ಣವಾಗುತ್ತದೆ. ಇದು ನಮ್ಮ ಆಂತರಿಕ ಸ್ನಾಯುವಿನಂತೆ ಇದನ್ನು ಮೊದಲು ನಮ್ಮದಾಗಿಸಿಕೊಳ್ಳಬೇಕು. ಆರೋಗ್ಯಕ್ಕೆ ಪೂರಕವಾಗಿರುವ ಅಥವಾ ಹಾನಿಕಾರಕವಾಗಿರುವ ಸಂಗತಿಗಳ ಆಯ್ಕೆಯನ್ನು ನಾವು ಮಾಡುವಾಗ ಈ ಮನೋಶಕ್ತಿ ನಮ್ಮ ಸಹಾಯಕ್ಕೆ ಬರುತ್ತದೆ.

ತೂಕ ಇಳಿಕೆಗೆ ಅತ್ಯುತ್ತಮವಾಗಿರುವ ಕಾರ್ಡಿಯೋ ವ್ಯಾಯಾಮ

*ಆಶಾವಾದಿಯಾಗಿರಿ
ನಾವು ತೂಕ ಇಳಿಸಬೇಕೆಂದು ತುಂಬಾ ಪ್ರಯತ್ನಪಡುತ್ತೇವೆ. ಇದಕ್ಕಾಗಿ ನಿರಂತರ ಸಾಧನೆಯನ್ನು ಮಾಡುತ್ತಿದ್ದರೂ ಸ್ವಲ್ಪ ದಿನ ವ್ಯಾಯಾಮ ಡಯೆಟ್ ಸಲಹೆಗಳನ್ನು ಪಾಲಿಸುತ್ತೇವೆ ನಂತರ ಬಿಟ್ಟು ಬಿಡುತ್ತೇವೆ. ನಂತರ ಇದರಿಂದ ಅಸಮಾಧಾನಗೊಂಡು ಕರಿದ ತಿಂಡಿಗಳತ್ತ ನಮ್ಮ ಗಮನ ಹೋಗುತ್ತದೆ. ಕಡಿಮೆ ತೂಕ ಇಳಿಸಬೇಕೆಂಬ ತೀರ್ಮಾನದಲ್ಲಿ ನೀವಿದ್ದರೆ ನೀವು ಕಡಿಮೆ ತಿನ್ನಬೇಕು ಮತ್ತು ವ್ಯಾಯಾಮವನ್ನು ಹೆಚ್ಚು ಮಾಡಬೇಕು.

*ಉತ್ತಮ ಸ್ನೇಹಿತರನ್ನು ಕಂಡುಕೊಳ್ಳಿ
ಸಿಗರೇಟು ಎಳೆಯುವ ಗೆಳೆಯರಿಂದ ನೀವು ಸಿಗರೇಟು ಎಳೆಯುವುದನ್ನು ಕಲಿತುಕೊಳ್ಳುತ್ತೀರಿ. ಹೀಗೆ ನಾವು ಮಾಡಿಕೊಂಡಿರುವ ಸ್ನೇಹಿತರ ಬಳುವಳಿಯನ್ನು ನಾವು ಪಡೆದುಕೊಳ್ಳುತ್ತೇವೆ. ಅದೇ ರೀತಿ ತಿನ್ನುವ ಚಪಲವುಳ್ಳ ಸ್ನೇಹಿತರ ಸ್ನೇಹವನ್ನು ನೀವು ಮಾಡಿಕೊಂಡಾಗ ನಿಮ್ಮ ತಿನ್ನುವ ಚಪಲ ಅವರದೇ ರೀತಿಯಲ್ಲಿರುತ್ತದೆ. ನೀವು ಆರೋಗ್ಯವಂತ ಸ್ನೇಹಿತರನ್ನು ಸಂಪರ್ಕದಲ್ಲಿದ್ದಾಗ ನಿಮ್ಮ ತಿನ್ನುವ ಚಪಲ ಕೂಡ ಹಿತಮಿತವಾಗಿರುತ್ತದೆ.

*ಪರಿಶೀಲನೆ

ನಿಮ್ಮ ಊಟದ ತಟ್ಟೆಯನ್ನು ಹಣ್ಣುಗಳು,ಧಾನ್ಯಗಳು, ತರಕಾರಿಗಳು ಮತ್ತು ಪ್ರೊಟೀನ್‌ಗಳೆಂಬ ಭಾಗಗಳನ್ನಾಗಿ ಮಾಡಿಕೊಳ್ಳಬೇಕು. ಇದರ ಪರಿಶೀಲನೆಯನ್ನು ನೀವು ನಿತ್ಯವೂ ಮಾಡಿಕೊಳ್ಳಬೇಕು. ನಿಮ್ಮ ಆಹಾರ ಸಾಮಾಗ್ರಿಗಳ ಖರೀದು ಮುಗಿದ ಬಳಿಕ ಎಷ್ಟು ಪ್ರೊಟೀನ್, ಎಷ್ಟು ಧಾನ್ಯಗಳು ನಿಮ್ಮ ಆಹಾರದಲ್ಲಿ ಅಡಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ.

*ನಿಮಗೆ ಹಸಿವಾದಾಗ ಮಾತ್ರ ತಿನ್ನಿ

ನೀವು ಚಿತ್ರಮಂದಿರಲ್ಲಿದ್ದೀರಿ ಇಲ್ಲವೇ ನಿಮ್ಮ ಸ್ನೇಹಿತೆಯ ಹುಟ್ಟುಹಬ್ಬ ಸಮಾರಂಭದಲ್ಲಿದ್ದೀರಾ ಇಲ್ಲಿ ನಿಮಗೆ ತಿನ್ನಲು ಬೇಕಾದಷ್ಟು ಇರುತ್ತದೆ. ನಿಮಗೆ ಹಸಿವಾಗಿಲ್ಲದಾಗೂ ಈ ತಿನಿಸುಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಇಚ್ಛಾಶಕ್ತಿಯ ಮೇಲೆ ನೀವು ನಂಬಿಕೆಯನ್ನಿರಿಸಿಕೊಂಡಿರಬೇಕು. ನಿಮಗೆ ಹಸಿವಾದಾಗ ಮಾತ್ರವೇ ಕಡಿಮೆ ಪ್ರಮಾಣದಲ್ಲಿ ಈ ಆಹಾರಗಳನ್ನು ಸೇವಿಸಬೇಕು.

*ನನಗೆ ತೆಳ್ಳಗಾಗಬೇಕು ಎಂದು ನಿಮ್ಮಷ್ಟಕ್ಕೇ ನೀವೇ ಹೇಳಿ

ನನಗೆ ತೆಳ್ಳಗಾಗಬೇಕೆಂಬ ನಿಯಮವನ್ನು ನೀವು ಅಳವಡಿಸಿಕೊಂಡಾಗ ಯಾವುದೂ ಕಷ್ಟ ಎಂದೆನಿಸುವುದಿಲ್ಲ. ನಾನು ತೆಳ್ಳಗಾಗಬೇಕು ನಾನು ಆರೋಗ್ಯವಂತರಾಗಿರಬೇಕು ಎಂಬ ತತ್ವ ನಮ್ಮ ಮನಸ್ಸಿನಲ್ಲಿರಬೇಕು. ಇದಕ್ಕೆ ತಕ್ಕಂತೆ ನಡೆದುಕೊಂಡಾಗ ಮಾತ್ರವೇ ನಮಗೆ ತೂಕ ಕಳೆದುಕೊಳ್ಳುವ ಮನಸ್ಸು ಬರುತ್ತದೆ.

ಮಕ್ಕಳ ತೂಕ ಇಳಿಸಿಕೊಳ್ಳಲು ಕೆಲವೊಂದು ಟಿಪ್ಸ್

*ಗುರಿ ಇರಲಿ

ನಿಮ್ಮ ಮನಸ್ಸಿನಲ್ಲಿ ನನಗೆ ತೆಳ್ಳಗಾಗಬೇಕೆಂಬ ಗುರಿ ನಿಮ್ಮ ಮನಸ್ಸಿನಲ್ಲಿರಬೇಕು. ಮುಂದಿನ ತಿಂಗಳು ನಾನು 30 ನಿಮಿಷಗಳ ಕಾಲ ನಡೆಯಬೇಕೆಂಬ ಒಂದು ಲಕ್ಷ್ಯವನ್ನು ನಿಮ್ಮ ಮನಸ್ಸಿನಲ್ಲಿರಿಸಿಕೊಳ್ಳಿ. ಇದರಲ್ಲಿ ನೀವು ಎಷ್ಟು ಕಾರ್ಯತತ್ಪರರಾಗಿದ್ದೀರಿ ಎಂಬುದು ನಿಮ್ಮ ಕೈಯಲ್ಲಿರಬೇಕು. ಈ ಗುರಿಯನ್ನು ನೀವು ತಲುಪುವುದು ನಿಮ್ಮ ಕೈಯಲ್ಲಿದೆ.

*ಕಾರ್ಯತತ್ಪರರಾಗಿರಿ

ನಾವು ಮನೆಯಲ್ಲೇ ಸುಮ್ಮನೆ ಕಾಲ ಕಳೆಯುತ್ತಿರುತ್ತೇವೆ. ಕಚೇರಿಯಲ್ಲೇ ಕೆಲಸಗಳನ್ನು ಮಾಡಲು ಕುಳಿತಿರುತ್ತೇವೆ. ಹೀಗಿರುವಾಗ ಜಿಮ್‌ನಲ್ಲಿ ಸ್ವಲ್ಪ ಸಮಯ ಕಳೆಯುವುದು ನಮಗೆ ಕಷ್ಟಸಾಧ್ಯವಾಗುವುದು ಸಾಧ್ಯವಿಲ್ಲದ ಮಾತಲ್ಲ. ಆದ್ದರಿಂದ ನನಗಾಗದು ಎಂಬ ಮಾತನ್ನು ಅರ್ಧದಲ್ಲೇ ತುಂಡರಿಸಿ ಕಾರ್ಯತತ್ಪರರಾಗಿರಿ.

*.ಜೀವನ ಕಷ್ಟವಲ್ಲ ಒತ್ತಡ ರಹಿತ ಜೀವನ ನಿಮ್ಮದಾಗಲಿ

ಒತ್ತಡವು ನಿಮ್ಮ ಜೀವನದಲ್ಲಿ ತೂಕ ಏರಿಕೆಗೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಿಮ್ಮ ಜೀವನದಲ್ಲಿ ಒತ್ತಡಕ್ಕೆ ಎಂದಿಗೂ ಅವಕಾಶ ಕೊಡಬೇಡಿ. ಯೋಗ ತರಗತಿಗಳಿಗೆ ಸೇರಿಕೊಳ್ಳಿ ಮತ್ತು ಒತ್ತಡ ರಹಿತ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

English summary

Top 11 tips to weight loss

Yet while eating healthier and slipping in exercise does take some work, it really doesn't have to require heroic effort. Making just a few simple lifestyle changes can pack a big weight loss punch over time. here we mention some points have a look
Story first published: Wednesday, July 23, 2014, 16:51 [IST]
X
Desktop Bottom Promotion