For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಗ್ಲಾಸ್ ಬಾಳೆಹಣ್ಣಿನ ಜ್ಯೂಸ್ ಕುಡಿದರೆ-ಹತ್ತಾರು ಲಾಭ!

ಬಾಳೆಯ ಹಣ್ಣು ಬಡವರ ಹಣ್ಣು ಎಂದೇ ಪ್ರಸಿದ್ಧ. ನಮ್ಮ ಹಿತ್ತಲಲ್ಲೇ ಬೆಳೆಯುವುದರಿಂದ ನಮಗೆ ಅದರ ಮೌಲ್ಯ ಇನ್ನಷ್ಟು ತಿಳಿಯಬೇಕಾದರೆ, ದಿನಕ್ಕೊಂದು ಲೋಟ ಬಾಳೆಹಣ್ಣಿನ ಜ್ಯೂಸ್ ಕುಡಿದರೆ ಸಾಕು...

By Arshad
|

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎನ್ನುವುದೇನೋ ಸರಿ. ಆದರೆ ಸೇಬು ಎಲ್ಲಾ ಕಾಲದಲ್ಲಿ, ಸುಲಭವಾಗಿ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬದಲಿಗೆ ಸದಾ ಲಭ್ಯವಿರುವ, ಅಗ್ಗದ ಬಾಳೆಹಣ್ಣನ್ನೇ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕವೂ ಉತ್ತಮ ಆರೋಗ್ಯ ಲಭಿಸುತ್ತದೆ. ಆರೋಗ್ಯ ವೃದ್ಧಿಗೆ ದಿನಕ್ಕೊಂದು 'ಬಾಳೆ ಹಣ್ಣು' ತಿಂದರೂ ಸಾಕು!

ಬಾಳೆಯಲ್ಲಿರುವ ವಿವಿಧ ಪೋಷಕಾಂಶಗಳು, ಲವಣಗಳು ಮತ್ತು ವಿಶೇಷವಾಗಿ ಕರಗುವ ನಾರು ಇದನ್ನು ಸೇಬಿಗಿಂತಲೂ ಉತ್ತಮ ಆಹಾರವಾಗಿಸಿದೆ. ಇದನ್ನು ಸಿಪ್ಪೆ ಸುಲಿದು, ಫ್ರುಟ್ ಸಾಲಾಡ್, ಮಿಲ್ಕ್ ಶೇಕ್ ಮೊದಲಾದ ಯಾವುದೇ ರೂಪದಲ್ಲಿ ಸೇವಿಸಿದರೂ ಇದರ ಪ್ರಯೋಜನಗಳು ಅಧಿಕವೇ ಹೌದು. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಬಾಳೆಹಣ್ಣನ್ನು ಹಾಗೇ ತಿನ್ನುವುವೇ ಉತ್ತಮವಾದರೂ ಇದನ್ನು ಜ್ಯೂಸ್ ಮಾಡಿಕೊಂಡು ಕುಡಿದರೆ ಜೀರ್ಣಕ್ರಿಯೆ ಇನ್ನಷ್ಟು ಸುಲಭವಾಗುತ್ತದೆ. ಇದರೊಂದಿಗೆ ಕೊಂಚ ಏಲಕ್ಕಿ, ಹಾಲು, ಜೇನನ್ನು ಬೆರೆಸಿ ಕುಡಿದರಂತೂ ಈ ಗುಣಗಳು ಹಲವು ಪಟ್ಟು ಹೆಚ್ಚುತ್ತವೆ. ಬನ್ನಿ, ಈ ಜ್ಯೂಸ್ ನಿತ್ಯವೂ ಕುಡಿಯುವುದರಿಂದೇನು ಲಾಭ ಎನ್ನುವುದನ್ನು ಈಗ ನೋಡೋಣ.....

ಶಕ್ತಿ ನೀಡುತ್ತದೆ

ಶಕ್ತಿ ನೀಡುತ್ತದೆ

ಕ್ರೀಡಾಪಟುಗಳು ತಮ್ಮ ಪ್ರದರ್ಶನದ ನಡುವೆ ಸಿಗುವ ಕೆಲವು ನಿಮಿಷಗಳ ವಿರಾಮದಲ್ಲಿ ನೀರು ಕುಡಿಯುವ ಜೊತೆಗೆ ಬಾಳೆಹಣ್ಣೊಂದನ್ನು ತಿನ್ನುವುದನ್ನು ಗಮನಿಸಿದ್ದೀರಾ? ಏಕೆಂದರೆ ಈ ಹಣ್ಣನ್ನು ತಿನ್ನುವ ಮೂಲಕ ಅಪಾರವಾದ ಶಕ್ತಿ ಕ್ಷಿಪ್ರಕಾಲದಲ್ಲಿಯೇ ಲಭ್ಯವಾಗುತ್ತದೆ. ಬಾಳೆ ಜ್ಯೂಸ್ ಕುಡಿದ ಬಳಿಕವೂ ಇದೇ ರೀತಿಯ ಪರಿಣಾಮವನ್ನು ಪಡೆಯಬಹುದು.

ಶಕ್ತಿ ನೀಡುತ್ತದೆ

ಶಕ್ತಿ ನೀಡುತ್ತದೆ

ಇದರಲ್ಲಿ ಗ್ಲುಕೋಸ್, ಫ್ರುಕ್ಟೋಸ್, ಸುಕ್ರೋಸ್ ಮತ್ತು ಮಾಲ್ಟೋಸ್ ಗಳೆಂಬ ಸಕ್ಕರೆಗಳಿದ್ದು ಇವೆಲ್ಲವೂ ತಕ್ಷಣವೇ ಶಕ್ತಿ ನೀಡಲು ಸಮರ್ಥವಾಗಿವೆ. ಒಂದು ವೇಳೆ ನೀವು ತೊಂಭತ್ತು ನಿಮಿಷ ವ್ಯಾಯಾಮ ಮಾಡುತ್ತೇನೆಂದು ಸಂಕಲ್ಪ ತೊಟ್ಟಿದ್ದರೆ ನಿಮ್ಮ ಸಂಕಲ್ಪ ಈಡೇರಲು ಎರಡು ಬಾಳೆಹಣ್ಣು ಸಾಕು.

ಜೀರ್ಣಶಕ್ತಿ ಹೆಚ್ಚಿಸುತ್ತದೆ

ಜೀರ್ಣಶಕ್ತಿ ಹೆಚ್ಚಿಸುತ್ತದೆ

ಬಾಳೆಹಣ್ಣಿನಲ್ಲಿರುವ ಕರಗದ ನಾರು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಹಾಗೂ ಮಲಬದ್ದತೆಯಾಗದಂತೆ ತಡೆಯುತ್ತದೆ. ನಿತ್ಯವೂ ಒಂದು ಲೋಟ ಬಾಳೆಹಣ್ಣಿನ ಜ್ಯೂಸ್ ಕುಡಿಯುವ ಮೂಲಕ ಮಲಬದ್ದತೆಯಾಗದಂತೆ ನೋಡಿಕೊಳ್ಳಬಹುದು.

ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಬಾಳೆಹಣ್ಣಿನಲ್ಲಿ ಕಂಡುಬರುವ ಪೆಕ್ಟಿನ್ ಎಂಬ ಪೋಷಕಾಂಶ ಒಂದು ಕರಗುವ ನಾರು ಸಹಾ ಆಗಿದ್ದು ಇದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಆಗಿರುವ LDL ಕಡಿಮೆಗೊಳಿಸುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಆಗಿರುವ HDL ಅನ್ನು ಹಾಗೇ ಉಳಿಸಿಕೊಳ್ಳಲು ನೆರವಾಗುತ್ತದೆ. ಇದರ ಮೂಲಕ ಈ ಪೋಷಕಾಂಶ ನಮ್ಮ ಆರೋಗ್ಯದ ಅತ್ಯುತ್ತಮ ಸ್ನೇಹಿತನಾಗಿದೆ.

ಹೃದಯದ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಹೃದಯದ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವ ಮೂಲಕ ಹೃದಯದ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಬಾಳೆ ಹಣ್ಣಿನಲ್ಲಿರುವ ಅಧಿಕ ಪ್ರಮಾಣದ ಪೊಟ್ಯಾಶಿಯಂ ಲವಣಗಳೇ ಕಾರಣ. ಇದರಿಂದ ದೇಹದಲ್ಲಿ ಉಪ್ಪಿನ ಪ್ರಭಾವ ಗಣನೀಯವಾಗಿ ತಗ್ಗುತ್ತದೆ ತನ್ಮೂಲಕ ಅಧಿಕ ರಕ್ತದ ಒತ್ತಡ ಕಡಿಮೆಯಾಗುತ್ತದೆ.

ಅಲ್ಸರ್ ಇದ್ದವರಿಗೆ (ಕರುಳುವ್ರಣಗಳನ್ನು) ತಡೆಯುತ್ತದೆ

ಅಲ್ಸರ್ ಇದ್ದವರಿಗೆ (ಕರುಳುವ್ರಣಗಳನ್ನು) ತಡೆಯುತ್ತದೆ

ಹೊಟ್ಟೆಯಲ್ಲಿನ ಹುಣ್ಣು, ಕರುಳುವ್ರಣ ಅಥವಾ ಅಲ್ಸರ್ ಇದ್ದವರಿಗೆ ಬಾಳೆಹಣ್ಣು ಹೇಳಿ ಮಾಡಿಸಿದ ಆಹಾರವಾಗಿದೆ. ಬಾಳೆಯಲ್ಲಿರುವ ಪೋಷಕಾಂಶಗಳು ಹೊಟ್ಟೆಯೊಳಗೆ ಜಠರದ ಒಳಪದರದ ಮೇಲೆ ತೆಳುವಾದ ಪದರವೊಂದನ್ನು ನಿರ್ಮಿಸುತ್ತವೆ ಈ ಪದರ ಒಳಗೋಡೆಯನ್ನು ಆಮ್ಲದಿಂದ ರಕ್ಷಿಸುತ್ತದೆ. ಅಲ್ಲದೇ ಬ್ಯಾಕ್ಟೀರಿಯಾಗಳ ಧಾಳಿಯನ್ನೂ ತಡೆದು ಹೊಟ್ಟೆ ಕರುಳುಗಳಲ್ಲಿ ವ್ರಣವಾಗದಂತೆ ನೆರವಾಗುತ್ತದೆ.

ಮೆದುಳಿನ ಕ್ಷಮತೆ ಹೆಚ್ಚುತ್ತದೆ

ಮೆದುಳಿನ ಕ್ಷಮತೆ ಹೆಚ್ಚುತ್ತದೆ

ಪ್ರತಿದಿನ ಉಪಾಹಾರಕ್ಕಾಗಿ ಒಂದು ಲೋಟ ಬಾಳೆಹಣ್ಣಿನ ಜ್ಯೂಸ್ ಕುಡಿದರೆ ಮೆದುಳಿನ ಕ್ಷಮತೆ, ಸ್ಮರಣಶಕ್ತಿ ಹೆಚ್ಚುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಸ್ಮರಣಶಕ್ತಿ ಹೆಚ್ಚಲು ಬಾಳೆಯಲ್ಲಿನ ಪೊಟಾಶಿಯಂ ನೆರವಾಗುತ್ತದೆ.

ಮೂತ್ರಪಿಂಡಗಳಿಗೆ ಆರೈಕೆ ನೀಡುತ್ತದೆ

ಮೂತ್ರಪಿಂಡಗಳಿಗೆ ಆರೈಕೆ ನೀಡುತ್ತದೆ

ಬಾಳೆಯಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ನಮ್ಮ ಮೂತ್ರಪಿಂಡಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಅಲ್ಲದೇ ಬಾಳೆಯಲ್ಲಿನ ಪೊಟಾಶಿಯಂ ಉಪ್ಪಿನ ಋಣಾತ್ಮಕ ಪ್ರಭಾವಗಳನ್ನು ತಪ್ಪಿಸುವ ಮೂಲಕ ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕ್ತಿ ಮತ್ತು ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ರೋಗ ನಿರೋಧಕ ಶಕ್ತಿ ಮತ್ತು ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ಬಾಳೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಬಿ, ಸಿ ಮತ್ತು ಇತರ ಪೋಷಕಾಂಶಗಳು ರೋಗ ನಿರೋಧಕ ಶಕ್ತಿ ಮತ್ತು ನರವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತವೆ.

ಬಾಳೆಹಣ್ಣಿನ ಜ್ಯೂಸ್ ತಯಾರಿಸುವ ವಿಧಾನ

ಬಾಳೆಹಣ್ಣಿನ ಜ್ಯೂಸ್ ತಯಾರಿಸುವ ವಿಧಾನ

ಎರಡು ಬಾಳೆಹಣ್ಣನ್ನು ಸುಲಿದು ಚಿಕ್ಕ ತುಂಡುಗಳನ್ನಾಗಿಸಿ. ಇದನ್ನು ಅರ್ಧ ಲೋಟ (120ಮಿ.ಲೀ) ಹಾಲು, ಎರಡು ಚಿಕ್ಕ ಚಮಚ ಜೇನು, ಸಾಧ್ಯವಾದರೆ ಒಂದು ಏಲಕ್ಕಿ ಅಥವಾ ವನಿಲ್ಲಾ ಕೋಡನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಸುಮಾರು ಒಂದು ನಿಮಿಷ ಗೊಟಾಯಿಸಿ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನೀರು ಬೇಕಿದ್ದರೆ ಸೇರಿಸಬಹುದು. ಸಕ್ಕರೆ ಮಾತ್ರ ಬೆರೆಸಬೇಡಿ.

English summary

Drink A Glass Of Banana Juice Every Day To Stay Healthy

Banana might lose the race to fruits like mango or apple in terms of the elite value, but it is the most popular one in terms of health, as it is a powerhouse of minerals and vitamins. From eating a whole banana to having it in fruit salad or through a shake, the benefits of banana are always high.
X
Desktop Bottom Promotion