For Quick Alerts
ALLOW NOTIFICATIONS  
For Daily Alerts

ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

By Deepak M
|

ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ ಸಂಗತಿಯಾಗಿದೆ. ಬಾಳೆಹಣ್ಣಿನ ಸಿಪ್ಪೆಯನ್ನು ಯಾರಾದರೂ ತಿನ್ನುತ್ತಾರೆಯಾ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡಬಹುದು. ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ ಎಂದು ಕೆಲವೊಂದು ಅಧ್ಯಯನಗಳು ಮನಗಂಡಿವೆ.

ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇದೆ. ಇಷ್ಟು ಮಾತ್ರವಲ್ಲದೆ ಮೆಗ್ನಿಶಿಯಂ, ಪೊಟಾಶಿಯಂ, ನಾರಿನಾಂಶ ಮತ್ತು ಪ್ರೋಟೀನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ಆದರೆ ಸಾವಯವಾಗಿರುವಂತಹ ಬಾಳೆಹಣ್ಣನ್ನು ಇದಕ್ಕೆ ಬಳಸಿಕೊಳ್ಳಿ. ಬಾಳೆಹಣ್ಣಿನ ಸಿಪ್ಪೆಯಿಂದ ಯಾವೆಲ್ಲಾ ಆರೋಗ್ಯ ಲಾಭಗಳು ಇವೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ತಿಳಿಸಿಕೊಡಲಿದೆ. ಇದನ್ನು ಓದಿಕೊಳ್ಳಿ.

ಹೊಳೆಯುವ ಹಲ್ಲುಗಳಿಗಾಗಿ

ಹೊಳೆಯುವ ಹಲ್ಲುಗಳಿಗಾಗಿ

ಪ್ರತಿದಿನ ಒಂದು ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಹಾಕಿ ಚೆನ್ನಾಗಿ ಉಜ್ಜಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ. ಇದನ್ನು ಮಾಡಲಿಲ್ಲವಾದಲ್ಲಿ ನೀವು ನಿಮ್ಮ ದಂತ ವೈಧ್ಯರಿಗೆ ಸಾವಿರಾರು ರೂಪಾಯಿಯನ್ನು ವ್ಯಯಿಸಬೇಕಾಗುತ್ತದೆ.

ನರವಲಿ ( ವಾರ್ಟ್ಸ್)

ನರವಲಿ ( ವಾರ್ಟ್ಸ್)

ನಿಮ್ಮ ತ್ವಚೆಯ ಮೇಲೆ ಉಂಟಾಗುವ ನರವಲಿಗಳನ್ನು ( ಚರ್ಮದ ಮೇಲಿನ ಗ್ರಂಥಿಗಳನ್ನು) ನಿವಾರಿಸಲು ಬಾಳೆಹಣ್ಣಿನ ಸಿಪ್ಪೆ ರಾಮಬಾಣ. ಸಿಪ್ಪೆಯನ್ನು ನರವಲಿಗಳು ಇರುವ ಭಾಗದಲ್ಲಿ ರಾತ್ರಿಯೇ ಉಜ್ಜಿ ಮಲಗಿ, ಇಲ್ಲವಾದಲ್ಲಿ ನರವಲಿಗಳು ಇರುವ ಜಾಗದಲ್ಲಿ ಸಿಪ್ಪೆಯನ್ನು ಬಟ್ಟೆಯ ಸಹಾಯದಿಂದ ಕಟ್ಟಿ ರಾತ್ರಿಯೆಲ್ಲಾ ಹಾಗೆಯೇ ಬಿಡಿ. ಇದು ಮಾಡಲು ಸುಲಭ, ಇದರ ಫಲಿತಾಂಶ ಅಷ್ಟೇ ಪರಿಣಾಮಕಾರಿ.

ಸಿಪ್ಪೆಯನ್ನು ತಿನ್ನಿ!

ಸಿಪ್ಪೆಯನ್ನು ತಿನ್ನಿ!

ಬಾಳೆಹಣ್ಣಿನ ಸಿಪ್ಪೆಯನ್ನು ಸಹ ತಿನ್ನಬಹುದು. ಛೇ! ಎನ್ನಬೇಡಿ. ಭಾರತೀಯ ಆಹಾರ ಪದ್ಧತಿಯಲ್ಲಿ ಇದನ್ನು ಹಾಕಿ ಹಲವಾರು ರೀತಿಯ ಆಹಾರಗಳನ್ನು ಮಾಡುತ್ತಾರೆ. ಇದರ ಜೊತೆಗೆ ಕೋಳಿ ಮಾಂಸದ ತಾಜಾತನವನ್ನು ಉಳಿಸಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆಯನ್ನು ಅದರ ಮೇಲೆ ಇಡುತ್ತಾರೆ.

ಮೊಡವೆಗಳು

ಮೊಡವೆಗಳು

ಮೊಡವೆಗಳು ಉಂಟಾದಾಗ ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಅದನ್ನು ಹಾಗೆಯೇ 30 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಜೊತೆಗೆ ಸಸ್ಯಜನ್ಯ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ನೋವು ಮತ್ತಷ್ಟು ಕಡಿಮೆಯಾಗುತ್ತದೆ.

ಸುಕ್ಕು ನಿವಾರಕ

ಸುಕ್ಕು ನಿವಾರಕ

ಬಾಳೆಹಣ್ಣಿನ ಸಿಪ್ಪೆಯು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತವೆ. ಬಾಳೆಹಣ್ಣಿನ ಸಿಪ್ಪೆಗೆ ಸ್ವಲ್ಪ ಮೊಟ್ಟೆಯ ಲೋಳೆಯನ್ನು ಬೆರೆಸಿ, ಇದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಬಿಡಿ. ನಂತರ ಮುಖ ತೊಳೆಯಿರಿ. ಇದರಿಂದ ಸುಕ್ಕುನಿವಾರಣೆಯಾಗುತ್ತದೆ.

ನೋವು ನಿವಾರಕ

ನೋವು ನಿವಾರಕ

ಬಾಳೆಹಣ್ಣಿನ ಸಿಪ್ಪೆಯನ್ನು ನೇರವಾಗಿ ನೋವಾಗುತ್ತಿರುವ ಜಾಗಕ್ಕೆ ಲೇಪಿಸಿ. ಇದನ್ನು ಹಾಗೆಯೇ 30 ನಿಮಿಷ ಬಿಡಿ. ನೋವು ನಿವಾರಣೆಯಾಗುತ್ತದೆ. ಇದರ ಉತ್ತಮ ಫಲಿತಾಂಶಕ್ಕಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸಿ.

ಸೋರಿಯಾಸಿಸ್

ಸೋರಿಯಾಸಿಸ್

ಸೋರಿಯಾಸಿಸ್ ಉಂಟಾದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೊಯಿಶ್ಚರೈಸರ್ ಗುಣಗಳು ತುರಿಕೆಯನ್ನು ನಿವಾರಿಸುತ್ತವೆ. ಇದು ಸೋರಿಯಾಸಿಸ್‍ನಿಂದ ತಕ್ಷಣ ಉಪಶಮನವನ್ನು ಒದಗಿಸುತ್ತದೆ. ಅದನ್ನು ನೀವು ಕಣ್ಣಾರೆ ನೋಡಬಹುದು.

ಕ್ರಿಮಿಕೀಟಗಳ ಕಡಿತಕ್ಕೆ

ಕ್ರಿಮಿಕೀಟಗಳ ಕಡಿತಕ್ಕೆ

ಕ್ರಿಮಿಕೀಟಗಳು ಕಚ್ಚಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ಇದರಿಂದ ತುರಿಕೆ ಮತ್ತು ನೋವುಗಳು ತಕ್ಷಣ ನಿವಾರಣೆಯಾಗುತ್ತದೆ.

ಶೂ, ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ಪಾಲಿಶ್ ಮಾಡಲು

ಶೂ, ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ಪಾಲಿಶ್ ಮಾಡಲು

ಬಾಳೆ ಹಣ್ಣಿನ ಸಿಪ್ಪೆಯನ್ನು ಶೂ , ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ತಕ್ಷಣ ಹೊಳಪು ನೀಡಲು ಬಳಸಬಹುದು. ಇದಕ್ಕಾಗಿ ಸಿಪ್ಪೆಯನ್ನು ಅವುಗಳ ಮೇಲೆ ಉಜ್ಜಿ.

ಯು.ವಿ ಕಿರಣಗಳಿಂದ ರಕ್ಷಣೆಗೆ

ಯು.ವಿ ಕಿರಣಗಳಿಂದ ರಕ್ಷಣೆಗೆ

ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಸುತ್ತ ಲೇಪಿಸುವುದರಿಂದ ಯು.ವಿ.ಕಿರಣಗಳಿಂದ ರಕ್ಷಣೆ ಪಡೆಯಬಹುದು. ಹೀಗೆ ಮಾಡುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಬಿಡಿ, ನಂತರ ಹಚ್ಚಿ. ಹೀಗೆ ಮಾಡುವುದರಿಂದ ಕಣ್ಣಿನ ಪೊರೆ ಬರದಂತೆ ಸಹ ತಡೆಯಬಹುದು.

English summary

Health Benefits Of Banana Peels

Banana flesh is rich in many nutrients and carbohydrates. The flesh is high in vitamins B-6, B-12, magnesium and potassium. Content of sugar is highest when the banana peel turns black.
X
Desktop Bottom Promotion