ಈ ಕಾಯಿಲೆ ಬಂದರೆ ಇಪ್ಪತ್ತನಾಲ್ಕು ಗಂಟೆಯಲ್ಲಿ ಸಾವು ಖಚಿತ!

By Manu
Subscribe to Boldsky

ಕಾಯಿಲೆಗಳ ಬಗ್ಗೆ ಚಲನಚಿತ್ರಗಳಲ್ಲಿ ನಿಜಾಂಶಕ್ಕಿಂತಲೂ ಉತ್ಪ್ರೇಕ್ಷೆಯೇ ಹೆಚ್ಚು. ಕೆಲವು ಕಾಯಿಲೆಗಳು ಒಮ್ಮೆ ಆವರಿಸಿತು ಎಂದರೆ ಇದನ್ನು ತಡೆಯಲು ಸಾಧ್ಯವೇ ಇಲ್ಲ. ಸಾವು ನಿಶ್ಚಿತವಾಗಿದ್ದು ಇದನ್ನು ಕೊಂಚಕಾಲ ಮುಂದೂಡಬಹುದು ಅಷ್ಟೇ. ಇದನ್ನೇ ಕಥಾವಸ್ತುವನ್ನಾಗಿಸಿ ಎಷ್ಟೋ ಚಲನಚಿತ್ರಗಳು ಜಯಭೇರಿ ಬಾರಿಸಿವೆ. ಹಿಂದಿಯ ಆನಂದ್ ಇದಕ್ಕೊಂದು ಜ್ವಲಂತ ಉದಾಹರಣೆ.  ಪುರುಷರೇ ಈ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ!

ಇಂದು ವ್ಯಾಪಕ ಪ್ರಚಾರದ ಮೂಲಕ ಹೆಚ್ ಐ ವಿ, ಏಡ್ಸ್, ಕ್ಯಾನ್ಸರ್ ಮೊದಲಾದ ರೋಗಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿದ್ದು ಇದನ್ನು ಹರಡುವ ವಿಧಾನಗಳನ್ನು ಜನರು ಅರಿತುಕೊಂಡಿದ್ದಾರೆ. ಕೆಲವು ಕಾಯಿಲೆಗಳು ನಿಧಾನವಾಗಿ ವ್ಯಾಪಿಸುತ್ತಾ ಕಡೆಗೊಂದು ದಿನ ಪ್ರಾಣವನ್ನು ಆಹುತಿ ತೆಗೆದುಕೊಳ್ಳುತ್ತವೆ.      ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಧೂಮಪಾನ ಮದ್ಯಪಾನಗಳಿಂದ ಕ್ಯಾನ್ಸರ್ ಬರುತ್ತದೆ ಎಂದು ತಿಳಿದಿದ್ದರೂ ಜನರು ಇದನ್ನು ಬಿಡುವುದು ಕ್ಯಾನ್ಸರ್ ಪ್ರಾರಂಭವಾದ ಬಳಿಕವೇ. ಆಗ ತಡವಾಗಿರುತ್ತದೆ. ಆದರೆ ಇದಕ್ಕೂ ಭಯಾಯಕವಾದ ಇನ್ನೂ ಕೆಲವು ಮಾರಣಾಂತಿಕ ಕಾಯಿಲೆಗಳಿವೆ. ಇವು ಒಂದೇ ದಿನದಲ್ಲಿ ವ್ಯಕ್ತಿಯ ಪ್ರಾಣವನ್ನು ಹರಣ ಮಾಡುತ್ತವೆ. ಇವು ಯಾವುದು ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....

ಡೆಂಗಿ ಅಥವಾ ಡೆಂಗ್ಯೂ

ಡೆಂಗಿ ಅಥವಾ ಡೆಂಗ್ಯೂ

ಡೆಂಗ್ಯೂ ಎಂದೇ ಹೆಚ್ಚು ಜನರು ಉಚ್ಛರಿಸುವ ಈ ಜ್ವರ ಒಂದು ವೇಳೆ ಉಲ್ಬಣಗೊಂಡರೆ ಒಂದೇ ದಿನದಲ್ಲಿ ಪ್ರಾಣ ಹೋಗಬಹುದು. ಇಂದು ಭಾರತದಲ್ಲಿ ಸಾಮಾನ್ಯವಾಗಿರುವ ಈ ಕಾಯಿಲೆ ದೆಹಲಿ ಮತ್ತಿತರ ಕಡೇ ತಾಂಡವನೃತ್ಯ ಮಾಡುತ್ತಿದೆ.ಡೆಂಗ್ಯೂ ಜ್ವರದ ಹತೋಟಿಗೆ ಪಪ್ಪಾಯಿ ಗಿಡದ ಎಲೆಗಳೇ ಸಾಕು

ಡೆಂಗಿ ಅಥವಾ ಡೆಂಗ್ಯೂ

ಡೆಂಗಿ ಅಥವಾ ಡೆಂಗ್ಯೂ

ಆದ್ದರಿಂದ ಜ್ವರ ಬಂದ ತಕ್ಷಣ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೇ ಇದ್ದರೆ ಜ್ವರದ ಕಾರಣದಿಂದ ಮೆದುಳಿನಲ್ಲಿ ಆಂತರಿಕ ಸ್ರಾವವಾಗುವ ಮೂಲಕ ರಕ್ತಸಂಚಾರ ಸ್ಥಗಿತಗೊಂಡು ಸಾವು ಸಂಭವಿಸುತ್ತದೆ.

ಎಬೋಲಾ

ಎಬೋಲಾ

ಎಬೋಲಾ ಎಂಬ ವೈರಸ್ ನಿಂದ ಬರುವ ಈ ಕಾಯಿಲೆಗೆ ಎಬೋಲಾ ಕಾಯಿಲೆ ಎಂದೇ ಹೆಸರು. ಈ ಕಾಯಿಲೆಯಿಂದ ನಮ್ಮ ರಕ್ತದ ಬಿಳಿರಕ್ತಕಣಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ಪುಡಿಪುಡಿಯಾಗಿ ಹೋಗುತ್ತವೆ. ನಮ್ಮ ರಕ್ತ ಹೆಪ್ಪುಗಟ್ಟಲು ಬಿಳಿರಕ್ತಕಣಗಳು ತುಂಬಾ ಅಗತ್ಯ. ಈ ಕಾಯಿಲೆ ಉಲ್ಬಣಗೊಂಡ ಬಳಿಕ ದೇಹದ ಒಳಗೆ ಆಂತರಿಕ ಸ್ರಾವಗೊಂಡು ದೇಹದ ಮುಖ್ಯ ಅಂಗಗಳು ವಿಫಲವಾಗುತ್ತವೆ. ಅಂತಿಮವಾಗಿ ಸಾವು ಸಂಭವಿಸುತ್ತದೆ. ಎಚ್ಚರ; ಮಾರಕ ಎಬೋಲಾ ಜ್ವರದ ಲಕ್ಷಣಗಳೇನು?

ಬಾಬೋನಿಕ್ ಪ್ಲೇಗ್

ಬಾಬೋನಿಕ್ ಪ್ಲೇಗ್

ಈ ಜಗತ್ತಿನಿಂದ ಉಚ್ಛಾಟಿಸಲಾಗಿದೆ ಎಂದೇ ನಂಬಲಾಗಿದ್ದ ಈ ಕಾಯಿಲೆ ಮತ್ತೊಮ್ಮೆ ಜಗತ್ತಿನಲ್ಲಿ ಕಾಣಿಸಿಕೊಂಡಿದೆ. 1959ರಲ್ಲಿ ಇದು ವಿಶ್ವದಿಂದ ಅಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ.

ಆದರೆ ಇತ್ತೀಚೆಗೆ ಇದು ವಿಶ್ವದ ಕೆಲವು ಕಡೆ ಕಂಡುಬಂದಿದ್ದು ಆತಂಕ ಮೂಡಿಸಿದೆ. ಇದು ಆವರಿಸಿದ ಬಳಿಕ ದೇಹದ ಒಳಗಣ ಅಂಗಗಳಲ್ಲಿ ಬೆರಳುಗಳಂತಹ ದದ್ದುಗಳು ಏಳುತ್ತವೆ. ಒವು ಒಳಗಡೆ ಒಡೆದು ವಿಪರೀತವಾದ ಸೋಂಕು ಉಂಟುಮಾಡುತ್ತವೆ ಹಾಗೂ ಸಾವಿಗೆ ಕಾರಣವಾಗುತ್ತದೆ.

ಎಂಟಿರೋವೈರಸ್ (Enterovirus D68)

ಎಂಟಿರೋವೈರಸ್ (Enterovirus D68)

ಇದು ಸಹಾ ಇನ್ನೊಂದು ತರಹದ ವೈರಸ್ ಧಾಳಿಯಾಗಿದ್ದು ಇದು ದೇಹದ ದ್ರವವನ್ನೆಲ್ಲಾ ಅತಿ ಶೀಘ್ರವಾಗಿ ವ್ಯಾಪಿಸಿಬಿಡುತ್ತದೆ. ವಿಶೇಷವಾಗಿ ಶ್ವಾಸವ್ಯವಸ್ಥೆಯನ್ನು ಬಾಧಿಸಿ ಸೋಂಕು ತಗುಲಿದ ಕೆಲವೇ ಗಂಟೆಗಳಲ್ಲಿ ಸಾವಿಗೆ ಕಾರಣವಾಗುತ್ತದೆ.

ಛಾಗಸ್ ಕಾಯಿಲೆ (Chagas Disease)

ಛಾಗಸ್ ಕಾಯಿಲೆ (Chagas Disease)

ನಮ್ಮ ದೇಹದಲ್ಲಿ ಪರಾವಲಂಬಿ ಕೀಟಾಣುಗಳಾಗಿ ಪ್ರವೇಶ ಪಡೆಯುವ ಈ ಕ್ರಿಮಿಗಳು ಆಶ್ರಯ ಪಡೆದ ದೇಹವನ್ನೇ ತಿನ್ನಲು ಪ್ರಾರಂಭಿಸುತ್ತವೆ. ವಿಶೇಷವಾಗಿ ಹೃದಯ, ಜೀರ್ಣಾಂಗಗಳು, ನರಗಳನ್ನು ತಿನ್ನಲು ಪ್ರಾರಂಭಿಸುವ ಈ ಕೀಟಾಣುಗಳು ಅತಿ ಶೀಘ್ರವಾಗಿ ತಮ್ಮ ಸಂತಾನವನ್ನೂ ವೃದ್ದಿಸಿಕೊಳ್ಳುತ್ತವೆ. ಈ ಕೀಟಗಳು ಯಾವಾಗ ಹೃದಯ ತಿನ್ನಲು ಪ್ರಾರಂಭಿಸಿತೋ ಆಗಲೇ ಚಿಕಿತ್ಸೆ ಕೊಡಿಸದೇ ಇದ್ದರೆ ಕೆಲವೇ ಗಂಟೆಗಳಲ್ಲಿ ಸಾವು ನಿಶ್ಚಿತ.

ಕಾಲರಾ

ಕಾಲರಾ

ಕಾಲರಾ ರೋಗಿಯ ದೇಹದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ದ್ರವ ಹೊರಹೋಗುತ್ತದೆ ಹಾಗೂ ದೇಹವನ್ನು ಒಳಗಿನಿಂದ ತೀರಾ ಒಣದಾಗಿಸುತ್ತದೆ. ಅತಿ ಹೆಚ್ಚಿನ ಬೇಧಿ ಅಥವಾ ಅತಿ ಹೆಚ್ಚಿನ ವಾಂತಿ ಈ ರೋಗದ ಪ್ರಮುಖ ಲಕ್ಷಣ. ದೇಹದೊಳಗೆ ನೀರೇ ಇಲ್ಲದಿದ್ದಾಗ ಪ್ರಮುಖ ಅಂಗಗಳು ವಿಫಲವಾಗಲು ಪ್ರಾರಂಭಿಸುತ್ತವೆ. ಕಾಯಿಲೆ ಉಲ್ಬಣಗೊಂಡರೆ ಒಂದೇ ರಾತ್ರಿಯಲ್ಲಿ ರೋಗಿ ಕೊನೆಯುಸಿರೆಳೆಯಬಹುದು.

MRSA ಸೋಂಕು

MRSA ಸೋಂಕು

Methicillin-resistant Staphylococcus aureus (MRSA) ಎಂಬ ಹೆಸರಿನ ಈ ಸೋಂಕು ರಕ್ತ ಮತ್ತು ಶ್ವಾಸಕೋಶವನ್ನು ಅತಿ ಹೆಚ್ಚಾಗಿ ಬಾಧಿಸುತ್ತದೆ. ಒಮ್ಮೆ ಸೋಂಕು ಪ್ರಾರಂಭವಾದರೆ ಅತಿ ವೇಗವಾಗಿ ಇಡಿಯ ದೇಹವನ್ನು ಆವರಿಸುತ್ತಾ ಹೋಗುವ ಈ ಸೋಂಕು ಒಂದೇ ದಿನದಲ್ಲಿ ಸಾವಿಗೆ ಕಾರಣವಾಗುತ್ತದೆ.

ಮೆದುಳಿನ ಸ್ರಾವ

ಮೆದುಳಿನ ಸ್ರಾವ

cerebrovascular disease ಎಂಬ ಕಾಯಿಲೆಯಲ್ಲಿ ನಮ್ಮ ಮೆದುಳಿಗೆ ಹರಿಯುವ ರಕ್ತಸಂಚಾರಕ್ಕೆ ಯಾವುದೋ ಒಂದು ಕಡೆ ನರದಲ್ಲಿ ರಕ್ತ ಹೆಪ್ಪುಗಟ್ಟಿರುವ ಕಾರಣ ತಡೆಯುಂಟಾಗಿ ಸಾವಿಗೆ ಕಾರಣವಾಗುತ್ತದೆ. ಅಪಘಾತದಲ್ಲಿ ತಲೆಗೆ ಪೆಟ್ಟಾದರೆ ಸಾವು ಉಂಟಾಗಲೂ ಇದೇ ಕಾರಣ. ಹೆಲ್ಮೆಟ್ ಧರಿಸಿ ಎಂದು ಹೇಳುವುದು ಯಾಕಾಗಿ ಎಂದು ಈಗಲಾದರೂ ಅರ್ಥವಾಯ್ತಲ್ಲಾ!

 

 

For Quick Alerts
ALLOW NOTIFICATIONS
For Daily Alerts

    English summary

    Diseases That Can Kill A Person In 24 Hours!

    Many a times, disease and death are like a couple who like to visit people together! Depending on the type and severity of the disorder, usually a disease is followed by death.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more