For Quick Alerts
ALLOW NOTIFICATIONS  
For Daily Alerts

ಪುರುಷರೇ ಈ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ!

|

ಆರೋಗ್ಯದ ಬಗ್ಗೆ ಅಮೇರಿಕದಲ್ಲಿ ನಡೆಸಿದ ಸಂಶೋಧನೆಯು 'ಪುರುಷರು ತುಂಬಾ ಹುಷಾರು ತಪ್ಪಿದಾಗ ಮಾತ್ರ ವೈದ್ಯರನ್ನು ಕಾಣುತ್ತಾರೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ವೈದ್ಯರನ್ನು ಕಾಣಲು ಇಷ್ಟಪಡುವುದಿಲ್ಲ' ಎಂದು ಹೇಳಿದೆ.

ಸಣ್ಣ-ಪುಟ್ಟ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿ ಮುಂದೆ ಬಹು ದೊಡ್ಡ ಆರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅದರಲ್ಲೂ ಈ ಕೆಳಗಿನ ಸಮಸ್ಯೆಗಳು ಕಂಡು ಬಂದು ಅವುಗಳನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆಕ್ಕೆ ತೊಂದರೆ ಉಂಟಾಗಬಹುದು ಹುಷಾರ್...

Health Problem That Men Ignore

ಹೈಪರ್ ಟೆನ್ಷನ್: ಹೈಪರ್ ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡವು ತುಂಬಾ ಮಾನಸಿಕ ಒತ್ತಡದಿಂದಾಗಿ ಉಂಟಾಗುತ್ತದೆ. ಪ್ರತಿ 3 ಜನ ಪುರುಷರಲ್ಲಿ, ಒಬ್ಬರಲ್ಲಿ ಹೈಪರ್ ಟೆನ್ಷನ್ ಕಂಡು ಬರುತ್ತದೆ. ಹೈಪರ್ ಟೆನ್ಷನ್ ಕಾಯಿಲೆಯಿಂದ ಬರಬಹುದು, ವಂಶಪಾರಂಪರ್ಯವಾಗಿ ಬರಬಹುದು ಅಥವಾ ಕೆಟ್ಟ ಚಟಗಳಿಂದಲೂ ಬರಬಹುದು. ಹೈಪರ್ ಟೆನ್ಷನ್ ಬಂದರೆ ಗುಣ ಪಡಿಸಲು ಸಾಧ್ಯವಿಲ್ಲ ಆದರೆ ಉತ್ತಮವಾದ ಆಹಾರಕ್ರಮ, ವ್ಯಾಯಾಮ, ಯೋಗ ಇವುಗಳಿಂದ ನಿಯಂತ್ರಣದಲ್ಲಿಡಬಹುದು.

ಖಿನ್ನತೆ: ಖಿನ್ನತೆ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಕಾಣಬೇಕು. ಖಿನ್ನತೆಯಿಂದ ಸುಸ್ತು, ತಲೆ ನೋವು, ಬೆನ್ನು ನೋವು, ಮೈಕೈ ನೋವು, ನಿದ್ದೆಯಲ್ಲಿ ತೊಂದರೆ, ತಲೆಸುತ್ತು, ಹಸಿವು ಇಲ್ಲದಿರುವುದು ಮುಂತಾದ ತೊಂದರೆ ಕಾಣಿಸಿಕೊಳ್ಳಬಹುದು. ಖಿನ್ನತೆ ಕಾಯಿಲೆಯನ್ನು ಬೇರೆಯವರಿಗೆ ನಮ್ಮ ಸಮಸ್ಯೆ ಹೇಳಿ ಪರಿಹಾರ ಪಡೆಯುವುದರಿದ ಮಾತ್ರ ಗುಣ ಪಡಿಸಲು ಸಾಧ್ಯ.

ಕೆಳ ಹೊಟ್ಟೆಯಲ್ಲಿ ನೋವು: ಕೆಳ ಹೊಟ್ಟೆಯಲ್ಲಿ ತೊಂದರೆ ಕಂಡು ಬಂದರೆ ಪುರುಷರ ಮೂತ್ರಪಿಂಡದಲ್ಲಿ ತೊಂದರೆ ಇದ್ದರೆ ಆ ರೀತಿ ಉಂಟಾಗುತ್ತದೆ. ಕರುಳಿನಲ್ಲಿ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಈ ರೀತಿಯ ತೊಂದರೆ ಇದ್ದರೂ ಕೆಳ ಹೊಟ್ಟೆಯಲ್ಲಿ ನೋವು ಕಂಡು ಬರುತ್ತದೆ.

ತಲೆಸುತ್ತು: ನಲವತ್ತು ವರುಷ ಮೇಲ್ಪಟ್ಟ ಪುರುಷರಲ್ಲಿ ತಲೆಸುತ್ತು ಹೆಚ್ಚಾಗಿ ಕಂಡು ಬರುತ್ತದೆ. ದೇಹಕ್ಕೆ ಅಗತ್ಯವಾದ ಆಮ್ಲಜನಕ ಪೂರೈಕೆಯಾಗದಿದ್ದಾಗ ಈ ರೀತಿಯ ತಲೆಸುತ್ತು ಕಂಡು ಬರುತ್ತದೆ.

ಆದ್ದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.

English summary

Health Problem That Men Ignore | Tips For Health | ಪುರುಷರೇ ಈ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Men feel embarrassed if they are advised to go to a doctor. According to a survey by the American Academy of Family Physicians, 38 percent of men go to the doctor only when they're extremely sick or when symptoms don't go away on their own.
X
Desktop Bottom Promotion