For Quick Alerts
ALLOW NOTIFICATIONS  
For Daily Alerts

ಎಚ್ಚರ; ಮಾರಕ ಎಬೋಲಾ ಜ್ವರದ ಲಕ್ಷಣಗಳೇನು?

By Super
|

ಇಡೀ ಪ್ರಪಂಚವೇ ಇಂದು ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಎಬೋಲಾ ಜ್ವರದ ಕುರಿತಾಗಿ ಚಿಂತೆ ಮಾಡುತ್ತಿದೆ. ಇದರ ಜೊತೆಗೆ ಅಮೆರಿಕಾ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಸಹ ಇದರಿಂದಾಗಿ ಮೃತಪಟ್ಟಿದ್ದಾರೆ. ಎಬೋಲಾ ಎನ್ನುವುದು ಒಂದು ಬಗೆಯ ವೈರಸ್‍ನಿಂದ ಹರಡುವ ಜ್ವರವಾಗಿದ್ದು, ಇದು ಬಂದರೆ 90% ಸಾವು ಖಚಿತ, ಇದಕ್ಕೆ ಯಾವುದೇ ಔಷಧಿಯನ್ನು ಇನ್ನೂ ಕಂಡು ಹಿಡಿಯಲಾಗಲಿಲ್ಲ. ಈ ಕಾರಣವೇ ಸಾಕು ಅದರ ಕುರಿತಾಗಿ ನಾವು ಭಯಪಡಲು. ಆದರೂ ಸಹ ಎಬೋಲಾ ಕೆಲವೊಂದು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಅದರ ಕುರಿತಾದ ಗಾಳಿ ಸುದ್ದಿ ಮತ್ತು ಸಾಮಾನ್ಯ ಜ್ವರವನ್ನು ಎಬೋಲಾ ಎಂದು ತಿಳಿದು ಭಯಪಡುವುದನ್ನು ತಡೆಯಬಹುದು.

ಎಬೋಲಾ ಎಂಬುದು ಮೂಲತಃ ಪ್ರಾಣಿಗಳಲ್ಲಿ ಕಂಡು ಬರುವ ಒಂದು ಬಗೆಯ ವೈರಸ್. ಯಾವಾಗ ಮನುಷ್ಯರು ಇದರ ಸಂಪರ್ಕಕ್ಕೆ ಬರುತ್ತಾರೋ, ಆಗ ಎಬೋಲಾವು ಕಾಣಿಸಿಕೊಳ್ಳುತ್ತದೆ. ಈ ಬಗೆಯ ಜ್ವರವು 1976ರಿಂದ ಹಲವಾರು ಬಾರಿ ಕಾಣಿಸಿಕೊಂಡಿದೆ. ಈ ವೈರಸ್ ಹೆಚ್ಚಾಗಿ ಆಫ್ರಿಕಾದ ನಿತ್ಯ ಹರಿದ್ವರ್ಣದ ಮಳೆಕಾಡುಗಳಲ್ಲಿ ಕಂಡು ಬರುತ್ತದೆ.

ಎಬೋಲಾವು ಬಹುಬೇಗನೆ ಹರಡುವ ಗುಣಗಳನ್ನು ಹೊಂದಿದೆ. ಎಬೋಲಾದ ಲಕ್ಷಣಗಳನ್ನು ನೀವು ತಿಳಿದುಕೊಳ್ಳುವ ಮೊದಲು, ಅದು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.ಇದು ಗಾಳಿ, ನೀರು ಅಥವಾ ಆಹಾರದಿಂದ ಹರಡುವ ಕಾಯಿಲೆಯಲ್ಲ. ಈ ವೈರಲ್ ಜ್ವರವು ಕೇವಲ ಸಂಪರ್ಕದ ಮೂಲಕ ಮಾತ್ರ ಹರಡುತ್ತದೆ. ಎಬೋಲಾದ ಬಹುತೇಕ ಲಕ್ಷಣಗಳು ಡೆಂಗ್ಯೂ, ಮಲೇರಿಯಾ ಮುಂತಾದ ಜ್ವರಗಳ ರೀತಿಯಲ್ಲಿಯೇ ಇರುತ್ತದೆ.

ಇದರ ಒಂದು ನಿರ್ದಿಷ್ಟ ಗುಣ ಲಕ್ಷಣವೆಂದರೆ ಈ ಜ್ವರ ಬಂದಾಗ ರಕ್ತ ಸ್ರಾವವಾಗುತ್ತದೆ, ಇದು ತೀವ್ರವಾಗಬಹುದು ಅಂದರೆ ಹೆಮೊರ್ರೇಜ್ ಎಂಬ ಮಾದರಿಯ ರಕ್ತ ಸ್ರಾವವನ್ನು ಉಂಟು ಮಾಡಬಹುದು. ಎಬೊಲಾದ ವೈರಸ್‍ಗೆ ತುತ್ತಾದವರ ಮೂಗು, ಕಣ್ಣು, ಕಿವಿ ಮತ್ತು ಗುದ ದ್ವಾರದಿಂದ ಸಾಮಾನ್ಯವಾಗಿ ರಕ್ತ ಸ್ರಾವವಾಗುತ್ತದೆ. ಒಮ್ಮೊಮ್ಮೆ ಇದು ಸಾವಿಗೂ ಕಾರಣವಾಗುವುದುಂಟು. ಇಲ್ಲಿ ನಾವು ಎಬೊಲಾವನ್ನು ಗುರುತಿಸಲು ಅಗತ್ಯವಾದ ಕೆಲವೊಂದು ಲಕ್ಷಣಗಳ ಪಟ್ಟಿಯನ್ನು ನಿಮ್ಮ ಮಾಹಿತಿಗಾಗಿ ಒದಗಿಸುತ್ತಿದ್ದೇವೆ ಓದಿಕೊಳ್ಳಿ.

ಅವರೆಕಾಳಿನ ಭೂಗೋಳ, ಚರಿತ್ರೆ ಮತ್ತು ವರ್ತಮಾನ!

ತಲೆನೋವು

ತಲೆನೋವು

ತಲೆನೋವು ಜ್ವರದ ಜೊತೆಗೆ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಲಕ್ಷಣ. ತಲೆನೋವು ಜ್ವರ ಎರಡೂ ಒಟ್ಟಿಗೆ ಬಂದಾಗ ಎಬೋಲಾವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಕಷ್ಟ. ಆದರೆ ನೀವೇನಾದರು ಎಬೋಲಾದಿಂದ ನರಳುತ್ತಿರುವ ರೋಗಿಯ ಸುತ್ತ ಮುತ್ತ ಓಡಾಡುತ್ತಿದ್ದು, ನಿಮಗೆ ಸಹಿಸಲಸಾಧ್ಯವಾದ ತಲೆನೋವು ಬಂದಲ್ಲಿ, ಮೊದಲು ವೈದ್ಯರಿಗೆ ತೋರಿಸಿಕೊಳ್ಳುವುದು ಒಳ್ಳೆಯದು.

ನಿಶ್ಶಕ್ತಿ

ನಿಶ್ಶಕ್ತಿ

ಎಬೋಲಾ ಬಂದಾಗ ನೀವು ತೀವ್ರತರದ ಕಿರಿಕಿರಿಗೆ ಒಳಪಡುತ್ತೀರಿ. ಈ ಇನ್‍ಫೆಕ್ಷನ್ ನಿಮ್ಮ ದೇಹವನ್ನು ಹೊಕ್ಕಾಗ ನಿಮಗೆ ಸುಸ್ತು, ಚಡಪಡಿಕೆಗಳು ಮತ್ತು ನೋವು ಕಾಣಿಸಿಕೊಂಡು ನಿಮ್ಮ ದೇಹವನ್ನು ನಿಶ್ಶಕ್ತಿ ಮಾಡುತ್ತದೆ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಸರಿಯಾಗಿ ಉಸಿರಾಡಲು ಆಗದೆ ಉಬ್ಬಸ ಬಂದ ಹಾಗೆ ಕಡಿಮೆ ಉಸಿರಾಟ ಮಾಡುವುದು ಎಬೋಲಾ ಒಂದು ಲಕ್ಷಣ. ನಿಮಗೆ ಜ್ವರ ಬಂದಿದ್ದು, ಉಸಿರಾಟ ಮಾಡಲು ನಿಮಗೆ ಕಷ್ಟವಾಗುತ್ತಿದ್ದರೆ, ಒಮ್ಮೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಒಳ್ಳೆಯದು.

ಶೀತ

ಶೀತ

ಶೀತವು ಡೆಂಗ್ಯೂ, ಮಲೇರಿಯಾ ಮತ್ತು ಎಬೋಲಾಗಳ ಸಾಮಾನ್ಯ ಲಕ್ಷಣ. ಆದರೂ ಎಬೋಲಾ ಬಂದಿರುವವರಿಗೆ ಜ್ವರ ಬಂದಾಗ ಶೀತ ಕಾಣಿಸಿಕೊಳ್ಳುತ್ತದೆ.

ದೇಹದಲ್ಲಿ ನೋವು

ದೇಹದಲ್ಲಿ ನೋವು

ಜ್ವರ ಬಂದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾದ ಲಕ್ಷಣವೇ. ಆದರೂ ಎಬೋಲಾದಿಂದ ಜ್ವರ ಬಂದಾಗ ನಿಮ್ಮ ದೇಹದಲ್ಲಿನ ರಕ್ತವು ತ್ವಚೆಯ ಕೆಳಗೆ ಸಂಗ್ರಹವಾಗುತ್ತ ಹೋಗಿ ಮುಂದೆ ರಕ್ತ ಸ್ರಾವಕ್ಕೆ ಎಡೆಮಾಡಿಕೊಡುವುದರಿಂದ ನೋವು ಸ್ವಲ್ಪ ಹೆಚ್ಚೇ ಕಾಣಿಸಿಕೊಳ್ಳುತ್ತದೆ.

ಮಲದಲ್ಲಿ ರಕ್ತ

ಮಲದಲ್ಲಿ ರಕ್ತ

ಎಬೋಲಾ ಬಂದಾಗ ಮಲದಲ್ಲಿ ಸಹ ರಕ್ತವು ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಮಯದಲ್ಲಿ ಕರುಳಿನಲ್ಲೂ ಸಹ ರಕ್ತ ಸ್ರಾವವಾಗುತ್ತದೆ. ಹೆಂಗಸರಲ್ಲಿ ಜನನಾಂಗದ ರಕ್ತ ಸ್ರಾವವನ್ನು ಸಹ ನಾವು ಕಾಣಬಹುದು.

ರಕ್ತದಿಂದ ಕೂಡಿದ ಗುಳ್ಳೆಗಳು

ರಕ್ತದಿಂದ ಕೂಡಿದ ಗುಳ್ಳೆಗಳು

ನಿಮ್ಮ ತ್ವಚೆಯು ಎಬೋಲಾದಿಂದ ಭಾದಿತಗೊಳ್ಳುವುದರಿಂದ ಇದು ರೋಗಿಗೆ ಅಸಾಧ್ಯವಾದ ವೇದನೆಯನ್ನು ನೀಡುತ್ತದೆ.

ಕಣ್ಣುಗಳಲ್ಲಿ, ಮೂಗಿನಲ್ಲಿ ಮತ್ತು ಕಿವಿಯಲ್ಲಿ ರಕ್ತಸ್ರಾವ

ಕಣ್ಣುಗಳಲ್ಲಿ, ಮೂಗಿನಲ್ಲಿ ಮತ್ತು ಕಿವಿಯಲ್ಲಿ ರಕ್ತಸ್ರಾವ

ಎಬೋಲಾದ ಮುಂದಿನ ಹಂತದಲ್ಲಿ ತೀವ್ರತರಹದ ರಕ್ತಸ್ರಾವ ( ಹೆಮೊರ್ರೇಜಿಕ್ ಬ್ಲೀಡಿಂಗ್) ಕಾಣಿಕೊಂಡಾಗ ಕಣ್ಣುಗಳಲ್ಲಿ, ಮೂಗಿನಲ್ಲಿ ಮತ್ತು ಕಿವಿಯಲ್ಲಿ ರಕ್ತಸ್ರಾವವುಂಟಾಗುತ್ತದೆ. ಇದು ಇನ್‍ಫೆಕ್ಷನ್ ತಗುಲಿ 3-4 ವಾರಗಳ ಕಾಲ ಚಿಕಿತ್ಸೆ ಪಡೆಯದಿದ್ದಾಗ ಕಾಣಿಸಿಕೊಳ್ಳುತ್ತದೆ.

ದವಡೆಗಳಲ್ಲಿ ರಕ್ತಸ್ರಾವ

ದವಡೆಗಳಲ್ಲಿ ರಕ್ತಸ್ರಾವ

ನಿಮಗೆ ಎಬೋಲಾ ವೈರಸ್ ತಗುಲಿದಾಗ ಬಾಯಿ ಒಳಗೆ ಕೆಂಪಗಾಗುತ್ತದೆ ಮತ್ತು ದವಡೆಗಳಲ್ಲಿ ರಕ್ತ ಸ್ರಾವವು ಕಾಣಿಸಿಕೊಳ್ಳುತ್ತದೆ.

ವಾಂತಿ

ವಾಂತಿ

ವಾಂತಿ ಮತ್ತು ನಿರ್ಜಲೀಕರಣಗಳು ಎಬೋಲಾ ಜ್ವರ ಬಂದಾಗ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ. ಒಂದು ವೇಳೆ ರೋಗಿಯು ಹೆಚ್ಚಿಗೆ ವಾಂತಿ ಮಾಡಿಕೊಳ್ಳುತ್ತಿದ್ದಲ್ಲಿ, ಅವರಿಗೆ ಅಗತ್ಯವಾದ ದ್ರವಾಹಾರವನ್ನು ಆಗಾಗ ನೀಡುತ್ತಿರಬೇಕು.

ವಾಸಿಯಾಗದ ತೀವ್ರತರಹದ ಜ್ವರ

ವಾಸಿಯಾಗದ ತೀವ್ರತರಹದ ಜ್ವರ

ಯಾವುದೇ ಜ್ವರವು ವಾಸಿಯಾಗದಿದ್ದರೆ ಆಗ ಅಪಾಯ ಕಟ್ಟಿಟ್ಟ ಬುತ್ತಿ. ಒಂದು ವೇಳೆ ನಿಮಗೆ ಜ್ವರ ಬಂದು ವಾರವಾದರು ವಾಸಿಯಾಗಲಿಲ್ಲವಾದಲ್ಲಿ, ಮೊದಲು ಅದನ್ನು ಪರೀಕ್ಷೆ ಮಾಡಿಸಿಕೊಳ್ಳಿ.

English summary

Warning Symptoms Of Ebola Fever

The entire world is worried about the Ebola outbreak in Africa. There have been fatalities in USA and the gulf as well. As ebola is a viral fever that has no vaccines and 90 percent mortality rate, it is natural to be fearful of it.
X
Desktop Bottom Promotion