Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್
ಇಂದು ಮಾರುಕಟ್ಟೆಯಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಹತ್ತು ಹಲವು ಔಷಧಿ ಮತ್ತು ಆಹಾರಗಳು ಲಭ್ಯವಿವೆ. ಹಲವು ಸಂಶೋಧನೆಗಳ ಮೂಲಕ ಕೆಲವು ಆಹಾರಗಳು ಕ್ಯಾನ್ಸರ್ ಆವರಿಸುವ ಸಾಧ್ಯತೆಗಳನ್ನು ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ. ಎಚ್ಚರ; ಈ 5 ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು!
ಇಂತಹದ್ದೇ ಒಂದು ಔಷಧಿಯಾದ ಅಮೃತ್ ನೋನಿ ಒಂದು ಆಯುರ್ವೇದೀಯ ದ್ರವವಾಗಿದ್ದು ಇದನ್ನು ಪ್ರತಿನಿತ್ಯ ಕುಡಿಯುವ ಮೂಲಕ ಹತ್ತು ಹಲವು ರೋಗಗಳನ್ನು ದೂರವಿಡಬಹುದು ಎಂದು ದಿವಂಗತ ಕಲಾಂ ರವರೇ ಗುಣಗಾನ ಮಾಡಿದ್ದಾರೆ. ಆದರೆ ಈ ದ್ರವಗಳು ದುಬಾರಿಯೂ ಆದುದರಿಂದ ನಿತ್ಯದ ಸೇವನೆ ಜೇಬಿಗೆ ಕತ್ತರಿ ಹಾಕುವುದಂತೂ ಖಂಡಿತ. ಆದರೆ ಇಷ್ಟೇ ಫಲಪ್ರದವಾದ ಈ ದ್ರವವನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳುವಂತಹದ್ದಾಗಿದ್ದರೆ? ಸದ್ದು ಮಾಡದೇ ಸೈಲೆಂಟ್ ಆಗಿ ಕಾಡುವ ಕ್ಯಾನ್ಸರ್‌ನ ಲಕ್ಷಣಗಳಿವು!
ಹೌದು, ಇದು ಸಾಧ್ಯ. ಇಂದು ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬ ಅಮೂಲ್ಯವಾದ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ನಿಮಗೆ ತಿಳಿಸಿಕೊಡುತ್ತಿದೆ. ಈ ಪೇಯವನ್ನು ನಿತ್ಯವೂ ಊಟಕ್ಕೆ ಮುನ್ನ ಮೂರು ಬಾರಿ ಕುಡಿಯುವ ಮೂಲಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಫಲಪ್ರದ ಔಷಧಿಗೂ ಮಿಗಿಲಾದ ದ್ರವವನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಿ ವಿವಿಧ ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ
ಇದೇ ಸಮಯದಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ಈ ಅದ್ಭುತ ದ್ರವ ನೆರವಾಗುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತನ್ಮೂಲಕ ಕ್ಯಾನ್ಸರ್‌ನ ಹೊರತಾಗಿ ಇನ್ನೂ ಹಲವಾರು ವ್ಯಾಧಿಗಳಿಂದ ದೇಹವನ್ನು ರಕ್ಷಿಸುತ್ತದೆ. ಬನ್ನಿ, ಈ ಅದ್ಭುತ ಪೇಯ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ...

ಅಗತ್ಯವಿರುವ ಸಾಮಾಗ್ರಿಗಳು
*ಕ್ಯಾರೆಟ್ - ಅರ್ಧ ಕೇಜಿ
*ಬೀಟ್ ರೂಟ್ - ಅರ್ಧ ಕೇಜಿ
*ಒಣ ಅಪ್ರಿಕಾಟ್ ಹಣ್ಣುಗಳು(Dried apricots)-ಇಪ್ಪತ್ತು ಗ್ರಾಂ
*ಒಣ ದ್ರಾಕ್ಷಿ - ಇಪ್ಪತ್ತು ಗ್ರಾಂ
*ನೀರು ಎರಡು ಕಪ್
*ಜೇನುತುಪ್ಪ: ಎರಡು ದೊಡ್ಡ ಚಮಚ

ತಯಾರಿಸುವ ವಿಧಾನ
1) ಕ್ಯಾರೆಟ್ ಮತ್ತು ಬೀಟ್ ರೂಟ್ ಗಳನ್ನು ಚಿಕ್ಕದಾಗಿ ತುಂಡರಿಸಿಕೊಳ್ಳಿ
2) ಒಂದು ಪಾತ್ರೆಯಲ್ಲಿ ಈ ಎರಡೂ ತರಕಾರಿಗಳು ಮುಳುಗುವಷ್ಟು ನೀರು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.
3) ಹತ್ತು ನಿಮಿಷಗಳ ಕಾಲ ಕುದಿದ ನಂತರ ಆಪ್ರಿಕಾಟ್ ಮತ್ತು ದ್ರಾಕ್ಷಿಯನ್ನು ಹಾಕಿ ಚಿಕ್ಕ ಉರಿಯಲ್ಲಿ ಇನ್ನೂ ಹತ್ತು ನಿಮಿಷ ಬೇಯಿಸಿ
4) ಬಳಿಕ ಒಲೆ ನಂದಿಸಿ ಈ ದ್ರವ ತಣಿಯಲು ಬಿಡಿ.
5) ಪೂರ್ಣವಾಗಿ ತಣಿದ ಬಳಿಕ ಜೇನು ಸೇರಿಸಿ ಚೆನ್ನಾಗಿ ಕಲಕಿ.
6) ಈ ಪೇಯವನ್ನು ಒಂದು ಬಾಟಲಿಗೆ ವರ್ಗಾಯಿಸಿ ಕನಿಷ್ಠ ಹನ್ನೆರಡು ಗಂಟೆಗಳ ಕಾಲ ಫ್ರಿಜ್ಜಿನಲ್ಲಿಡಿ. ನಮ್ಮ ಪ್ರಥಮ ಪೇಯ ಈಗ ಸಿದ್ಧವಾಗಿದೆ.

ಬಳಕೆಯ ವಿಧಾನ
ಕನಿಷ್ಠ ಅರ್ಧದಿನ ಫ್ರಿಜ್ಜಿನಲ್ಲಿಟ್ಟ ಬಳಿಕ ಇದನ್ನು ಬಳಸಲು ಪ್ರಾರಂಭಿಸಬಹುದು. ಪ್ರತಿದಿನ ಮೂರು ಹೊತ್ತು ಊಟದ ಮುನ್ನ ಕನಿಷ್ಟ ಇಪ್ಪತ್ತೈದರಿಂದ ಮೂವತ್ತು ಮಿಲಿ ಲೀಟರಿನಷ್ಟು ದ್ರವವನ್ನು ಸೋಸಿ ಉಗುರುಬೆಚ್ಚನೆಯ ನೀರಿನೊಂದಿಗೆ ಸೇರಿಸಿ ಕುಡಿಯಿರಿ. ಒಮ್ಮೆ ತಯಾರಿಸಿದ ದ್ರವವನ್ನು ಒಂದು ವಾರದವರೆಗೆ ಉಪಯೋಗಿಸಬಹುದು. ಮುಂದಿನ ವಾರ ಹೊಸತಾಗಿ ತಯಾರಿಸಿಕೊಳ್ಳಬೇಕು.

ಪರ್ಯಾಯ ವಿಧಾನ
ಈ ಪೇಯವು ಕೊಂಚ ಸಿಹಿ-ಕಹಿ ಯಾಗಿರುವ ಕಾರಣ ಕೆಲವರಿಗೆ ಇದರ ರುಚಿ ಇಷ್ಟವಾಗದೇ ಇರಬಹುದು. ಇವರು ಈ ನೀರನ್ನು ತಮ್ಮ ಇತರ ಆಹಾರದೊಂದಿಗೆ ಸೇರಿಸಿ ಉಪಯೋಗಿಸಬಹುದು.

ಇತರ ಉಪಯೋಗಗಳು:
ಈ ಪೇಯದ ಸೇವನೆ ಪ್ರಾರಂಭಿಸಿದ ಎರಡೇ ದಿನದಲ್ಲಿ ಕರುಳುಗಳಲ್ಲಿ ಶೇಖರವಾಗಿದ್ದ ಕಲ್ಮಶಗಳೆಲ್ಲಾ ವಿಸರ್ಜನೆಗೊಳ್ಳುತ್ತವೆ. ಉತ್ತಮ ಪರಿಣಾಮ ಅರಿಯಲು ಸತತವಾಗಿ ಕನಿಷ್ಟ ಮೂರು ತಿಂಗಳಾದರೂ ಸೇವಿಸಬೇಕು.



Click it and Unblock the Notifications