For Quick Alerts
ALLOW NOTIFICATIONS  
For Daily Alerts

ತೂಕ ಹೆಚ್ಚುತ್ತಿದೆಯೇ? ಹಾಗಾದರೆ ಅಡುಗೆ ವಿಚಾರದಲ್ಲಿ ಎಚ್ಚರವಹಿಸಿ!

By Manu
|

ತೂಕ ಇಳಿಸಬೇಕೆಂದು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದರೂ ಕಡಿಮೆಯಾಗುತ್ತಿಲ್ಲವೇ? ವ್ಯಾಯಾಮ ಮತ್ತು ಉತ್ತಮ ಅಹಾರ ಸೇವಿಸುತ್ತಿದ್ದರೂ ತೂಕ ಕಡಿಮೆಯಾಗುತ್ತಿಲ್ಲವೇ? ಇದಕ್ಕೆ ನಿಮ್ಮ ಆಹಾರ ಸಿದ್ಧ ಪಡಿಸುವ ಕ್ರಮದಲ್ಲಿ ನಿಮಗೆ ಅರಿವಿಲ್ಲದೇ ಆಗಿರುವ ಪ್ರಮಾದಗಳೇ ಕಾರಣವಾಗಿರಬಹುದು.

ಇದರಿಂದ ತೂಕ ಇಳಿಯುವ ಬದಲು ಹೆಚ್ಚುತ್ತಿರಬಹುದು, ನಿಮ್ಮ ವ್ಯಾಯಮದ ಮೂಲಕ ಈ ಹೆಚ್ಚುತ್ತಿರುವ ತೂಕ ಕಡಿಮೆಯಾಗಿ ಒಟ್ಟಾರೆ ತೂಕ ಎಲ್ಲಿದೆಯೋ ಅಲ್ಲೇ ಉಳಿದುಕೊಂಡಿರಬಹುದು. ತೂಕ ಇಳಿಸುವ ಪವರ್ ಈ ಆಹಾರಗಳಲ್ಲಿದೆ! ಒಮ್ಮೆ ಪ್ರಯತ್ನಿಸಿ

ಆದ್ದರಿಂದ ನಿಮಗೆ ನಿಜವಾಗಿಯೂ ತೂಕ ಇಳಿಸಲೇಬೇಕೆಂದಿದ್ದರೆ ಇದಕ್ಕೆ ಕೊಂಚ ತಾಳ್ಮೆ ಹಾಗೂ ನೈಸರ್ಗಿಕ ಆಹಾರ ಮತ್ತು ವಿಧಾನಗಳೇ ನಿಮ್ಮ ನೆರವಿಗೆ ಬರುತ್ತವೆ. ಮುಖ್ಯವಾಗಿ ನಿಮ್ಮ ಆಹಾರದಲ್ಲಿ ಕಟ್ಟುನಿಟ್ಟು ಪಾಲಿಸುವುದು ಅಗತ್ಯವಾಗಿದೆ. ಅರಿವಿಲ್ಲದೇ ಆಹಾರವನ್ನು ಸಿದ್ಧಪಡಿಸುವಾಗ ಆಗುವ ಪ್ರಮಾದಗಳ ಬಗ್ಗೆ ಮುಂದೆ ಓದಿ.... ಪವರ್ ಫುಲ್ ಜ್ಯೂಸ್- ಬರೀ ಒಂದೇ ವಾರದಲ್ಲಿ ಸ್ಲಿಮ್ ಆಗುವಿರಿ!

ಸಲಹೆ #1 ಎಣ್ಣೆಯ ಪ್ರಮಾಣ

ಸಲಹೆ #1 ಎಣ್ಣೆಯ ಪ್ರಮಾಣ

ನಿಮ್ಮ ಅಡುಗೆಯಲ್ಲಿ ಎಣ್ಣೆ ಎಷ್ಟು ಬಳಸುತ್ತೀರಿ ಎಂದು ಗಮನಿಸಿ. ಹೆಚ್ಚಿನವರು ಹೆಚ್ಚು ಎಣ್ಣೆ ಎಂದರೆ ಹೆಚ್ಚು ರುಚಿ ಎಂಬ ಭಾವನೆಯನ್ನು ಬಲವಾಗಿ ಮೂಡಿಸಿಕೊಂಡಿದ್ದಾರೆ. ಈ ಭಾವನೆಯನ್ನು ಮೊದಲು ಬದಲಿಸಿ....

ಸಲಹೆ #1 ಎಣ್ಣೆಯ ಪ್ರಮಾಣ

ಸಲಹೆ #1 ಎಣ್ಣೆಯ ಪ್ರಮಾಣ

ಎಣ್ಣೆ ಅತಿ ಕಡಿಮೆ ಇರುವ ಆಹಾರಗಳತ್ತ ಒಲವು ತೋರಿ. ಎಣ್ಣೆಯನ್ನೇ ಬಳಸದ ಇಡ್ಲಿ, ಪುಟ್ಟು, ಒಣರೊಟ್ಟಿಗಳನ್ನು ನಿಮ್ಮ ನಿತ್ಯದ ಆಹಾರಗಳಲ್ಲಿ ಅಳವಡಿಸಿ. ಇದರಿಂದ ನಿಧಾನವಾಗಿ ತೂಕ ಇಳಿಯಲು ನೆರವಾಗುತ್ತದೆ.

ಸಲಹೆ #2 ಬೆಣ್ಣೆ ತ್ಯಜಿಸಿ

ಸಲಹೆ #2 ಬೆಣ್ಣೆ ತ್ಯಜಿಸಿ

ರುಚಿಗಾಗಿ ಬೆಣ್ಣೆಯನ್ನು ಸವರುವುದು ಭಾರತದ ಅಡುಗೆಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದು ಅನಗತ್ಯವಾಗಿ ಕೊಬ್ಬು ಹೆಚ್ಚಿಸುವುದರಿಂದ ತೂಕ ಇಳಿಯುವವರೆಗೂ ಈ ರುಚಿಯನ್ನು ತ್ಯಾಗ ಮಾಡುವುದೇ ಶ್ರೇಯಸ್ಕರ. ರುಚಿಗಾಗಿ ಬೆಣ್ಣೆ, ತುಪ್ಪ, ಚೀಸ್ ಮೊದಲಾದವುಗಳನ್ನು ಸವರುವುದನ್ನು ಬಿಟ್ಟುಬಿಡಿ.

ಸಲಹೆ #3 ಉಪ್ಪು ಕಡಿಮೆ ಮಾಡಿ

ಸಲಹೆ #3 ಉಪ್ಪು ಕಡಿಮೆ ಮಾಡಿ

ಉಪ್ಪಿಗಿಂತ ರುಚಿ ಇಲ್ಲ ಏನೋ ಸರಿ. ಆದರೆ ತೂಕ ಇಳಿಸಬೇಕಾದರೆ ಉಪ್ಪಿನ ಅಂಶ ಕಡಿಮೆಯಾಗಲೇಬೇಕು. ಏಕೆಂದರೆ ಉಪ್ಪು ಹೆಚ್ಚಿದ್ದಷ್ಟೂ ಇದನ್ನು ಹೊರಹಾಕಲು ದೇಹ ಹೆಚ್ಚಿನ ಪ್ರಮಾಣದ ನೀರನ್ನು ಉಳಿಸಿಕೊಳ್ಳುತ್ತದೆ. ಅಂದರೆ ಅಷ್ಟು ತೂಕ ಹೆಚ್ಚುತ್ತದೆ.

ಸಲಹೆ #4 ಸೂಕ್ತವಾದ ಅಡುಗೆ ಎಣ್ಣೆ ಬಳಸಿ

ಸಲಹೆ #4 ಸೂಕ್ತವಾದ ಅಡುಗೆ ಎಣ್ಣೆ ಬಳಸಿ

ಅಗ್ಗ ಎಂಬ ಕಾರಣಕ್ಕೆ ಅನಾರೋಗ್ಯಕರ ಎಣ್ಣೆಯನ್ನು ಭಾರತದಾದ್ಯಂತ ಬಳಸಲಾಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಪಾಮ್ ಎಣ್ಣೆ. ಇದು ಆರೋಗ್ಯಕ್ಕೆ ಮಾರಕವಾಗಿದ್ದು ನಿಧಾನ ವಿಷದಂತೆ ಕೆಲಸ ಮಾಡುತ್ತದೆ. ಇದನ್ನು ಬೆಳೆದ ರಾಷ್ಟ್ರಗಳಲ್ಲೇ ಇದನ್ನು ಸೇವಿಸದೇ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಗ್ಗದ ದರದಲ್ಲಿ ಕಳಿಸಲಾಗುತ್ತಿದೆ.

ಸಲಹೆ #4 ಸೂಕ್ತವಾದ ಅಡುಗೆ ಎಣ್ಣೆ ಬಳಸಿ

ಸಲಹೆ #4 ಸೂಕ್ತವಾದ ಅಡುಗೆ ಎಣ್ಣೆ ಬಳಸಿ

ಈ ಅಗ್ಗ ಎಂಬ ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳದೇ ಕೊಂಚ ದುಬಾರಿಯಾದರೂ ಸರಿ, ಟ್ರಾನ್ಸ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಅತಿ ಕಡಿಮೆ ಇರುವ ಆರೋಗ್ಯಕರ ಅಡುಗೆ ಎಣ್ಣೆಯನ್ನೇ ನಿಮ್ಮ ಅಡುಗೆಗೆ ಬಳಸಿ. ಇದರಿಂದ ನಿಧಾನವಾಗಿ ತೂಕ ಇಳಿಯಲು ಸಾಧ್ಯವಾಗುತ್ತದೆ. ಅಡುಗೆ ಎಣ್ಣೆ ಆಯ್ಕೆಯ ವಿಷಯದಲ್ಲಿ ಎಚ್ಚರ ತಪ್ಪದಿರಿ..!

ಸಲಹೆ #5 ಹುರಿದ ಕರಿದ ತಿಂಡಿಗೆ ಬೈ

ಸಲಹೆ #5 ಹುರಿದ ಕರಿದ ತಿಂಡಿಗೆ ಬೈ

ನೀವು ಅಪರೂಪಕ್ಕೆ ರುಚಿಗಾಗಿ ತಿನ್ನುವ ಹುರಿದ ಅಥವಾ ಕರಿದ ತಿಂಡಿಗಳಲ್ಲಿ ಕೊಬ್ಬು ಹೆಚ್ಚಿಸುವ ಹಲವಾರು ಅಂಶಗಳಿವೆ. ಆದ್ದರಿಂದ ಎಷ್ಟೇ ಮನಸ್ಸಾದರೂ ಈ ತಿಂಡಿಗಳತ್ತ ಒಲವು ತೋರದೇ ಬೇಯಿಸಿದ ಅಥವಾ ಹಬೆಯಲ್ಲಿ ತಯಾರಿಸಿದ ತಿಂಡಿಗಳನ್ನೇ ಹೆಚ್ಚು ಹೆಚ್ಚಾಗಿ ತಿನ್ನಿ.

ಸಲಹೆ #6 ಪ್ರತಿ ಬಾರಿ ಒಂದೇ ಎಣ್ಣೆ ಬಳಸುವುದು

ಸಲಹೆ #6 ಪ್ರತಿ ಬಾರಿ ಒಂದೇ ಎಣ್ಣೆ ಬಳಸುವುದು

ಹಪ್ಪಳ ಇತ್ಯಾದಿಗಳನ್ನು ಹುರಿಯಲು ಒಂದೇ ಎಣ್ಣೆಯನ್ನು ಹಲವು ಬಾರಿ ಬಿಸಿಮಾಡಲಾಗುತ್ತದೆ. ಆದರೆ ಪ್ರತಿಬಾರಿ ಬಿಸಿಯಾಗಿ ತಣ್ಣಗಾದ ಎಣ್ಣೆಯಲ್ಲಿ ಟ್ರಾನ್ಸ್ ಫ್ಯಾಟ್ ಎಂಬ ಕೊಬ್ಬು ಹೆಚ್ಚುತ್ತಾ ಹೋಗುವ ಕಾರಣ ಹೆಚ್ಚು ಬಾರಿ ಬಿಸಿಮಾಡಿದ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ತ್ಯಜಿಸಿ.

ಸಲಹೆ #7 ಸಕ್ಕರೆ ಕಡಿಮೆ ಮಾಡಿ

ಸಲಹೆ #7 ಸಕ್ಕರೆ ಕಡಿಮೆ ಮಾಡಿ

ನಾವು ಸಾಮಾನ್ಯವಾಗಿ ಬಳಸುವ ಬಿಳಿ ಸಕ್ಕರೆ ಒಂದು ನಿಧಾನ ವಿಷವಾಗಿದೆ. ಕೃತಕ ಸಕ್ಕರೆ ಸಹಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ನಮ್ಮ ದೇಹಕ್ಕೆ ಅಗತ್ಯವಿರುವ ಸಕ್ಕರೆ ಕೇವಲ 37.5 ಗ್ರಾಂ ಮಾತ್ರ.

ಸಲಹೆ #7 ಸಕ್ಕರೆ ಕಡಿಮೆ ಮಾಡಿ

ಸಲಹೆ #7 ಸಕ್ಕರೆ ಕಡಿಮೆ ಮಾಡಿ

ದಿನದಲ್ಲಿ ನಾವು ಟೀ ಕಾಫಿ ಸಿಹಿತಿಂಡಿ, ಹಣ್ಣುಗಳು ಮೊದಲಾದವುಗಳ ಮೂಲಕ ಸೇವಿಸುವ ಸಕ್ಕರೆ ಸಾಮಾನ್ಯವಾಗಿ ನೂರು ಗ್ರಾಂ ದಾಟುತ್ತದೆ. ಈ ಹೆಚ್ಚುವರಿ ಸಕ್ಕರೆ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಆದ್ದರಿಂದ ಸಕ್ಕರೆ ಸೇವನೆಯ ಪ್ರಮಾಣ 37.5 ಗ್ರಾಂಗಿಂತಲೂ ಕಡಿಮೆ ಇರುವಂತೆ ನೋಡಿಕೊಳ್ಳಿ. ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

English summary

Common Cooking Mistakes That Make You Gain Weight

Are you doing everything you can to lose some weight? Do you feel that you have been following a healthy diet and exercise routine and yet you can't seem to lose weight, then here are a few cooking tips that can be effective in aiding weight loss.
X
Desktop Bottom Promotion