Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಶನಿ ಸಂಚಾರ 2026: ಮಾರ್ಚ್‌ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ!
ಜ್ಯೋತಿಷ್ಯದಲ್ಲಿ ಶನಿಯು ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ಗ್ರಹ ಎಂದು ಕರೆಯಲಾಗುತ್ತದೆ. ಶನಿ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುತ್ತದೆ. ಅದ್ರಲ್ಲೂ ಶನಿಯು ಎರಡೂವರೆ ವರ್ಷಗಳ ಕಾಲ ಒಂದೇ ಗ್ರಹದಲ್ಲಿ ಚಲಿಸುವುದು ಹಲವು ರೀತಿಯಾಗಿ ವ್ಯಕ್ತಿಗಳ ಜೀವನದ ಮೇಲೆ ಪರಿಣಾಮ ಎದುರಿಸುವುದು ನೋಡಬಹುದು.
ವ್ಯಕ್ತಿಯ ಜಾತಕದಲ್ಲಿ ಶನಿಯು ಯಾವ ಮನೆಯಲ್ಲಿ ಚಲಿಸುತ್ತಾನೆ ಎಂಬುದರ ಮೇಲೆ ಅದು ನಿರ್ಧರಿಸಲ್ಪಡುತ್ತದೆ. ಈ ಮಾರ್ಚ್ 6ರಂದು ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸಿದ್ದಾನೆ. ಇದು ಪ್ರಮುಖ ಗ್ರಹ ವಿದ್ಯಮಾನ ಎಂದು ಕರೆಯಲಾಗಿದೆ. ಈ ಶನಿ ಚಲನೆಯು ಎಲ್ಲಾ ರಾಶಿ ಜನರ ಜೀವನದಲ್ಲಿ ಪ್ರತಿಫಲಿಸುತ್ತದೆ. ವಿಶೇಷವಾಗಿ ಯಾರ ಜಾತಕದಲ್ಲಿ ಶನಿಯು ಏಳನೇ ಅಥವಾ ಎಂಟನೇ ಮನೆಯಲ್ಲಿದ್ದರೆ ಈ ಅವಧಿಯಲ್ಲಿ ಜಾಗರೂಕರಾಗಿರಬೇಕು.

ಈ ಶನಿಯ ಸಂಚಾರವು ಅವರ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಉಂಟುಮಾಡಬಹುದು. ಹಾಗಾದ್ರೆ ಶನಿಯ ಈ ಚಲನೆಯು ಯಾರಿಗೆಲ್ಲಾ ಅನಾನುಕೂಲಕರವಾಗುತ್ತಿದೆ. ಯಾರಿಗೆಲ್ಲಾ ಸಮಸ್ಯೆಗಳ ತರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ಶನಿ ಸಂಚಾರದಿಂದ ಸವಾಲುಗಳು ಎದುರಾಗುತ್ತದೆ. ಈ ಅವಧಿಯಲ್ಲಿ ತಾಳ್ಮೆಯಿಂದಿರುವುದು ಮತ್ತು ಕೆಲಸದಲ್ಲಿ ಅನಗತ್ಯ ಘರ್ಷಣೆಗಳನ್ನು ತಪ್ಪಿಸುವುದು ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಡ್ತಿ ಅಥವಾ ಸಂಬಳ ಹೆಚ್ಚಳಕ್ಕೆ ಸಂಬಂಧಿಸಿದ ಅಡೆತಡೆಗಳು ಕ್ರಮೇಣ ಕಡಿಮೆಯಾಗಬಹುದು. ಆದ್ರೆ ನೀವು ಬಯಸಿದ ಫಲಿತಾಂಶಗಳ ಪಡೆಯುವುದು ಕಷ್ಟವಾಗಬಹುದು. ಆರೋಗ್ಯ ವಿಚಾರವಾಗಿ ನಿಮಗೆ ಅನೇಕ ರೀತಿಯ ಸಮಸ್ಯೆಗಳಿವೆ. ಕಾಲೋಚಿತ ಅನಾರೋಗ್ಯ ಸೇರಿದಂತೆ ಒಂದಿಷ್ಟು ಅನಾರೋಗ್ಯವನ್ನು ಎದುರಿಸಬೇಕಾಗುತ್ತದೆ. ಪೂರ್ಣ ನಿರ್ಧರಿತ ಕೆಲಸ ಕಾರ್ಯಗಳಲ್ಲಿ ನಿಮಗೆ ನಿರೀಕ್ಷಿತ ಫಲಿತಾಂಶಗಳು ಸಿಗದೆ ಇರಬಹುದು.
ಕುಂಭ ರಾಶಿ
ಶನಿಯ ಈ ಸಂಚಾರವು ಕುಂಭ ರಾಶಿಯ ಜನರಿಗೆ ಮಿಶ್ರಫಲವಿದೆ. ಶನಿ ಕುಂಭ ರಾಶಿಯ 2ನೇ ಮನೆಯಲ್ಲಿ ಚಲಿಸುತ್ತಾನೆ. ನಿಮ್ಮ ಆರ್ಥಿಕ ಸ್ಥಿತಿ ಸ್ಥಿರವಾದರು ಅದರಿಂದ ನೀವು ಹೆಚ್ಚು ತೃಪ್ತಿ ಪಡೆಯಲು ಸಾಧ್ಯವಾಗದೆ ಇರಬಹುದು. ಮದುವೆ ಸಂಬಂಧಿತ ವಿಚಾರವಾಗಿ ದೊಡ್ಡ ನಿರ್ಧಾರಗಳಿಂದ ನಿಮಗೆ ಚಿಂತೆ ಕಾಡಬಹುದು. ಈ ಸಂಚಾರವು ಕಠಿಣ ಹಂತದ ನಂತರ ಪರಿಹಾರದ ಭಾವನೆಯನ್ನು ತರುತ್ತದೆ ಎಂದು ಊಹಿಸಲಾಗಿದೆ. ಹಾಗೆ ನಿಮ್ಮ ಕೆಲಸ ಕಾರ್ಯಗಳಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ, ಈ ಶನಿಯ ಸಂಚಾರವು ಏಳನೇ ಮತ್ತು ಎಂಟನೇ ಮನೆಗಳ ಮೇಲೆ ಪ್ರಭಾವ ಬೀರಲು ಪ್ರಾರಂಭಿಸುತ್ತದೆ, ಇದು ವೃತ್ತಿ ಮತ್ತು ಕೆಲಸದಲ್ಲಿ ಬದಲಾವಣೆಗಳನ್ನು ತರಬಹುದು. ಆದಾಗ್ಯೂ ಮೀನ ರಾಶಿಯನ್ನು ಶನಿಗೆ ಸ್ನೇಹಪರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಪ್ರಯತ್ನಗಳ ಮೇಲೆ ಶನಿಯ ಪ್ರಭಾವವು ಸುಲಭದ ಕೆಲಸವನ್ನು ಮತ್ತಷ್ಟು ಕಷ್ಟವಾಗಿಸಬಹುದು. ಕೃಷಿ ಸಂಬಂಧಿತ ವಿಚಾರಗಳು ಅಥವಾ ಸ್ವಂತ ಉದ್ಯೋಗದಲ್ಲಿನ ನಿರ್ಧಾರವೊಂದು ಆರ್ಥಿಕ ಸಮಸ್ಯೆಗೆ ಕಾರಣವಾಗಬಹುದು.
ಸಿಂಹ ರಾಶಿ
ಶನಿ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೆ ಮಿಶ್ರಫಲಕ್ಕೆ ಕಾರಣವಾಗುತ್ತದೆ. ನಿಮ್ಮ ಹಣಕಾಸಿನ ವಿಚಾರವಾಗಿ ಇದ್ದಂತಹ ಅಡ್ಡಿಗಳನ್ನು ನಿವಾರಿಸಿಕೊಳ್ಳಲು ಹಲವು ದಿನಗಳ ಕಾಯಬೇಕಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಕೆಲವು ಹಿನ್ನಡೆಗಳು ಮತ್ತು ಅಡೆತಡೆಗಳು ಉಂಟಾಗಬಹುದು ಮತ್ತು ಕೆಲಸ, ವರ್ಗಾವಣೆ ಅಥವಾ ಸಂಬಳ ಹೆಚ್ಚಳಕ್ಕೆ ಸಂಬಂಧಿಸಿದ ವಿಷಯಗಳು ವಿಳಂಬವಾಗಬಹುದು. ಶಾಂತ ಮತ್ತು ತಾಳ್ಮೆಯಿಂದಿರುವುದು ಈ ಕಷ್ಟಕರ ಅವಧಿಯನ್ನು ಯಶಸ್ವಿಯಾಗಿ ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಶನಿ ತಮ್ಮ ಏಳನೇ ಮನೆಗೆ ಚಲಿಸುತ್ತಾರೆ, ಇದು ಸಂಬಂಧಗಳು ಮತ್ತು ವೃತ್ತಿ ಸಂಪರ್ಕಗಳಿಗೆ ಸಂಬಂಧಿಸಿದೆ. ಈ ಅವಧಿಯಲ್ಲಿ ಅವರು ಕುಟುಂಬ ವಿಷಯಗಳು ಮತ್ತು ವೈಯಕ್ತಿಕ ಸಂಬಂಧಗಳಿಗೆ ಹೆಚ್ಚಿನ ಗಮನ ನೀಡಬೇಕು. ವೃತ್ತಿಪರ ಜೀವನದಲ್ಲಿ ನೀವು ಸವಾಲು ಎದುರಿಸಬಹುದು. ಹಣಕಾಸು ವಿಚಾರಗಳಲ್ಲಿ ನಿಮಗೆ ಅನೇಕ ರೀತಿಯಲ್ಲಿ ಸವಾಲುಗಳು ಎದುರಿಸುವ ದಿನಗಳಿವೆ. ಅದ್ರಲ್ಲೂ ಎಲ್ಲಿಯಾದರು ಸಿಲುಕಿದ್ದ ಹಣದ ಬಿಕ್ಕಟ್ಟು ದೊಡ್ಡದಾಗಬಹುದು. ನಿಮ್ಮ ಅಮೂಲ್ಯ ವಸ್ತುಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ವೈಯಕ್ತಿಕ ವರ್ಚಸ್ಸಿಗೆ ಹಾನಿಯಾಗುವ ಘಟನೆಗಳು ನಡೆಯಬಹುದು.



Click it and Unblock the Notifications
