Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪವರ್ ಫುಲ್ ಜ್ಯೂಸ್- ಬರೀ ಒಂದೇ ವಾರದಲ್ಲಿ ಸ್ಲಿಮ್ ಆಗುವಿರಿ!
ಕಚೇರಿ, ಸ್ನೇಹಿತರ ಜತೆ ಹೊರಗಡೆ ತಿರುಗಾಡಲು ಹೋದಾಗ, ಸಂಬಂಧಿಕರ ಮಧುವೆ ಸಮಾರಂಭ ಹೀಗೆ ಇದ್ದ ಕಡೆಯೆಲ್ಲಾ ರುಚಿರುಚಿಯಾದ ಆಹಾರಗಳನ್ನು ಹೊಟ್ಟೆ ತುಂಬಾ ತಿನ್ನುತ್ತೇವೆ. ಮನೆಗೆ ಬಂದು ಹೊಟ್ಟೆ ತುಂಬಿದ ಖುಷಿಯಲ್ಲಿ ಮಲಗಿ ಬಿಡುತ್ತೇವೆ. ಮರುದಿನ ಮತ್ತೆ ಅದೇ ದಿನಚರಿ ಆರಂಭಿಸುತ್ತೇವೆ. ಆದರೆ ಹೊಟ್ಟೆ ಬಿರಿಯುವಷ್ಟು ತಿಂದರೂ ದೇಹಕ್ಕೆ ಬೇಕಾಗುವಷ್ಟು ವ್ಯಾಯಾಮ ಮಾಡುವಷ್ಟು ಪುರುಸೊತ್ತು ನಮ್ಮಲ್ಲಿ ಇರುವುದಿಲ್ಲ. ಇದರಿಂದಾಗಿಯೇ ದೇಹದಲ್ಲಿ ಬೊಜ್ಜು ಬೆಳೆದಿರುತ್ತದೆ.
ಇದನ್ನು ಕರಗಿಸಲು ಹರಸಾಹಸ ಮಾಡಬೇಕಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೇಹದಲ್ಲಿ ಬೊಜ್ಜು ಬೆಳೆದುಬಿಟ್ಟರೆ ಮತ್ತೆ ಅದರೊಳಗೆ ರೋಗಗಳು ಕೂಡ ವಕ್ಕರಿಸುತ್ತದೆ. ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.
ಆರೋಗ್ಯವಾಗಿರಬೇಕೆಂದರೆ ನಾವು ದೈನಂದಿನ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ವ್ಯಾಯಾಮ ಮಾಡಬೇಕು. ಈ ಲೇಖನದಲ್ಲಿ ಹೇಳಿರುವಂತಹ ನೈಸರ್ಗಿಕವಾಗಿ ಲಭ್ಯವಿರುವ ಜ್ಯೂಸ್ ಕುಡಿದು ಕೊಬ್ಬನ್ನು ಕರಗಿಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಒಂದೇ ವಾರದಲ್ಲಿ ದೇಹದ ಕೊಬ್ಬು ಕರಗಿಸಿ, ತೂಕ ಇಳಿಸುವ ಜ್ಯೂಸ್ ಮಾಡುವುದು ಹೇಗೆಂದು ತಿಳಿಯಿರಿ. ಬರೀ, ಒಂದೇ ತಿಂಗಳಿನಲ್ಲಿ 10 ಕೆ.ಜಿ ತೂಕ ಇಳಿಸಿಕೊಳ್ಳಿ!

ಜ್ಯೂಸ್ ಮಾಡಲು ಬೇಕಾಗಿರುವ ಸಾಮಗ್ರಿಗಳು
ಕ್ಯಾರೆಟ್ ಜ್ಯೂಸ್ -3 ಚಮಚ
ಸೌತೆಕಾಯಿ ಜ್ಯೂಸ್ - 3 ಚಮಚ
ಅಗಸೆ ಬೀಜ-1 ಚಮಚ
ಕ್ಯಾರೆಟ್ ಜ್ಯೂಸ್, ಸೌತೆಕಾಯಿ ಜ್ಯೂಸ್ ಮತ್ತು ಅಗಸೆ ಬೀಜವನ್ನು ನಿಯಮಿತವಾಗಿ ಬಳಸಿಕೊಂಡರೆ ಕೆಲವೇ ದಿನಗಳಲ್ಲಿ ಇದು ತೂಕ ಕಡಿಮೆ ಮಾಡಬಲ್ಲದು. ಇದರೊಂದಿಗೆ ಆರೋಗ್ಯಕರವಾದ ಪಥ್ಯ ಮತ್ತು ವ್ಯಾಯಾಮ ಮಾಡುತ್ತಿರಬೇಕು.
ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗಿದ್ದು, ಇದು ನಿಮ್ಮ ಚಯಾಪಚಯಾ ಕ್ರಿಯೆಯಲ್ಲಿ ಸಹಕರಿಸುತ್ತದೆ. ಇದರಿಂದ ದೇಹದಲ್ಲಿನ ಕೊಬ್ಬು ಕರಿಗಿಸುವ ಕ್ರಿಯೆಯು ಹೆಚ್ಚಾಗುವುದು.
ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ನ್ನು ದಿನಾಲೂ ಬೆಳಿಗ್ಗೆ ಸೇವನೆ ಮಾಡುವುದರಿಂದಾಗಿ ಹಸಿವು ಕಡಿಮೆಯಾಗಿ ಅತಿಯಾಗಿ ತಿನ್ನುವುದು ಕಡಿಮೆಯಾಗುತ್ತದೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ
ಜ್ಯೂಸ್ ಅನ್ನು ಮಾಡುವ ವಿಧಾನ
•ಕೆಲವು ತುಂಡು ಕ್ಯಾರೆಟ್ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಅದರ ಜ್ಯೂಸ್ ತೆಗೆದುಕೊಳ್ಳಿ.
•ಸೌತೆಕಾಯಿ ಜ್ಯೂಸ್ ನ್ನು ಕೂಡ ಇದೇ ರೀತಿಯಿಂದ ಮಾಡಿಕೊಳ್ಳಿ.
•ಒಂದು ಚಮಚ ಅಗಸೆ ಬೀಜವನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿಕೊಳ್ಳಿ.
•ಎಲ್ಲಾ ಮೂರು ಸಾಮಗ್ರಿಗಳನ್ನು ಹೇಳಿದಷ್ಟು ಪ್ರಮಾಣದಲ್ಲಿ ಒಂದು ಕಪ್ ಗೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
•ಈಗ ಆರೋಗ್ಯಕರ ಜ್ಯೂಸ್ ಕುಡಿಯಲು ತಯಾರಾಗಿದೆ.
•ಪರಿಣಾಮಕಾರಿ ಫಲಿತಾಂಶ ಸಿಗುವ ತನಕ ಒಂದು ಲೋಟ ಜ್ಯೂಸ್ ಅನ್ನು ದಿನಾಲೂ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
•ಇದೇ ರೀತಿ ಜ್ಯೂಸ್ ಕುಡಿಯುತ್ತಾ ಇದ್ದರೆ ಒಂದು ವಾರದಲ್ಲೇ ನಿಮಗೆ ಫಲಿತಾಂಶ ಕಂಡುಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



