Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸುವ ಪವರ್ ಈ ಆಹಾರಗಳಲ್ಲಿದೆ! ಒಮ್ಮೆ ಪ್ರಯತ್ನಿಸಿ
ತೂಕ ಹೆಚ್ಚಿಸಿಕೊಳ್ಳುವುದು ಸುಲಭವಾದರೂ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟ ಎನ್ನುವ ಮಾತಿದೆ. ಇದು ನಿಜವೆನ್ನಬಹುದು. ತೂಕ ಹೆಚ್ಚಿಸಲು ಸಿಕ್ಕಿದೆಲ್ಲವನ್ನು ತಿನ್ನಬಹುದು. ಆದರೆ ತೂಕ ಇಳಿಸಿ ಕೊಳ್ಳಬೇಕೆಂದಾಗ ಮಾತ್ರ ಆಹಾರ ಪಥ್ಯ ಕೂಡ ಅನಿವಾರ್ಯ. ಇದರಿಂದಾಗಿಯೇ ತೂಕ ಇಳಿಸಲು ಕಷ್ಟವಾಗುತ್ತದೆ. ತೂಕ ಇಳಿಸಲು ಪ್ರಮುಖವಾಗಿ ಬೇಕಾಗುವ ಅಂಶವೆಂದರೆ ನಾರಿನಂಶ. ಹಣ್ಣು, ತರಕಾರಿ ಮತ್ತು ಹಸಿರೆಲೆ ತರಕಾರಿಗಳಲ್ಲಿ ನಾರಿನಾಂಶವು ಹೇರಳವಾಗಿರುತ್ತದೆ. ಇದನ್ನು ಸೇವನೆ ಮಾಡಿದರೆ ತೂಕ ಕಳೆದುಕೊಳ್ಳಬಹುದು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಸರಿಯಾದ ಪ್ರಮಾಣದಲ್ಲಿ ನಾರಿನಾಂಶವು ದೇಹಕ್ಕೆ ಸಿಕ್ಕಿದರೆ ತೂಕ ಕಡಿಮೆ ಮಾಡಿಕೊಳ್ಳುವುದು ಅಷ್ಟು ಕಷ್ಟವೇನಲ್ಲ. ನಾರಿನಾಂಶವು ತೂಕ ಕಳೆದುಕೊಳ್ಳಲು ಮಾತ್ರವಲ್ಲದೆ, ಅದನ್ನು ಸರಿಯಾದ ಪ್ರಮಾಣದಲ್ಲಿ ಕಾಪಾಡಿಕೊಳ್ಳಲು ನೆರವಾಗುವುದು. ನಾರಿನಂಶವು ದೀರ್ಘ ಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಹಾಗೂ ಇದರಲ್ಲಿ ಕ್ಯಾಲರಿ ಪ್ರಮಾಣವು ಕಡಿಮೆಯಿದೆ. ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುವ ಕಾರಣದಿಂದಾಗಿ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು. 
ನಾರಿನಂಶದಲ್ಲಿ ಎರಡು ವಿಧಗಳಿವೆ. ಒಂದು ಕರಗಬಲ್ಲ ನಾರು ಮತ್ತೊಂದು ಕರಗದೆ ಇರುವ ನಾರು. ಕರಗುವ ನಾರು ನೀರಿನಲ್ಲಿ ಕರಗಿ ಜೆಲ್‌ನಂತಹ ವಸ್ತುವಾಗುತ್ತದೆ. ಕರಗದ ನಾರು ದೇಹದಿಂದ ಹೊರಬೀಳಲು ಹೆಚ್ಚಿನ ನೀರಿನ ಅವಶ್ಯಕತೆಯಿರುತ್ತದೆ. ನಾರಿನಾಂಶವನ್ನು ಸೇವನೆ ಮಾಡುವುದು ಅಷ್ಟೊಂದು ಕಠಿಣವಾದ ಕೆಲಸವೇನಲ್ಲ. ಆದರೆ ಹಣ್ಣುಗಳು ತರಕಾರಿಗಳನ್ನು ಸಲಾಡ್ ರೂಪದಲ್ಲಿ ತಿನ್ನುವಾಗ ಅದಕ್ಕೆ ಬೇರೆ ಯಾವುದೇ ವಸ್ತುಗಳನ್ನು ಸೇರಿಸಿ ತಿನ್ನಬಾರದು. ಹಾಗೆಯೇ ತಿಂದರೆ ಒಳ್ಳೆಯದು. ಇಲ್ಲವೆಂದಾದರೆ ಅದು ನಿಮ್ಮ ತೂಕವನ್ನು ಮತ್ತಷ್ಟು ಹೆಚ್ಚು ಮಾಡುವುದು.
ತೂಕ ಕಳೆದುಕೊಳ್ಳುವ ಸಮಯದಲ್ಲಿ ಲೆಟಿಸ್, ಕ್ಯಾರೆಟ್, ಟೊಮೆಟೊ ಮತ್ತು ಕ್ಯಾಬೆಜ್ ಅನ್ನು ಸಲಾಡ್ ರೂಪದಲ್ಲಿ ತಿಂದರೆ ತುಂಬಾ ಒಳ್ಳೆಯದು. ಸಲಾಡ್‌ಗೆ ಸ್ವಲ್ಪ ಲಿಂಬೆ ರಸವನ್ನು ಹಿಂಡಿದರೆ ಉತ್ತಮ. ಇದು ತೂಕ ಕಳೆದುಕೊಳ್ಳುವ ನಿಮ್ಮ ಪ್ರಯತ್ನಕ್ಕೆ ನೆರವಾಗುವುದು. ಯಾವುದೇ ತರಕಾರಿ ಅಥವಾ ಹಣ್ಣು ನಿಮ್ಮ ಆರೋಗ್ಯಕ್ಕೆ ತೊಂದರೆಯುಂಟು ಮಾಡಲ್ಲ. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಆಲೂಗಡ್ಡೆ ತಿಂದರೆ ತೂಕ ಹೆಚ್ಚಾಗುತ್ತದೆ ಮತ್ತು ಇದು ಸಮಸ್ಯೆಯಾಗುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ತೂಕ ಕಳೆದುಕೊಳ್ಳುವ ಸಮಯದಲ್ಲಿ ಆಲೂಗಡ್ಡೆ ಕೂಡ ಒಳ್ಳೆಯ ಆಹಾರ. ಬೇಯಿಸಿದ ಆಲೂಗಡೆಗಳಿಗೆ ಬೆಣ್ಣೆ ಮತ್ತು ಗಿಣ್ಣು ಹಚ್ಚಿಕೊಂಡು ತಿನ್ನುವುದು ಒಳ್ಳೆಯದಲ್ಲ. ಆಹಾರ ಪಥ್ಯ ಮಾಡುವಾಗ ಬೇಯಿಸಿದ ಆಲೂಗಡ್ಡೆಗಳನ್ನು ಹಾಗೆಯೇ ತಿಂದರೆ ತುಂಬಾ ಒಳ್ಳೆಯದು.
ಅಷ್ಟೇ ಅಲ್ಲದೆ, ತೂಕ ಕಳೆದುಕೊಳ್ಳುವಾಗ ಸೇಬು, ದ್ರಾಕ್ಷಿ, ಪೇರಳೆ, ಪೀಚ್, ಬಾಳೆಹಣ್ಣು, ಪಪ್ಪಾಯಿ ಇತ್ಯಾದಿಗಳನ್ನು ತಿನ್ನಬೇಕು. ಇದರಲ್ಲಿ ನಾರಿನಾಂಶವು ಅಧಿಕವಾಗಿದೆ. ವಿವಿಧ ಹಣ್ಣುಗಳ ಮಿಶ್ರಣದ ಸಲಾಡ್ ಮಾಡಿಕೊಂಡು ಬೆಳಿಗ್ಗಿನ ಉಪಾಹಾರದ ವೇಳೆ ಸೇವನೆ ಮಾಡುವುದು ಉತ್ತಮ. ಹಣ್ಣುಗಳಲ್ಲಿ ಖನಿಜಾಂಶ ಮತ್ತು ವಿಟಮಿನ್‌ಗಳಿವೆ. ಚಿಪ್ಸ್, ಪಾಪ್ ಕಾರ್ನ್ ತಿನ್ನುವ ಬದಲಿಗೆ ಕಡಿಮೆ ಕ್ಯಾಲರಿ ಇರುವ ಹಣ್ಣುಗಳನ್ನು ತಿಂದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


