Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ?
ರಕ್ತಹೀನತೆ ಇತ್ತೀಚಿನ ದಿನಗಳಲ್ಲಿ ಅದ್ರಲ್ಲೂ ದಕ್ಷಿಣ ಏಷ್ಯಾದಲ್ಲಿ ಅತೀ ಹೆಚ್ಚಾಗಿ ಅನುಭವಿಸುತ್ತಿರುವ ಸಮಸ್ಯೆ, ದಕ್ಷಿಣ ಏಷ್ಯಾ ಮಹಿಳೆಯಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ವರದಿ ಈ ಹಿಂದೆಯೇ ಬಿಡುಗಡೆಯಾಗಿತ್ತು. ಹಾಗೆ ಇದು ಆತಂಕಕ್ಕೂ ಕಾರಣವಾಗಿತ್ತು. ಭಾರತದಲ್ಲೂ ಸಹ ಈ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿದೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುತ್ತದೆ.
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಂಪು ರಕ್ತ ಕಣಗಳು ಉತ್ಪತ್ತಿಯಾಗದೇ ಹೋದಾಗ ರಕ್ತಹೀನತೆ ಉಂಟಾಗುವುದು. ಕೆಂಪು ರಕ್ತಕಣಗಳು ದೇಹದ ನರಗಳಿಗೆ ಆಮ್ಲಜನಕ ಪೂರೈಕೆಯನ್ನು ಮಾಡುತ್ತದೆ. ಕೆಂಪು ರಕ್ತಕಣಗಳು ಕಡಿಮೆಯಾದರೆ ದೇಹಕ್ಕೆ ಆಮ್ಲಜನಕದ ಪೂರೈಕೆ ಕೂಡ ಕಡಿಮೆಯಾಗುವುದು. ಈ ಪರಿಸ್ಥಿತಿಯನ್ನು ಅನಿಮಿಯಾ ಎಂದು ಕರೆಯಲಾಗುತ್ತದೆ.

ರಕ್ತಹೀನತೆ ಉಂಟಾದರೆ ದೇಹದ ಕ್ರಿಯೆಯಲ್ಲಿ ವ್ಯತ್ಯಯವಾಗುತ್ತದೆ. ಅದ್ರಲ್ಲೂ ಕೆಲಸ ಮಾಡಲಾಗದ ಸ್ಥಿತಿಗೆ ಮಹಿಳೆಯರು ತಲುಪುತ್ತಾರೆ. ಕಬ್ಬಿಣಾಂಶದ ಕೊರತೆಯಿಂದಾಗಿ ಪ್ರತೀ 6 ಗರ್ಭಿಣಿಯರಲ್ಲಿ ಒಬ್ಬರಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುತ್ತಿದೆ ಎಂದು ವರದಿಯಾಗಿದೆ. ನಾವು ಪ್ರತಿ ವರ್ಷ ಈ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುತ್ತೇವೆ. ಆದ್ರೆ ಈ ದಿನ ಮಹಿಳಾ ಆರೋಗ್ಯದ ಕುರಿತಾಗಿಯೂ ಮಾತನಾಡುವುದು ಅವಶ್ಯವಾಗಿದೆ. ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆಗಳನ್ನು ಈ ದಿನ ಚರ್ಚಿಸುವುದು ಹಾಗೆ ಆ ಕುರಿತಾದ ಜಾಗೃತಿಗೆ ಇಂತಹ ದಿನಗಳ ಆಯ್ಕೆ ಮಾಡಿಕೊಳ್ಳುವುದು ಬಹಳ ಉತ್ತಮ.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಸುಮಾರು ಅರ್ಧದಷ್ಟು ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ವರದಿಯು ಆತಂಕ ಹುಟ್ಟಿಸುತ್ತದೆ. ದಕ್ಷಿಣ ಏಷ್ಯಾದಲ್ಲಿ ತುರ್ತು ಮತ್ತು ಏಕೀಕೃತ ಕ್ರಮ ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಒತ್ತಾಯಿಸಿವೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ 18 ಮಿಲಿಯನ್ ಯುವತಿಯರು ಮತ್ತು ಮಹಿಳೆಯರು 2030 ರ ವೇಳೆಗೆ ಈ ಸ್ಥಿತಿಯಿಂದ ಬಳಲಬಹುದು ಎಂದು ಅಂದಾಜಿಸಲಾಗಿದೆ.

ರಕ್ತಹೀನತೆ ಎಂದರೇನು?
ನಿಮ್ಮ ದೇಹವು ನಿಮ್ಮ ಅಂಗಾಂಶಗಳಿಗೆ ಸಾಕಷ್ಟು ಆಮ್ಲಜನಕವನ್ನು ಪೂರೈಸಲು ಆರೋಗ್ಯಕರ ಕೆಂಪು ರಕ್ತ ಕಣಗಳ ಕೊರತೆ ಇದ್ದರೆ ಅಂತಹ ಪರಿಸ್ಥಿತಿಯನ್ನು ರಕ್ತಹೀನತೆ ಎನ್ನಬಹುದು. ಇದಕ್ಕೆ ಸಾಮಾನ್ಯವಾಗಿ ಕಬ್ಬಿಣ ಅಂಶದ ಕೊರತೆ ಕಾರಣ ಎಂದು ವರ್ಗೀಕರಿಸಲಾಗುತ್ತದೆ. ಹಾಗೆ ಕಳಪೆ ಆಹಾರ, ರಕ್ತದ ನಷ್ಟ, ಜಠರದಲ್ಲಿನ ಸಮಸ್ಯೆಗಳು, ಅಪೌಷ್ಠಿಕ ಆಹಾರ ಸೇರಿ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗುತ್ತದೆ.
ರಕ್ತ ಹೀನತೆಯ ಲಕ್ಷಣವೇನು?
ಅತಿಯಾದ ಆಯಾಸ
ದೌರ್ಬಲ್ಯ
ಬಿಳಿಚಿಕೊಳ್ಳುವುದು
ಕೆಲಸ ಮಾಡಲಾಗದ ಸ್ಥಿತಿ
ರಕ್ತಹೀನತೆಗೆ ಕಾರಣವಾಗುವ ಅಂಶಗಳು
ಪೌಷ್ಟಿಕಾಂಶದ ಕೊರತೆಗಳು
ಕಬ್ಬಿಣಾಂಶ ಕೊರತೆ
ವಿಟಮಿನ್ ಬಿ 12 ಮತ್ತು ಫೋಲೇಟ್ ಕೊರತೆ
ಸೋಂಕುಗಳು
ಋತುಸ್ರಾವದ ಸಮಯದಲ್ಲಿ ಅತಿಯಾದ ರಕ್ತಸ್ರಾವ
ಗರ್ಭಧಾರಣೆ
ದಕ್ಷಿಣ ಏಷ್ಯಾವು ಕಡಿಮೆ ಜನನ ತೂಕದೊಂದಿಗೆ ಜನಿಸಿದ ಶಿಶುಗಳ ಜಾಗತಿಕ ಪ್ರಕರಣಗಳಲ್ಲಿ 40 ಪ್ರತಿಶತವನ್ನು ಹೊಂದಿದೆ. ರಕ್ತಹೀನತೆಯು ಮಕ್ಕಳ ಸಾಕಷ್ಟು ಆಮ್ಲಜನಕವನ್ನು ಪಡೆಯುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಇದು ಅವರ ಬೆಳವಣಿಗೆ ಮತ್ತು ಮಾನಸಿಕ ವಿಕಸನದ ಮೇಲೆಯೂ ಪರಿಣಾಮ ಉಂಟು ಮಾಡುತ್ತದೆ. ಇದು ಕಲಿಕೆ, ಮಾತು ವಿಳಂಭದಿಂದ ಹಿಡಿದು ಅನಾರೋಗ್ಯಗಳಿಗೆ ಒಳಗಾಗುವ ಸಂದರ್ಭಗಳು ಹೆಚ್ಚಾಗುವಂತೆ ಮಾಡುತ್ತದೆ.
ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಅರಿವಿನ ಬೆಳವಣಿಗೆ ಮತ್ತು ದೈಹಿಕ ಬೆಳವಣಿಗೆಯನ್ನು ನಿಧಾನಗೊಳಿಸಬಹುದು. ಗರ್ಭಿಣಿಯರಲ್ಲಿ ಇದು ಅವಧಿಪೂರ್ವ ಹೆರಿಗೆ ಮತ್ತು ತಾಯಿ ಮೃತಪಡುವ ಸ್ಥಿತಿಗೂ ಬರಬಹುದು. ದೀರ್ಘಕಾಲದ ರಕ್ತಹೀನತೆ ಸಮಸ್ಯೆಯು ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಇದು ಕಾಲಾನಂತರ ಹೃದಯ ಸಂಬಂಧಿ ಸಮಸ್ಯೆಗಳಾದ ಹೃದಯಾಘಾತ, ಹೃದಯಸ್ಥಂಭನದಂತಹ ಅಪಾಯಕ್ಕೆ ತಳ್ಳಬಹುದು ಎಂದು ಹೇಳಲಾಗಿದೆ.
ಹಾಗೆ ಕೆಂಪು ರಕ್ತಕಣ ಕಡಿಮೆಯಾಗುವ ಪರಿಣಾಮದಿಂದಾಗಿ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದು, ಹೆರಿಗೆ ನಂತರ ಅವರಿಗೆ ತಕ್ಷಣ ರಕ್ತ ನೀಡಬೇಕಾದ ಸ್ಥಿತಿ ಒದಗುವುದು. ಮಕ್ಕಳಲ್ಲಿ ಆಗಿದ್ದರೆ ಬೆಳವಣಿಗೆ ಕುಂಠಿತವಾಗುವುದರೊಂದಿಗೆ ಅವರ ಸಂಪೂರ್ಣ ವಿಕಸನವು ತಡವಾದಂತೆ ಅವರಲ್ಲಿಯೂ ಅನಾರೋಗ್ಯ ಕಾಣಿಸಿಕೊಳ್ಳುವುದು ನೋಡಬಹುದು.
ರಕ್ತಹೀನತೆಗೆ ಚಿಕಿತ್ಸೆ ಪಡೆಯದಿದ್ದರೆ ಯಾವ ರೀತಿ ಸಮಸ್ಯೆಗಳು ಎದುರಾಗುತ್ತದೆ?
ರಕ್ತಹೀನತೆಗೆ ಉಂಟಾದಾಗ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಅಂಗಾಂಗಗಳಿಗೆ ಹಾನಿಯುಂಟಾಗುವುದು. ಇದರಿಂದ ಹೃದಯಕ್ಕೆ ಕೂಡ ತೊಂದರೆ ಉಂಟಾಗುವುದು.
ರಕ್ತ ಹೀನತೆ ಸಮಸ್ಯೆ ಎದುರಾಗದಂತೆ ತಡೆಯುವುದು ಹೇಗೆ?
ಕಬ್ಬಿಣದಂಶ ಅಧಿಕವಿರುವ ಆಹಾರ ಸೆವನೆ ಮಾಡುವುದು ದೇಹಕ್ಕೆ ಬಹಳ ಉತ್ತಮ. ಅದ್ರಲ್ಲೂ ಕಿತ್ತಳೆ ಜ್ಯೂಸ್, ಸ್ಟ್ರಾಬೆರ್ರಿ, ಬ್ರೊಕೋಲಿ ಇತರ ವಿಟಮಿನ್ ಸಿ ಹೆಚ್ಚಾಗಿರುವ ಆಹಾರ ಸೇವಿಸುವುದು. ಪೌಷ್ಟಿಕಾಂಶ, ವಿಟಮಿನ್ ತುಂಬಿರುವ ಆಹಾರ ಸೇವನೆ ಮಾಡಬೇಕಾಗುತ್ತದೆ.



Click it and Unblock the Notifications











