For Quick Alerts
ALLOW NOTIFICATIONS  
For Daily Alerts

ಅಡುಗೆ ಎಣ್ಣೆ ಆಯ್ಕೆಯ ವಿಷಯದಲ್ಲಿ ಎಚ್ಚರ ತಪ್ಪದಿರಿ..!

|

ಕೆಲವರ್ಷಗಳ ಹಿಂದೆ ಯಾವುದೇ ಅಂಗಡಿಗಳಲ್ಲಿ ಎಣ್ಣೆ ಮಾರಾಟಕ್ಕೆ ಇದ್ದರೆ ಅದು ಅಡುಗೆಗೆ ಎಳ್ಳೆಣ್ಣೆ, ತಲೆಗೆ ಕೊಬ್ರಿ ಎಣ್ಣೆ, ಬಡವರಿಗೆ ಹರಳೆಣ್ಣೆ. ಇಷ್ಟೇ ಆಯ್ಕೆ ಇದ್ದಿತ್ತು. ಒಳ್ಳೆಯ ಎಣ್ಣೆ ಎಂದರೆ ಹೆಚ್ಚಾಗಿ ಸೂರ್ಯಕಾಂತಿ ಎಣ್ಣೆಯೇ ಆಗಿತ್ತು. ಸ್ವಲ್ಪ ಒಳ್ಳೆಯದು ಕೊಡಿ ಎಂದು ಕೇಳಿದವರಿಗೆ ಕೊಂಚ ದುಬಾರಿಯಾದ ಶೇಂಗಾ ಎಣ್ಣೆ ಇರುತ್ತಿದ್ದು. ಇಷ್ಟು ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ. ಎಣ್ಣೆಯಲ್ಲಿ ಏನಿದೆ ಎಂಬುವುದರ ಬಗ್ಗೆ ಅಂತೂ ಆ ಟಿನ್ನುಗಳಲ್ಲಿ ಯಾವುದೇ ಮಾಹಿತಿ ಇರುತ್ತಿರಲಿಲ್ಲ.

ಕಾಲಕ್ರಮೇಣ ಡಾಲ್ಡಾ ಎಂಬ ವನಸ್ಪತಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿತು, ಅಗ್ಗ ಎಂಬ ಒಂದೇ ಕಾರಣಕ್ಕೆ ಹೋಟೆಲುಗಳಿಂದ ಹಿಡಿದು ಮನೆಮನೆಗಳಲ್ಲಿ ಇದರ ಬಳಕೆಯಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಈ ವನಸ್ಪತಿ ದೇಹಕ್ಕೆ ಎಷ್ಟು ಮಾರಕ ಎಂದು ಖಚಿತಪಡಿಸಿದ ಬಳಿಕ ಮಾರುಕಟ್ಟೆಯಿಂದ ಅದೃಶ್ಯವಾಗಿದೆ. ಮಧುಮೇಹಿಗಳೇ ಅಡುಗೆ ಎಣ್ಣೆಯ ಕುರಿತು ಎಚ್ಚರವಿರಲಿ

ಇಂದು ಅಡುಗೆ ಎಣ್ಣೆಯ ಬಗ್ಗೆ ವೈದ್ಯರು ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಎಣ್ಣೆ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಆರೋಗ್ಯಕ್ಕೆ ಹೊರೆಯಾಗದಂತೆ, ಅಂದರೆ ಕೊಲೆಸ್ಟ್ರಾಲ್ ರಹಿತವಾಗಿಸಿ, ಹಾಗೂ ಹೃದಯವನ್ನು ಸುಸ್ಥಿತಿಯಲ್ಲಿಡುವ ಮೂಲಕ ಗ್ರಾಹಕರ ಆರೋಗ್ಯವನ್ನು ಪರಿಗಣಿಸುತ್ತಿವೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅಲ್ಲದೇ ಎಣ್ಣೆರಹಿತವಾಗಿ ಅಡುಗೆ ಮಾಡಲು ನಾನ್ ಸ್ಟಿಕ್ (ಅಂಟಿಕೊಳ್ಳದ ಗುಣವುಳ್ಳ) ಪಾತ್ರೆಗಳನ್ನು ಉಪಯೋಗಿಸಿ ಎಣ್ಣೆಯನ್ನು ಕನಿಷ್ಠ ಪ್ರಮಾಣದಲ್ಲಿ ಬಳಸುವ ಮೂಲಕ ದೇಹಕ್ಕೆ ಆಗಮಿಸುವ ಕೊಲೆಸ್ಟ್ರಾಲ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿಯಂತ್ರಿಸಲು ಸಹಕರಿಸುತ್ತದೆ. ಆದರೆ ಕಲವು ಅಡುಗೆಗಳು ಕೊಂಚವಾದರೂ ಎಣ್ಣೆಯಿಲ್ಲದೇ ಇದ್ದರೆ ಸರಿಯಾದ ರುಚಿ ಬಾರದು ಎಂದು ಹೆಚ್ಚಿನ ಬಾಣಸಿಗರು ಅಭಿಪ್ರಾಯ ಪಡುತ್ತಾರೆ.

ಇದನ್ನೇ ಬಂಡವಾಳ ಮಾಡಿಕೊಂಡಿರುವ ಹತ್ತು ಹಲವಾರು ಸಂಸ್ಥೆಗಳು ತಮ್ಮ ತಮ್ಮ ಉತ್ಪನ್ನಗಳಲ್ಲಿ ಏನೆನೆಲ್ಲಾ ಒಳ್ಳೆಯ ಅಂಶಗಳಿವೆ ಎಂಬ ಪಟ್ಟಿಯನ್ನು ನೀಡಿ ನಿಮಗೆ ಆಯ್ಕೆ ನೀಡುತ್ತವೆ. ಈಗ ಸೂಕ್ತವಾದ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವ ಸರದಿ ನಮ್ಮದು. ಈ ಆಯ್ಕೆಯನ್ನು ಸುಲಭಗೊಳಿಸಲು ಬೋಲ್ಡ್ ಸ್ಕೈ ತಂಡ ನಿಮಗೆ ಈ ಕೆಳಗಿನ ಮಾಹಿತಿಗಳೊಂದಿಗೆ ಸಹಕರಿಸುತ್ತಿದೆ. ಮುಂದೆ ಓದಿ..

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಆರೋಗ್ಯಕ್ಕೆ ಅತ್ಯುತ್ತಮವಾದ ಎಣ್ಣೆಗಳ ಪಟ್ಟಿಯಲ್ಲಿ ಸಾಸಿವೆ ಎಣ್ಣೆ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ mono-saturated oil ಎಂಬ ಎಣ್ಣೆಕಣಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ನಿವಾರಿಸಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿರಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳದಂತೆ ಸಹಕರಿಸುತ್ತದೆ. ಇದು ಹೃದಯಕ್ಕೆ ಎದುರಾಗುವ ಹಲವು ತೊಂದರೆಗಳಿಂದ ಕಾಪಾಡುತ್ತದೆ.

ಅಗಸೆಬೀಜದ ಎಣ್ಣೆ

ಅಗಸೆಬೀಜದ ಎಣ್ಣೆ

ಹೆಚ್ಚಿನವರಿಗೆ ಗೊತ್ತೇ ಇರದ ಅಗಸೆಬೀಜದ ಎಣ್ಣೆ ಅಥವಾ ಅಗಸೆ ಎಣ್ಣೆ ಆರೋಗ್ಯಕ್ಕೆ ಉತ್ತಮವಾದ ಆಯ್ಕೆಯಾಗಿದೆ. ಅಡುಗೆಗೆ ಮತ್ತು ಅನ್ನದೊಡನೆ ಕಲಸಿ ತಿನ್ನಲೂ ಯೋಗ್ಯವಾಗಿರುವ ಈ ಎಣ್ಣೆ ಅದರಲ್ಲೂ ಮಧುಮೇಹಿಗಳ ಪಾಲಿಗೆ ಅಂತೂ ಹೆಚ್ಚಿನ ಚೈನತ್ಯ ನೀಡಲೂ ಉಪಯೋಗವಾಗುತ್ತದೆ. ಏಕೆಂದರೆ ಇದರಲ್ಲಿ ಒಮೆಗಾ 3 ಕೊಬ್ಬಿನ ತೈಲದ ಪ್ರಮಾಣ ಹೆಚ್ಚಾಗಿದ್ದು ಎರಡೂ ಪ್ರಕಾರದ ಮಧುಮೇಹಿಗಳಿಗೆ ನವಚೈನತ್ಯ ನೀಡುತ್ತದೆ.

ಶೇಂಗಾ ಎಣ್ಣೆ

ಶೇಂಗಾ ಎಣ್ಣೆ

ಕಡಲೆಕಾಯಿ ಎಣ್ಣೆ ಎಂದೂ ಕರೆಯಲ್ಪಡುವ ಶೇಂಗಾ ಎಣ್ಣೆಯಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಆದರೆ ಸಂಪೂರ್ಣವಾದ ಕೊಬ್ಬು (saturated fat) ಕೊಂಚವೇ ಪ್ರಮಾಣದಲ್ಲಿದೆ. ಆದರೆ ವಿಟಮಿನ್ ಇ, ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಫೈಟೋಸ್ಟೆರಾಲ್ (phytosterol) ಎಂಬ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿರುವ ಕಾರಣ ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಇದರ ಬಳಕೆ ಮಿತಪ್ರಮಾಣದಲ್ಲಿದ್ದರೆ ಉತ್ತಮ. ಹುರಿಯುವ, ಕರಿಯುವ ಕಾರ್ಯಕ್ಕೆ ಈ ಎಣ್ಣೆ ಸಮರ್ಪಕವಲ್ಲ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಬೆಲೆಯಲ್ಲಿ ಕೊಂಚ ದುಬಾರಿಯಾದರೂ ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ ಅತ್ಯಂತ ಶ್ರೀಮಂತವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಇ, ಡಿ ಮತ್ತು ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ನಂತಹ ಖನಿಜಗಳು ಹೇರಳವಾಗಿವೆ. ನಿಮ್ಮ ಅಡುಗೆಗಳಲ್ಲಿ ಕಡೆಯದಾಗಿ ಒಂದೆರಡು ತೊಟ್ಟು ಬಾದಾಮಿ ಎಣ್ಣೆ ಸೇರಿಸಿದರೆ ಅಡುಗೆಯ ಸ್ವಾದದ

ಜೊತೆಗೆ ಪೌಷ್ಟಿಕತೆಯೂ ಹೆಚ್ಚುತ್ತದೆ. ಬಾದಾಮಿ ಎಣ್ಣೆ ನವಿರಾದ ಸಿಹಿ ಸ್ವಾದವನ್ನು ಹೊಂದಿರುವುದರಿಂದ ಅಡುಗೆಯ ರುಚಿಯೂ ಹೆಚ್ಚುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿ ಈಗಾಗಲೇ ಶೇಖರಗೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆಲಿವ್ ಎಣ್ಣೆಯಲ್ಲಿ phenolic antioxidant ಎಂಬ ಪೋಷಕಾಂಶವು ರಕ್ತದಲ್ಲಿ ಮಿಳಿತಗೊಂಡಾಗ ನರಗಳ ಒಳಗೆ ಅಲ್ಲಲ್ಲಿ ಜಿಡ್ಡುಗಟ್ಟಿ ರಕ್ತಸಂಚಾರಕ್ಕೆ ತಡೆಯೊಡ್ಡುತ್ತಿದ್ದ (LDL-Low density lipoprotien) ಎಂಬ ಕೆಟ್ಟ ಕೊಲೆಸ್ಟ್ರಾಲ್ ನೊಂದಿಗೆ ಮಿಶ್ರಗೊಂಡು ಜಿಡ್ಡನ್ನು ಸಡಿಲಗೊಳಿಸುತ್ತದೆ. ಇದುವರೆಗೆ ಜಿಡ್ಡಿನಿಂದ ನರಗಳ ಒಳಭಾಗಗಳು ಕಿರಿದುಕೊಂಡಿದ್ದು ಆ ಮೂಲಕ ರಕ್ತವನ್ನು ಕಳುಹಿಸಲು ಹೃದಯಕ್ಕೆ ಹೆಚ್ಚು ಶ್ರಮ ಬೇಕಾಗಿತ್ತು. ಈಗ ಸರಾಗಗೊಂಡಿರುವ ರಕ್ತನಾಳಗಳ ಮೂಲಕ ರಕ್ತವನ್ನು ಹರಿಸಲು ಹೃದಯಕ್ಕೆ ಸಾಮಾನ್ಯವಾದ ಒತ್ತಡ ಸಾಕು. ಹಾಗಾಗಿ ಹೃದಯಕ್ಕೆ ಆಲಿವ್ ಎಣ್ಣೆ ಪರಮಾಪ್ತನಾಗಿದೆ.

English summary

Best Cooking Oils for Your Health in kannada

Oils are a controversial topic in the health spaces today, with some people avoiding them completely and other using them liberally. Everyone should decide what route is best for them with all foods, including oils, depending on how their bodies tolerate them. The important thing when selecting oils to consume, however, is to be sure you’re not taking in damaging oils that can lead to heart disease, diabetes, and inflammation.
Story first published: Wednesday, November 11, 2015, 16:48 [IST]
X
Desktop Bottom Promotion