Latest Updates
-
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ -
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 09 (March 09 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನವು ಒತ್ತಡದಿಂದ ಕೂಡಿರಲಿದೆ. ನೀವು ಹಲವು ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಹಲವು ವಿಚಾರಗಳು ಒತ್ತಡ ತರಲಿದೆ. ಸಾಮಾನ್ಯ ದಿನಕ್ಕಿಂತ ಇಂದು ನಿಮಗೆ ಕೆಲಸ ಹೆಚ್ಚಾಗಬಹುದು. ದಾಂಪತ್ಯ ಸಂಬಂಧಿತ ಸವಾಲುಗಳು ಎದುರಿಸುವಿರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನ ಮಿಶ್ರಫಲ. ನೀವು ಮಾಡುವ ಕೆಲಸಗಳಲ್ಲಿ ಅಡ್ಡಿಗಳಿದ್ದರೂ ಪೂರ್ಣ ಮಾಡುವಿರಿ. ಆರೋಗ್ಯದಲ್ಲಿ ಏರುಪೇರು ಕಾಡುವ ಕಾರಣಕ್ಕೆ ಕೆಲಸವನ್ನು ಅರ್ಧದಲ್ಲಿಯೇ ನಿಲ್ಲಿಸಬಹುದು. ಪ್ರಯಾಣಗಳನ್ನು ಮುಂದೂಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನವು ಅನುಕೂಲಕರ, ನೀವು ಮಾಡುವ ಕೆಲಸದಲ್ಲಿ ಯಶಸ್ಸು ಪಡೆಯುವಿರಿ. ವ್ಯಾಪಾರಿಗಳಿಗೆ ಈ ದಿನ ಸುಖಾಂತ್ಯ ನೋಡಬಹುದು. ಹಣದ ವಿಚಾರದಲ್ಲಿನ ನಿಮ್ಮ ಆತಂಕ ದೂರಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಸಮಸ್ಯೆಗಳಿವೆ. ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಒತ್ತಡ ಎದುರಿಸುವಿರಿ. ನಿಮ್ಮ ಹಣಕಾಸು ಸಂಬಂಧಿತ ವಿಚಾರದಲ್ಲಿ ದೊಡ್ಡ ಮಟ್ಟದ ಒಪ್ಪಂದಗಳಿಂದ ಹೊರಬರುವಿರಿ. ಹೊಸ ಉದ್ಯೋಗ ಆರಂಭಿಸುವ ನಿಮ್ಮ ಬಯಕೆಯನ್ನು ಆಪ್ತರಲ್ಲಿ ಹೇಳಿಕೊಳ್ಳುವುದು ಈಗಲೇ ಸೂಕ್ತವಲ್ಲ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಸಮಸ್ಯೆಗಳಿಂದ ತುಂಬಿದ ದಿನ. ನಿಮ್ಮ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ಪ್ರಾಮಾಣಿಕ ಕೆಲಸಗಳು ಮರೆಯಾಗುತ್ತದೆ. ಹಿರಿಯರ ಸಲಹೆಯನ್ನು ನಿರಾಕರಿಸಬೇಡಿ. ಆರೋಗ್ಯದ ಕುರಿತು ಎಚ್ಚರಿಕೆಯಿಂದಿರಿ. ಪ್ರಯಾಣ ಮಾಡುವುದು ನಿಮಗೆ ಖರ್ಚುಗಳಿಗೆ ಕಾರಣವಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಈ ದಿನವು ಅನುಕೂಲಕರ. ನಿಮ್ಮ ಕೆಲಸ ಕಾರ್ಯಗಳು ಸಾಮಾನ್ಯವಾಗಿರಲಿದೆ. ಹಣಕಾಸು ವಿಚಾರವೊಂದರಲ್ಲಿ ಯಶಸ್ಸು ಇದೆ. ದೇವಾಲಯ ಭೇಟಿಯ ಸಾಧ್ಯತೆಗಳಿವೆ. ಗೃಹಿಣಿಯರು ತಮ್ಮ ವಸ್ತುಗಳ ಕಡೆಗೆ ಗಮನವಿಡಬೇಕು.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನವು ಪ್ರಯಾಣ ಮಾಡಬೇಕಾದ ದಿನವಾಗುತ್ತಿದೆ. ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರ. ವ್ಯಾಪಾರಿಗಳಿಗೆ ಉತ್ತಮ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಲಿದೆ. ದೂರ ಪ್ರಯಾಣ ಮಾಡಬೇಕಾಗಿ ಬರಬಹುದು.
ವೃಶ್ಚಿಕ ರಾಶಿ
ಇಂದು ನೀವು ಅನಿರೀಕ್ಷಿತ ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಬಹು ಸಮಯದಿಂದ ಮಾಡಬೇಕಿದ್ದ ಕೆಲಸಗಳು ಮತ್ತೆ ಮುಂದೂಡುತ್ತೀರಿ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವ ನಿರೀಕ್ಷೆ ಇಟ್ಟುಕೊಳ್ಳಿ. ಹೊಸ ಆದಾಯದ ಮೂಲ ಸಿಗಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಹೊಸ ಅನುಭವಗಳ ತರಬಹುದು. ನಿಮ್ಮ ವ್ಯವಹಾರದಲ್ಲಿ ಬುದ್ದಿವಂತಿಕೆಯ ಮಹತ್ವದ ಅರಿವು ನಿಮಗಾಗಲಿದೆ. ಕಾಲು ನೋವು, ಬೆನ್ನು ನೋವು ಸಂಬಂಧಿತ ಸಮಸ್ಯೆ ಇದ್ದರೆ ಈ ಸಮಯದಲ್ಲಿ ನಿವಾರಣೆಯಾಗುವುದು. ದಾಂಪತ್ಯ ಮುನಿಸು ಶಮನವಾಗಲಿದೆ.
ಮಕರ ರಾಶಿ
ಮಕರ ರಾಶಿ ಜನರು ಈ ದಿನವು ಕೌಟುಂಬಿಕ ವಿಚಾರದಲ್ಲಿ ಚಿಂತೆ ಅನುಭವಿಸಬಹುದು. ಮನೆಯ ಹಣಕಾಸು ವಿಚಾರವೊಂದರಿಂದ ನಿಮಗೆ ಚಿಂತೆಗಳಿವೆ. ಆಸ್ತಿ ಕುರಿತಾದ ಮಾಹಿತಿ ತಪ್ಪಾಗಬಹುದು. ಪ್ರಯಾಣ ಮಾಡುವಾಗ ಎಚ್ಚರಿವಿಡಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಈ ದಿನವು ಪ್ರಯಾಣಗಳಿಂದ ತುಂಬಿರಬಹುದು. ವ್ಯಾಪಾರಿ ಜನರು ಹಣಕಾಸು ಸಂಬಂಧಿತ ವಿಚಾರವಾಗಿ ಆತಂಕದಲ್ಲಿ ಕಳೆಯಬಹುದು. ವಾಹನ ವಿಚಾರದಲ್ಲಿ ನಷ್ಟವಿದೆ. ಗೃಹಿಣಿಯರು ತಮ್ಮ ಅನಾರೋಗ್ಯವನ್ನು ನಿರ್ಲಕ್ಷಿಸಬೇಡಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನವು ಉತ್ತಮವಾಗಿರಲಿದೆ. ಬಹು ದಿನದಿಂದ ನಿಮ್ಮ ಕೈ ಸೇರಬೇಕಿದ್ದ ಹಣ ಒಲಿದುಬರಲಿದೆ. ಸ್ನೇಹಿತರ ಭೇಟಿಯಾಗುತ್ತೀರಿ. ಆಹ್ವಾನಿತ ಕೆಲಸಗಳಲ್ಲಿಯೂ ಭಾಗಿಯಾಗಬಹುದು.



Click it and Unblock the Notifications











