For Quick Alerts
ALLOW NOTIFICATIONS  
For Daily Alerts

ಸಮೃದ್ಧ ಪೋಷಕಾಂಶಗಳ ಭಂಡಾರ- ಎಲೆಕೋಸಿನ ಸೂಪ್

|

ಎಲೆಕೋಸು ಪಲ್ಯ, ಎಲೆಕೋಸು ಸಲಾಡ್, ಎಲೆಕೋಸು ಸಬ್ಜಿ ಇತ್ಯಾದಿ ಕೇಳಿರಬಹುದು. ಹಸಿ ಎಲೆಕೋಸನ್ನು ಸಹ ಹಾಗೆಯೇ ತಿನ್ನುವುದನ್ನು ನೋಡಿರಬಹುದು ಮತ್ತು ಮಾಡಿರಬಹುದು. ಆದರೆ ನೀವು ಎಲೆಕೋಸಿನ ಸೂಪ್ ಕುರಿತು ಕೇಳಿದ್ದೀರಾ? ಅರೆ ನಿಜ ಕಣ್ರೀ ಎಲೆಕೋಸಿನ ಸೂಪ್ ಡಯಟ್ ಬಗ್ಗೆಯೇ ನಾವು ಕೇಳುತ್ತಿರುವುದು. ಇದು ಏನು ಅಂತಹ ದೊಡ್ಡ ಕಷ್ಟದ ಡಯಟ್ ಅಲ್ಲಾ, ಪ್ರತಿದಿನ ಎಲೆಕೋಸಿನ ಸೂಪ್ ಸೇವಿಸಬೇಕು ಅಷ್ಟೇ. ಇದರಿಂದ ನಿಮ್ಮ ದೇಹವು ಅಧಿಕ ಪ್ರಮಾಣದ ಕ್ಯಾಲೋರಿಗಳನ್ನು ಹೀರಿಕೊಳ್ಳುತ್ತದೆ ಮತ್ತು ನಿಮ್ಮ ದೇಹಕ್ಕೆ ಮತ್ತಷ್ಟು ಶಕ್ತಿ ಇದರಿಂದ ಲಭಿಸುತ್ತದೆ. ಎಲೆಮರೆ ಕಾಯಿ ಎಲೆಕೋಸು-ಸೌಂದರ್ಯದ ಕೀಲಿ ಕೈ

ಹಾಗೆಂದು ನಾವು ಪ್ರತಿದಿನ ಎಲೆಕೋಸಿನ ಸೂಪ್ ಮಾತ್ರ ಸೇವಿಸಿ ಬದುಕಿ ಎಂದು ಹೇಳುತ್ತಿಲ್ಲ. ನಿಮ್ಮ ಆರೋಗ್ಯಕ್ಕಾಗಿ ಅಗತ್ಯ ಪ್ರಮಾಣದ ಸೂಪ್ ಅನ್ನು ಪ್ರತಿನಿತ್ಯ ಸೇವಿಸಿ ಎಂದು ಹೇಳುತ್ತಿದ್ದೇವೆ. ಇದರಲ್ಲಿರುವ ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ಒದಗಿಸಿ ಎಂಬ ಕಾಳಜಿ ನಮ್ಮದು. ಎಲೆಕೋಸಿನ ಸೂಪಿನಲ್ಲಿ ಕೇವಲ ಎಲೆಕೋಸು ಮಾತ್ರ ಇರಬೇಕು ಎಂಬ ನಿಯಮವಿಲ್ಲ. ಇದಕ್ಕೆ ನೀವು ಕ್ಯಾರೆಟ್, ಮೆಣಸಿನ ಕಾಯಿ ಮತ್ತು ಟೊಮೇಟೊಗಳನ್ನು ಸಹ ಬೆರೆಸಿಕೊಂಡು ಮತ್ತಷ್ಟು ಪೋಷಕಾಂಶಭರಿತ ಸೂಪ್ ಆಗಿ ಇದನ್ನು ಪರಿವರ್ತಿಸಿಕೊಳ್ಳಬಹುದು. ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ

ಯಾವುದೇ ಡಯಟ್ ಸಹ ಸಮತೋಲನದಿಂದ ಕೂಡಿರುವುದಿಲ್ಲ. ಒಂದೇ ಒಂದು ಡಯಟ್ ಮೂಲಕ ನೀವು ಆರೋಗ್ಯಕರವಾಗಿ ಇರಲು ಸಾಧ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಆರೋಗ್ಯಕರವಾಗಿರುವುವನ್ನು ನೋಡಿಕೊಂಡು ಸೇವಿಸುತ್ತಿದ್ದರೆ ಅದರಿಂದ ಆರೋಗ್ಯ ಲಭಿಸುತ್ತದೆ ಎಂದು ಇವರ ಅಭಿಪ್ರಾಯವಾಗಿರುತ್ತದೆ. ನಿಮಗೆ ಆರೋಗ್ಯ ನೀಡುವುದರಲ್ಲಿ ಎಲೆಕೋಸು ಸೂಪ್ ಸಹ ಒಂದಾಗಿರುತ್ತದೆ. ಬನ್ನಿ ಅದು ಹೇಗೆ ಎಂದು ತಿಳಿದುಕೊಂಡು ಬರೋಣ.....

ಸಮೃದ್ಧ ಪೋಷಕಾಂಶಗಳು

ಸಮೃದ್ಧ ಪೋಷಕಾಂಶಗಳು

ಎಲೆಕೋಸಿನಲ್ಲಿ ವಿಟಮಿನ್ ಬಿ6, ಕೆ, ಸಿ, ಮ್ಯಾಂಗನೀಸ್, ಫೋಲೆಟ್, ಪೊಟಾಶಿಯಂ, ರಂಜಕ, ಮೆಗ್ನಿಷಿಯಂ, ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಥಿಯಮಿನ್ ಸಹ ಇರುತ್ತದೆ. ಹೀಗಾಗಿ ಈ ಸೂಪ್ ನಿಮ್ಮ ಬಹುತೇಕ ಪೋಷಕಾಂಶಗಳನ್ನು ಒದಗಿಸುತ್ತದೆ.

ನಾರಿನಂಶ

ನಾರಿನಂಶ

ನಿಮ್ಮ ದೇಹಕ್ಕೆ ನಾರಿನಂಶಗಳನ್ನು ಒದಗಿಸುವ ಅತ್ಯಂತ ಉತ್ತಮ ಮಾರ್ಗ ತರಕಾರಿ ಸೂಪ್‌ಗಳು. ಎಲೆಕೋಸಿನ ಸೂಪ್ ನಿಮ್ಮ ಈ ಅಗತ್ಯವನ್ನು ಪೂರೈಸುತ್ತದೆ. ಜೊತೆಗೆ ಇದರಲ್ಲಿ ದೊರೆಯುವ ನಾರಿನಂಶವು ನಿಮ್ಮ ಜೀರ್ಣಾಂಗವ್ಯೂಹಕ್ಕೆ ಆರಾಮವನ್ನು ನೀಡುತ್ತದೆ.

ತೂಕ ಇಳಿಸಿಕೊಳ್ಳಲು

ತೂಕ ಇಳಿಸಿಕೊಳ್ಳಲು

ಎಲೆಕೋಸಿನ ಸೂಪ್ ನಿಮಗೆ ಕೊಲೆಸ್ಟ್ರಾಲ್ ಅಥವಾ ಸ್ಯಾಚುರೇಟೆಡ್ ಕೊಬ್ಬನ್ನು ಒದಗಿಸುವುದಿಲ್ಲ. ಆದ್ದರಿಂದ ಈ ಸೂಪ್ ತೂಕ ಇಳಿಸಿಕೊಳ್ಳುವವರಿಗೆ ವರದಾನವಾಗಿರುತ್ತದೆ. ಹಾಗೆಂದು ಈ ಸೂಪ್ ಮಾತ್ರವೇ ಸೇವಿಸಬೇಡಿ. ನಿಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ಅಗತ್ಯವಿರುತ್ತದೆ. ಉಪಾಹಾರ ಮತ್ತು ಮಧ್ಯಾಹ್ನದ ಊಟ ಮಾಡುವ ಮುನ್ನ ಎಲೆಕೋಸಿನ ಸೂಪ್ ಸೇವಿಸಿ.

ಪರಿಪೂರ್ಣ ಆರೋಗ್ಯಕ್ಕೆ ಒಳ್ಳೆಯದು

ಪರಿಪೂರ್ಣ ಆರೋಗ್ಯಕ್ಕೆ ಒಳ್ಳೆಯದು

ಸಾಮಾನ್ಯವಾಗಿ ತರಕಾರಿಗಳು ನಿಮ್ಮ ಪರಿಪೂರ್ಣ ಆರೋಗ್ಯಕ್ಕೆ ಒಳ್ಳೆಯದನ್ನುಂಟು ಮಾಡುತ್ತದೆ. ತರಕಾರಿ ಸೇವಿಸಲು ಹಿಂದೆ ಮುಂದೆ ನೋಡುವವರು ಸಹ ಸೂಪ್ ಸೇವಿಸುತ್ತಾರೆ. ಇದು ರುಚಿಕರ ಮತ್ತು ನಿಮಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.

ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ

ಎಲೆಕೋಸು ರಕ್ತದಲ್ಲಿ ಸೇರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಜೊತೆಗೇ ಮೂತ್ರಪಿಂಡದ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಒಂದು ವೇಳೆ ಮಧುಮೇಹಿಯ ರಕ್ತದಲ್ಲಿ ಸಕ್ಕರೆ ವಿಪರೀತವಾಗಿದ್ದರೆ (ಅಂದರೆ 600mg/dlಕ್ಕೂ ಹೆಚ್ಚು) ಇದು ಅಪಾಯಕಾರಿಯಾಗಿದ್ದು ಈ ಸ್ಥಿತಿಯಲ್ಲಿ ಮೂತ್ರಪಿಂಡಗಳು ಹೆಚ್ಚಿನ ಸಕ್ಕರೆಯನ್ನು ಮೂತ್ರದ ಮೂಲಕ ಹೊರಹಾಕಲು ಯತ್ನಿಸುತ್ತವೆ. ಇದು ದೇಹದಿಂದ ಅತಿ ಹೆಚ್ಚು ದ್ರವ ಹೊರಹೋಗಲು ಕಾರಣವಾಗಿ ದೇಹದಲ್ಲಿ ದ್ರವದ ಕೊರತೆಯಾಗುತ್ತದೆ.

English summary

Benefits Of Cabbage Soup

Have you heard of the cabbage soup diet? It involves consuming cabbage soup daily. The theory behind this diet is that your body spends more energy to digest it than the calories that it gets from the soup. Though living on cabbage soup diet isn't advisable, it would be healthy to consume the soup daily along with your regular foods to enjoy its nutritional benefits.
X
Desktop Bottom Promotion